ಫ್ಯಾಶನ್‌ನ ಲೋಕದಲ್ಲಿ ವೈಭೋವಪೇತ ಎಂದೆನಿಸಿಕೊಂಡಿರುವ ಈ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದು ನಟಿ ಅಲಿಯಾ ಭಟ್, ಉದ್ಯಮಿ ಇಶಾ ಅಂಬಾನಿ ಮತ್ತು ನತಾಶಾ ಪೂನಾವಾಲಾ ಮುಂತಾದವರಿಗೆ ಹೊಸತಲ್ಲ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಈ ಬಾರಿ ಸುಧಾ ರೆಡ್ಡಿ ಅವರು ತಮ್ಮ ಐಷಾರಾಮಿ ಉಡುಗೆ ಮತ್ತು ಸೊಗಸಾದ ಆಭರಣದೊಂದಿಗೆ ಎಲ್ಲರನ್ನು ಚಕಿತಗೊಳಿಸಿದ್ದಾರೆ.
"ಹೈದರಾಬಾದ್‌ನ ರಾಣಿ ಬೀ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸುಧಾ ಭಾರತೀಯ ಬಿಲಿಯನೇರ್ ಮತ್ತು ಹೈದರಾಬಾದ್ ಮೂಲದ ಲೋಕೋಪಕಾರಿಯಾಗಿದ್ದಾರೆ. ಸುಧಾ ರೆಡ್ಡಿ ಹೈದರಾಬಾದ್ ಮೂಲದ ಬಿಲಿಯನೇರ್ ಪಿವಿ ಕೃಷ್ಣಾ ರೆಡ್ಡಿ ಅವರನ್ನು 19 ನೇ ವಯಸ್ಸಿನಲ್ಲಿ ವಿವಾಹವಾಗಿದ್ದು, ಸುಧಾ ರೆಡ್ಡಿ ಫೌಂಡೇಶನ್ ಮೂಲಕ ಲೋಕೋಪಕಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ನಿಖರವಾದ ನಿವ್ವಳ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇವರ ಪತಿ $2.2 ಬಿಲಿಯನ್ (Rs 18,370 ಕೋಟಿ) ಸಂಪತ್ತನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಕೃಷ್ಣಾ ರೆಡ್ಡಿಯವರು ಮೇಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯ ಪ್ರವರ್ತಕರಾಗಿದ್ದು ಇದನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನಡೆಸುತ್ತಿದ್ದಾರೆ.

ದಂಪತಿಗಳು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಬಿಲಿಯನೇರ್ಸ್ ರೋನಲ್ಲಿರುವ ಅದ್ದೂರಿ ಗ್ರೀಕೋ-ರೋಮನ್ ಶೈಲಿಯ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಬಂಗಲೆಯೂ ಕಾರಂಜಿಗಳು, ಹಚ್ಚ ಹಸಿರು ಉದ್ಯಾನ ಮತ್ತು ಅದ್ದೂರಿ ಒಳಾಂಗಣಗಳಂತಹ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾ ರೆಡ್ಡಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಗಳು ಅವರ ಅತಿರಂಜಿತ ಜೀವನಶೈಲಿಯ ನೋಟಗಳನ್ನು ನೀಡುತ್ತದೆ.
ಮೆಟ್ ಗಾಲಾ ಸಮಾರಂಭದಲ್ಲಿ ಸದ್ದು ಮಾಡಿದ ಸುಧಾ ರೆಡ್ಡಿಯವರ ದುಬಾರಿ ಗೌನ್:
ಮೆಟ್ ಗಾಲಾ ಸಮಾರಂಭದಲ್ಲಿ ಖ್ಯಾತ ವಿನ್ಯಾಸಕ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ದಂತದ ಬಣ್ಣದ ರೇಷ್ಮೆ ಗೌನ್‌ನಲ್ಲಿ ಕಂಗೊಳಿಸಿದ್ದು ಕಸ್ಟಮ್-ಕಸೂತಿ ಗೌನ್ ಇದಾಗಿತ್ತು. ಇದು 80 ಕ್ಕೂ ಹೆಚ್ಚು ಕಲಾವಿದರ 4,500 ಗಂಟೆಗಳ ಶ್ರಮದ ಮೂಲಕ ತಯಾರಾಗಿತ್ತು. "ದಿ ಗಾರ್ಡನ್ ಆಫ್ ಟೈಮ್" ಎಂಬ ಈವೆಂಟ್‌ನ ಥೀಮ್‌ನೊಂದಿಗೆ ಜೋಡಿಸಲಾದ ಗೌನ್ "ಕೈಯಿಂದ ಕೆತ್ತಿದ ಮದರ್-ಆಫ್-ಪರ್ಲ್ ಹೂಗಳನ್ನು ಹೊಂದಿದೆ, ಇದು ಪ್ರಕಾಶಮಾನತೆ ಮತ್ತು ಶಾಶ್ವತತೆಯನ್ನು ಸಂಕೇತಿಸುತ್ತದೆ, ಆದರೆ 3D ಚಿಟ್ಟೆಗಳು ಜೀವನ ಚಕ್ರವನ್ನು ಸಂಕೇತಿಸುತ್ತವೆ" ಎಂದು ಅವರ ಗೌನ್ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ವರದಿಯ ಪ್ರಕಾರ ಗೌನ್‌ಗೆ 83 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.
2021 ರಲ್ಲಿ ತನ್ನ ಚೊಚ್ಚಲ ಪ್ರವೇಶದ ನಂತರ ಈ ವರ್ಷ ಸುಧಾ ಮೆಟ್ ಗಾಲಾದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದಾರೆ. ವಿಶೇಷ ಗೌನ್ ಮಾತ್ರವಲ್ಲದೇ 180 ಕ್ಯಾರೆಟ್ ನ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು. ಎಟರ್ನೊ ಡೈಮಂಡ್ ನೆಕ್ಲೇಸ್ ಇದರಲ್ಲಿ 25-ಕ್ಯಾರೆಟ್ ಹಾರ್ಟ್ ಶೇಪ್ ಡೈಮಂಡ್, ಮೂರು 20-ಕ್ಯಾರೆಟ್ ನ ಹಾರ್ಟ್ ಶೇಪ್ ಡೈಮಂಡ್ , 21 ವಜ್ರಗಳುಳ್ಳ ನೆಕ್ಲೇಶ್ ಧರಿಸಿದ್ದರು. ಇದು ಅವರ 25 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಅವರ ಪತಿ ಅವರಿಗೆ ನೀಡಿದ ಉಡುಗೊರೆಯಾಗಿತ್ತು.
ಸುಮಾರು $20 ಮಿಲಿಯನ್ (ರೂ. 166 ಕೋಟಿ) ಮೌಲ್ಯದ ಎರಡು ಸಾಲಿಟೇರ್ ಡೈಮಂಡ್ ರಿಂಗ್‌ಗಳನ್ನು ಧರಿಸಿ $40,000 USD (ರೂ. 33 ಲಕ್ಷ) ಬೆಲೆಯ ಚಾನೆಲ್ ಬ್ಯಾಗ್ ಅನ್ನು ತಮ್ಮ ಜೊತೆ ಕ್ಯಾರಿ ಮಾಡಿದ್ದರು.


Click it and Unblock the Notifications