ಮನಮೋಹನ್ ಸಿಂಗ್ ಆರ್ಥಿಕ ಮಂತ್ರಿಯಾಗಿದ್ದೇಗೆ? ಆಧುನಿಕ ಕೌಟಿಲ್ಯನ ಕ್ರಾಂತಿಕಾರಕ ಯೋಜನೆಗಳ ಬಗ್ಗೆ ಗೊತ್ತಾ?

ನಮೋಹನ್ ಸಿಂಗ್, ಆಧುನಿಕ ಭಾರತದ ರುವಾರಿ ಎಂದೇ ಪ್ರಖ್ಯಾತಿಯನ್ನ ಪಡೆದಿರುವ ಈ ಹೆಸರನ್ನ ಪ್ರತಿಯೊಬ್ಬ ಭಾರತೀಯರು ಇಂದಿಗೂ ನೆನೆಯುತ್ತಾರೆ. ಮನಮೋಹನ್​ ಸಿಂಗ್ ಅವರಂತಹ ಮೇರು ವ್ಯಕ್ತಿತ್ವವನ್ನ ಕಳೆದುಕೊಂಡು ಭಾರತವಿಂದು ಮೌನವಾಗಿದೆ. ಮನಮೋಹನ್ ಸಿಂಗ್ ನಿಧನರಾಗಿರಬಹುದು, ಆದರೆ ಅವರು ಜಾರಿಗೊಳಿಸಿರುವ ಒಂದೊಂದು ಯೋಜನೆಗಳು ಇಂದಿಗೂ ಜೀವಂತವಾಗಿದೆ. ಆರ್​.ಬಿ.ಐ ಗವರ್ನರ್ ಆಗಿ, ವಿತ್ತ ಸಚಿವನಾಗಿ, ಕೊನೆಗೆ ಈ ದೇಶದ ಪ್ರಧಾನಿ ಹುದ್ದೆಗೇರಿದ ಮನಮೋಹನ್ ಸಿಂಗ್, ಈ ದೇಶಕ್ಕೆ ನೀಡಿರುವ ಹತ್ತು ಹಲವು ಮಹಾನ್ ಯೋಜನೆಗಳು ಇತಿಹಾಸದ ಪುಟಗಳನ್ನ ಸೇರಿವೆ.

ಹಾಗಾದರೆ ಒಬ್ಬ ಆರ್.ಬಿ. ಐ ಗವರ್ನರ್ ಆರ್ಥಿಕ ಮಂತ್ರಿಯಾಗಿದ್ದು ಹೇಗೆ? ಮುಂದೆ ಇದೇ ಆಧುನಿಕ ಭಾರತದ ಕೌಟಿಲ್ಯ ಪ್ರಧಾನಿ ಗದ್ದುಗೆಗೇರಿ ಜಾರಿಗೆ ತಂದಿರುವ ಯೋಜನೆಗಳು ಯಾವುವು? ಈ ಬಗ್ಗೆ ಸಾಕಷ್ಟು ಜನಕ್ಕೆ ತಿಳಿದಿರುವುದಿಲ್ಲ. ಹಾಗಾದ್ರೆ ಮನಮೋಹನ್ ಸಿಂಗ್ ಹೇಗೆ ವಿತ್ತ ಸಚಿವರಾದರು? ಪ್ರಧಾನಿಯಾಗಿ ಅವರು ಜಾರಿಗೊಳಿಸಿದಂತಹ ಪ್ರಮುಖ ಯೋಜನೆಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮನಮೋಹನ್ ಸಿಂಗ್ ಆರ್ಥಿಕ ಮಂತ್ರಿಯಾಗಿದ್ದೇಗೆ?

ಇತಿಹಾಸ ಬದಲಿಸಿದ ಅನಿರೀಕ್ಷಿತ ಕರೆ..!

ಇದು ಮೂರು ದಶಕಗಳ ಹಿಂದಿನ ಕತೆ.. 1991ರ ಜೂನ್ ತಿಂಗಳು, ಆಗ ಮನಮೋಹನ್‌ ಸಿಂಗ್‌ ಯುಜಿಸಿಯಪಲ್ಲಿ ಅಧಿಕಾರಿಯಾಗಿದ್ದರು. ಅಂದು ಮಧ್ಯರಾತ್ರಿ ಮನಮೋಹನ್ ಸಿಂಗ್ ಅವರಿಗೆ ಅನಿರೀಕ್ಷಿತ ಕರೆಯೊಂದು ಬಂದಿತ್ತು. ಆ ತಡರಾತ್ರಿ ಪಿ.ವಿ. ನರಸಿಂಹರಾವ್‌ ಆಪ್ತರಾಗಿದ್ದ ಪಿ.ಸಿ. ಅಲೆಕ್ಸಾಂಡರ್‌ ಅವರು ಮನಮೋಹನ್‌ ಸಿಂಗ್‌ಗೆ ಕರೆ ಮಾಡಿ ಸಂಪರ್ಕಿಸಿದ್ದರು. ಆದರೆ ಆ ಒಂದು ದೂರವಾಣಿ ಕರೆ ಮುಂದೊಂದು ದಿನ ಹೊಸ ಇತಿಹಾಸವನ್ನೇ ಬರೆಯುತ್ತೆ ಎಂದು ಸ್ವತಹ ಮನಮೋಹನ್​ ಸಿಂಗ್ ಕೂಡ ಊಹಿಸಿರಲಿಲ್ಲ. ಆದರೆ ಮುಂದೊಂದು ದಿನ ಆರ್ಥಿಕ ಮಂತ್ರಿಯಾಗಿ ಮಕಾಡೆ ಮಲಗಿದ್ದ ದೇಶದ ಆರ್ಥಿಕತೆಯನ್ನ ಸದೃಢವಾಗಿ ಮೇಲೆತ್ತಿ ನಿಲ್ಲಿಸಿದರು.. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಹೊಸ ಇತಿಹಾಸವನ್ನೇ ಬರೆದರು.

ಹೌದು, ಮನಮೋಹನ್ ಸಿಂಗ್​ ಅವರು 1991ರ ಜೂನ್‌ 21 ರಂದು ಸಿಂಗ್‌ ಯುಜಿಸಿ ಕಚೇರಿಯಲ್ಲಿ ಕೆಲಸಕ್ಕೆ ಹೋಗಿದ್ದರು. ಆಗ ದೇಶದ ವಿತ್ತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಅವರು ಮುಂದೆ ದೊಡ್ಡ ಆಹ್ವಾನವೊಂದು ಬಂದು ಬಿಟ್ಟಿತು. ಕೂಡಲೇ ಸಿಕ್ಕ ಸವಕಾಶವನ್ನ ಕೈ ಚೆಲ್ಲದ ಸಿಂಗ್, ಕೂಡಲೇ ತಮ್ಮ ನಿವಾಸಕ್ಕೆ ತೆರಳಿ ಬಟ್ಟೆ ಬದಲಿಸಿ ಪ್ರಮಾಣ ವಚನ ಸ್ವೀಕರಿಸಿಯೇ ಬಿಟ್ಟರು. ಆ ದಿನ ನಡೆದ ಅನಿರೀಕ್ಷಿತ ಘಟನೆಯನ್ನ ಎಲ್ಲ ಬೆರಗು ಗಣ್ಣಿನಿಂದ ಬಾಯಿ ಮೇಲೆ ಬೆರಲಿಟ್ಟು ನೋಡಿದರು. ಆದರೆ ಪಿ.ವಿ. ನರಸಿಂಹರಾವ್‌ ಅವರು ಮಾತ್ರ ವೋರ್ವ ಸಮರ್ಥ ವ್ಯಕ್ತಿಗೆ ದೊಡ್ಡ ಜವಾಬ್ದಾರಿಯನ್ನ ನೀಡಿದ್ದರು. ಈ ಸತ್ಯ ಅವರಿಗೆ ಚನ್ನಾಗಿಯೇ ತಿಳಿದಿತ್ತು. ಈ ವ್ಯಕ್ತಿ ಮುಂದೊಂದು ದಿನ ಚಮತ್ಕಾರವನ್ನ ಮಾಡುತ್ತಾನೆಂದು.

ನರಸಿಂಹರಾವ್​ ಮನಸ್ಸಿನಲ್ಲಿ ಡಾ. ಸಿಂಗ್ ಹೆಸರು ಬಂದಿದ್ದು, ಹೇಗೆ?

ಇನ್ನೂ ಅಂದಿನ ಪ್ರಧಾನಿ ನರಸಿಂಹರಾವ್​ ಅವರಿಗೆ ಮನಮೋಹನ್ ಸಿಂಗ್ ಅವರನ್ನ ವಿತ್ತ ಮಂತ್ರಿಯಾಗಿ ಮಾಡಬೇಕೆಂಬ ಯೋಚನೆ ಬಂದಿದ್ದು ಹೇಗೆ ಎಂದು ನೋಡುವುದಾದರೆ, ಮೊದಲಿಗೆ ಇಂತಹದೊಂದು ಆಲೋಚನೆ ಮೂಡಿದ್ದು ಅಂದು ರಾಷ್ಟ್ರಪತಿಯಾಗಿದ್ದ ಆರ್‌. ವೆಂಕಟರಾಮನ್‌ ಅವರಿಗಂತೆ. ಹೌದು ಇಂದಿರಾ ಗಾಂಧಿ ಕಾಲದಲ್ಲಿ ಹಣಕಾಸು ಸಚಿವರಾಗಿದ್ದ ವೆಂಕಟರಾಮನ್‌ ಅವರಿಗೆ ಹಣಕಾಸು ಸಚಿವಾಲಯದ ಬಗ್ಗೆ ಜ್ಞಾನ ಇತ್ತು. ಹಾಗಾಗಿ ರಾಜಕಾರಣಿಯ ಬದಲಾಗಿ ಆರ್ಥಿಕ ತಜ್ಞರನ್ನು ಹಣಕಾಸು ಸಚಿವರಾಗಿ ಮಾಡುವ ಆಲೋಚನೆ ಅವರಿಗೆ ಬಂದಿತ್ತು. ಇದನ್ನ ವೆಂಕಟರಾಮನ್‌ ಅವರು ಒಮ್ಮೆ ನರಸಿಂಹರಾವ್‌ ಅವರಿಗೆ ಹೇಳಿದ್ದರು. ಅಂದು ಆರ್‌ಬಿಐ ಗವರ್ನರ್‌ ಆಗಿದ್ದ ಐ.ಜಿ. ಪಟೇಲ್‌ ಮತ್ತು ಡಾ. ಮನಮೋಹನ್‌ ಸಿಂಗ್‌ ಹೆಸರು ಪ್ರಸ್ತಾಪವಾಗಿತ್ತು. ಆದರೆ ಪಟೇಲ್‌ ಅವರು ವಿತ್ತ ಸಚಿವರಾಗಲು ಆಸಕ್ತಿ ತೋರಲಿಲ್ಲ. ಹಾಗಾಗಿ ಮನಮೋಹನ್‌ ಸಿಂಗ್‌ ರನ್ನು ವಿತ್ತ ಸಚಿವರನ್ನಾಗಿ ಮಾಡಲಾಗಿತ್ತು.

ಬಳಿಕ 1991ರ ಜುಲೈನಲ್ಲಿ ಮನಮೋಹನ್ ಸಿಂಗ್‌ ಮಂಡಿಸಿದ ಅವರ ಮೊತ್ತ ಮೊದಲ ಬಜೆಟ್‌ ನಲ್ಲಿ ಮುಳುಗುತ್ತಿದ್ದ ಆರ್ಥಿಕತೆಯನ್ನ ಮೇಲೆತ್ತಲು ಅಗತ್ಯ ಕ್ರಮಗಳನ್ನ ಘೋಷಿಸಿದ್ದರು. ಅಂದು ಡಾ. ಸಿಂಗ್‌ ತೆಗೆದುಕೊಂಡಿದ್ದ ನಿರ್ಧಾರಗಳಿಂದಾಗಿ ಹಳಿ ತಪ್ಪಿದ್ದ ಆರ್ಥಿಕತೆ ಸರಿ ದಾರಿ ಹಿಡಿದಿತ್ತು.
ಇನ್ನೂ 2004ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ಮನಮೋಹನ್‌ ಸಿಂಗ್‌ ಅವರು, 2014ರ ವರೆಗೂ ಪ್ರಧಾನಿಯಾಗಿ ದೇಶದ ಜವಾಬ್ದಾರಿಯನ್ನ ಹೊತ್ತಿದ್ದರು. ಸತತ 1 ದಶಕಗಳ ಕಾಲ ಪ್ರಧಾನಿ ಹುದ್ದೆಯನ್ನ ನಿಬಾಯಿಸಿದ್ದರು. ಈ ಅವದಿಯಲ್ಲಿ ಹತ್ತು-ಹಲವು ಕ್ರಾಂತಿಕಾರಕ ಯೋಜನೆಗಳನ್ನ ಜಾರಿಗೆ ತಂದಿದ್ದು, ಇಡೀ ದೇಶವೇ ಇವರನ್ನ ಸ್ಮರಿಸುತ್ತದೆ. ಶಿಕ್ಷಣ, ಅರ್ಥವ್ಯವಸ್ಥೆ, ಉದ್ಯೋಗ ಸೃಷ್ಟಿ, ಬಡವರ ಆರ್ಥಿಕಾಭಿವೃದ್ಧಿ ಸೇರಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ.

ಮನಮೋಹನ್ ಸಿಂಗ್ ಜಾರಿಗೆ ತಂದಿರುವ ಕ್ರಾಂತಿಕಾರಕ ಯೋಜನೆಗಳು :

- ಉದಾರೀಕರಣ, ಖಾಸಗೀಕರಣ, ಜಾಗತೀಕರಣ‌ (LPG) ರೂವಾರಿ
- ಕನಿಷ್ಠ 100 ದಿನಗಳ ಉದ್ಯೋಗ ಖಾತ್ರಿ ಯೋಜನೆ ಜಾರಿ
- ಡಾ. ಸಿಂಗ್‌ ಆಡಳಿತದಲ್ಲಿ ಪೋಲಿಯೋ ಮುಕ್ತ ಭಾರತ
- ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಮಾಹಿತಿ ಹಕ್ಕು ಕಾಯ್ದೆ
- ನೇರ ಲಾಭ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಿದ್ದೇ ಸಿಂಗ್‌
- ಡಾ. ಸಿಂಗ್‌ ಆಡಳಿತದಲ್ಲಿ ಆಧಾರ್‌ ಕಾರ್ಡ್‌ ಯೋಜನೆ ಜಾರಿ
- ದೇಶದ ರೈತರ 60 ಸಾವಿರ ಕೋಟಿ ಸಾಲಮನ್ನ ಮಾಡಿದ್ದ ಸಿಂಗ್‌
- ಡಾ. ಸಿಂಗ್‌ ಆಡಳಿತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹೂಡಿಕೆ
- ಅಮೆರಿಕ ಜೊತೆ ಭಾರತ ಐತಿಹಾಸಿಕ ಪರಮಾಣು ಒಪ್ಪಂದ
- ಕಡ್ಡಾಯ ಶಿಕ್ಷಣ ಯೋಜನೆ ಜಾರಿಗೆ ತಂದಿದ್ದ ಡಾ. ಸಿಂಗ್‌
- ಚಂದ್ರಯಾನ & ಮಂಗಳಯಾನ ಯೋಜನೆ ರೂವಾರಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+