ಪರಿಸರದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯದಾದ್ಯಂತ ಇಲೆಕ್ಟ್ರಿಕ್ ಬಸ್ ವ್ಯವಸ್ಥೆಯನ್ನು (Electric Bus) ಜಾರಿಗೆ ತರಲು ಮುಂದಾಗಿದೆ. ಈಗಾಘಲೇ ಪ್ರಧಾನಮಂತ್ರಿ ಇ-ಬಸ್ ಯೋಜನೆಯಡಿ ಒಟ್ಟು 750 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಮಂಗಳೂರು (Mangaluru) ಸೇರಿ ಹಲವು ಜಿಲ್ಲೆಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದರಿಂದ, ಖಾಸಗಿ ಸಾರಿಗೆ ವ್ಯವಸ್ಥೆಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇತ್ತು. ಆದ್ರೆ ಇದೀಗ ಸರ್ಕಾರಿ ಇ-ಬಸ್ (E-Bus) ಆರಂಭವಾಗುವ ಮೊದಲೇ, ಖಾಸಗಿ ಸಾರಿಗೆಯಲ್ಲೂ ಇವಿ ಬಸ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಮಂಗಳೂರು ನಗರದ ಜನರಿಗೆ ಬಂಪರ್ ಸುದ್ದಿಯೊಂದಿದೆ. ಇದೀಗ ಮಂಗಳೂರು ನಗರದಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ (ಇ-ಬಸ್) ಸೇವೆ ಆರಂಭಿಸಲು ಮುಂದಾಗಿದೆ. ಫೆಬ್ರವರಿ 26, 2026 ರಂದು ಈ ಬಸ್ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಈ ಮೂಲಕ ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ಕೆಎಸ್‌ಆರ್‌ಟಿಸಿಗೆ ಟಕ್ಕರ್ ಕೊಡಲು ಸಿದ್ಧವಾದ ಖಾಸಗಿ ಸಾರಿಗೆ!
ಈಗಾಗಲೇ ದಕ್ಷಿಣ ಕನ್ನಡದ ವಿವಿಧ ಮಾರ್ಗಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಖಾಸಗಿ ಸಾರಿಗೆ ಸಂಸ್ಥೆ, ಕೆಎಸ್‌ಆರ್‌ಟಿಸಿಗೆ ಟಕ್ಕರ್ ನೀಡಲು ಇವಿ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ.
ಇನ್ನು ಖಾಸಗಿ ಬಸ್ ಮಾಲೀಕ ದಿಲ್ರಾಜ್ ಆಳ್ವಾ ಅವರು ಈ ಕುರಿತು ಮಾತನಾಡಿದ್ದು, ಫೆಬ್ರವರಿ 26, 2026ರಂದು ರೂಟ್ ಸಂಖ್ಯೆ 27 ರಲ್ಲಿ ಹೊಸ ಎಲೆಕ್ಟ್ರಿಕ್ ಬಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. "ತಯಾರಕರು ಮುಂದಿನ ಒಂದೆರಡು ದಿನಗಳಲ್ಲಿ ವಾಹನವನ್ನು ತಲುಪಿಸುತ್ತಾರೆ. ಆ ನಂತರ ನಗರದಲ್ಲಿ ಇವಿ-ಬಸ್‌ಗಳು ಓಡಾಡಲಿದೆ ಮತ್ತು ಪರಿಸರ ಸುರಕ್ಷತೆಗೆ ಸಹಕಾರಿಯಗಲಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ದಿಲ್ರಾಜ್ ಆಳ್ವಾ ಹೇಳಿದರು.
ಇನ್ನು ಆರಂಭದಲ್ಲಿ ನಗರದಲ್ಲಿ ಅಸ್ತಿತ್ವದಲ್ಲಿರುವ ಚಾರ್ಜಿಂಗ್ ಕೇಂದ್ರಗಳಲ್ಲಿ ಎಲೆಕ್ಟ್ರಕ್ ಬಸ್ ಅನ್ನು ಚಲಾಯಿಸಲಾಗುತ್ತದೆ ಎಂದು ಹೇಳಿದರು. ಅಲ್ಲೇ ಈ ಬಸ್ ಅನ್ನು ರೂಟ್ ಸಂಖ್ಯೆ 27 ರಲ್ಲಿ ಓಡಿಸಲು ಪ್ಲಾನ್ ಮಾಡಲಾಗಿದೆ. ಇನ್ನು ಈ ಬಸ್ ಮಂಗಳಾದೇವಿ ದೇವಸ್ಥಾನದಿಂದ ಆರಂಭವಾಗಿ ನಗರದ ವಿವಿಧ ಭಾಗಗಳಿಗೆ ಸಂಪರ್ಕಿಸಲಿದೆ. ಬಸ್ ತಯಾರಕರು ಶೀಘ್ರದಲ್ಲೇ ವಾಹನವನ್ನು ತಲುಪಿಸಿಲಿದ್ದು, ಫೆಬ್ರವರಿ 26 ರಂದು ಸೇವೆ ಆರಂಭಿಸಲು ಎಲ್ಲಾ ತಯಾರಿ ಪೂರ್ಣಗೊಂಡಿದೆ ಎಂದು ಮಾಲೀಕರು ಹೇಳಿದ್ದಾರೆ.
ದೇಶದ ಮೊದಲ ಖಾಸಗಿ ಇ-ಬಸ್ ವ್ಯವಸ್ಥೆ!
ದೇಶದಲ್ಲಿ ಮೊದಲ ಖಾಸಗಿ ಇ-ಬಸ್ ಸೇವೆ ಆರಂಭಸುತ್ತಿರುವ ಮಂಗಳೂರು ಮೊದಲ ನಗರ ಎಂಬ ಹೆಗ್ಗಳಿಕೆ ಮಂಗಳೂರು ಪಾತ್ರವಾಗುತ್ತಿದೆ. ಈ ವ್ಯವಸ್ಥೆ ಒಂದು ವೇಳೆ ಯಶಸ್ವಿಯಾದ್ರೆ, ನಗರದಲ್ಲಿ ಇನ್ನಷ್ಟು ಖಾಸಗಿ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಯಲ್ಲಿ ಓಡಾಡುವ ನಿರೀಕ್ಷೆಯಿದೆ. ಇನ್ನು ಈ ಕ್ರಮ ಕೇವಲ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವುದು ಮಾತ್ರವಲ್ಲದೇ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಹೆಜ್ಜೆಯಾಗಲಿದೆ. ಈಗಾಘಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಂಗಳೂರು ವಿಭಾಗವೂ 100 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವ ಯೋಜನೆ ಹಾಕಿಕೊಂಡಿದೆ. ಇದೀಗ ಈ ಯೋಜನೆ ಬೆನ್ನಲ್ಲೇ ಖಾಸಿ ವಲಯದಲ್ಲಿ ಹೊಸ ಎಲೆಕ್ಟ್ರಿಕ್ ಬಸ್ ಸೇವೆ ರಸ್ತೆಗಿಳಿಯಲು ಸಜ್ಜಾಗಿದೆ.


Click it and Unblock the Notifications