ಬೆಂಗಳೂರು: ಬೆಂಗಳೂರಿನ (Bengaluru) ಬಹುಮುಖ್ಯ ಸಾರಿಗೆ ವ್ಯವಸ್ಥೆಗಳಲ್ಲಿ ಮೆಟ್ರೋ ಸೇವೆ ಕೂಡಾ ಒಂದು. ಅದೆಷ್ಟೋ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಮೆಟ್ರೋ ಕೆಲಸ ಮಾಡುತ್ತಿದೆ. ದಿನವಿಡೀ ಬ್ಯುಸಿ ಲೈಫ್‌ನಲ್ಲಿ ಜೀವನ ಸಾಗಿಸುತ್ತಿರುವ ಬೆಂಗಳೂರು ನಿವಾಸಿಗಳಿಗೆ ಇದೀಗ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಪ್ರತೀ ಬಾರಿ ಬೆಂಗಳೂರು ಏರ್‌ಪೋರ್ಟ್ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಅದರಲ್ಲೂ ಟ್ರಾಫಿಕ್ ವಿಷ್ಯದಲ್ಲಿ ಬೆಂಗಳೂರು ಏರ್‌ಪೋರ್ಟ್ ರೋಡ್ ಬಗ್ಗೆ ಕೇಳೋದೆ ಬೇಡ. ಆದರೆ ಇದೀಗ ಬೆಂಗಳೂರು ಏರ್‌ಪೋರ್ಟ್‌ಗೂ ಮೆಟ್ರೋ ಸೇವೆ ಆರಂಭವಾಗಲಿದೆ ಎಂಬ ಸುದ್ದಿಗಳು ಹರಿದಾಡಲು ಶುರುವಾಗಿದೆ.

ಹೌದು, ಬೆಂಗಳೂರು ಜನರ ಬಹುದಿನದ ಬೇಡಿಕೆಯೆಂದರೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ ಸೇವೆ ಕಲ್ಪಿಸುವುದು. ಇದೀಗ ಬೆಂಗಳೂರು ಏರ್‌ಪೋರ್ಟ್‌ಗೂ ಮೆಟ್ರೋ ಸೇವೆ ಕಲ್ಪಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂದು ವರದಿಯಾಗಿದೆ. 2027ರ ಅಂತ್ಯದ ವೇಳೆಗೆ ವಿಮಾನ ನಿಲ್ದಾಣದ ಮೆಟ್ರೋ ಕಾರಿಡಾರ್ ಸಂಪೂರ್ಣವಾಗಲಿದೆ ಎಂದು ಹೇಳಲಾಗಿದೆ.
ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿ ಸುದ್ದಿ!
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕವು 2027ರ ಅಂತ್ಯದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಶುಕ್ರವಾರ ತಿಳಿಸಿದೆ. ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC) ಹಾಗೂ ದೆಹಲಿ ಮೂಲದ ಥಿಂಕ್ ಟ್ಯಾಂಕ್ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (TERI) ಜಂಟಿಯಾಗಿ ಆಯೋಜಿಸಿದ್ದ ವೇದಿಕೆಯಲ್ಲಿ ಬಿಎಂಆರ್‌ಸಿಎಲ್ ಈ ಗುಡ್ ನ್ಯೂಸ್ ಅನ್ನು ನೀಡಿದೆ.
ಎಲ್ಲಿಂದ ಎಲ್ಲಿಗೆ ಹೊಸ ಮೆಟ್ರೋ ಮಾರ್ಗ?
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. ಕಾರಿಡಾರ್ ಎರಡು ಹಂತಗಳಲ್ಲಿ ನಿರ್ಮಾಣವಾಗಲು ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗಿದೆ. ಹಂತ 2ಎ 19.75 ಕಿ.ಮೀ ಹಾಗೂ ಹಂತ 2ಬಿ 38.44 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಒಂದು ವೇಳೆ ಈ ಯೋಜನೆ ಅಂದುಕೊಂಡಂತೆ ಪೂರ್ಣಗೊಂಡರೆ ಮೆಟ್ರೋ ಜಾಲ 175 ಕಿಲೋಮೀಟರ್‌ಗೆ ವಿಸ್ತರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದ್ದು, ಇದು ಬೆಂಗಳೂರಿನ ನಿವಾಸಿಗಳಿಗೆ ಒದಗಿಸುವ ಮೂಲಕ ಸೌಲಭ್ಯಗಳಲ್ಲಿ ಒಂದಾಗಲಿದೆ. ಅಲ್ಲದೇ ಬೆಂಗಳೂರು ಏರ್‌ಪೋರ್ಟ್‌ಗೆ ಮೆಟ್ರೋ ಸೇವೆ ಆರಂಭವಾದ್ರೆ, ಹೊಸ ಇತಿಹಾಸ ಸೃಷ್ಟಿಸೋದಂತೂ ಗ್ಯಾರಂಟಿ.
ಬೆಂಗಳೂರು ಏರ್‌ಪೋರ್ಟ್‌ಗೆ ಮೆಟ್ರೋ ಮಾರ್ಗ ಯಾವುದು?
2027ರಲ್ಲಿ ಆರಂಭವಾಗಲಿರುವ ವಿಮಾನ ನಿಲ್ದಾಣದ ಕಾರಿಡಾರ್ ನಮ್ಮ ಮೆಟ್ರೋ ಸೇವೆಯ ವಿಸ್ತರಣೆಯ ಭಾಗವಾಗಿದೆ. ಇದನ್ನು ಬ್ಲೂಲೈನ್ ಅಥವಾ ಔಟರ್ ರಿಂಗ್ ರೋಡ್ ವಿಮಾನ ನಿಲ್ದಾಣ ಮಾರ್ಗ ಎಂದು ಕರೆಯಬುದು ಎನ್ನಲಾಗಿದೆ. ಒಮ್ಮೆ ಇದು ಆರಂಭವಾದ್ರೆ, ಇದು ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕಗಳಲ್ಲಿ ಒಂದಾಗಲಿದೆ. ವಿಶೇಷವಾಗಿ ಐಟಿ ವಲಯಗಳು, ಅಗತ್ಯ ಸೌಲಭ್ಯಗಳೊಂದಿಗೆ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದೆ.


Click it and Unblock the Notifications