ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಗೂಗಲ್ ವಿರುದ್ಧ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಆನ್‌ಲೈನ್ ಸರ್ಚ್‌ನಲ್ಲಿ ಗೂಗಲ್‌ನ ಪ್ರಾಬಲ್ಯ ಮತ್ತು ಪಬ್ಲಿಷರ್, ಜಾಹೀರಾತುದಾರರ ಮೇಲೆ ಅದರ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೈಕ್ರೋಸಾಫ್ಟ್‌ನ ದೊಡ್ಡ ಕ್ಯಾಪಿಟಲ್ ಹೊರತಾಗಿಯೂ ಗೂಗಲ್‌ನ ಪ್ರಾಬಲ್ಯವು ಉಂಟು ಮಾಡುವ ಅಡಚಣೆಯನ್ನು ನಾಡೆಲ್ಲಾ ಎತ್ತಿ ಹೇಳಿದರು. ಕೃತಕ ಬುದ್ಧಿಮತ್ತೆ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಲು ಗೂಗಲ್ ತನ್ನ ಪ್ರಯೋಜನವನ್ನು ಬಳಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ವಾಷಿಂಗ್ಟನ್ ಡಿಸಿಯ ಫೆಡರಲ್ ಕೋರ್ಟ್ ರೂಂನಲ್ಲಿ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೋಮವಾರ ಈ ಬಗ್ಗೆ ಮಾತನಾಡಿದ್ದಾರೆ. ಇದಾದ ಬೆನ್ನಲ್ಲೇ ಭಾರತೀಯ ಟೆಕ್ ಪ್ರಪಂಚದ ಆಧಾರ ಸ್ತಂಭವಾದ ಎರಡು ಟೆಕ್ ದೈತ್ಯರು ಈಗ ಹಾಟ್ ಯುದ್ಧದಲ್ಲಿ ಪ್ರತಿಸ್ಪರ್ಧಿಯಾಗಿದ್ದಾರೆ.
ನಾಡೆಲ್ಲಾ ಅವರು ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರು ಟೆಕ್ ದೈತ್ಯರನ್ನು ಟೀಕಿಸುವಲ್ಲಿ ಯಾವುದೇ ಹಿಂಜರಿಕೆ ಮಾಡಿಲ್ಲ. ಆನ್‌ಲೈನ್ ಸರ್ಚ್‌ನಲ್ಲಿ ಗೂಗಲ್‌ನ ಪ್ರಾಬಲ್ಯವು ಮೈಕ್ರೋಸಾಫ್ಟ್‌ನ ಬಿಂಗ್‌ನಂತಹ ಪ್ರತಿಸ್ಪರ್ಧಿಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ನಾಡೆಲ್ಲಾ ಕಳವಳ ವ್ಯಕ್ತಪಡಿಸಿದರು.
ಪ್ರಕಾಶಕರು ಮತ್ತು ಜಾಹೀರಾತುದಾರರನ್ನು ನಿಯಂತ್ರಿಸುವ ಕಾರ್ಯವನ್ನು ಗೂಗಲ್ ಮಾಡುತ್ತಿದೆ ಎಂದು ವಾದಿಸಿದರು. ಇದು ಮಾರುಕಟ್ಟೆಯಲ್ಲಿ ಬಿಂಗ್‌ಗೆ ದೊಡ್ಡ ಸವಾಲಾಗಿದೆ. ಗೂಗಲ್‌ನ ಮಾರುಕಟ್ಟೆ ಮೌಲ್ಯ 1.69 ಟ್ರಿಲಿಯನ್ ಡಾಲರ್ ಆಗಿದ್ದು, ಮೈಕ್ರೋಸಾಫ್ಟ್ 2.38 ಟ್ರಿಲಿಯನ್ ಡಾಲರ್‌ನಷ್ಟಿದೆ. ಆದರೆ ಆನ್‌ಲೈನ್ ಸರ್ಚ್‌ನಲ್ಲಿ ಗೂಗಲ್‌ನ ಪ್ರಾಬಲ್ಯವು ಗಮನಾರ್ಹ ಅಡಚಣೆಯಾಗಿದೆ ಎಂದು ನಾಡೆಲ್ಲಾ ತಿಳಿಸಿದರು.
"ಎಲ್ಲರೂ ಓಪನ್ ವೆಬ್ ಬಗ್ಗೆ ಮಾತನಾಡುತ್ತಾರೆ. ಆದರೆ ನಿಜವಾಗಿಯೂ ಗೂಗಲ್ ವೆಬ್ ಆಗಿದೆ," ಎಂದು ನಾಡೆಲ್ಲಾ ಹೇಳಿದರು. ಕೃತಕ ಬುದ್ಧಿಮತ್ತೆ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಲು ಗೂಗಲ್ ತನ್ನ ಪ್ರಯೋಜನ, ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಸೂಚಿಸಿದರು.
ಗೂಗಲ್‌ನ ಸರ್ಚ್‌ನ ಪ್ರಾಬಲ್ಯವೆಂದರೆ ಆಪಲ್‌ನೊಂದಿಗಿನ ಅದರ ಮಲ್ಟಿಬಿಲಿಯನ್- ಡಾಲರ್ ಒಪ್ಪಂದವಾಗಿದೆ ಎಂದು ವರದಿ ಹೇಳಿದೆ. ಬಳಕೆದಾರರು ಬಯಸಿದಲ್ಲಿ ಬೇರೆ ಸರ್ಚ್ ಇಂಜಿನ್ ಬಳಕೆ ಮಾಡಬಹುದು ಎಂಬ ಗೂಗಲ್‌ನ ವಾದವನ್ನು ನಾಡೆಲ್ಲಾ ಬೋಗಸ್ ಎಂದು ಹೇಳಿಕೊಂಡಿದ್ದಾರೆ.
ಬಳಕೆದಾರರು ತಮ್ಮ ಡೀಫಾಲ್ಟ್ ಸರ್ಚ್ ಇಂಜಿನ್ ಅನ್ನು ಅಪರೂಪವಾಗಿ ಬದಲಾಯಿಸುತ್ತಾರೆ. ಡೀಫಾಲ್ಟ್ ಆಗಿಯೇ ಗೂಗಲ್ ಇರುವಾಗ ಬೇರೆ ಸರ್ಚ್ ಇಂಜಿನ್ ಅನ್ನು ಹೊಂದುವುದು ಅತೀ ಕಡಿಮೆ ಎಂದು ನಾಡೆಲ್ಲಾ ಹೇಳಿದ್ದಾರೆ.
ಮೈಕ್ರೋಸಾಫ್ಟ್ ಮತ್ತು ಗೂಗಲ್ ಎರಡು ದಶಕಗಳಿಂದ ವಿವಿಧ ಟೆಕ್ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆಯಲ್ಲಿ ತೊಡಗಿವೆ. ನಾಡೆಲ್ಲಾ ಮತ್ತು ಪಿಚೈ ನಾಯಕತ್ವವನ್ನು ಈ ಸಂಸ್ಥೆಗಳು ಹೊಂದಿದೆ. ಕೃತಕ ಬುದ್ಧಿಮತ್ತೆ ಇತ್ತೀಚಿನ ಯುದ್ಧಭೂಮಿಯಂತಾಗಿದೆ. ಈ ಬಗ್ಗೆ ನಾಡೆಲ್ಲಾ ಕಳವಳವನ್ನು ವ್ಯಕ್ತಪಡಿಸಿದರು.
2014 ರಲ್ಲಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡಿದ್ದಾರೆ. ನಂತರ ಗೂಗಲ್‌ನ ಆಂಡ್ರಾಯ್ಡ್ ವಿಭಾಗವನ್ನು ಮುನ್ನಡೆಸುತ್ತಿದ್ದ ಪಿಚೈ ಅವರ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದರು. ಒಂದು ವರ್ಷದ ನಂತರ, ಪಿಚೈ ಗೂಗಲ್‌ನ ಸಿಇಒ ಆದರು.


Click it and Unblock the Notifications