ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ನಮ್ಮ ಮೆಟ್ರೋ (Namma Metro) ಸದಾ ಏನಾದರೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ. ಅದೇ ರೀತಿ ಇದೀಗ ಮೆಟ್ರೋ ಟಿಕೆಟ್ ಸಂಬಂಧಿಸಿ ಹೊಸ ಕ್ರಮ ಕೈಗೊಂಡಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಲಿದೆ ಎಂಬ ಚರ್ಚೆ ಬೆನ್ನಲ್ಲೇ ಬಿಎಂಆರ್‌ಸಿಎಲ್ (BMRCL) ಇದೀಗ ಹೊಸ ಪಾಸ್ (Metro New Pass) ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಹೌದು, ಬಿಎಂಆರ್‌ಸಿಎಲ್ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಕ್ಯೂಅರ್ ಆಧಾರಿತ ಅವಧಿ ಪಾಸ್‌ಗಳನ್ನು ಜಾರಿಗೆ ತಂದಿದೆ. ಹಾಗಿದ್ರೆ ಇದು ಹೇಗೆ ಕೆಲಸ ಮಾಡುತ್ತದೆ? ದರ ಎಷ್ಟು? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಏನಿದು ಪಾಸ್ ವ್ಯವಸ್ಥೆ?
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಜನವರಿ 15 ರಿಂದ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣಕ್ಕಾಗಿ ಮೊಬೈಲ್ QR-ಆಧಾರಿತ ಅವಧಿ ಪಾಸ್‌ಗಳನ್ನು ಜಾರಿಗೆ ತಂದಿದೆ. ಇವು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ಪಡೆಯಬಹುದಾಗಿದೆ. ಆದ್ದರಿಂದ ಪ್ರಯಾಣಿಕರು ಆಗಾಗ ಟಿಕೆಟ್ ಪಡೆಯುವ ಸಮಸ್ಯೆಗಳಿಲ್ಲದೆ. ಒಂದು ಪಾಸ್ ಮೂಲಕ ಮೆಟ್ರೋದಲ್ಲಿ ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದು.
ಇನ್ನು ಈ ಸೇವೆ ಕಾಗದರಹಿತ, ಕ್ಯಾಶ್ ಲೆಸ್ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡುವುದರ ಜೊತೆಗೆ ಸ್ಮಾರ್ಟ್ ಕಾರ್ಡ್‌ಗಳಿಗಿಂತ ಹೆಚ್ಚು ಸುಲಭವಾಗಿದೆ ಎಂದು ಹೇಳಲಾಗಿದೆ.
ಹೇಗೆ ಬಳಸುವುದು?
- Namma Metro ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಪಾಸ್ ಸೆಕ್ಷನ್‌ಗೆ ಹೋಗಿ, ಅಲ್ಲಿ ನಿಮಗೆ ಬೇಕಾದ ಪಾಸ್ ಆಯ್ಕೆ ಮಾಡಿ
- ಪೇಮೆಂಟ್ ಮಾಡಬೇಕು. ನಂತರ ಕ್ಯೂಆರ್ ಕೋಡ್ ಆಪ್‌ನಲ್ಲಿ ಕ್ರಿಯೇಟ್ ಆಗುತ್ತದೆ.
- ನಂತರ ನೀವು ಹೋಗಬಯಸುವ ಮೆಟ್ರೋ ನಿಲ್ದಾಣಗಳಲ್ಲಿ ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು.
ಪಾಸ್ ದರ ಹೇಗಿದೆ?
- 1 ದಿನದ ಪಾಸ್ - 250 ರೂ.
- 3 ದಿನದ ಪಾಸ್ 550 ರೂ.
- 5 ದಿನದ ಪಾಸ್ 850 ರೂ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸ್ಮಾರ್ಟ್ ಕಾರ್ಡ್‌ಗೆ ಯಾವುದೇ ಮಾನ್ಯತೆಯ ದಿನಗಳಿಲ್ಲ. ಆದ್ರೆ ಈ ಹೊಸ ಅನಿಯಮಿತ ಕ್ಯೂಆರ್ ಕೋಡ್ ಪಾಸ್‌ಗೆ ಮಾನ್ಯತೆಯ ದಿನಗಳಿವೆ.
ಲಕ್ಷಣಗಳು:
ಮೊಬೈಲ್ ಆಧಾರಿತ ಪಾಸ್: ಈ ಕ್ಯೂ ಆರ್ ಕೋಡ್ ಪಾಸ್ ಅನ್ನು ನಮ್ಮ ಮೆಟ್ರೋ ಅಧಿಕೃತ ಮೊಬೈಲ್ ಆಪ್ ಮೂಲಕ ಖರೀದಿಸಿ. ನಂತರ ಫೋನ್‌ನಲ್ಲಿ ಕ್ಯೂಆರ್ ಕೋಡ್ ಪಡೆಯಬಹುದು. ಇದು ಸ್ಮಾರ್ಟ್‌ಕಾರ್ಡ್‌ನಂತೆ ಕೈಯಲ್ಲೇ ಇಟ್ಟುಕೊಳ್ಳಬೇಕಾಗಿಲ್ಲ.
ಅನ್‌ಲಿಮಿಟೆಡ್ ಟ್ರಾವೆಲ್: ಪಾಸ್ ಪಡೆದ ಸಮಯದಿಂದ ನೀವು ಎಷ್ಟು ಬಾರಿ ಬೇಕಾದರೂ ಮೆಟ್ರೋದಲ್ಲಿ ಪ್ರಯಾಣಿಸಬಹುದು. ಯಾವುದೇ ನಿಲ್ದಾಣದಿಂದ, ಮತ್ತೊಂದು ನಿಲ್ದಾಣಕ್ಕೆ ಪ್ರಯಾಣ ಮಾಡಬಹುದು.
ನೋ ಸೆಕ್ಯೂರಿಟಿ ಡೆಪಾಸಿಟ್: ಇನ್ನು ಸ್ಮಾರ್ಟ್‌ಕಾರ್ಡ್‌ಗಳಲ್ಲಿ 50 ರೂ. ಸೆಕ್ಯುರಿಟಿ ಡೆಪಾಸಿಟ್ ಕಡ್ಡಾಯವಾಗಿದೆ. ಆದ್ರೆ ಹೊಸ ಕ್ಯೂಆರ್ ಪಾಸ್‌ಗಳಲ್ಲಿ ಯಾವುದೇ ಡೆಪಾಸಿಟ್ ನೀಡುವ ಅಗತ್ಯವುಲ್ಲ. ಇದರಿಂದ 50 ರೂ. ಉಳಿತಾಯ ಮಾಡಬಹುದು.
ಅವಧಿ ಮತ್ತು ಬಳಕೆಯ ವಿಧಾನ: ಪಾಸ್ ಖರೀದಿಸಿದ ದಿನದಿಂದಲೇ ಇದು ಆಕ್ಟಿವ್ ಆಗುತ್ತದೆ. ಉದಾಹರಣೆಗೆ ನೀವು 1 ದಿನ ಪಾಸ್ ಖರೀದಿಸಿದ್ರೆ, ಆ ದಿನದ ಮಧ್ಯರಾತ್ರಿಯವರೆಗೆ ಮಾನ್ಯತೆ ಹೊಂದಿರುತ್ತದೆ.


Click it and Unblock the Notifications