ಇಸ್ರೇಲ್ ಮತ್ತು ಇರಾನ್ (Israel vs Iran War) ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುತ್ತಿದೆ. ಅತ್ತ ಇಸ್ರೇಲ್ ಜೊತೆ ಅಮೆರಿಕವು ಇರಾನ್ ವಿರುದ್ಧ ದಾಳಿ ನಡೆಸಿದ್ದು, ಇರಾನ್‌ನ ಹಲವಾರು ಪ್ರದೇಶಗಳು ಸುಟ್ಟುಭಸ್ಮವಾಗಿದೆ. ಅಲ್ಲದೇ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್, ಅಮೆರಿಕ ಜಂಟಿಯಾಗಿ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ಹಲವಾರು ಸಾವು ನೋವುಗಳು ಸಂಭವಿಸಿದೆ ಎನ್ನಲಾಗಿದೆ. ಇದೀಗ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಹೌದು, ಇಸ್ರೇಲ್ ಮತ್ತು ಇರಾನ್ ನಡುವೆ ಇದೀಗ ಮತ್ತೆ ಯುದ್ಧ ಆರಂಭವಾಗಿದೆ. ಯುದ್ಧದ ಭೀಕರತೆ ಜಾಗತಿಕ ಮಾರುಕಟ್ಟೆಯನ್ನೂ ತಲ್ಲಣಗೊಳಿಸಿದೆ. ಈ ಮಧ್ಯೆ ಸುರಕ್ಷಿತ ಆಸ್ತಿಯಾಗಿ ಪರಿಗಣಿಸಿರುವ ಚಿನ್ನದ ಮೇಲಿನ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಇಂದು (ಫೆ.28, 2026) ಚಿನ್ನದ ಬೆಲೆ ಭಾರೀ ಏರಿಕೆಯಾಗಿದ್ದು, ಇದೀಗ ಚಿನ್ನದ ಹೂಡಿಕೆದಾರರ ಕಣ್ಣು ಸೋಮವಾರಕ್ಕೆ ನೆಟ್ಟಿದೆ. ಹಾಗಿದ್ರೆ ಮಾರ್ಚ್ 02 (ಸೋಮವಾರ) ಚಿನ್ನದ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ವಿಶ್ಲೇಷಕರ ಅಭಿಪ್ರಾಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭೌಗೋಳಿಕ ರಾಜಕೀಯ ಉದ್ವಿಗ್ನತೆ ತೀವ್ರವಾಗುತ್ತಿರುವ ಬೆನ್ನಲೇ ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ, ಜಾಗತಿಕ ಉದ್ವಿಗ್ನತೆಯಿಂದಾಗಿ ಚಿನ್ನ ಏರಿಕೆಯಾಗಿದೆ ಎಂದು ಹೇಳಿದರು.
ಅರ್ಥ ಭಾರತ್ ಗ್ಲೋಬಲ್ ಮಲ್ಟಿಪ್ಲೈಯರ್ ಫಂಡ್‌ನ ವ್ಯವಸ್ಥಾಪಕಿ ನಚಿಕೇತ ಸಾವ್ರಿಕರ್, ಭೌಗೋಳಿಕ ರಾಜಕೀಯ ಉದ್ವಿಗ್ನತೆಯು, ಚಿನ್ನ ಮತ್ತು ಬೆಳ್ಳಿಯಂತಹ ಸುರಕ್ಷಿತ ಲೋಹಗಳ ಬೇಡಿಕೆಯನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಚಿನ್ನದ ಬೆಲೆ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರತೀ ಔನ್ಸ್‌ಗೆ ಸುಮಾರು $5,260 ರಿಂದ $5,278 ಡಾಲರ್‌ಗೆ ಏರಿಕೆಯಾಗಿದೆ. ಅಲ್ಲದೇ ಕೆಲವು ಸಮಯದಲ್ಲಿ $5,300 ಡಾಲರ್‌ಗೂ ತಲುಪಿದೆ.
ಭಾರತದಲ್ಲಿ MCX ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ:
- 24 ಕ್ಯಾರಟ್ ಚಿನ್ನ: ಸುಮಾರು 16,158 ರಿಂದ 16,473 ರೂ. ಪ್ರತೀ ಗ್ರಾಂಗೆ ತಲುಪಿದೆ.
- 22 ಕ್ಯಾರಟ್ ಚಿನ್ನ: ಸುಮಾರು 14,811 ರೂ. ತಲುಪಿದೆ. ಇದು ಇತ್ತೀಚೆಗೆ 300 ರಿಂದ 500 ರೂ.ನಷ್ಟು ಏರಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
- ಇರಾನ್-ಇಸ್ರೇಲ್ ಯುದ್ಧ: ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿಗಳು ಮತ್ತು ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಕ್ಷಿಪಣಿ ದಾಳಿ, ಜಾಗತಿಕವಾಗಿ ಉದ್ವಿಗ್ನತೆನ್ನು ಸೃಷ್ಟಿಸಿದೆ.
- ಸುರಕ್ಷಿತ ಆಸ್ತಿ ಮೇಲಿನ ಬೇಡಿಕೆ: ಯುದ್ಧದ ಭೀತಿ, ಕದನ ವಿರಾಮದ ವಿಫಲತೆ, ಮಧ್ಯಪ್ರಾಚ್ಯದಲ್ಲಿ ಉಂಟಾದ ವ್ಯಾಪಕ ಯುದ್ಧದ ಅಪಾಯದಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರ ಹೇಗಿದೆ ಚಿನ್ನ?
- ವಿಶ್ಲೇಷಕರು ಮತ್ತು ಮಾರುಕಟ್ಟೆ ತಜ್ಞರು ಸೋಮವಾರ ಚಿನ್ನದ ಬೆಲೆಯಲ್ಲಿ ಗ್ಯಾಪ್-ಅಪ್ ಓಪನಿಂಗ್ ಅಂದರೆ ಹೆಚ್ಚಿನ ಏರಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ $5,300 ರಿಂದ $5,350 ಡಾಲರ್‌ಗೆ ಅಥವಾ ಅದಕ್ಕಿಂತಲೂ ಹೆಚ್ಚಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
- ಯುದ್ಧದ ಭೀತಿ ಹೆಚ್ಚಾದರೆ ಅಥವಾ ಬೇರೆಲ್ಲಾದರು ದಾಳಿಗದಾರೆ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications