ಚಾಟ್‌ಜಿಪಿಟಿ, ಡೀಪ್‌ಸೀಕ್ ಆಯ್ತು..ಈಗ ಹೊಸ AI, ಮಾರ್ಕ್ ಜುಕರ್ ಬರ್ಗ್ ಸಾರಥ್ಯದ ಮೆಟಾ ಲಾಮಾ 4 ಬಗ್ಗೆ ತಿಳಿಯಿರಿ..!

ವಿಶ್ವದಲ್ಲಿ AI ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿದೆ. ಜಗತ್ತಿನಲ್ಲಿ AI ತಂತ್ರಜ್ಞಾನ ಹೊಸ ಜಾದೂ ಮಾಡಿದೆ ಎಂದರೂ ತಪ್ಪಾಗಲ್ಲ. ಎಲ್ಲದಕ್ಕೂ ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯ ಮಾಡುತ್ತಿದೆ. ಈಗ ಮನೆ ಕೆಲಸದಿಂದ ಹಿಡಿದು, ಉದ್ಯೋಗ, ವೈದ್ಯಕೀಯ, ಶಿಕ್ಷಣ, ಕಾನೂನು, ಮನರಂಜನೆಗೆಲ್ಲ ಎಐ ತಂತ್ರಜ್ಞಾನ ನೆರವಾಗುತ್ತಿದೆ. ಈ ಪ್ರಗತಿಯಲ್ಲಿ 'ಜಾದೂ'ಯೆನೆನಿಸುವಷ್ಟು ಬದಲಾವಣೆ ಕಂಡು ಬರುತ್ತಿದ್ದು, ಜಗತ್ತಿನ ಬೃಹತ್ ಟೆಕ್ ಸಂಸ್ಥೆಗಳೆಲ್ಲಾ ತಮ್ಮದೇ ಆದ AI ಮಾದರಿಗಳನ್ನು ಅಭಿವೃದ್ಧಿಪಡಿಸುವ ಜ್ವರದಲ್ಲಿ ಮುಳುಗಿವೆ. ಇದರ ಪೈಕಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಮೂಲ ಸಂಸ್ಥೆಯಾದ Meta ಕೂಡ ಈ ಪ್ರಬಲ ಹೊರಾಟಕ್ಕೆ ಇಳಿದಿದೆ. ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ನೇತೃತ್ವದಲ್ಲಿ, ಈಗ 'ಮೆಟಾ ಲಾಮಾ 4' ಎಂಬ ಹೊಸದಾದ AI ಮಾದರಿ ತಂತ್ರಜ್ಞಾನ ಜಗತ್ತಿಗೆ ಕಾಲಿಟ್ಟಿದೆ.

ಚಾಟ್‌ಜಿಪಿಟಿ, ಡೀಪ್‌ಸೀಕ್ ಆಯ್ತು...ಈಗ ಹೊಸ AI..!

ಹೌದು, ಈ ಹೊಸ ತಂತ್ರಜ್ಞಾನವು ಈಗಾಗಲೇ ಇರುವ ಚಾಟ್‌ಜಿಪಿಟಿ, ಜೆಮಿನಿ, ಡೀಪ್‌ಸೀಕ್ ಮಾದರಿಗಳೊಂದಿಗೆ ನಡೆಯುತ್ತಿರುವ ತೀವ್ರ ಸ್ಪರ್ಧೆಯಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಇದರ ನಿರ್ವಹಣೆಯ ಹಕ್ಕು ಹೊಂದಿರುವವರಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಭೂಮಿಕೆಯನ್ನು ಗಮನಿಸಬೇಕು.

'ಮೆಟಾ ಲಾಮಾ 4'ನಲ್ಲಿ ಎರಡು ಮಾದರಿ:

ಇನ್ನು ಈ 'ಮೆಟಾ ಲಾಮಾ 4'ನಲ್ಲಿ ಎರಡು ಪ್ರಮುಖ ಮಾದರಿಗಳಿವೆ. ಅವುಗಳೆಂದರೆ ಲಾಮಾ 4 ಮಾವೆರಿಕ್ ಮತ್ತು ಲಾಮಾ 4 ಸ್ಕೌಟ್ ಎನ್ನಲಾಗಿದೆ. ಈ ಎರಡು ಮಾದರಿಗಳನ್ನು ಬಳಕೆದಾರರು ಈಗಿನಿಂದಲೇ llama.meta.com ಅಥವಾ Hugging Face ವೇದಿಕೆಯಿಂದ ಡೌನ್‌ಲೋಡ್ ಮಾಡಬಹುದು. ಇವು ಬಹುಮೋಡಲ್ ತಂತ್ರಜ್ಞಾನವನ್ನು ಹೊಂದಿರುವ ಎಡ್ವಾನ್ಸ್ AI ಮಾದರಿಗಳಾಗಿದ್ದು, ಮೌಲ್ಯಮಾಪನದ ಮೌಲಿಕತೆಯು ಹೆಚ್ಚಿದೆ.

'ಲಾಮಾ 4 ಮಾವೆರಿಕ್' ಕಾರ್ಯಕ್ಷಮತೆ:

ಈ ಮಾವೆರಿಕ್ ಮಾದರಿಯು ಮಾದರಿಯು 17 ಬಿಲಿಯನ್ ಸಕ್ರಿಯ ಪ್ಯಾರಾಮೀಟರ್‌ಗಳೊಂದಿಗೆ ರೂಪುಗೊಂಡಿದೆ. ಹಾಗೂ ಇದು ನಿಖರವಾದ ತಾರ್ಕಿಕ ಚಿಂತನೆ, ಕೋಡಿಂಗ್ ಸಾಮರ್ಥ್ಯ ಹಾಗೂ ಎಡ್ವಾನ್ಸ್ ಪ್ರಶ್ನೋತ್ತರ ಚಟುವಟಿಕೆಗಳಲ್ಲಿ ವಿಶಿಷ್ಟ ಮಟ್ಟದ ಕೆಲಸವನ್ನು ನೀಡುತ್ತದೆ. ಹಾಗೂ ಇದು ಪ್ರಸಿದ್ಧ AI ಮಾದರಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

'ಲಾಮಾ 4 ಸ್ಕೌಟ್' ಕಾರ್ಯಕ್ಷಮತೆ:

ಈ ಲಾಮಾ 4 ಸ್ಕೌಟ್ ಮಾದರಿಯು, ಹುಮುಖ ಬಳಕೆಗಾಗಿ ರೂಪುಗೊಂಡಿರುವ ಸಣ್ಣದಾದ ಆದರೆ ಆಳವಾದ ಬುದ್ಧಿಮತ್ತೆ ಹೊಂದಿರುವ ಮಾದರಿಯಾಗಿದೆ. ದು NVIDIA H100 ಗೇರ್‌ನಲ್ಲಿ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೆಮಿನಿ 2.0, ಜೆಮ್ಮಾ 3 ಮತ್ತು ಮಿಸ್ಟ್ರಾಲ್ 3.1 ಗಳೊಂದಿಗೆ ಹೋಲಿಕೆಯಾಗುವಷ್ಟು ಪರಿಣಾಮಕಾರಿ ಇದಾಗಿದೆ. ಇದು ತೀವ್ರವಾದ ವೇಗ, ಕಡಿಮೆ ದಾಖಲಾ ಸಾಮರ್ಥ್ಯ ಮತ್ತು ಉತ್ತಮ ಪ್ರತಿಕ್ರಿಯೆಯೊಂದಿಗೆ ಗಮನ ಸೆಳೆಯುತ್ತಿದೆ.

ವಾಟ್ಸಾಪ್, ಇನ್ಸ್ಟಾಗ್ರಾಂನಲ್ಲೂ ಬಳಕೆ ಸಾಧ್ಯ:

ಇನ್ನು ಈ ಮೆಟಾ ಲಾಮಾ 4 ಬಳಕೆ ಕೇವಲ ವಿಜ್ಞಾನಿಗಳಿಗೆ ಮಾತ್ರವಲ್ಲ. ಇದನ್ನು ವಾಟ್ಸಾಪ್, ಇನ್ಸ್ಟಾಗ್ರಾಂ ಮತ್ತು ಮೆಸೆಂಜರ್‍‌ನಲ್ಲೂ ನೇರವಾಗಿ ಬಳಕೆ ಮಾಡಬಹುದು. ಉದಾಹರಣೆಗೆ, ನೀವು ಮೆಸೇಜ್ ಟೈಪ್ ಮಾಡುವಾಗಲೇ, ಈ ಎಐ ನಿಮಗೆ ತಕ್ಷಣ ಉತ್ತರ ನೀಡುತ್ತದೆ.

Behemoth AI ಮಾದರಿ:

ಇದಿಷ್ಟೇ ಅಲ್ಲ ಮೆಟಾ ಕಂಪನಿಯು ತಮ್ಮ Behemoth AI ಮಾದರಿಯ ಪ್ರಿವ್ಯೂ ಅನ್ನು ಕೂಡ ಶನಿವಾರ ಬಹಿರಂಗಪಡಿಸಿದೆ. ಇದನ್ನು ವಿಶ್ವದ ಅತ್ಯಂತ ಬುದ್ಧಿವಂತ LLMಗಳಲ್ಲಿ ಒಂದು ಎಂದು ವರ್ಣಿಸಲಾಗಿದೆ. GPT-4.5, Gemini Pro, Claude Sonnet ಮುಂತಾದ ಮಾದರಿಗಳಿಗಿಂತ ಮೇಲ್ಮಟ್ಟದ ಫಲಿತಾಂಶ ನೀಡಬಹುದೆಂದು ನಿರೀಕ್ಷಿಸಲಾಗಿದೆ. ಈ ಮಾದರಿಯು ಇನ್ನೂ ತರಬೇತಿಯಲ್ಲಿ ಇರುವುದರಿಂದ, ಮುಂದಿನ ದಿನಗಳಲ್ಲಿ ಹೆಚ್ಚು ಮಾಹಿತಿ ಬಹಿರಂಗವಾಗಲಿದೆ.

ಒಟ್ಟಿನಲ್ಲಿ ಮೆಟಾ ಲಾಮಾ 4 ಎಐ ಮೌಲ್ಯಯುತವಾಗಿ ನೋಡಿದರೆ, ಇದು ಕೇವಲ ತಂತ್ರಜ್ಞಾನವಲ್ಲ. ಇದು ಇಡೀ ಡಿಜಿಟಲ್ ಲೋಕವನ್ನು ಹೊಸ ಎಳೆಗಳಲ್ಲಿ ಓಡಿಸುವ ಶಕ್ತಿ ಹೊಂದಿದೆ. ಚಾಟ್‌ಜಿಪಿಟಿ ಅಥವಾ ಡೀಪ್‌ಸೀಕ್‌ಗಿಂತ ಬೇರೆ ಮಾರ್ಗದಲ್ಲಿ ಸಾಗುವ ಈ ಲಾಮಾ ಮಾದರಿ, ಬಳಕೆದಾರನೊಂದಿಗೆ ನೇರ ಸಂವಾದ ನಡೆಸುವ ನವೀನ ಶೈಲಿಗೆ ತೆರೆ ಎಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನದ ಅನುಭವವನ್ನೇ ಬದಲಿಸುವ ಮಟ್ಟಿಗೆ ಈ ಎಐ ತಂತ್ರಜ್ಞಾನ ಸಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+