ಬೆಂಗಳೂರು, ಮೇ 16: ದೇಶದಲ್ಲಿ ನಡೆಯುತ್ತಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಮೊಬೈಲ್ ಸೇವೆ ಬಳಸುವ ಬಳಕೆದಾರರಿಗೆ ಬಿಲ್‌ಗಳು ತುಟ್ಟಿಯಾಗುವ ಸಾಧ್ಯತೆ ಇದೆ. ಏಕೆಂದರೆ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಶುಲ್ಕವನ್ನು ಶೇ. 25 ರಷ್ಟು ಹೆಚ್ಚಿಸಲು ಮುಂದಾಗಿವೆ ಎಂದು ವರದಿಯಾಗಿದೆ.
ಬ್ರೋಕರೇಜ್ ಸಂಸ್ಥೆ "ಆಕ್ಸಿಸ್ ಕ್ಯಾಪಿಟಲ್"ನ ಇತ್ತೀಚಿನ ವರದಿಯ ಪ್ರಕಾರ, ಟೆಲಿಕಾಂ ಕಂಪನಿಗಳು ಶುಲ್ಕ ಹೆಚ್ಚಳಕ್ಕೆ ಯೋಜಿಸುತ್ತಿರುವುದರಿಂದ ಭಾರತದಲ್ಲಿನ ಮೊಬೈಲ್ ಫೋನ್ ಬಳಕೆದಾರರು ಶೀಘ್ರದಲ್ಲೇ ತಮ್ಮ ಬಿಲ್‌ಗಳಲ್ಲಿ ದರ ಏರಿಕೆ ಕಾಣಬಹುದಾಗಿದೆ. ಬೆಲೆಗಳಲ್ಲಿನ ಈ ಹೆಚ್ಚಳವು ಟೆಲಿಕಾಂ ಆಪರೇಟರ್‌ಗಳ ಸರಾಸರಿ ಆದಾಯವನ್ನು ಪ್ರತಿ ಬಳಕೆದಾರರಿಗೆ (ARPU) ಹೆಚ್ಚಿಸುವ ನಿರೀಕ್ಷೆಯಿದೆ. ಟೆಲಿಕಾಂ ಆಪರೇಟರ್‌ಗಳು ಶೀಘ್ರದಲ್ಲೇ ಸುಮಾರು 25% ಹೆಚ್ಚಳವನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

ಸ್ಪರ್ಧಾತ್ಮಕ ವಾತಾವರಣದಲ್ಲಿ, 5G ಸೇವೆಯನ್ನು ಒದಗಿಸಲು ಭಾರೀ ಹೂಡಿಕೆಯನ್ನು ದೂರಸಂಪರ್ಕ ಕಂಪನಿಗಳು ವಿನಿಯೋಗಿಸಿದೆ. ಹೀಗಾಗಿ ಇದರ ಲಾಭ ತೆಗೆಯಬೇಕಾಗಿರುವುದರಿಂದ ಶುಲ್ಕ ಪರಿಷ್ಕರಿಸುವ ಅಗತ್ಯತೆ ಕಂಪನಿಗಳಿವೆ, ಈ ಕಾರಣ ಸುಮಾರು 25% ರಷ್ಟು ಹೆಚ್ಚಳವನ್ನು ಕಂಪನಿಗಳು ನಿರೀಕ್ಷಿಸುತ್ತವೆ ಎಂದು ವರದಿಯಾಗಿದೆ.
ಶುಲ್ಕದಲ್ಲಿ 25% ರಷ್ಟು ಏರಿಕೆ ಮಾಡಲಾಗುತ್ತಿದೆ ಎಂದು ವರದಿಯಾದರೂ ನಗರ ಪ್ರದೇಶದ ಪ್ರತಿ ಗ್ರಾಹಕ ದೂರಸಂಪರ್ಕ ಸೇವೆಗಾಗಿ ತೆರುವ ದರ ಹಾಲಿ ಶೇ. 3.2 ರಿಂದ 3.6ಕ್ಕೆ ಹೆಚ್ಚಾಗಲಿದೆ. ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು ಮಾಡುವ ದೂರವಾಣಿ ವೆಚ್ಚ ಶೇ. 5.2 ರಿಂದ ಶೇ. 9 ಕ್ಕೆ ಏರಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಶುಲ್ಕ ಹೆಚ್ಚಳದಿಂದ ಭಾರ್ತಿ ಏರ್ ಟೆಲ್ ಹಾಗೂ ಜಿಯೋ ಕಂಪನಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೇ ಹಂತ ಹಂತವಾಗಿ ಕಡಿಮೆ ಮೌಲ್ಯದ ಪ್ಯಾಕ್ ಗಳನ್ನು ರದ್ದುಗೊಳಿಸುವ ಯೋಜನೆಯನ್ನು ಕಂಪನಿಗಳು ಹಾಕಿಕೊಂಡಿವೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳು ಮೂಲ ಯೋಜನೆಯ ಬೆಲೆಯನ್ನು 25% ಹೆಚ್ಚಿಸಿದರೆ, ಪ್ರತಿ ಬಳಕೆದಾರರಿಗೆ ಅವರ ಸರಾಸರಿ ಆದಾಯ (ಎಆರ್ಪಿಯು) 16% ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ. ಹೀಗಾಗಿ ಏರ್ ಟೆಲ್ ನ ಆದಾಯವು ಪ್ರತಿ ಬಳಕೆದಾರರಿಂದ 29 ರೂ.ಗೆ ಮತ್ತು ಜಿಯೋ ಆದಾಯವು ಪ್ರತಿ ಬಳಕೆದಾರರಿಂದ 26 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ.
ಬೆಲೆ ಏರಿಕೆಯ ಫಲಾನುಭವಿಗಳು ಯಾರು?
ಮುಂಬರುವ ವೈರ್ ಲೆಸ್ ಪ್ಯಾ ಕ್ ಬೆಲೆ ಏರಿಕೆಯ ಪ್ರಾಥಮಿಕ ಫಲಾನುಭವಿಗಳಾಗಿ ಭಾರ್ತಿ ಏರ್ ಟೆಲ್ ಮತ್ತು ಜಿಯೋ ಹೊರಹೊಮ್ಮಲಿದೆ ಎಂದು ವಿಶ್ಲೇ ಷಕರು ಊಹಿಸಿದ್ದಾರೆ. ತಮ್ಮ ದೃಢವಾದ ಮೂಲಸೌಕರ್ಯ ಮತ್ತು ವಿಸ್ತಾರವಾದ ನೆಟ್ವರ್ಕ್ ಕವರೇರ್ ಗಳೊಂದಿಗೆ, ಈ ಟೆಲಿಕಾಂ ದೈತ್ಯ ರು ಹೆಚ್ಚಿ ದ ಶುಲ್ಕಗಳ ಲಾಭವನ್ನು ಪಡೆಯಲು ಸಿದ್ಧರಾಗಿದ್ದಾರೆ, ಮಾತ್ರವಲ್ಲದೇ ತಮ್ಮ ಮಾರುಕಟ್ಟೆ ಸ್ಥಾನಗಳನ್ನು ಮತ್ತಷ್ಟು ಗಟ್ಟಿ ಗೊಳಿಸುತ್ತಾರೆ ಎಂದು ವರದಿಯಾಗಿದೆ.


Click it and Unblock the Notifications