ನವದೆಹಲಿ, ಜೂನ್ 21: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮನೋಜ್ ಜೈನ್ ಅವರನ್ನು ಕಂಪನಿಯ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ.
ಈ ವರ್ಷದ ಜೂನ್ 20 ರಿಂದ ಜಾರಿಗೆ ಬರುವಂತೆ ಬಿಇಎಲ್ ನ ನೂತನ ಎಂಡಿ ಮತ್ತು ಅಧ್ಯಕ್ಷರಾಗಿ ಮನೋಜ್ ಅವರನ್ನು ನೇಮಿಸಲಾಗಿದೆ. ಅಂದಹಾಗೆ ಮನೋಜ್ ಅವರು ಬಿಇಎಲ್ ನಲ್ಲಿ ತಮ್ಮ ವೃತ್ತಿಜೀವನದ ಮೂವತ್ತು ವರ್ಷಗಳನ್ನು ಕಳೆದಿದ್ದು, ಈ ಅವಧಿಯಲ್ಲಿ ಅವರು ಸಂಶೋಧನೆ ಮತ್ತು ಅಭಿವೃದ್ದಿ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.

ಎಂಡಿಯಾಗಿ ನೇಮಕವಾಗುವ ಮೊದಲು ಮನೋಜ್ ಜೈನ್ ಅವರು ಸೆಪ್ಟೆಂಬರ್ 2022 ರಿಂದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿದ್ದರು. ಈ ಸಂದರ್ಭದಲ್ಲಿಯೇ ಅಂದರೆ ಆಗಸ್ಟ್ 1, 2023 ರಿಂದ ಅವರು ಬೆಂಗಳೂರು ಸಂಕೀರ್ಣ ನಿರ್ದೇಶಕರ ಹೆಚ್ಚುವರಿ ಪ್ರಭಾರ ಸ್ಥಾನದಲ್ಲೂ ಕರ್ತವ್ಯವನ್ನು ನಿರ್ವಹಿಸಿದ್ದರು. ಇನ್ನು ನಿರ್ದೇಶಕರಾಗಿ (R&D) ಭಡ್ತಿ ಪಡೆಯುವ ಮೊದಲು ಅವರು BEL ನ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿ ಎಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಏವಿಯಾನಿಕ್ಸ್ SBU ನ ಜನರಲ್ ಮ್ಯಾನೇಜರ್ ಆಗಿದ್ದರು. ನವೆಂಬರ್ 2022 ರಿಂದ ಮೇ 2023 ರ ನಡುವೆ, ಜೈನ್ ಮಾನವ ಸಂಪನ್ಮೂಲ ನಿರ್ದೇಶಕರ ಸ್ಥಾನವನ್ನು ಸಹ ನಿರ್ವಹಿಸಿದ್ದರು.
ಆರ್ ಇಸಿ ಜೈಪುರ ( ಈಗ MNIT) ಯಿಂದ ಚಿನ್ನದ ಪದಕದೊಂದಿಗೆ ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ 1991 ರ ಆಗಸ್ಟ್ ನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಪ್ರೊಬೇಷನರಿ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಬಿಇ ಎಲ್ ನ ಕೋಟ್‌ದ್ವಾರ ಘಟಕದಲ್ಲಿ D&E ಯಲ್ಲಿ ಅವರ ಆರಂಭಿಕ ವರ್ಷಗಳಲ್ಲಿ, ಮನೋಜ್ ಜೈನ್ ಅವರು ಡಿಜಿಟಲ್ ಮಲ್ಟಿಪ್ಲೆಕ್ಸರ್‌ಗಳು, ಕ್ರಾಸ್ ಕನೆಕ್ಟ್‌ಗಳು, CDOT ಎಕ್ಸ್‌ಚೇಂಜ್‌ಗಳು ಮತ್ತು ಮಿಲಿಟರಿ ಸ್ವಿಚ್‌ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಾದ ನಂತರ 1999 ರಲ್ಲಿ ಬೆಂಗಳೂರಿನ ಬಿಇಎಲ್ ನ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯದಲ್ಲಿ ರಕ್ಷಣಾ ಜಾಲಗಳು ಮತ್ತು ನೆಟ್‌ವರ್ಕ್ ಮತ್ತು ಬೃಹತ್ ಭದ್ರತಾ ಪರಿಹಾರಗಳ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡರು. BEL ನ ಪ್ರಮುಖ ವ್ಯವಹಾರಗಳಲ್ಲಿ ಒಂದಾದ ರಾಡಾರ್ , ಬಲ್ಕ್ ಸೆಕ್ಯುರಿಟಿ ಸೆಲ್ಯೂಷನ್ , ಅವರು FPGA ಬಳಸಿಕೊಂಡು VeXT, ಸ್ಕ್ಯಾನ್ ಪರಿವರ್ತಕ ಮತ್ತು ಡಿಸ್ಪ್ಲೇ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.
2017 ರ ಡಿಸೆಂಬರ್ ನಿಂದ ಮೇ 2019 ರವರೆಗೆ CRL-ಬೆಂಗಳೂರಿನ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು ಈ ವೇಳೆ ಅವರು ವಿವಿಧ ಡೊಮೇನ್ ಗಳಲ್ಲಿ ತಾಂತ್ರಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿದರು. ನಂತರ ಜೂನ್ 2019 ರಲ್ಲಿ BEL ನ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರದ (PD&IC) ಜನರಲ್ ಮ್ಯಾನೇಜರ್ ಪಾತ್ರ ವಹಿಸಿಕೊಂಡು ತಮ್ಮ ನಾಯಕತ್ವ ಪಾತ್ರದಲ್ಲಿ ಮುಂದುವರಿದರು.
ಮನೋಜ್ ಜೈನ್ ಅವರು ವಿವಿಧ R&D ಪ್ರಶಸ್ತಿಗಳು, Key Contributor Awards, ರಕ್ಷಾ ಮಂತ್ರಿ ಪ್ರಶಸ್ತಿ ಮತ್ತು SODET ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಅವರು ಅನೇಕ ತಾಂತ್ರಿಕ ವರದಿಗಳನ್ನು ಪ್ರಕಟಿಸಿದ್ದಾರೆ, ಹಲವಾರು ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ರಕ್ಷಣಾ ಬಳಕೆದಾರರು ಮತ್ತು DRDO ಗಳಿಗೆ ಉಪನ್ಯಾಸಗಳನ್ನು ನೀಡಿದ್ದಾರೆ.


Click it and Unblock the Notifications