ಮಧ್ಯಮ ವರ್ಗದ ಜನರು ಖಂಡಿತವಾಗಿ ಈ ಎರಡು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು, ಅಲ್ಲದೆ ಇದರಲ್ಲಿ ಸರ್ಕಾರವು ಹೂಡಿಕೆದಾರರಿಗೆ 8.2% ವರೆಗೆ ಬಡ್ಡಿಯನ್ನು ನೀಡುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಮಧ್ಯಮ ವರ್ಗದ ಜನರು ಸಹಜವಾಗಿ ಹೂಡಿಕೆ ಮಾಡುವ ಹಾಗೆ ಸಾಕಷ್ಟು ಜನಪ್ರಿಯವಾಗಿರುವ ಎರಡು ಯೋಜನೆಗಳು.
ಈ ಎರಡು ಯೋಜನೆಗಳು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಾಗಿವೆ.ಇಂತಹ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ವಾರ್ಷಿಕವಾಗಿ 8.2 ಪ್ರತಿಶತದಷ್ಟು ಬಡ್ಡಿದರವನ್ನು ನೀಡುತ್ತವೆ. ಈ ಯೋಜನೆಗಳ ಮೂಲಕ ಹೂಡಿಕೆ ಮಾಡಿದ್ರೆ, ಹೂಡಿಕೆದಾರರು ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುವುದು ಬಹಳ ಸುಲಭ.

ನೀವೇನಾದ್ರು ಈ ಸಣ್ಣ ಉಳಿತಾಯ ಸಾಧನಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ , ವಿವಿಧ ಹಣಕಾಸು ಸಾಧನಗಳು, ವಿವಿಧ ಬಡ್ಡಿದರಗಳನ್ನು ಈ ಯೋಜನೆಗಳು ನೀಡುತ್ತವೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಹಯೋಜನೆಗಳು ಸುರಕ್ಷಿತ ಉಳಿತಾಯ ಆಯ್ಕೆಗಳನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಮೀಸಲಾಗಿವೆ. ಇನ್ನು ಇವುಗಳಲ್ಲಿ ಮಧ್ಯಮವರ್ಗದವರಲ್ಲಿ ಜನಪ್ರಿಯವಾಗಿರುವುದು ಮಾತ್ರ ಈ ಎರಡು ಉಳಿತಾಯ ಯೋಜನೆಗಳು.
ಸಾರ್ವಜನಿಕ ಭವಿಷ್ಯ ನಿಧಿ (PPF)
ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಈ ಯೋಜನೆಯಲ್ಲಿ ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು. PPF ನಿಮಗೆ ವಾರ್ಷಿಕ 7.1% ಬಡ್ಡಿಯನ್ನು ನೀಡುತ್ತದೆ. ಅದೇ ವೇಳೆ ನೀವು, ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ 500ರೂಗಳಿಂದ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಬಹುದು. ಅದೇ ವೇಳೆ, ಅಂದರೆ ಆರ್ಥಿಕ ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂಪಾಯಿಯನ್ನು ಠೇವಣಿ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ಈ ಮೊತ್ತದ ಮೇಲೆ ತೆರಿಗೆ ಪ್ರಯೋಜನಗಳನ್ನು ನಾವು ಕ್ಲೈಮ್ ಮಾಡಬಹುದು. ನೀವು PPFನಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು, ಆದರೆ ಮುಕ್ತಾಯವಾದ ಮೇಲೆ ನೀವು ಅದನ್ನು 5 ವರ್ಷಗಳ ವರೆಗೆ ವಿಸ್ತರಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆ (SSY)
ಸುಕನ್ಯಾ ಸಮೃದ್ಧಿ ಯೋಜನೆಯು ಪ್ರತ್ಯೇಕವಾಗಿ ಹೆಣ್ಣು ಮಗುವಿನ ಆರ್ಥಿಕ ಭವಿಷ್ಯವನ್ನು ರಕ್ಷಿಸಲು ಆರಂಭಿಸಲಾದ ಭಾರತ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯಡಿ, ಕನಿಷ್ಠ ಮೊತ್ತ 250 ರೂ.ಗಳಿಂದ ಆರಂಭ ಮಾಡಬಹುದು ಹಾಗೆ ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.ಗಳಂತೆ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಹಾಗೆ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯು ಪ್ರಸ್ತುತ ಠೇವಣಿಗಳ ಮೇಲೆ 8.2% ಬಡ್ಡಿದರವನ್ನು ನೀಡುತ್ತದೆ. ಈ ಖಾತೆಯು ಖಾತೆಯನ್ನ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಆದರೆ ಗರಿಷ್ಠ ಠೇವಣಿ ಅವಧಿ 15 ವರ್ಷಗಳು ಮಾತ್ರ ಇರುತ್ತದೆ. ಈ ಖಾತೆಯನ್ನು ಪೋಷಕರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆಯಬಹುದು. ಒಬ್ಬ ಹುಡುಗಿಗೆ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಅದೇ ಸಮಯದಲ್ಲಿ, ಒಂದು ಕುಟುಂಬವು ಹೆಚ್ಚೆಂದರೆ ಎರಡು ಖಾತೆಗಳನ್ನು ತೆರೆಯಬಹುದು.
ಡಿಸೆಂಬರ್‌ನಲ್ಲಿ ಬಡ್ಡಿದರದ ನಿರ್ಧಾರ ತೆಗೆದುಕೊಳ್ಳಲಾಗುವುದು
PPF ಮತ್ತು ಸುಕನ್ಯಾದಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಜೊತೆಗೆ ಈ ನಿರ್ಧಾರವನ್ನು ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತದೆ. ಈಗ ಮುಂದಿನ ತ್ರೈಮಾಸಿಕದಲ್ಲಿ ಅಂದರೆ ಜನವರಿಯಿಂದ ಮಾರ್ಚ್‌ನ ವರೆಗಿನ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದ ನಿರ್ಧಾರವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ತೆಗೆದುಕೊಳ್ಳಲಾಗುವುದು.
ಇತರೆ ಸಣ್ಣ ಉಳಿತಾಯ ಯೋಜನೆಗಳನ್ನ ಗಮನಿಸಿ
1. ಪೋಸ್ಟ್ ಆಫೀಸ್ ಉಳಿತಾಯ ಖಾತೆ (SB): ಈ ಖಾತೆಯನ್ನ ಒಬ್ಬ ಅಥವಾ ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ಕನಿಷ್ಠ 500 ರೂಗಳ ಠೇವಣಿ ಇಟ್ಟು ಈ ಖಾತೆಯನ್ನು ತೆರೆಯಬಹುದು. ಈ ಖಾತೆಗಳು ವಾರ್ಷಿಕವಾಗಿ 4 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತವೆ.
2. ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) : ಈ ಖಾತೆಯನ್ನು ತಿಂಗಳಿಗೆ 100 ರೂಗಳಂತೆ ಹೂಡಿಕೆ ಮಾಡುವ ಮೂಲಕ ಖಾತೆಯನ್ನ ತೆರೆಯಬಹುದು. ಜೊತೆಗೆ ಕನಿಷ್ಠ 10 ರೂಗಳ ಗುಣಕದಲ್ಲಿ ಕೂಡ ತೆರೆಯಬಹುದು. ಮರುಕಳಿಸುವ ಠೇವಣಿ ಖಾತೆಯ ಬಡ್ಡಿ ದರವು 6.7 ಪ್ರತಿಶತದಷ್ಟಿರುತ್ತದೆ.
3. ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ (MIS): ಈ ಖಾತೆಯನ್ನು ಕನಿಷ್ಠ 1000 ರೂ. ಮತ್ತು 1,000 ರೂಗಳ ಗುಣಕದಲ್ಲಿ ತೆರೆಯಬಹುದು . ಒಂದೇ ಖಾತೆಯಲ್ಲಿ ಗರಿಷ್ಠ 9 ಲಕ್ಷ ಹಣವನ್ನ ಜಮಾ ಮಾಡಬಹುದು. ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ಜಮಾ ಮಾಡಬಹುದು. ಈ ಖಾತೆಯ ಬಡ್ಡಿ ದರವು ವಾರ್ಷಿಕ 7.4 ಪ್ರತಿಶತದಷ್ಟಿರುತ್ತದೆ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ : ಈ ಖಾತೆಯು ಕನಿಷ್ಠ 1,000 ರೂಗಳ ಠೇವಣಿ ಹೊಂದಿದೆ ಮತ್ತು 1000 ರ ಗುಣಕಗಳಲ್ಲಿ ಇದನ್ನ ನೀವು ತೆಯಬಹುದು. ಒಬ್ಬ ವ್ಯಕ್ತಿಯಿಂದ ತೆರೆಯಲಾದ ಎಲ್ಲಾ SCSS ಖಾತೆಗಳಲ್ಲಿ ಗರಿಷ್ಠ ಮಿತಿ 30 ಲಕ್ಷದವರೆಗೆ ಇರುತ್ತದೆ.
5. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC): ಇದರ ಹೂಡಿಕೆಯ ಕನಿಷ್ಠ ಮೊತ್ತ 1,000 ರೂ ಆಗಿರುತ್ತದೆ. ಇನ್ನು ಈ ಖಾತೆಯು ವಾರ್ಷಿಕ 7.7 ಶೇಕಡಾ ಬಡ್ಡಿಯನ್ನು ನೀಡುತ್ತದೆ.
6. ಕಿಸಾನ್ ವಿಕಾಸ್ ಪತ್ರ(ಕೆವಿಪಿ): ಠೇವಣಿ ಮಾಡಲು ಕನಿಷ್ಠ ಮೊತ್ತ 1000 ರೂ ಬೇಕಾಗುತ್ತದೆ. ಜೊತೆಗೆ 100 ರೂಗಳ ಗುಣಕಗಳಲ್ಲಿ ಖಾತೆ ತೆರೆಯಬಹು. ಗರಿಷ್ಠ ಮಿತಿ ಇಲ್ಲ. KVP ಮೇಲಿನ ಬಡ್ಡಿ ದರವು 7.5 ಪ್ರತಿಶತದಷ್ಟಿರುತ್ತದೆ.
7. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ: ಇದರ ಕನಿಷ್ಠ ಮೊತ್ತ 1,000 ರೂಗಳಿತ್ತದೆ. ಇದು ವಾರ್ಷಿಕ 7.5 ಶೇಕಡಾ ಬಡ್ಡಿಯನ್ನು ನೀಡುತ್ತದೆ.


Click it and Unblock the Notifications