ಬೆಂಗಳೂರು, ಜುಲೈ 4: ಟ್ವಿಟರ್ (ಈಗಿನ ಎಕ್ಸ್)ಗೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಭಾರತೀಯ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಶನ್ 'ಕೂ' ಇದೀಗ ತನ್ನ ಕಾರ್ಯಾಚರಣೆ ನಿಲ್ಲಿಸಲು ಸಜ್ಜಾಗಿದೆ. ಸಂಸ್ಥೆಯ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ 'ಕೂ' ಸಂಸ್ಥೆ ಸ್ಥಗಿತಗೊಳಿಸುವ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ. ಜಾಗತಿಕ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ತನ್ನದೇ ಸ್ಥಾನಗಿಟ್ಟಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಸಾಹಸಕ್ಕೆ ಈ ಮೂಲಕ ಅಂತ್ಯ ಸಾರಿದ್ದಾರೆ.
ಕೂ ಅನ್ನು ಏಕೆ ಮುಚ್ಚಲಾಗುತ್ತಿದೆ?
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂಸ್ಥೆ ಹಲವು ಕಂಪನಿಗಳೊಂದಿಗೆ ನಡೆಸಿದ ಸಹಭಾಗಿತ್ವ, ಮಾರಾಟ ಅಥವಾ ವಿಲೀನಗೊಳಿಸಲು ಸರಣಿ ಮಾತುಕತೆ ವಿಫಲವಾದ ಹಿನ್ನೆಲೆ ಈ ಸಾಮಾಜಿಕ ಜಾಲತಾಣ ಸಾರ್ವಜನಿಕ ಸೇವೆಯಿಂದ ಹೊರ ನಡೆದಿದೆ. ಪ್ರಮುಖವಾಗಿ ಡೈಲಿಹಂಟ್ ಸೇರಿದಂತೆ ಅನೇಕ ಕಂಪನಿಗಳೊಂದಿಗೆ ಸಂಭಾವ್ಯ ಮಾರಾಟ ಅಥವಾ ವಿಲೀನಕ್ಕಾಗಿ ಹಲವಾರು ಸುತ್ತಿನ ಮಾತುಕತೆಗಳು ವಿಫಲವಾದ ನಂತರ ಈ ನಿರ್ಧಾರ ಹೊರಬಿದ್ದಿದೆ. ಮೂಲಗಳ ಪ್ರಕಾರ, ಎಲ್ಲಾ ಮಾತುಕತೆಗಳು ವಿಫಲವಾದ ಕೂಗೆ ಮುಂದೆ ಯಾವುದೇ ಕಾರ್ಯಸಾಧ್ಯವಾದ ಮಾರ್ಗವಿಲ್ಲ.

ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಅವರೊಂದಿಗೆ ಜಂಟಿ ಪೋಸ್ಟ್‌ನಲ್ಲಿ, ರಾಧಾಕೃಷ್ಣ ಕೂ ಎದುರಿಸಿದ ಸವಾಲುಗಳನ್ನು ವಿವರಿಸಿದರು.'ಬಹು ದೊಡ್ಡ ಇಂಟರ್ನೆಟ್ ಕಂಪನಿಗಳು, ಸಂಘಟಿತ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹುಡುಕುವ ಪ್ರಯತ್ನದ ಹೊರತಾಗಿಯೂ ಕೆಲವು ಮಾತುಕತೆಗಳು ಫಲಿತಾಂಶ ನೀಡಲಿಲ್ಲ.
ಸಾಮಾಜಿಕ ಮಾಧ್ಯಮ, ಎಐ, ಬಾಹ್ಯಾಕಾಶ ಅಥವಾ ಇವಿಯಂತಹ ಕ್ಷೇತ್ರಗಳಲ್ಲಿ ಭಾರತದಿಂದ ಮಹತ್ವಾಕಾಂಕ್ಷೆಯ, ವಿಶ್ವವನ್ನು ಸೋಲಿಸುವ ಉತ್ಪನ್ನಗಳನ್ನು ನಿರ್ಮಿಸಲು ತಾಳ್ಮೆ, ದೀರ್ಘಾವಧಿಯ ಬಂಡವಾಳದ ಅಗತ್ಯವಿದೆ. ಜಾಗತಿಕ ದೈತ್ಯರ ವಿರುದ್ಧ ಸ್ಪರ್ಧಿಸುವಾಗ, ಗಣನೀಯ ಬಂಡವಾಳದ ಅಗತ್ಯವಿರುತ್ತದೆ. ಈ ಉದ್ಯಮಗಳು ಏರಿಳಿತದ ಬಂಡವಾಳ ಮಾರುಕಟ್ಟೆಯ ಮೇಲೆ ಅವಲಂಬಿತರಾಗುವುದಿಲ್ಲ; ಕೂ ನಂತಹ ಯೋಜನೆಗಳು ದೀರ್ಘಾವಧಿಯ ಹೂಡಿಕೆಗಳು ಮತ್ತು ತ್ವರಿತ ಲಾಭವನ್ನು ನಿರೀಕ್ಷಿಸಬಾರದು ಕ್ಷಿಪ್ರ ಆದಾಯವನ್ನು ನೀಡಲು ಸ್ಟಾರ್ಟ್‌ಅಪ್‌ಗಳ ಮೇಲಿನ ಒತ್ತಡದ ಬಗ್ಗೆ ಕಾಳಜಿ ವ್ಯಕ್ತಪಡಿದ ಅವರು ಇದು ಪರಿಣಾಮಕಾರಿಯಾಗಿ ಬೆಳೆಯುವ ಮತ್ತು ಸ್ಪರ್ಧಿಸುವ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು ಎಂದು ಹೇಳಿದ್ದಾರೆ.
"ಕೆಲವರು ಒಪ್ಪಂದಕ್ಕೆ ಸಹಿ ಹಾಕಬೇಕಾದ ಹಂತದಲ್ಲಿ ತಮ್ಮ ಆದ್ಯತೆಯನ್ನು ಬದಲಿಸಿದ್ದರು. ನಾವು ಕೂ ಆಪ್‌ನ್ನು ಚಾಲನೆಯಲ್ಲಿ ಇಡಲು ಬಯಸಿದ್ದೆವು. ಆದರೆ ಸಾಮಾಜಿಕ ಮಾಧ್ಯಮ ಆಪ್ ಅನ್ನು ಚಾಲನೆಯಲ್ಲಿಡಲು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಹೀಗಾಗಿ ಕೂ ಸೇವೆಯನ್ನು ನಿಲ್ಲಿಸುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ" ಎಂದು ಹೇಳಿದ್ದಾರೆ.
2021ರಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವು ಪೋಸ್ಟ್ ಹಾಗೂ ಖಾತೆಗಳನ್ನು ವಿಚಾರದಲ್ಲಿ ಟ್ವಿಟ್ಟರ್ ಮತ್ತು ಭಾರತ ಸರಕಾರದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಟ್ವಿಟರ್ (ಈಗಿನ ಎಕ್ಸ್)ಗೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ 'ಕೂ'ಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತ್ತು. ಕನ್ನಡ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡುತ್ತಿದ್ದ ಈ ಸಾಮಾಜಿಕ ಜಾಲತಾಣದ ವೇದಿಕೆ 2020ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿತ್ತು. ಅಪ್ರಮೇಯ ಹಾಗೂ ಮಯಾಂಕ್ ಅವರು 2019ರಲ್ಲಿ ಕೂ ಕಂಪನಿಯನ್ನು ಹುಟ್ಟುಹಾಕಿದ್ದರು.
2022ರ ನವೆಂಬರ್‌ನಲ್ಲಿ ಕೂ ಬ್ರೆಜಿಲ್‌ಗೂ ಕಾಲಿಟ್ಟಿತ್ತು. ಮುಂದೆ ಟ್ವಿಟ್ಟರ್ ಜೊತೆ ಘರ್ಷಣೆಗಿಳಿದ ದೇಶಗಳಿಗೆಲ್ಲ ಕಾಲಿಟ್ಟು, ಜಾಗತಿಕ ಕಂಪನಿಯಾಗುವ ನಿರೀಕ್ಷೆ ಮೂಡಿಸಿತ್ತು. ಹಳದಿ ಬಣ್ಣದ ಹಕ್ಕಿಯ ಲೋಗೊದೊಂದಿಗೆ ಆರಂಭವಾಗಿದ್ದ ಇದು ಉದ್ಘಾಟನಾ ಸಂದರ್ಭದಲ್ಲಿ ಸುಮಾರು 6 ಕೋಟಿ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು. 2022ರ ವೇಳೆಗೆ 57 ಮಿಲಿಯನ್ ಡಾಲರ್‌ಗೆ ಏರಿಕೆಗೊಂಡು 90 ಲಕ್ಷ ಸಕ್ರಿಯ ಚಂದಾದಾರರಿದ್ದರು.
"2022ರಲ್ಲಂತೂ ಭಾರತದಲ್ಲಿ ನಾವು ಟ್ವಿಟ್ಟರ್ ಅನ್ನು ಹಿಂದಿಕ್ಕಲು ಕೆಲವೇ ತಿಂಗಳುಗಳ ದೂರದಲ್ಲಿದ್ದೆವು ಅಷ್ಟೆ. ನಮ್ಮ ಹಿಂದೆ ಬಂಡವಾಳ ಇದ್ದಲ್ಲಿ ನಾವು ಈ ಗುರಿಯನ್ನು ಇನ್ನೂ ಬೇಗಲೇ ಸಾಧಿಸಬಹುದಾಗಿತ್ತು. ಆದರೆ ಇದಕ್ಕಾಗಿ ನಡೆಸಿದ ಮಾತುಕತೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಲಿಕ್ಡ್‌ಇನ್‌ನಲ್ಲಿ ಸಂಸ್ಥೆಯ ಉಳಿಸುವ ಪ್ರಯತ್ನ ಕೈಗೂಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications