ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ವಿಶ್ವದ ಎರಡನೇ ಶ್ರೀಮಂತ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ್ದಾರೆ. ಮೆಟಾ ಸಿಇಒ ಒಟ್ಟು ಮೌಲ್ಯ 206 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಇದನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದರೆ, ಇವರು 17.3 ಲಕ್ಷ ಕೋಟಿ ರೂ. ಮೌಲ್ಯ ಹೊಂದಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಟೆಲಸಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇವರ ನಿವ್ವಳ ಮೌಲ್ಯ 256 ಬಿಲಿಯನ್ ಯುಎಸ್ ಡಾಲರ್ (21.5 ಲಕ್ಷ ರೂ.) ಆಗಿದೆ.

ಅಮೆಜಾನ್ ಸಿಇಒಗೆ ಮೂರನೇ ಸ್ಥಾನ
ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ, ಅಮೆಜಾನ್ ಕಂಪನಿಯ ಸಿಇಒ ಮೂರನೇ ಸ್ಥಾನದಲ್ಲಿದ್ದಾರೆ. ಜೆಫ್ ಬೆಜೋಸ್ ಇವರ ನಿವ್ವಳ ಮೌಲ್ಯ 209 ಬಿಲಿಯನ್ ಡಾಲರ್ (17.56 ಲಕ್ಷ ಕೋಟಿ ರೂ.) ಆಗಿದೆ. ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ 193 ಬಿಲಿಯನ್ ಡಾಲರ್ (ರೂ 16.21 ಲಕ್ಷ ಕೋಟಿ) ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಎರಡನೇ ಶ್ರೀಮಂತ ಜುಕರ್‌ಬರ್ಗ್
ಪ್ರಸಕ್ತ ವರ್ಷ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು ಏರಿಕೆ ಆಗಿದೆ. ಮೆಟಾ ಸಿಇಒ ಅವರ ನಿವ್ವಳ ಮೌಲ್ಯವು 2024 ರಲ್ಲಿ ಇಲ್ಲಿಯವರೆಗೆ 78.1 ಶತಕೋಟಿ ಯುಎಸ್ ಡಾಲರ್ (6.5 ಲಕ್ಷ ಕೋಟಿ ರೂ.) ಹೆಚ್ಚಾಗಿದೆ. ಇದರೊಂದಿಗೆ ಜುಕರ್‌ಬರ್ಗ್ ಕೂಡ 200 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯದ ಕ್ಲಬ್‌ಗೆ ಎಂಟ್ರಿ ನೀಡಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಈ ಕ್ಲಬ್‌ನಿಂದ ಹೊರ ನಡೆದಿದ್ದಾರೆ.
ಮೆಟಾ ಕಂಪನಿಯ ಷೇರುಗಳ ಮೌಲ್ಯವು ಈ ವರ್ಷ ಶೇಕಡಾ 72 ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರಿಗಳು ಗರಿಷ್ಟ ಮಟ್ಟ ತಲುಪಿದೆ. ಅಂದರೆ 594.94 ಯುಎಸ್ ಡಾಲರ್. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಕಂಪನಿಯು ಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್‌ಗಳು ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ವಾರ್ಟ್‌ಅಪ್ ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಹೊಂದಿದೆ.

ಮಾರ್ಕ್ ಜುಕರ್‌ಬರ್ಗ್ ಈ ವರ್ಷ ಈ ಸ್ಥಾನವನ್ನು ತಲುಪಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಮೆನ್ಲೋ ಪಾರ್ಕ್‌ನ ಎನ್ನುವ ಕಂಪನಿಯ ಬೆಳವಣಿಗೆ ಚೆನ್ನಾಗಿದೆ. ಈ ಕಂಪನಿಯಲ್ಲಿ ಮಾರ್ಕ್ ಜುಕರ್‌ಬರ್ಗ್ ಶೇಕಡಾ 13 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ವರ್ಷ ಮನ್ಲೋ ಪಾರ್ಕ್ ಕಂಪನಿಯ ಲಾಭ ಹೆಚ್ಚಾಗಿದೆ. ಇದರ ನೇರ ಪರಿಣಾಮ ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯದ ಮೇಲೆ ಬಿದ್ದಿದೆ.
ಸೆಪ್ಟೆಂಬರ್ 25, 2024 ರಂದು, ಮೆಟಾದ ಕನೆಕ್ಟ್ ಈವೆಂಟ್‌ನಲ್ಲಿ, ಮಾರ್ಕ್ ಜುಕರ್‌ಬರ್ಗ್ ತಮ್ಮ ಹೊಸ ಪ್ರಾಜೆಕ್ಟ್ ಮೆಟಾ-ಎಐ ಕುರಿತು ವಿಶ್ವದ ಗಮನ ಸೆಳೆದಿದ್ದರು. ಮೆಟಾ-ಎಐ ವಿಶ್ವದ ಹೆಚ್ಚು ಬಳಸುವ ಡಿಜಿಟಲ್ ಸಹಾಯಕವಾಗುವತ್ತ ಸಾಗುತ್ತಿದೆ ಎಂದು ತಿಳಿಸಿದ್ದರು. ಮಾರ್ಕ್ ಜುಕರ್‌ಬರ್ಗ್ ಪ್ರಕಾರ, ಸೇವೆಯು 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪಲು ಹತ್ತಿರದಲ್ಲಿದೆ ಎಂದು ಬಹಿರಂಗ ಪಡಿಸಿದ್ದರು.


Click it and Unblock the Notifications