ನಮ್ಮ ಮೆಟ್ರೋ: ಆದಾಯ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್‌ ಪ್ಲ್ಯಾನ್; 100 ಕೋಟಿ ಗಳಿಕೆ ಗುರಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ತನ್ನ ಆದಾಯವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಟಿಕೆಟ್‌ ದರವನ್ನು ಏರಿಸಿರುವ ಬಿಎಂಆರ್‌ಸಿಎಲ್‌ ಇದೀಗ ಹಲವು ಪ್ಲ್ಯಾನ್ ಗಳನ್ನು ರೆಡಿ ಮಾಡಿಕೊಂಡಿದ್ದು ಹಲವು ಮೂಲಗಳಿಂದ ಸರಿ ಸುಮಾರು ವಾರ್ಷಿಕವಾಗಿ 100 ಕೋಟಿ. ರೂ. ಗಳಿಸಲು ಮುಂದಾಗಿದೆ.

"ನಮ್ಮ ಮೆಟ್ರೋ" ಪ್ರಸ್ತುತವಾಗಿ ಟಿಕೆಟ್ ಮಾರಾಟದಿಂದಲೇ ಬಹುಪಾಲು ಆದಾಯವನ್ನು ಗಳಿಸುತ್ತಿದೆ. ಇತ್ತೀಚೆಗೆ ಟಿಕೆಟ್ ದರವನ್ನು ಕೂಡಾ ಜನವಿರೋಧದ ನಡುವೆಯೇ ಹೆಚ್ಚಿಸಿತ್ತು. ಇದರ ಜೊತೆಗೆ, ನಿಲ್ದಾಣಗಳಲ್ಲಿ ಆಹಾರದ ವೆಂಡಿಂಗ್ ಮಷೀನ್ಗಳು, ಸಣ್ಣ ಅಂಗಡಿಗಳು, ಪಾರ್ಕಿಂಗ್ ಶುಲ್ಕ ಮತ್ತು ನಿಲ್ದಾಣಗಳಿಗೆ ಹೆಸರಿನ ಹಕ್ಕನ್ನು ನೀಡುವ ಮೂಲಕವೂ ಬಿಎಂಆರ್‌ಸಿಎಲ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಿಎಂಆರ್‌ಸಿಎಲ್‌ ಇದರ ಪಾಲು ಶೇ. 7 ಎನ್ನಬಹುದು. ಹೀಗಾಗಿ ಸಂಚಾರದಿಂದ ಬರೋ ಆದಾಯ ಹೊರತುಪಡಿಸಿ ಜಾಹೀರಾತು ಬಾಡಿಗೆ ಸೇರಿ ಇನ್ನಿತರ ಮೂಲಗಳಿಂದ ವಾರ್ಷಿಕ 100 ಕೋಟಿ ರೂ. ಆದಾಯ ಗಳಿಸಲು ಮುಂದಾಗಿದೆ. ಆ ಪ್ರಕಾರ ತನ್ನ ಶೇ. 7 ಆದಾಯವನ್ನು ಶೇ.10ಕ್ಕೆ ಹಿಗ್ಗಿಸಿಕೊಳ್ಳಲು ಉದ್ದೇಶಿಸಿದೆ.

ನಮ್ಮ ಮೆಟ್ರೋ: ಆದಾಯ ಹೆಚ್ಚಳಕ್ಕೆ ಪ್ಲ್ಯಾನ್; 100 ಕೋಟಿ ಗಳಿಕೆ ಗುರಿ

ಈ ಗುರಿಯನ್ನು ಸಾಧಿಸಲು ಮುಂದಿನ ವರ್ಷದೊಳಗೆ ಮೆಟ್ರೋ ನಿಲ್ದಾಣಗಳ ಸ್ಥಳದಲ್ಲಿ ಭಾಗಶಃ ಕಂಪನಿ, ಬ್ರ್ಯಾಂಡ್ ಗಳ ನಾಮಕರಣ ಒಪ್ಪಂದದಿಂದ 30 ಕೋಟಿ ರೂ., ಜಾಹೀರಾತು ಅಳವಡಿಕೆ ೩೦ ಕೋಟಿ ರೂ. ನಿಲ್ದಾಣಗಳ ಸ್ಥಳದಲ್ಲಿ ಭಾಗಶಃ ಕಂಪನಿ, ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ಕೊಡುವುದರ ಮೂಲಕ 15 ಕೋಟಿ ರೂ, ರೈಲುಗಳಿಂದ ವಾರ್ಷಿಕ 25 ಕೋಟಿ.ರೂ ಸೇರಿ ಒಟ್ಟಾರೆ ರೂ. 100 ಕೋಟಿ ಮೊತ್ತವನ್ನು ಗಳಿಸಿಲು ಬಿಎಂಆರ್‌ಸಿಎಲ್‌ ಯೋಜನೆ ಹಾಕಿಕೊಂಡಿದೆ. ಮೆಟ್ಟಿಲುಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಗೋಡೆ ಸೇರಿದಂತೆ ಇತರೆಡೆ ಜಾಹೀರಾತು ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಸುಮಾರು 6,000 ಚದರ ಮೀಟರ್ ಸ್ಥಳವನ್ನು, ಹಾಗೂ ಉಳಿದ ನಿಲ್ದಾಣಗಳಲ್ಲಿ ತಲಾ 3,000 ಚದರ ಮೀಟರ್ ಸ್ಥಳವನ್ನು ಜಾಹೀರಾತುಗಳಿಗಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಕೆಲವು ನಿಲ್ದಾಣಗಳಲ್ಲಿ ಹೆಚ್ಚುವರಿ ಸ್ಥಳಾವಕಾಶಕ್ಕೂ ಅವಕಾಶ ಮಾಡಿಕೊಡಲಾಗಿದೆ. ಶೀಘ್ರವೇ ಹಳದಿ ಮಾರ್ಗ ತೆರೆಯುವುದರಿಂದ, ಅಲ್ಲಿಂದಲೂ ಜಾಹೀರಾತು ಆದಾಯವನ್ನು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, 67 ಮೆಟ್ರೋ ನಿಲ್ದಾಣದ ವಿವಿಧ ಸ್ಥಳಗಳಲ್ಲಿ ಕಂಪನಿಗಳ ಹೆಸರು, ಬ್ರಾಂಡ್ಗಳ ಹೆಸರನ್ನು ನಾಮಕರಣ ಮಾಡಿ ಅದರಿಂದಲೂ ಆದಾಯ ಗಳಿಸಿಕೊಳ್ಳಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ಮೆಟ್ರೋ ನಿಲ್ದಾಣಗಳಲ್ಲಿ 75 ಸ್ಥಳಗಳನ್ನು ಅಂಗಡಿಗಳು, ಎಟಿಎಂಗಳು ಮತ್ತು ಇತರ ವಾಣಿಜ್ಯ ಉದ್ದೇಶಗಳಿಗಾಗಿ ಗುತ್ತಿಗೆ ನೀಡಲು ಟೆಂಡರ್ ಕರೆದಿದೆ. ಮೆಜೆಸ್ಟಿಕ್ ಇಂಟರ್‌ಚೇಂಜ್, ಯಶವಂತಪುರ, ಇಂದಿರಾನಗರ, ಟ್ರಿನಿಟಿ, ಗೊರಗುಂಟೆಪಾಳ್ಯ, ಎಂ.ಜಿ.ರಸ್ತೆ, ಕೋಣನಕುಂಟೆ, ಲಾಲ್‌ಬಾಗ್ ಮತ್ತು ಜಯನಗರ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಈ ಸ್ಥಳಗಳು ಲಭ್ಯವಿವೆ. ಈ ತಿಂಗಳು 140 ಕ್ಕೂ ಹೆಚ್ಚು ಸ್ಥಳಗಳನ್ನು ಒಳಗೊಂಡ ಮತ್ತೊಂದು ಗುತ್ತಿಗೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ನಿಲ್ದಾಣಗಳ ಜನಸಂದಣಿಯ ಆಧಾರದ ಮೇಲೆ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ.

ಪ್ರಸ್ತುತ ಮೆಟ್ರೋ ಬೋಗಿಗಳಲ್ಲಿ ಒಳಭಾಗದಲ್ಲಿ ಮಾತ್ರ ಜಾಹೀರಾತು ಅಳವಡಿಕೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಸುಮಾರು ಹತ್ತು ರೈಲು ಭೋಗಿ ಹೊರಭಾಗದಲ್ಲಿ ಜಾಹೀರಾತು ಭಿತ್ತಿಪತ್ರ ಅಳವಡಿಕೆ ಮಾಡಲು ಯೋಜನೆ ಹಾಕಿಕೊಂಡಿದೆ. ಬೋಗಿಯ ಅಂದ ಹಾಳಾಗದಂತೆ , ಕಿಟಕಿ ಭಾಗಕ್ಕೆ ಜಾಹೀರಾತು ಅಳವಡಿಸಿ ಆದಾಯ ಹೆಚ್ಚಿಸಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ.

ನಮ್ಮ ಮೆಟ್ರೋ 2022ರಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಒಂದು ರೈಲಿಗೆ ಜಾಹೀರಾತುಗಳನ್ನು ಪ್ರದರ್ಶಿಸಿತ್ತು. ಬಳಿಕ ಮೆಟ್ರೋ ನಿಲ್ದಾಣಗಳ ಕಂಬಗಳು ಮತ್ತು ಮಾರ್ಗಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ವರ್ಷ ಸರಾಸರಿ 10 ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿದೆ. ಈಗ ರೈಲುಗಳ ಹೊರಭಾಗದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡುವ ಮೂಲಕ ಆದಾಯವನ್ನು ಹೆಚ್ಚಿಸಲು ಯೋಚಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+