ಜಾಗತಿಕ ತಂತ್ರಜ್ಞಾನ ಕಂಪನಿಯಾಗಿರುವ ಮೈಕ್ರೋಸಾಫ್ಟ್ (Microsoft) ತನ್ನ ಬ್ರಾಂಡ್ ಮೂಲಕ ಹಲವಾರು ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸಿದೆ. ಆದರೆ ಇತ್ತೀಚೆಗೆ ಮೈಕ್ರೋಸಾಫ್ಟ್ ಕೆಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮೈಕ್ರೋಸಾಫ್ಟ್ ಅಜೂರ್ ಕ್ಲೌಡ್ ಸೇವೆ ಮತ್ತು ಅದರ ಜೊತೆಗೆ ಮೈಕ್ರೋಸಾಫ್ಟ್ 365, ಔಟ್‌ಲುಕ್, ಎಕ್ಸ್‌ಬಾಕ್ಸ್ ಲೈವ್, ಮತ್ತು ಕೋಪೈಲಟ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರಿಗೆ ಹಲವು ದೋಷಗಳು ಕಾಣಿಸಿಕೊಂಡಿದೆ. ಆದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಇದೀಗ ಮೈಕ್ರೋಸಾಫ್ಟ್ 'ಕಾನ್ಫಿಗರೇಶನ್' ಕಾರಣ ಎಂದು ದೃಢಪಡಿಸಿದೆ. ಅಕ್ಟೋಬರ್ 29 ರಿಂದ ಶುರುವಾದ ಈ ಸಮಸ್ಯೆ, ಇದೀಗ ಇಂದು ಬೆಳಗ್ಗೆ ಸರಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಬುಧವಾರ ಮಧ್ಯಾಹ್ನದಿಂದ ಮೈಕ್ರೋಸಾಫ್ಟ್ ಕ್ಲೌಡ್‌ಗಳಲ್ಲಿ ಈ ತಾಂತ್ರಿಕ ಅಡಚಣೆ ಪ್ರಾರಂಭವಾಯಿತು. ಇದು ಪ್ರಾಥಮಿಕವಾಗಿ ಮೈಕ್ರೋಸಾಫ್ಟ್‌ನ ಜಾಗತಿಕ ನೆಟ್‌ವರ್ಕ್ ಆಗಿರುವ ಅಜೂರ್ ಫ್ರಂಟ್ ಡೋರ್ (AFD) ಮೇಲೆ ಪರಿಣಾಮ ಬೀರಿತು ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರಿಗೆ ಕಂಟೆಂಟ್‌ಗಳನ್ನು ಸರಿಯಾದ ಸಮಯಕ್ಕೆ ನೀಡುವಂತೆ ನೋಡಿಕೊಳ್ಳುವುದಾಗಿದೆ.
ಮೈಕ್ರೋಸಾಫ್ಟ್ ಅಕ್ಸರ್ ಸ್ಟೇಟಸ್ ಪೇಜ್ ಪ್ರಕಾರ, ಅಕ್ಸರ್ ಫ್ರಂಟ್ ಡೋರ್ (AFD) ಸೇವೆಯಲ್ಲಿ ಸಂರಚನಾ ಬದಲಾವಣೆಯಿಂದಾಗಿ ಡಿಎನ್‌ಎಸ್ ಸಮಸ್ಯೆಗಳು, ಇನ್ನಿತರ ಸಮಸ್ಯೆಗಳು ಬಂದತು. ಇದರಿಂದಾಗಿ ಬಳಕೆದಾರರು ಲೇಟೆನ್ಸಿ, ಟೈಮ್‌ಔಟ್‌ಗಳು ಮತ್ತು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಡೌನ್‌ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ, ಈ ಸಮಯದಲ್ಲಿ 18,000ಕ್ಕೂ ಹೆಚ್ಚು ದೂರುಗಳು ಮತ್ತು ಮೈಕ್ರೋಸಾಫ್ಟ್ 365ಗೆ 11,000ಕ್ಕೂ ಹೆಚ್ಚು ದೂರುಗಳು ಬಂದಿವೆ ಎನ್ನಲಾಗಿದೆ. ಇನ್ನು ಕಂಪನಿ ತನ್ನ ಕ್ವಾರ್ಟರ್ಲಿ ಲಾಭ ವರದಿ ಬಿಡುಗಡೆ ಮಾಡುವ ಮುನ್ನವೇ ಈ ಸಮಸ್ಯೆ ಎದುರಿಸಿದ್ದು, ಶೇರು ಮೌಲ್ಯದಲ್ಲಿ 3%ರ ಕುಸಿತಕ್ಕೆ ಕಾರಣವಾಯಿತು.
ಮೈಕ್ರೋಸಾಫ್ಟ್ ಮಾತ್ರವಲ್ಲ, ಹಲವು ಕಂಪನಿಗಳಿಗೆ ಪೆಟ್ಟು:
ಮೈಕ್ರೋಸಾಫ್ಟ್‌ನಲ್ಲಾದ ಸಮಸ್ಯೆಯಿಂದಾಗಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲೂ ಅಡಚಣೆ ಕಾಣಿಸಿಕೊಂಡಿತು. ಅದರಲ್ಲೂ ಎಕ್ಸ್‌ಬಾಕ್ಸ್ ಲೈವ್ ಸೈನ್-ಇನ್‌ಗಳು ವಿಫಲವಾದವು, ಮೈನ್‌ಕ್ರಾಫ್ಟ್ ಮಲ್ಟಿಪ್ಲೇಯರ್ ಮತ್ತು ರಿಯಲ್ಮ್ ಲಾಗಿನ್ ಮಾಡಲು ಸಮಸ್ಯೆಗಳಾಗಿದೆ.
ಪ್ರಯಾಣಿಕ ಸೇವೆಗಳು: ಅಲಾಸ್ಕಾ ಏರ್‌ಲೈನ್ಸ್‌ನ ವೆಬ್‌ಸೈಟ್ ಮತ್ತು ಮೊಬೈಲ್ ಆಪ್‌ಗಳಲ್ಲೂ ಸಮಸ್ಯೆಗಳು ಕಂಡುಬಂದಿದೆ. ಅಲ್ಲದೇ ಹೀತ್ರೋ ವಿಮಾನ ನಿಲ್ದಾಣದ ವೆಬ್‌ಸೈಟ್ ಕೆಲವು ಗಂಟೆಗಳ ಕಾಲ ಓಪನ್ ಆಗಲೇ ಇಲ್ಲ.
ಇನ್ನು ಸ್ಟಾರ್‌ಬಕ್ಸ್, ಕಾಸ್ಟ್‌ಕೋ, ಕ್ರೋಗರ್, ಕ್ಯಾಪಿಟಲ್ ವನ್, ವೋಡಾಫೋನ್ ಮತ್ತು ಸಿಗ್ನಲ್, ಸ್ನ್ಯಾಪ್‌ಚ್ಯಾಟ್, ರೆಡ್ಡಿಟ್‌ನಂತಹ ಆಪ್‌ಗಳಿಗೂ ಇದರ ಪ್ರಭಾವ ಬೀರಿದ್ದು, ಮೈಕ್ರೋಸಾಫ್ಟ್ 365 ಕೊಪೈಲಟ್ ಬಳಕೆದಾರರಲ್ಲಿ 58% ವೆಬ್‌ಸೈಟ್ ಸಮಸ್ಯೆಗಳ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಆದ್ರೆ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಮೈಕ್ರೋಸಾಫ್ಟ್ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡುಕೊಂಡಿದೆ.
ತಕ್ಷಣ ಎಚ್ಚೆತ್ತ ಮೈಕ್ರೋಸಾಫ್ಟ್, ತನ್ನ ಸ್ಟೇಟಸ್ ಪೇಜ್‌ನಲ್ಲಿ, "ಇದು ಲಾಂಚ್ ಮಾಡಲಾದ ಕಾನ್ಫಿಗರೇಶನ್‌ನಿಂದ ಉಂಟಾದ ತೊಂದರೆ" ಎಂದು ತಿಳಿಸಿ, ತಪ್ಪು ಕಾನ್ಫಿಗರೇಶನ್ ರೋಲ್‌ಬ್ಯಾಕ್ ಮಾಡುವುದು, ಟ್ರಾಫಿಕ್ ಅನ್ನು ರಿಡೈರೆಕ್ಟ್ ಮಾಡುವುದು ಮತ್ತು ಹೊಸ ನೋಡ್‌ಗಳಿಗೆ ರೌಟ್ ಮಾಡುವ ಮೂಲಕ ಸಮಸ್ಯೆಯನ್ನು ತಕ್ಷಣ ಪರಿಹರಿಸಿದೆ.


Click it and Unblock the Notifications