ಮಾರುತಿ ಸುಜುಕಿ ಭಾರತದ ಕಾರು ಮಾರುಕಟ್ಟೆಯ ಪ್ರಮುಖ ಕಂಪನಿಯಾಗಿದ್ದು ಈ ಸಂಸ್ಥೆಯ ಕಾರುಗಳಿಗೆ ಬೇಡಿಕೆ ಅಧಿಕವಾಗಿದೆ. ಕಡಿಮೆ ಬೆಲೆ, ಹೆಚ್ಚಿನ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಆಕರ್ಷಕ ವಿನ್ಯಾಸ ಇದಕ್ಕೆ ಕಾರಣ. ಇತ್ತೀಚೆಗೆ ಮಾರುತಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನ ಕಾರುಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಹೊಸ ವರ್ಷದಲ್ಲಿ ಕಾರು ದುಬಾರಿಯಾಗಬಹುದು ಎಂದು ಸುದ್ದಿ ಕೇಳಿಬಂದಿತ್ತು. ಹೌದು ಅಂದುಕೊಂಡಂತೆ ಮಾರುತಿ ಸುಜುಕಿ ಇಂಡಿಯಾ (Maruti Suzuki India )ತನ್ನ ಕಾರುಗಳ ಬೆಲೆ ಏರಿಕೆ ಮಾಡಿದ್ದು ಇದು ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಿದೆ.
ಮಾರುತಿ ಸುಜುಕಿ ಫೆಬ್ರವರಿ 1 ರಿಂದ ವಿವಿಧ ಮಾದರಿಗಳ ಬೆಲೆಯನ್ನು ₹32,500 ವರೆಗೆ ಏರಿಸಲಾಗುವುದು ಎಂದು ಗುರುವಾರ ತಿಳಿಸಿದೆ. ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಭಾಗಶಃ ಸರಿದೂಗಿಸಲು ಫೆಬ್ರವರಿ 1 ರಿಂದ ವಿವಿಧ ಮಾದರಿಗಳಾದ್ಯಂತ ₹ 32,500 ವರೆಗೆ ಬೆಲೆಗಳನ್ನು ಹೆಚ್ಚಿಸುವುದಾಗಿ ಕಾರು ಮಾರುಕಟ್ಟೆಯ ಲೀಡರ್ ಆಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಇಂಡಿಯಾ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಕಾರುಗಳನ್ನು ತಯಾರಿಸಲು ಬೇಕಾಗುವ ವಸ್ತುಗಳ ಬೆಲೆ ಮತ್ತು ಕಂಪನಿಯನ್ನು ನಡೆಸುವ ವೆಚ್ಚಗಳು ಹೆಚ್ಚಾಗಿರುವುದರಿಂದ, ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಈ ಬೆಲೆ ಹೆಚ್ಚಳವು ಫೆಬ್ರುವರಿ 1, 2025 ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯು ಮಾರುತಿ ಸುಜುಕಿ ಇಂಡಿಯಾ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಕಂಪನಿಯು ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಮೇಲೆ ಪರಿಣಾಮವನ್ನು ಕಡಿಮೆ ಮಾಡಲು ಬದ್ಧವಾಗಿದ್ದರೂ, ಹೆಚ್ಚಿದ ವೆಚ್ಚಗಳಲ್ಲಿ ಕೆಲವನ್ನು ಮಾರುಕಟ್ಟೆಗೆ ವರ್ಗಾಯಿಸಬೇಕಾದ ಅನಿವಾರ್ಯತೆ ಇದೆ" ಎಂದು ಅದು ಹೇಳಿದೆ.
ಪರಿಷ್ಕೃತ ಬೆಲೆಗಳ ಅಡಿಯಲ್ಲಿ, ಕಂಪನಿಯ ಕಾಂಪ್ಯಾಕ್ಟ್ ಕಾರ್ ಸೆಲೆರಿಯೊದ ಎಕ್ಸ್-ಶೋರೂಮ್ ಬೆಲೆಗಳು ₹32,500 ವರೆಗೆ ಏರಿಕೆಯಾಗಲಿದ್ದು ಪ್ರೀಮಿಯಂ ಮಾದರಿ ಇನ್ವಿಕ್ಟೋದ ಬೆಲೆಗಳು ₹30,000 ವರೆಗೆ ಹೆಚ್ಚಾಗಲಿದೆ.
ಕಂಪನಿಯ ಜನಪ್ರಿಯ ಮಾಡೆಲ್ ವ್ಯಾಗನ್-ಆರ್(Wagon-R ) ಬೆಲೆ ₹ 15,000 ಮತ್ತು ಸ್ವಿಫ್ಟ್ ₹ 5,000 ವರೆಗೆ ಏರಿಕೆಯಾಗಲಿದೆ . SUVಗಳಾದ ಬ್ರೆಝಾ(SUVs Brezza ) ಮತ್ತು ಗ್ರ್ಯಾಂಡ್ ವಿಟಾರಾ(Grand Vitara) ಕ್ರಮವಾಗಿ ₹ 20,000 ಮತ್ತು ₹ 25,000 ವರೆಗೆ ಬೆಲೆ ಏರಿಕೆಯಾಗಲಿದೆ. ಪ್ರವೇಶ ಮಟ್ಟದ ಸಣ್ಣ ಕಾರು(Entry-level small cars )ಗಳಾದ ಆಲ್ಟೋ ಕೆ10 ಯ ಬೆಲೆಗಳು ₹19,500 ವರೆಗೆ ಏರಿಕೆಯಾಗಲಿದೆ.
ಪ್ರೀಮಿಯಂ ಕಾಂಪ್ಯಾಕ್ಟ್ ಮಾದರಿ ಬಲೆನೋದ ಬೆಲೆಗಳು ₹9,000 ವರೆಗೆ, ಕಾಂಪ್ಯಾಕ್ಟ್ ಎಸ್‌ಯುವಿ ಫ್ರಾಂಕ್ಸ್‌ನ (SUV Fronx) ಬೆಲೆಗಳು ₹5,500 ವರೆಗೆ ಮತ್ತು ಕಾಂಪ್ಯಾಕ್ಟ್ ಸೆಡಾನ್ ಡಿಸೈರ್‌ನ(sedan Dzire) ಬೆಲೆಗಳು ₹10,000 ವರೆಗೆ ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಪ್ರಸ್ತುತ, ₹3.99 ಲಕ್ಷದಿಂದ ಪ್ರಾರಂಭವಾಗುವ ಬೆಲೆಗಳೊಂದಿಗೆ, ಎಂಟ್ರಿ-ಲೆವೆಲ್ ಆಲ್ಟೋ ಕೆ-10 ರಿಂದ ಇನ್ವಿಕ್ಟೋವರೆಗೆ ವಾಹನಗಳ ವ್ಯಾಪ್ತಿಯನ್ನು ಮಾರಾಟ ಮಾಡುತ್ತದೆ.
ಮಾರುತಿ ಸುಜುಕಿ ಮಾತ್ರವಲ್ಲ ಹಲವು ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆ ಏರಿಕೆ ಮಾಡಲಿದೆ. ಡಿಸೆಂಬರ್ 5 ರಂದು ಹ್ಯುಂಡೈ ಮೋಟಾರ್ ಇಂಡಿಯಾ ಬೆಲೆ ಏರಿಕೆ ಘೋಷಣೆ ಮಾಡಿತ್ತು. ಜನವರಿ 2025ರಿಂದ ಹ್ಯುಂಡೈ ಕಾರುಗಳ ಬೆಲೆ 25,000 ರೂಪಾಯಿ ಹೆಚ್ಚಾಗಲಿದೆ ಎಂದು ಘೋಷಿಸಿತ್ತು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications