ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಅವರ 5 ಪ್ರಬಲ ಹೇಳಿಕೆಗಳು ಇಂದಿಗೂ ಜನರ ಮನದಲ್ಲಿದೆ.

ಭಾರತದ ಆರ್ಥಿಕ ಹರಿಕಾರ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಡಿಸೆಂಬರ್‌ 26 ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿ ಕೊನೆಯುಸಿರೆಳೆದಿದ್ದಾರೆ.

ಮನಮೋಹನ ಸಿಂಗ್‌ ಅವರು 33 ವರ್ಷಗಳ ಕಾಲ ಭಾರತೀಯ ಸಂಸತ್ತಿನಲ್ಲಿ ಸೇವೆಯನ್ನ ಸಲ್ಲಿಸಿ, 2024ರಲ್ಲಿ ರಾಜ್ಯಸಭೆಯಲ್ಲಿ ನಿವೃತ್ತಿಯನ್ನ ಹೊಂದಿದರು. ಭಾರತೀಯ ಆರ್ಥಿಕತೆಯಲ್ಲಿ ಅವರ ಪಾತ್ರ ದೊಡ್ಡದು. ಅಲ್ಲದೆ ಭಾರತೀಯ ಆರ್ಥಿಕತೆಯನ್ನ ಜಾಗತಿಕ ಸ್ಪರ್ಧೆಗೆ ತಂದ ಕೀರ್ತಿ ಸಿಂಗ್‌ ಅವರಿಗೆ ಸಲ್ಲುತ್ತದೆ. 2004 ಮತ್ತು 2014ರ ವರೆಗೆ ಎರಡು ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಯುಪಿಎ ಸರ್ಕಾರದ ಪ್ರಧಾನಿಯಾಗಿದ್ದರು.

92ನೇ ವಯಸ್ಸಿನಲ್ಲಿ ಅಂತಿಮ ವಿದಾಯ ಹೇಳಿದ ಮಾಜಿ ಪ್ರಧಾನಿ

ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರವದಿಯ ಕೊನೆಯ ವರ್ಷಗಳಲ್ಲಿ ಅವರ ಮೇಲೆ ಭ್ರಷ್ಟಾಚಾರದ ಹಗರಣಗಳು ಮತ್ತು ಹಣದುಬ್ಬರದಿಂದಾಗಿ ಅವರು ಅಧಿಕಾರದಲ್ಲಿ ಉಳಿಯಲಾಗಲಿಲ್ಲ. ಹೀಗಾಗಿ 2014ರಲ್ಲಿ ಸಿಂಗ್‌ ಅವರ ಪಕ್ಷಕ್ಕೆ ಸೋಲಾಯಿತು. ನಂತರ ಅವರ ವಿರುದ್ಧ ನರೇಂದ್ರ ಮೋದಿ ಅವರು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಧಿಕಾರಕ್ಕೆ ಬಂದಿತು.

ಮನಮೋಹನಸಿಂಗ್‌ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಅವರು ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ ಅಕ್ಟೋಬರ್ 1991 ರಲ್ಲಿ ಅವರು ಮೊದಲ ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ನೇಮಕಗೊಂಡರು. ಇನ್ನು ಅವರು ಐದು ಬಾರಿ ರಾಜ್ಯಸಭೆಯಲ್ಲಿ ಅಸ್ಸಾಂ ಅನ್ನು ಪ್ರತಿನಿಧಿಸಿದರು. ನಂತರ ಅವರು 2019 ರಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರು.
ಇನ್ನು ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಅವರ ರಾಜ್ಯಸಭೆಯ ಕೊನೆಯ ಅವಧಿ ಅಂತ್ಯವಾಯಿತು.

ಪ್ರಧಾನಿಯಾಗಿ ನೇಮಕರಾಗುವವರು ಅಥವಾ ಕೇಂದ್ರ ಸಚಿವರಾಗುವವರು ಸಂಸತ್ತಿನ ಲೋಕಸಭೆ ಹಾಗೆ ರಾಜ್ಯಸಭೆ ಎರಡೂ ಸದನಗಳ ಸದಸ್ಯರಾಗಿರಬೇಕೆಂದು ಕಾನೂನು ಹೇಳುತ್ತದೆ. ಕಳೆದ ವರ್ಷ ನಡೆದ ಸಂಸತ್ ಅಧಿವೇಶನವೊಂದರಲ್ಲಿ ಮನಮೋಹನ್ ಸಿಂಗ್ ಅವರು ತಮಗೆ ಅನಾರೋಗ್ಯ ಇದ್ದರೂ ಕೂಡ ಅಧಿವೇಶನಕ್ಕೆ ಹಾಜರಾಗಿದ್ದರಿಂದ ಅವರು ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದರು.

ಮನಮೋಹನ ಸಿಂಗ್‌ ಅವರ ಈ ಐದು ಪ್ರಬಲ ಹೇಳಿಕೆಗಳನ್ನ ದೇಶ ಇಂದು ನೆನಪುಮಾಡಿಕೊಳ್ಳುತ್ತದೆ.

ಮಾಜಿ ಪ್ರಧಾನಿಯವರ ಐದು ಪ್ರಸಿದ್ಧ ಹೇಳಿಕೆಗಳು ಇಲ್ಲಿವೆ

ಮಾಜಿ ಶಿಕ್ಷಣ ತಜ್ಞ ಮತ್ತು ಅಧಿಕಾರಶಾಹಿ ಮನಮೋಹನ ಸಿಂಗ್‌ ಅವರು ಜೂನ್ 1991 ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಲೋಕಕ್ಕೆ ಪ್ರವೇಶ ಮಾಡಿದ್ರು. ಮೊದಲ ಬಾರಿ ಮನಮೋಹನ ಸಿಂಗ್‌ ಅವರನ್ನು ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಹಣಕಾಸು ಸಚಿವರಾಗಿ ನೇಮಕ ಮಾಡಿದ್ರು. ಅವರು ಹಣಕಾಸು ಸಚಿವರಾಗಿದ್ದಾಗ ಅವರು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹಾಗೆ ಸುಧಾರಿಸಲು ಸಾಕಷ್ಟು ನೂತನ ಕ್ರಮಗಳನ್ನ ಪ್ರಾರಂಭಿಸಿದರು. ಹೀಗಾಗಿ ಅವರನ್ನ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ ಎಂದೇ ಅವರನ್ನ ಕರೆಯುತ್ತಾರೆ.

ಜುಲೈ 24, 1991: 'ಭಾರತ ಈಗ ಜಾಗೃತವಾಗಿದೆ'

ಸಂಸತ್ತಿನಲ್ಲಿ ಜುಲೈ 24, 1991 ರಂದು ಹಣಕಾಸು ಸಚಿವರಾಗಿದ್ದಾಗ ತಮ್ಮ ಚೊಚ್ಚಲ ಭಾಷಣದಲ್ಲಿ ಸಿಂಗ್ ಅವರು ಫ್ರೆಂಚ್ ಬರಹಗಾರ ಮತ್ತು ರಾಜಕಾರಣಿ ವಿಕ್ಟರ್ ಹ್ಯೂಗೋವನ್ನು ಉಲ್ಲೇಖಿಸಿ ಮಾತನಾಡಿದ್ರು. "ಬದಲಾವಣೆ ಹತ್ತಿರವಿದ್ದಾಗ ಅದನ್ನು ಯಾರೂ ತಡೆಯಲು ಆಗುವುದಿಲ್ಲ, ಮುಂದೂಡಲು ಸಾಧ್ಯವಿಲ್ಲ" ಎಂದು ಹೇಳಿದರು.

ನಾನು ಆರಂಭಿಸಿದ ಈ ಕಠಿಣ ಪ್ರಯಾಣದಲ್ಲಿ ನಾನು ಇರುವ ಕಷ್ಟಗಳನ್ನ ಕಡಿಮೆ ಮಾಡುವುದಿಲ್ಲ ಆದ್ರೆ ವಿಕ್ಟರ್ ಹ್ಯೂಗೋ ಹೇಳಿದಂತೆ, "ಬದಲಾವಣೆ ಹತ್ತಿರವಿದ್ದಾಗ ಅದನ್ನು ಯಾರೂ ತಡೆಯಲು ಆಗುವುದಿಲ್ಲ, ಮುಂದೂಡಲು ಸಾಧ್ಯವಿಲ್ಲ". ನಾನು ಈ ಸಂಸತ್ತಿಗೆ ಸೂಚಿಸುವುದೇನೆಂದರೆ, ಪ್ರಪಂಚದಲ್ಲಿ ಭಾರತವು ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತದೆ. ಈ ಸಂದೇಶವನ್ನ ನಾನು ಇಡೀ ಪ್ರಪಂಚಕ್ಕೆ ಹೇಳುತ್ತೇನೆ. ನಾವು ಮೂಮಬರುವ ದಿನಗಳಲ್ಲಿ ಮೇಲುಗೈ ಸಾಧಿಸುತ್ತೇವೆ, ನಾವು ಜಯಿಸೋಣ ಎಂದು ಸಿಂಗ್ ಹೇಳಿದರು.

ಜುಲೈ 23, 2021 ರಂದು ಮೂವತ್ತು ವರ್ಷಗಳ ನಂತರ, ಆರ್ಥಿಕ ಉದಾರೀಕರಣದ ವಾರ್ಷಿಕೋತ್ಸವದಂದು, ಮನಮೋಹನ ಸಿಂಗ್ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯನ್ನು ನೆನಪಿಸಿಕೊಂಡರು , "ಆದರೆ ನಾನು ನಿದ್ದೆ ಮಾಡುವ ಮೊದಲು ನಡೆಸುವುದಿದೆ ಕೊಟ್ಟ ಹಲವು ಮಾತುಗಳನ್ನ, ಮೈಲುಗಳ ಪಯಣವಿದೆ ಕಣ್ಣ ಮುಚ್ಚುವ ಮುನ್ನ" ಎಂದಿದ್ದರು.

ಆಗಸ್ಟ್ 25, 1999: 'ರಾಜಕಾರಣಿಗಳು ಜನರನ್ನು ಸವಾರಿಗೆ ಕರೆದೊಯ್ಯುತ್ತಿದ್ದಾರೆ'

1999 ರ ಆಗಸ್ಟ್‌ನಲ್ಲಿ BCC ಯೊಂದಿಗೆ ನಡೆದ ಸಂದರ್ಶನದಲ್ಲಿ ಸಿಂಗ್‌ ಅವರು, ಅಮೆರಿಕದ ಹದಿನೈದನೇ ಅಧ್ಯಕ್ಷ ಎಬ್ರಹಾಂ ಲಿಂಕನ್ ಅವರ ಉದಾಹರಣೆಯನ್ನು ಉಲ್ಲೇಖಿಸಿ, ಭಾರತದಲ್ಲಿ ರಾಜಕಾರಣಿಗಳು ಕಳೆದ ಐದು ದಶಕಗಳಿಂದ ಜನರ ಮೇಲೆ ಸವಾರಿ ಮಾಡುತ್ತಿದ್ದರೆಂದು ಹೇಳಿದರು.

"ನಮಗೆ ಈ ಹೊಸ ಪ್ರಕಾರದ ರಾಜಕಾರಣದ ಅಗತ್ಯವಿದೆ ಎಂದು ನಾನು ನಂಬುತ್ತೇನೆ . ಒಂದು ಸತ್ಯವಂತಿಕೆಯಿಂದ ಕೂಡಿದ ರಾಜಕಾರಣ, ಜನರಿಗೆ ಸತ್ಯವನ್ನು ನೇರವಾಗಿ ಹೇಳುವ ರಾಜಕಾರಣ. ನಾನು ನಂಬುತ್ತೇನೆ ನಾವು ನಮ್ಮ ಜನರನ್ನ ಮರಳು ಮಾಡಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷ ಎಬ್ರಹಾಂ ಲಿಂಕನ್ ಅವರು ಒಮ್ಮೆ ಹೇಳಿದಂತೆ, 'ನೀವು ಕೆಲವೊಂದು ಜನರನ್ನು ಸದಾಕಾಲ ಮೂರ್ಖರನ್ನಾಗಿ ಮಾಡಬಹುದು, ಕೆಲವು ಜನರನ್ನು ಕೆಲಕಾಲಕ್ಕೆ ಮಾತ್ರ, ಆದರೆ ಎಲ್ಲಾ ಜನರನ್ನು ಸ್ವಲ್ಪ ಸಮಯ ಮಾತ್ರ ಮೂರ್ಖರನ್ನಾಗಿ ಮಾಡಲಾಗದು' ಎಂದು ನಾನು ನಂಬುತ್ತೇನೆ. ಕಳೆದ 50 ವರ್ಷಗಳಿಂದ ರಾಜಕಾರಣಿಗಳು ನಮ್ಮ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ರಾಜಕಾರಣಿಗಳು ಹೇಳುವದು, ವಾಗ್ದಾನ ಮಾಡುವದು ಮತ್ತು ಅವರು ಮಾಡುವುದರಲ್ಲಿ ವ್ಯತ್ಯಾಸ ಹೆಚ್ಚಾದರೆ, ಅದರಿಂದ ದೊಡ್ಡ ಅಪಾಯವಿದೆ ಎಂದು ಸಿಂಗ್ ಅವರು ಕರಣ್ ಠಾಪರ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಹೇಳಿದರು.

ಜನವರಿ 3, 2014: 'ಇತಿಹಾಸ ನನಗೆ ದಯಾಳು ಆಗಿರುತ್ತದೆ'

ಜನವರಿ 3, 2014 ರಂದು, ತನ್ನ ಎರಡನೇ ಮತ್ತು ಕೊನೆಯ ಅವಧಿಯ ಕೊನೆಯಲ್ಲಿ ಸಿಂಗ್ ಅವರು, ತಮ್ಮ ಸರ್ಕಾರದ ದಾಖಲೆಗಳನ್ನ ಸಮರ್ಥಿಸುವ ಮೂಲಕ ಅವರು ಎಲ್ಲಾ ಟೀಕೆಗಳಿಗೂ ಅವರು ಪ್ರತಿಕ್ರಿಯಿಸಿದ್ದರು .
"ನಾನು ದುರ್ಬಲ ಪ್ರಧಾನಿಯಾಗಿದ್ದೇನೆಂದು ನಾನು ನಂಬುವುದಿಲ್ಲ. ನಾನು ಸತ್ಯವಾಗಿ ನಂಬುತ್ತೇನೆ ಇತಿಹಾಸವು ನನಗೆ ಸಮಕಾಲೀನ ಮಾಧ್ಯಮಗಳು ಅಥವಾ ಲೋಕಸಭೆಯ ವಿರೋಧ ಪಕ್ಷಕ್ಕಿಂತ ದಯಾಳು ಆಗಿರುತ್ತದೆ. ರಾಜಕೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ನಾನು ಮಾಡಬಹುದಾದ ಎಲ್ಲಾ ಉತ್ತಮ ಕೆಲಸಗಳನ್ನ ನಾನು ಮಾಡಿದ್ದೇನೆ. ನಾನು ಏನು ಮಾಡಿದ್ದೇನೆ ಅಥವಾ ಏನು ಮಾಡಲಿಲ್ಲ ಎಂಬುದನ್ನು ಇತಿಹಾಸವೇ ನಿರ್ಣಯಿಸಲಿ," ಸಿಂಗ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜನವರಿ 3, 2014: 'ನರೇಂದ್ರ ಮೋದಿ ಪ್ರಧಾನಿ ಆದರೆ ದುರಂತ'

ಜನವರಿ 4, 2014 ರಂದು, ಲೋಕಸಭೆ ಚುನಾವಣೆಗಳನ್ನು ಮುನ್ನಡೆಸಿದ ಸಿಂಗ್ ಅವರು ಒಂದು ಪತ್ರಿಕಾಗೋಷ್ಠಿಯಲ್ಲಿ, ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆದರೆ ಅದು ದೇಶಕ್ಕೆ ವಿಪತ್ತು ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದರು. ಆ ಸಮಯದಲ್ಲಿ ಮೋದಿ ಬಿಜೆಪಿಯಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಆದರೆ, ನಾಲ್ಕು ವರ್ಷಗಳ ನಂತರ, ಸಿಂಗ್ ಆ ಅಭಿಪ್ರಾಯವನ್ನು ವಿಷಾದಿಸಿದರು. "ನಾನು ಮೋದಿ ಅವರು ಪ್ರಧಾನಿಯಾಗಿದ್ದರೆ ಅದು ವಿಪತ್ತು ಎಂದು ಹೇಳಿದ್ದೆ. ಈಗ ನಾನು ಅರಿತುಕೊಂಡಿದ್ದು, ನಾನು ಹೇಳುವಾಗ ಬಹಳ ಕಟುವಾದ ಶಬ್ದವನ್ನು ಬಳಸಿದ್ದೆ, ಆರೀತಿಯ ಪದವನ್ನ ನಾನು ಬಳಸಬಾರದಿತ್ತು. ನಾನು ಅದನ್ನು ಮತ್ತೆ ಹೇಳಲು ಬಯಸುವುದಿಲ್ಲ ಎಂದು 2018 ನವೆಂಬರ್ ನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಇಂದೋರ್‌ನಲ್ಲಿ ಹೇಳಿದರು.

ನವೆಂಬರ್ 24, 2016: 'ನೋಟು ಅಮಾನ್ಯೀಕರಣ ಒಂದು ವಿಶಾಲ ನಿರ್ವಹಣಾ ತಪ್ಪು'

ಮನಮೋಹನ್ ಸಿಂಗ್ ಅವರ ಪರಿಗಣನೆಗಳ ಪ್ರಕಾರ, ಅವರು ತಮ್ಮ ನಂತರದ ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳನ್ನು ವಿಮರ್ಶಿಸಿದ್ದಾರೆ, ಅದರಲ್ಲಿ 2016 ನವೆಂಬರ್ 8ರಂದು ಮೋದಿ ಘೋಷಿಸಿದ ₹500 ಮತ್ತು ₹1,000 ನಗದು ನೋಟುಗಳನ್ನು ರದ್ದುಪಡಿಸುವ ಕ್ರಮದ ಬಗ್ಗೆ ಕೂಡ ಅವರು ಟೀಕೆ ಮಾಡಿದ್ದಾರೆ.

ಆ ತಿಂಗಳಿನಲ್ಲಿ ಲೋಕಸಭೆಯಲ್ಲಿ ನಗದುರಹಿತೀಕರಣದ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಸಿಂಗ್ ಅವರು "ಈ ಯೋಜನೆಯನ್ನು ಜಾರಿ ಮಾಡಿದ ರೀತಿ ಒಂದು ನಿರ್ವಹಣಾ ವೈಪಲ್ಯತೆ ಎಂದು ಹೇಳಬಹುದು. ಅವರು ಅದನ್ನು "ಸಂಘಟಿತ ಲೂಟಿ, ಸಾಮಾನ್ಯ ಜನರ ಕಾನೂನುಬದ್ಧ ಲೂಟಿ" ಎಂದು ಕರೆದರು. ಹಾಗೆ ಒಂದು ವರ್ಷ ಬಳಿಕ, ಸಿಂಗ್ ನಗದುರಹಿತೀಕರಣ ಮತ್ತು ಸರಕಾಲು ಮತ್ತು ಸೇವಾ ತೆರಿಗೆ (GST) ಅನ್ನು "ಆರ್ಥಿಕತೆಗೆ ಎರಡನೇ ಹೊಡೆತ" ಎಂದು ಆಕ್ಷೇಪಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+