'ಲಾಕ್‌ಡೌನ್ ಸಮಯದಲ್ಲಿ ಲಾಭ ಮಾಡಿಕೊಂಡಿವೆ ಟೆಲಿಕಾಂ ಕಂಪನಿಗಳು'

ನವದೆಹಲಿ, ಜೂನ್ 18: ಕೊರೊನಾವೈರಸ್ ಲಾಕ್‌ಡೌನ್ ಕಾಲದಲ್ಲಿ ಅತಿಹೆಚ್ಚು ಲಾಭ ಮಾಡಿಕೊಂಡವರೆಂದರೆ ಟೆಲಿಕಾಂ ಕಂಪನಿಗಳು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ವಿವಿಧ ಪ್ರಕರಣಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುವ ತಮ್ಮ ಬಾಕಿ ಹಣವನ್ನು ಪಾವತಿಸಲು ಸಮಂಜಸವಾದ ಪಾವತಿ ಯೋಜನೆಯನ್ನು ತರಲು ಸುಪ್ರೀಂಕೋರ್ಟ್ ಗುರುವಾರ ದೂರಸಂಪರ್ಕ ಇಲಾಖೆಯ ಅರ್ಜಿ ಕೈಗೆತ್ತಿಕೊಂಡು ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿತು.

"ಕೊರೊನಾವೈರಸ್ ಪಿಡುಗಿನ ಕಾಲದಲ್ಲಿ ಹಣ ಗಳಿಸಿರುವ ಏಕೈಕ ವಲಯ ಟೆಲಿಕಾಂ ವಲಯ. ಟೆಲಿಕಾಂ ಕಂಪನಿಗಳು ಸ್ವಲ್ಪ ಮೊತ್ತವನ್ನು ಠೇವಣಿ ಮಾಡಬೇಕು. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಕ್ಕೆ ಈ ಹಣ ಬೇಕಾಗುತ್ತದೆ" ಎಂದು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಟೆಲಿಕಾಂ ಕಂಪೆನಿಗಳಿಗೆ ಕಿವಿಮಾತು ಹೇಳಿದೆ.

'ಲಾಕ್‌ಡೌನ್ ಸಮಯದಲ್ಲಿ ಲಾಭ ಮಾಡಿಕೊಂಡಿವೆ ಟೆಲಿಕಾಂ ಕಂಪನಿಗಳು'

ಅಲ್ಲದೇ ಟೆಲಿಕಾಂ ಕಂಪನಿಗಳು ಕಳೆದ 10 ವರ್ಷಗಳ ತಮ್ಮ ಅಕೌಂಟ್ಸ್ ಪುಸ್ತಕಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ನಷ್ಟದಿಂದಾಗಿ ಪಾವತಿ ಗ್ಯಾರಂಟಿ ನೀಡಲು ಯಾವುದೇ ಹಣವಿಲ್ಲ ಎಂದು ವೊಡಾಫೋನ್ ಹಾಗೂ ಐಡಿಯಾ ನ್ಯಾಯಾಲಯಕ್ಕೆ ತಿಳಿಸಿದೆ. ದೂರಸಂಪರ್ಕ ಇಲಾಖೆಗೆ ಭಾರತಿ ಏರ್‌ಟೆಲ್‌ನ 43,980 ಕೋಟಿ, ವೊಡಾಫೋನ್ ಐಡಿಯಾ 58,254 ಕೋಟಿ ಮತ್ತು ಟಾಟಾ ಗ್ರೂಪ್ 16,798 ಕೋಟಿ ರೂ ಪಾವತಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+