ಮೆಟ್ರೋ ನಿಲ್ದಾಣಗಳಿಗೆ ದೇಶದ ಮಹಾನ್ ನಾಯಕರ ಹೆಸರಿಡುವ ಪ್ರಕ್ರಿಯೆ ಚುರುಕು ಗತಿಯಲ್ಲಿದೆ. ಇದರ ಸಲುವಾಗ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಹೆಸರೂ ಕೂಡ ಹೊರ ಹೊಮ್ಮಿದೆ. ಇದು ಕೊಡವರ ಪಾಲಿಗೆ ದೊಡ್ಡ ಸಿಹಿಸುದ್ದಿಯಾಗಿದೆ. ಈ ವಿಚಾರದ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿರುವ ಬಗ್ಗೆ ತಿಳಿಸಿದ್ದಾರೆ.

ಕೊಡವ ಸಮುದಾಯದ ಸಮಾರಂಭದಲ್ಲಿ ಹೇಳಿಕೆ:
ಇನ್ನು ಈ ಹೇಳಿಕೆಯನ್ನು ಕೊಡವ ಸಮಾಜ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೊಡವ ಸಮುದಾಯಕ್ಕೆ ಸರ್ಕಾರ ನೀಡಿದ ಏಳು ಎಕರೆ ಭೂಮಿಗೆ ಧನ್ಯವಾದ ಸಲ್ಲಿಸಲು ಸಮಾರಂಭವೊಂದನ್ನ ಆಯೋಜಿಸಲಾಗಿತ್ತು. ಈ ವೇಳೆ, ಈ ಭೂಮಿ ಸಮುದಾಯದ ಕಲ್ಯಾಣಕ್ಕಾಗಿ ಬಳಸುವ ಉದ್ದೇಶದಿಂದ ನೀಡಲಾಗಿತ್ತೇ ಹೊರತು, ಲಾಭಕ್ಕಾಗಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಮೆಟ್ರೋಗೆ ಹೆಸರು ಇಡುವ ಉದ್ದೇಶ:
ಬೆಂಗಳೂರು ಮೆಟ್ರೋಗೆ ಹೆಸರು ಇಡುವ ನಿರ್ಧಾರ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಹೀಗಾಗಿ ಕಾರ್ಯಪ್ಪ ಅವರ ಹೆಸರನ್ನು ನೆನಪಿಸಲು ನಮ್ಮ ಮನಸ್ಸು ಮುಕ್ತವಾಗಿದೆ ಎಂದು ಡಿಸಿಎಂ ಡಿಕೆಶಿ ಹೇಳಿಕೆ ನೀಡಿದರು. ಅಲ್ಲದೇ ಸರ್ಕಾರ ಯಾವದನ್ನೂ ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ. ಬದಲಾಗಿ, ಜನತೆಯ ಭಾವನೆಗಳಿಗೆ ಗೌರವವಿದೆ ಮತ್ತು ಅಂತಹ ನಾಯಕರುಗಳ ಹೆಸರನ್ನು ಪಾರದರ್ಶಕವಾಗಿ ಉಪಯೋಗಿಸಲು ಉತ್ಸುಕರೂ ಹೌದು.
ರಾಜಕೀಯವಲ್ಲ..ಗೌರವದ ಕಳಕಳಿ:
ಇನ್ನು ಈ ವಿಚಾರದ ಬಗ್ಗೆ ಲೆಕ್ಕ ಹಾಕಿದರೆ, ಈ ಹೆಸರಿಡುವ ಪ್ರಕ್ರಿಯೆಯು ರಾಜಕೀಯದ ದೃಷ್ಟಿಯಾಗಿಲ್ಲ. ಇದರಾಚೆಗೂ ಹೋಗಿ ಸಾಂಸ್ಕೃತಿಕ ಗೌರವ, ಇತಿಹಾಸ ಸ್ಮರಣಾ ಮತ್ತು ಸಾಮಾಜಿಕ ಏಕತೆಗೆ ಸಾಕ್ಷ್ಯವಾಗಲಿದೆ. ಇದನ್ನು ಸಮುದಾಯದ ಪ್ರೇರಣೆಯಾಗಿ ಬಳಸಿಕೊಂಡು, ಸಮಾಜದ ಎಲ್ಲಾ ವರ್ಗಗಳು ಪಾಲ್ಗೊಳ್ಳುವ ರೀತಿಯಲ್ಲಿ ಅಭಿವೃದ್ಧಿಯ ಕೀರ್ತಿಗೆ ಬೆನ್ನುತುಂಬುವ ಕೆಲಸ ಮಾಡಬೇಕಾಗಿದೆ.
ಕೊಡವ ಸಮುದಾಯದ ಪ್ರತಿನಿಧಿಗಳು ಈ ಭೂಮಿಯನ್ನು ಕಲ್ಚರಲ್ ಸೆಂಟರ್, ಹೇರಿಟೇಜ್ ಮ್ಯೂಸಿಯಂ, ಮತ್ತು ಯುವಜನರ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಬಳಸುವ ಯೋಜನೆಗಳನ್ನು ಮುಂದಿಟ್ಟಿದ್ದಾರೆ. ಇದರೊಂದಿಗೆ, ಕಾರ್ಯಪ್ಪರ ಹೆಸರಿನಲ್ಲಿ ನಿಲ್ದಾಣವಿರುವುದು ಅಲ್ಲಿಗೆ ಭೇಟಿಗೆ ಬರುವವರಲ್ಲಿ ಹೆಮ್ಮೆ ಮತ್ತು ಚೈತನ್ಯ ಹುಟ್ಟಿಸಲು ನೆರವಾಗುತ್ತದೆ.
ಕಾರ್ಯಪ್ಪ..ಸೇನೆಯ ಶ್ರೇಷ್ಠ ನಾಯಕ:
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಭಾರತದ ಸಂರಕ್ಷಣಾ ಇತಿಹಾಸದಲ್ಲಿ ಅಪೂರ್ವ ಸ್ಥಾನ ಪಡೆದವರು. ಕೊಡಗು ಜಿಲ್ಲೆಯ ಗೌರವವಾಗಿ ಅವರು ಭಾರತೀಯ ಸೇನೆಯಲ್ಲಿ ಆಂಗ್ಲಾಧಿಕಾರವಿದ್ದ ಸಮಯದಲ್ಲೂ ತಮ್ಮ ಶಕ್ತಿಯ ಮೂಲಕ ವಿಶಿಷ್ಟ ಸ್ಥಾನವನ್ನು ಹೊಂದಿದರು. ಅವರ ಜೀವಿತವೇಳೆಯು ಶಿಸ್ತಿನ ಪ್ರತಿ ರೂಪ, ಸೇವಾ ನಿಷ್ಠೆಗೆ ನಿದರ್ಶನ. ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದು ಕೇವಲ ಗೌರವವಲ್ಲ; ಬದಲಾಗಿ, ಮುಂದಿನ ಪೀಳಿಗೆಗೆ ಪ್ರೇರಣೆಯ ಸಂಕೇತವೂ ಹೌದು.
ಕೊಡವ ಸಮಾಜ ಧೈರ್ಯದ ಪರಂಪರೆ:
ಡಿಸಿಎಂ ಶಿವಕುಮಾರ್ ತಮ್ಮ ಭಾಷಣದಲ್ಲಿ ಕೊಡವ ಸಮುದಾಯದ ಪ್ರಾಮುಖ್ಯತೆಯನ್ನೂ ಪ್ರಭಾವವನ್ನೂ ವ್ಯಾಪಕವಾಗಿ ಬಿಂಬಿಸಿದರು. ಕೊಡವ ಸಮಾಜ ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ಸೇನೆ, ಕ್ರೀಡೆ, ರಾಜಕೀಯ ಹಾಗೂ ಕಾನೂನು ಕ್ಷೇತ್ರದವರೆಗೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡಿರುವ ಸಮುದಾಯವಾಗಿದೆ. ಇತಿಹಾಸವೇ ಇದನ್ನು ನಮಗೆ ವಿವರವಾಗಿ ತೋರಿಸುತ್ತದೆ ಎಂದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪರ ಹೆಸರನ್ನು ಮೆರೆಯುವ ಮೆಟ್ರೋ ನಿಲ್ದಾಣವು ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಹೊಸ ಗುರುತು ಸೃಷ್ಟಿಮಾಡಲಿದೆ. ಜೊತೆಗೆ, ಕೊಡವ ಸಮಾಜದ ತ್ಯಾಗ, ಶಿಸ್ತಿನ ಪರಂಪರೆ ಮತ್ತು ಭಾರತದ ಸಾಂಸ್ಕೃತಿಕ ವೈವಿಧ್ಯದ ಪ್ರತಿಬಿಂಬವಾಗಿ ಉಳಿಯಲಿದೆ. ಸರ್ಕಾರ ಈ ನಿರ್ಧಾರವನ್ನು ಯಾವ ರೀತಿಯಿಂದ ತೆಗೆದುಕೊಳ್ಳುತ್ತದೆ ಎಂಬುದನ್ನು ಈಗ ಎಲ್ಲರೂ ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications