ದೇಶ ಸುತ್ತವುವ ಜನರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪಾಸ್‌ಪೋರ್ಟ್‌ನ ಸಮಸ್ಯೆಯಿಂದಾಗಿ ಪ್ರಯಾಣ ಮಾಡಲು ಆಗದೇ ಪರಿತಪಿಸುತ್ತಿದ್ದವರಿಗೆ ಖುಷಿ ಸಮಾಚಾರ ದೊರೆತಿದೆ. ಜನಗಳಿಗೆ ದೇಶ ಸುತ್ತುವ ಆಸೆ ಆದ್ರೆ ಪಾಸ್‌ಪೋರ್ಟ್‌ಗಾಗಿ ಇಡೀ ರಾಜ್ಯವನ್ನೇ ಸುತ್ತುವ ಪರಿಸ್ಥಿತಿ ಕೆಲವೊಮ್ಮೆ ಎದುರಾಗುತ್ತದೆ. ಹೀಗಾಗಿ ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಈಗ ಪಾಸ್‌ಪೋರ್ಟ್ ಕಚೇರಿ ಪಾಸ್‌ಪೋರ್ಟ್ ಮಾಡಿಸಲು ಹೊಸ ಮಾರ್ಗವನ್ನ ಜನರ ಮುಂದೆ ಇಡ್ತಿದೆ.
ಒಂದು ಪಾಸ್‌ಪೋರ್ಟ್ ಮಾಡಿಸಲು ಜನರು ಹತ್ತಾರು ಕಡೆ ಅಲೆಯಬೇಕಾಗುತ್ತದೆ. ಹೀಗಾಗಿ ಭಾರತದಾದ್ಯಂತ ಹಲವಾರು ಸಣ್ಣ ನಗರಗಳು ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ಮಾರ್ಗವನ್ನು ಪ್ರಾರಂಭಿಸಿವೆ. ಈ ಸಮಸ್ಯೆಗಳನ್ನ ನಿವಾರಿಸುವ ಸಲುವಾಗಿ ಈಗ ಜನರಿರುವ ನಗರಗಳಿಗೆ ಪಾಸ್‌ಪೋರ್ಟ್ ಕಚೇರಿಯಿಂದ ವ್ಯಾನ್‌ಗಳನ್ನ ಕಳಿಸಲಾಗ್ತಿದೆ. ಅಂದರೆ ಸ್ಥಳೀಯ ಸಮುದಾಯಗಳಿಗೆ ಮೊಬೈಲ್ ವ್ಯಾನ್‌ಗಳನ್ನು ಕಳುಹಿಸುತ್ತಿದ್ದಾರೆ, ಆದ್ದರಿಂದ ಜನರು ಪಾಸ್‌ಪೋರ್ಟ್ ಕಚೇರಿಗಳಿಗೆ ಹೋಗಲು ದೂರದವರೆಗೆ ಪ್ರಯಾಣ ಮಾಡಬೇಕಾಗಿಲ್ಲ.

ಭಾರತದ ಅನೇಕ ಸಣ್ಣ ನಗರಗಳು ದೂರದ ಪ್ರದೇಶಗಳಿಂದ ದೂರದ ಪಾಸ್‌ಪೋರ್ಟ್ ಕಚೇರಿಗಳಿಗೆ ಪ್ರಯಾಣಿಸುವುದನ್ನ ತಡೆಯಲು ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಗಾಗಿ ಜನರಿರುವ ನಗರಗಳಿಗೆ ವ್ಯಾನ್‌ಗಳನ್ನು ಕಳುಹಿಸಲು ಪ್ರಾರಂಭಿಸಿವೆ. ಹೀಗಾಗಿ ಅರ್ಜಿದಾರರು ಅಧಿಸೂಚಿತ ಪ್ರದೇಶಗಳಲ್ಲಿ ತೆರಳಿ ಶಿಬಿರಗಳಿಗೆ ಭೇಟಿ ನೀಡಿ ತಮ್ಮ ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸಬುದು.
ಇವುಗಳ ಜೊತೆಗೆ 93 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪಾಸ್‌ಪೋರ್ಟ್ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು 428 ಅಂಚೆ ಕಚೇರಿಗಳನ್ನ ಬಳಸಲಾಗುವುದು. ಇದರಿಂದ ಪಾಸ್‌ಪೋರ್ಟ್ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಹೆಚ್ಚುವರಿ ಸ್ಥಳಗಳು ಸಹ ದೊರೆಯುತ್ತವೆ.
ಮೊಬೈಲ್ ವ್ಯಾನ್‌ಗಳಲ್ಲಿ ಅರ್ಜಿ ಪ್ರಕ್ರಿಯೆಯನ್ನ ನಡೆಸಲಾಗುತ್ತದೆ. ಜೊತೆಗೆ ಜನರ ಮನೆಗಳು ಅಥವಾ ಸಂಸ್ಥೆಗಳಲ್ಲಿ ಸಹ ಪರಿಶೀಲನೆ ನಡೆಸಲಾಗುತ್ತದೆ. ಇದರ ಜೊತೆಗೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸಹ ನಿರ್ವಹಿಸಲಾಗುತ್ತದೆ. ಸಾಮಾನ್ಯ ಯೋಜನೆಯಡಿಯಲ್ಲಿ ಪಾಸ್‌ಪೋರ್ಟ್‌ನ ಹೊಸದಾಗಿ ಮಾಡಿಸುವುದು ಅಥವಾ ಮರು-ವಿತರಣೆಗಾಗಿ (ಕಳೆದುಹೋದ / ಹಾನಿಗೊಳಗಾದ ಹೊರತುಪಡಿಸಿ) ಮಾತ್ರ ಶಿಬಿರಗಳಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಎಂದು ವೆಬ್‌ಸೈಟ್ ಹೇಳಿದೆ. ಆದ್ರೆ ಅದೇ ಶಿಬಿರ ವ್ಯಾನ್‌ಗಳು ತತ್ಕಾಲ್, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ಇತರೆ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವುದಿಲ್ಲ ಎಂದರು. ಅಲ್ಲದೆ ಸಧ್ಯಕ್ಕೆ ಈ ಪ್ರಕ್ರಿಯೆ ಇನ್ನು ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದ್ರು.
ಈಗಾಲೇ ಡೆಹ್ರಾಡೂನ್ ಇದರ ಪ್ರಯೋಗವನ್ನ ಪ್ರರಂಭಿಸಿದೆ. ಸೆಪ್ಟೆಂಬರ್ 30ರಂದು ಈ ಪಾಸ್‌ಪೋರ್ಟ್ ಪ್ರಕ್ರಿಯೆಗಳ ಪ್ರಾಯೋಗಿಕ ಹಂತ ಆರಂಭವಾಗಿದೆ. ಪಾಸ್‌ಪೋರ್ಟ್ ಕಚೇರಿಯನ್ನು ತಲುಪಲು ದೂರ ಪ್ರದೇಶಗಳಲ್ಲಿ ವಾಸಿಸುವ ಜನರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆ ಜನರಿಗೆ ಅದನ್ನು ತಲುಪಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಆದರೆ, ಈ ಪ್ರಕ್ರಿಯೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಪ್ರತಿದಿನ ಐದು ನೇಮಕಾತಿಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಇದೇ ರೀತಿ ವ್ಯವಸ್ಥೆಯು ಯಶಸ್ವಿಯಾದರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಆ ಮೂಲಕ ದೂರದ ಪ್ರದೇಶಗಳಿಗೆ ಕೊಂಡೊಯ್ಯಲಾಗುವುದು ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ವಿಜಯ್ ಶಂಕರ್ ಪಾಂಡೆ ತಿಳಿಸಿದರು.
ಈಗ ಸದ್ಯಕ್ಕೆ ಇದೇ ರೀತಿಯ ಕೊಡುಗೆಗಳು ಜಮ್ಶೆಡ್‌ಪುರ, ಗಾಜಿಯಾಬಾದ್, ಅಹಮದಾಬಾದ್, ಚಂಡೀಗಢ, ಕೋಝಿಕ್ಕೋಡ್, ಮೀರತ್, ಆಗ್ರಾ, ಅಲಿಘರ್, ನೋಯ್ಡಾ, ಹತ್ರಾಸ್, ಮಥುರಾ, ಬುಲಂದ್‌ಶಹರ್, ಹಾಪುರ್, ಬಾಗ್‌ಪತ್, ಶಾಮ್ಲಿ, ಸೇರಿದಂತೆ ಮುಜಾಫರ್‌ನಗರ ಮತ್ತು ಸಹರಾನ್‌ಪುರದಲ್ಲಿ ಲಭ್ಯವಿದೆ.
ಮೊಬೈಲ್ ವ್ಯಾನ್‌ಗಳ ಮೂಲಕ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ
ಅಧಿಕೃತ ವೆಬ್‌ಸೈಟ್ www.passportindia.gov.in ಮೇಲೆ ಕ್ಲಿಕ್ ಮಾಡಿ.
ಇದರಲ್ಲಿ ಹೊಸ ಬಳಕೆದಾರರ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ಹಾಕಿ. ನಂತರ ನೀವು ನಿಮ್ಮ ಇಮೇಲ್‌ನಲ್ಲಿ ಬಳಕೆದಾರ ID ಮತ್ತು ಪಾಸ್‌ವರ್ಡ್ ಪಡೆಯುತ್ತೀರಿ.
ಈಗ, ನಿಮ್ಮ ಇಮೇಲ್‌ನಲ್ಲಿ ಸ್ವೀಕರಿಸಿದ ಬಳಕೆದಾರ IDಯೊಂದಿಗೆ ಲಾಗ್ ಇನ್ ಮಾಡಿ ಮತ್ತು ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿ ನಮೂದಿಸಿ.
ನೆನಪಿಡಿ, ಕೈಬರಹದ ಮೂಲಕ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಶಿಬಿರದಲ್ಲಿ ಸ್ವೀಕರಿಸಲಾಗುವುದಿಲ್ಲ.
ನಿಗದಿತ ಶುಲ್ಕವನ್ನು ಪಾವತಿಸಿದ ನಂತರ ನೀವು ಅಪಾಯಿಂಟ್‌ಮೆಂಟ್ ಹೊಂದಿಸಬಹುದು. ಪಾಸ್‌ಪೋರ್ಟ್ ಪೋರ್ಟಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಯ ಮೂಲಕ ಪಾವತಿಸಲು ಸೂಚಿಸುತ್ತದೆ. ಆದರೆ ನಿಮ್ಮ ಬಳಿ ಎಸ್‌ಬಿಐ ಖಾತೆಯನ್ನು ಇಲ್ಲದಿದ್ದರೆ, ನೀವು ಇತರ ಬ್ಯಾಂಕ್‌ಗಳು ನೀಡಿದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಬಹುದು.
ಪರಿಶೀಲನೆಯ ಸಮಯದಲ್ಲಿ, ನಿಮಗೆ ಆನ್‌ಲೈನ್ ಅರ್ಜಿ ಉಲ್ಲೇಖ ಸಂಖ್ಯೆ (ARN) ಬೇಕಾಗುತ್ತದೆ. ಅದಾದ ನಂತರ, ಮುದ್ರಣ ಪ್ರತಿಯ ಅಗತ್ಯ ಬರುವುದಿಲ್ಲ. ಜೊತೆಗೆ ಭೇಟಿಯ ಸಮಯದಲ್ಲಿ ನಿಮಗೆ ಬಂದಿರುವ SMS ಜೊತೆಗೆ ಅಪಾಯಿಂಟ್‌ಮೆಂಟ್‌ನ ವಿವರಗಳನ್ನ ಸಹ ಸ್ವೀಕರಿಸಲಾಗುತ್ತದೆ.
ಹಾಗೆ ಪಾವತಿಸಿದ ರಸೀದಿ, ಸ್ವಯಂ-ದೃಢೀಕರಿಸಿದ ಫೋಟೊಕಾಪಿಗಳು ಹಾಗು ಮೂಲ ದಾಖಲೆಗಳು ಇರಬೇಕು. ಇದರೊಂದಿಗೆ ಇತ್ತೀಚಿನ ಎರಡು ಬಣ್ಣದ ಛಾಯಾಚಿತ್ರಗಳನ್ನು (4.5 ಸೆಂ.ಮೀ ಉದ್ದ ಮತ್ತು 3.5 ಸೆಂ.ಮೀ ಅಗಲ) ತೆಗೆದುಕೊಂಡು ಹೋಗಬೇಕು.
ಮರು ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ಹಳೆಯ ಅಥವಾ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಬುಕ್‌ಲೆಟ್ ಅನ್ನು ಹೊಂದಿರಬೇಕು. ಅದನ್ನು ಪರಿಶೀಲನಾ ಅಧಿಕಾರಿಗಳು ಸ್ವೀಕರಿಸಿ, ರದ್ದುಗೊಳಿಸುತ್ತಾರೆ ಮತ್ತು ಅರ್ಜಿಯನ್ನು ಅರ್ಜಿದಾರರಿಗೆ ಹಿಂತಿರುಗಿಸುತ್ತಾರೆ
ನಂತರ ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ ಮತ್ತು ನಿಗದಿತ ದಿನಾಂಕದವರೆಗೆ ವ್ಯಾನ್‌ಗಾಗಿ ಕಾಯಿರಿ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications