ಪರಿಶ್ರಮ, ಶೃದ್ದೆ ಇದ್ದರೆ ಅದರ ಫಲಿತಾಂಶ ಯಶಸ್ವಿಯಲ್ಲಿ ಕೊನೆಯಾಗುತ್ತದೆ ಎಂಬುವುದು ಈ ಸ್ಟೋರಿ ನಿದರ್ಶನ. ಸಹೋದರಿಬ್ಬರು ಕೇವಲ ₹5,000 ಹೂಡಿಕೆಯೊಂದಿಗೆ ಆರಂಭಿಸಿದ ವ್ಯವಹಾರ ಇಂದು ಬಹುಕೋಟಿ ಉದ್ಯಮವಾಗಿ ಬೆಳೆದು ನಿಂತಿದ್ದು, ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದೆ. ಹಾಗಂತ ಇವರು IIT, IIM ಶಿಕ್ಷಣವನ್ನು ಪಡೆದವರಲ್ಲ. ಸಾಮಾನ್ಯ ಕುಟುಂಬದಲ್ಲಿ ಹುಟ್ಟು ಬೆಳೆದ ಸಹೋದರಿಬ್ಬರ ಯಶಸ್ವಿ ಕಥೆಯನ್ನು ನೋಡೋಣ..
ಬಿ ಸೌಂದರರಾಜನ್ ಮತ್ತು ಜಿಬಿ ಸುಂದರರಾಜನ್ ಈ ಸಹೋದರರಿಬ್ಬರು ಇಂದು ಭಾರತದ ಇಬ್ಬರು ಶ್ರೀಮಂತ ಉದ್ಯಮಿಗಳಾಗಿದ್ದಾರೆ. 1984ರಲ್ಲಿ, ಉದುಮಲೈಪೇಟೆಯಲ್ಲಿ, ಕೊಯಂತ್ತೂರಿನಿಂದ 72 ಕಿಲೋಮೀಟರ್ ದೂರದಲ್ಲಿ ಈಸಹೋದರರು ಕೇವಲ ₹5,000 ಹೂಡಿಕೆಯೊಂದಿಗೆ ಕೋಳಿ ಸಾಕಣೆ ಫಾರ್ಮ್ ಆರಂಭಿಸಿದರು. ಸುಮಾರು ನಾಲ್ಕು ದಶಕ ಕಳೆಯುತ್ತಿದ್ದಂತೆ, ಅವರು ವಾರ್ಷಿಕ 12000 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಭಾರತದ ಅತಿದೊಡ್ಡ ಕೋಳಿಮಾಂಸದ ವ್ಯವಹಾರವನ್ನು ಸೃಷ್ಟಿಸಿದ್ದಾರೆ. ಸುಗುಣ ಫುಡ್ಸ್ ಎಂಬ ಅವರ ಸಂಸ್ಥೆಯು 18 ರಾಜ್ಯಗಳ 15,000ಕ್ಕೂ ಹೆಚ್ಚು ಗ್ರಾಮಗಳ 40,000 ರೈತರೊಂದಿಗೆ ಕೈಜೋಡಿಸಿದೆ. ಬಿ ಸೌಂದರರಾಜನ್ ಈ ದೈತ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅವರ ಮಗ ವಿಘ್ನೇಶ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಇಂದು, ಸುಗುಣ ಫುಡ್ಸ್ ಭಾರತದ ನಂ.1 ಬ್ರಾಯ್ಲರ್ ಉತ್ಪಾದಕ ಕಂಪನಿಯಾಗಿದ್ದು, ₹10,750 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ವಿಶ್ವದ ಅಗ್ರ 10 ಕೋಳಿ ಕಂಪನಿಗಳಲ್ಲಿ ಸುಗುಣ ಫುಡ್ಸ್ ಸ್ಥಾನ ಪಡೆದಿದೆ. ಕೋಳಿ ಫಾರ್ಮ್‌ಗಳು, ಹ್ಯಾಚರಿಗಳು, ಫೀಡ್ ಮಿಲ್‌ಗಳು, ಪ್ರೊಸೆಸಿಂಗ್ ಪ್ಲಾಂಟ್‌ಗಳು, ಪಶು ಆರೋಗ್ಯ ಉತ್ಪನ್ನಗಳು ಮತ್ತು ಪೌಷ್ಟಿಕ ಪೂರಕಗಳಂತಹ ಸಮಗ್ರ ವ್ಯವಹಾರವನ್ನು ಕಂಪನಿ ಹೊಂದಿದೆ.
ಸುಗುಣ ಫುಡ್ಸ್ ಸಂಸ್ಥೆಯು ತನ್ನ ಹೆಚ್ಚಿನ ಆದಾಯವನ್ನು ಭಾರತದ ದಕ್ಷಿಣ ಮತ್ತು ಪೂರ್ವ ಭಾಗದಿಂದ ಪಡೆಯುತ್ತಿದೆ. ಇದು ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಮತ್ತು ಮೊಟ್ಟೆಗಳ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ಸುಗುಣ ಬ್ರಾಯ್ಲರ್ ಚಿಕನ್ ಜೊತೆಗೆ ಉತ್ತಮ ಗುಣಮಟ್ಟದ ಮೊಟ್ಟೆ ಮತ್ತು ಸಂಸ್ಕರಿತ ಮಾಂಸವನ್ನು ನೀಡುವುದರಿಂದ ಗ್ರಾಹಕರು ಸುಗುಣ ಚಿಕನ್ ನನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ . ಇದು ಇಂದು ಎಲ್ಲರ ಮನೆಮಾತಾಗಿದೆ. ಅದ್ರೂ, ಬ್ರ್ಯಾಂಡ್‌ನ ಅತ್ಯಂತ ಗಮನಾರ್ಹ ಅಂಶವೆಂದರೆ "ಪೌಲ್ಟ್ರಿ ಇಂಟಿಗ್ರೇಷನ್". "ಗ್ರಾಮೀಣ ಭಾರತವನ್ನು ಶಕ್ತಿಗೊಳಿಸುವ" ದೃಷ್ಟಿಕೋನದ ಮೂಲಕ 18 ರಾಜ್ಯಗಳ 15,000ಕ್ಕೂ ಹೆಚ್ಚು ಗ್ರಾಮಗಳ 40,000 ರೈತರೊಂದಿಗೆ ಕೈಜೋಡಿಸಿಕೊಂಡಿದೆ.
ಆ ಕಾಲದಲ್ಲಿ ಭಾರತದಲ್ಲಿ ಒಂದು ವಿನೂತನ ಪರಿಕಲ್ಪನೆಯಾದ ಗುತ್ತಿಗೆ ಆಧಾರದಲ್ಲಿ ರೈತರನ್ನು ನೇಮಿಸಿಕೊಳ್ಳಲು ಯೋಚಿಸಿದರು. ಕುಕ್ಕುಟೋದ್ಯಮ ವನ್ನು ಅವರು 1990 ರಲ್ಲಿ ಕೇವಲ ಮೂರು ರೈತರೊಂದಿಗೆ ಈ ಮಾದರಿಯನ್ನು ಪ್ರಾರಂಭಿಸಿದರು. ರೈತರಿಗೆ ಬಿ ಸೌಂದರರಾಜನ್ ಮತ್ತು ಜಿಬಿ ಸುಂದರರಾಜನ್ ಸಹೋದರರು ರೈತರಿಗೆ ಕೋಳಿ ಸಾಕಲು ಬೇಕಾದ ಎಲ್ಲವನ್ನೂ ಒದಗಿಸಿದರು. ರೈತರು ಬೆಳೆಸಿದ ಕೋಳಿಗಳನ್ನು ಹಣ ಕೊಟ್ಟು ಖರೀದಿಸಲು ಆರಂಭಿಸಿದರು. ಹೀಗೆ ನಿಧಾನಗತಿಯಲ್ಲಿ ಸಾಗುತ್ತಾ ಮುಂದಿನ 7 ವರ್ಷಗಳಲ್ಲಿ, 40 ರೈತರು ಅವರೊಂದಿಗೆ ಸೇರಿಕೊಂಡರು. ಆಗ ಅವರ ವಹಿವಾಟು 7 ಕೋಟಿ ರೂ. ತಲುಪಿತು. ಜೊತೆಗೆ ಸುಗುಣ ಚಿಕನ್ ಶೀಘ್ರದಲ್ಲೇ ತಮಿಳುನಾಡಿನಲ್ಲಿ ಮನೆಮಾತಾಯಿತು. ನಂತರ ಕಂಪನಿಯು ನಂತರ ಕುಕ್ಕುಟೋದ್ಯಮ ರೈತರಿಗೆ ಆರೋಗ್ಯಕರ ರೀತಿಯಲ್ಲಿ ಉತ್ಪನ್ನಗಳನ್ನು ಬೆಳೆಯಲು ತಾಂತ್ರಿಕ ಪರಿಣತಿಯನ್ನು ನೀಡಲು ಪ್ರಾರಂಭಿಸಿತು. ಕಳಪೆ ಕಾರ್ಯಕ್ಷಮತೆಯ ಸಂದರ್ಭದಲ್ಲಿ ಕಂಪನಿಯು ಕನಿಷ್ಟ ಬೆಳವಣಿಗೆಯ ಶುಲ್ಕವನ್ನು ಸಹ ಪಾವತಿಸುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ರೈತರಿಗೆ ಕನಿಷ್ಠ ಬೆಳೆಯುವ ಶುಲ್ಕ ಸಿಗುತ್ತದೆ. ಈ ಎಲ್ಲಾ ಕಾರ್ಯಯೋಜನೆಗಳು ಕಂಪನಿ ಮತ್ತಷ್ಟು ಬೆಳೆಯಲು ಸಹಾಯಕಾರಿಯಾಯಿತು.
ಸುಗುಣ ಫುಡ್ಸ್ ತನ್ನ ಕಾರ್ಯಾಚರಣೆಯನ್ನು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ ಕೇಂದ್ರೀಕರಿಸಿದೆ. ಫಾರ್ಮ್ಸ್ ಅಂಡ್ ಫೀಡ್ (B2B): ಇದು ಮುಖ್ಯವಾಗಿ ಇತರ ವ್ಯಾಪಾರಗಳಿಗೆ (B2B) ಕೋಳಿ ಮತ್ತು ಆಹಾರವನ್ನು ಒದಗಿಸುವ ಕೆಲಸ ಮಾಡುತ್ತದೆ. ಫುಡ್ ಅಂಡ್ ಸೋಯಾ (B2C): ಈ ವಿಭಾಗವು ನೇರವಾಗಿ ಗ್ರಾಹಕರಿಗೆ (B2C) ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಬ್ರ್ಯಾಂಡ್‌ಗೆ ಪಾನ್-ಇಂಡಿಯಾ ಮತ್ತು ಅಂತರರಾಷ್ಟ್ರೀಯ ಉಪಸ್ಥಿತಿ ಇದ್ದರೂ, ಅದರ ಹೆಚ್ಚಿನ ಆದಾಯ ದಕ್ಷಿಣ ಮತ್ತು ಪೂರ್ವ ಭಾರತದಿಂದ ಬರುತ್ತದೆ.


Click it and Unblock the Notifications