ನಮ್ಮ ಮೆಟ್ರೋ ಬೆಂಗಳೂರಿಗರ (Bengaluru) ಅಗತ್ಯ ಸಾರಿಗೆ ಮಾರ್ಗಗಳಲ್ಲಿ ಒಂದಾಗಿದೆ. ಅತ್ತ ಟ್ರಾಫಿಕ್ ಸಮಸ್ಯೆಯೂ ಬೆಂಗಳೂರಿನಲ್ಲಿ ತಲೆದೋರುತ್ತಿದ್ದು, ಜನರೂ ಕೂಡಾ ಪರದಾಡುವಂತಾಗಿದೆ. ವೇಗದ ಪ್ರಯಾಣ, ಸಮಯೋಚಿತ ಪ್ರಯಾಣಕ್ಕಾಗಿ ಮೆಟ್ರೋ ಬಹಳಷ್ಟು ಪ್ರಯೋಜನಕಾರಿ. ಈಗಾಗಲೇ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್ ಮೂಲಕ ಸೇವೆ ಸಲ್ಲಿಸುತ್ತಿರುವ ನಮ್ಮ ಮೆಟ್ರೋ (Namma Metro) ಇದೀಗ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.

ಕೊರೊನಾ ನಂತರ ವರ್ಕ್ ಫ್ರಂ ಹೋಮ್‌ನಿಂದಾಗಿ, ಬೆಂಗಳೂರಿನಲ್ಲಿ ಕೊಂಚ ಮಟ್ಟಿಗೆ ಟ್ರಾಫಿಕ್ ಇಳಿದಿತ್ತು. ಆದ್ರೆ ಇದೀಗ ಬೆಂಗಳೂರು ಯಥಾಸ್ಥಿತಿಗೆ ಮರಳಿದೆ. ರಸ್ತೆಗಳೆಲ್ಲಾ ಗಾಡಿಗಳು, ಮಾರ್ಕೆಟ್‌ಗಳಲ್ಲಿ ಜನಜಂಗುಳಿ, ಹೀಗೆ ಎಲ್ಲಿ ನೋಡಿದ್ರೂ ಜನವೋ ಜನ. ಇದೀಗ ಟ್ರಾಫಿಕ್ ಸಮಸ್ಯೆಗೆ ಪರಿಹಾರವೆಂಬಂತೆ ಮೆಟ್ರೋ ಕಾರ್ಯ ನಿರ್ವಹಿಸುತ್ತಿದ್ದು, ಈ ವರ್ಷ ಒಂದಲ್ಲ ಎರಡು ಹೊಸ ಮೆಟ್ರೋ ಮಾರ್ಗಗಳು ಕಾರ್ಯಾರಂಭ ಮಾಡಲಿದೆ ಎಂದು ಬಿಗ್ ಅಪ್ಡೇಟ್ ಕೊಟ್ಟಿದೆ.
ಬೆಂಗಳೂರಿಗೆ 2 ಹೊಸ ಮೆಟ್ರೋ ಮಾರ್ಗ!
ಈಗಾಗಲೇ ಬೆಂಗಳೂರಿನಲ್ಲಿ ಪಿಂಕ್ ಲೈನ್ ಮತ್ತು ಬ್ಲೂ ಮೆಟ್ರೋ ಲೈನ್‌ಗಳು ಕಾರ್ಯಾಚರಿಸುತ್ತವೆ ಎಂದು ಹೇಳಲಾಗಿತ್ತು. ಅದೇ ರೀತಿ ಘೋಷಣೆಯಂತೆ 2026ರ ಅಂತ್ಯದ ಒಳಗೆ ಪಿಂಕ್ ಲೈನ್ ಮತ್ತು ಬ್ಲೂ ಲೈನ್‌ಗಳಲ್ಲಿ ಮೆಟ್ರೋ ರೈಲುಗಳು ತಮ್ಮ ಸೇವೆಗೆ ನಿರತವಾಗಲಿದೆ ಎಂದು ಹೇಳಲಾಗಿದೆ. ಅಂದರೆ ಮೇ 2026ರ ವೇಳೆಗೆ ಪಿಂಕ್ ಲೈನ್ ಮೊದಲ ಹಂತ ಸೇವೆಗೆ ಸಜ್ಜಾದರೆ, ಡಿಸೆಂಬರ್ ವೇಳಗೆ ಬ್ಲೂ ಲೈನ್ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ಪಿಂಕ್ ಲೈನ್ ಕಾರ್ಯಾಚರಣೆ:
ಕಾಳೇನ ಅಗ್ರಹಾರ ಟು ನಾಗವಾರ ಸಂಪರ್ಕ ಮಾಡುವ ಪಿಂಕ್ ಲೈನ್ 21.25 ಕಿ.ಮೀ ವಿಸ್ತೀರ್ಣವಿದೆ. ಅದರಲ್ಲಿ ಮೇ ವೇಳೆಗೆ ಕಾಳೇನ ಅಗ್ರಹಾರ ಟು ತಾವರೆಕೆರೆವರೆಗಿನ 7.5 ಕಿ.ಮೀನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳು ಮೇ ವೇಳೆಗೆ ಓಪ್ ಆಗುವ ಸಾಧ್ಯತೆ ಇದೆ. ಆ ಬಳಿಕ ತಾವರಕೆರೆ ಟು ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್‌ಗಳ ಕಾರ್ಯಾಚರಣೆಯೂ ಶುರುವಾಗಲಿದೆ. ವಿಶೇಷವಾಗಿ ಪಿಂಕ್ ಲೈನ್‌ಗಾಗಿ ಈಗಾಗಲೇ ಬಿಇಎಮ್‌ಎಲ್‌ನಿಂದ ಒಂದು ಡ್ರೈವರ್‌ಲೆಸ್ ರೈಲು ಕೂಡಾ ಕಾರ್ಯಾಚರಿಸಲಿದೆ.
ಬ್ಲೂ ಲೈನ್ ಕಾರ್ಯಾಚರಣೆ:
ಇನ್ನು ಬ್ಲೂ ಲೈನ್ ಸಿಲ್ಕ್ ಬೋರ್ಡ್ ಟು ಕೆ.ಆರ್.ಪುರಂ ಮಾರ್ಗ ಈ 2026ರ ಡಿಸೆಂಬರ್ ವೇಳೆ ಓಪನ್ ಆಗಲಿದೆ ಎಂದು ಹೇಳಲಾಗಿದೆ. ಇದು 17.75 ಕಿ.ಮೀ ಮಾರ್ಗವನ್ನು ಹೊಂದಿದ್ದು, 13 ಸ್ಟೇಷ್‌ಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ನೀಲಿ ಮಾರ್ಗವು ಒಟ್ಟು 58.19 ಕಿ.ಮೀ ವಿಸ್ತೀರ್ಣವಿರಲಿದೆ. ಅಲ್ಲದೇ ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ವಾಣಿಜ್ಯ ಸೇವೆ ಆರಂಭಿಸಲಿದೆ ಎಂದು ಹೇಳಲಾಗಿದೆ. 2027ರಲ್ಲಿ ಎರಡನೇ ಹಂತ ಓಪನ್ ಆಗಲಿದ್ದು, ಈ ಎರಡು ಮಾರ್ಗಗಳು ಕಾರ್ಯಾಚರಣೆ ಆರಂಭವಾದರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆ. ಆದ್ದರಿಂದ ಪ್ರಯಾಣಿಕರು ಕೂಡಾ ಈ ಸೇವೆ ಆದಷ್ಟು ಬೇಗ ಆರಂಭವಾದ್ರೆ ಒಳ್ಳೆಯದು ಅಂತಿದ್ದಾರೆ.


Click it and Unblock the Notifications