ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ರಿಯಾಲ್ಟಿ ಸಂಸ್ಥೆಗಳಾದ ಸುರಾನಾ ಗ್ರೂಪ್ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ( ಮನಿಲಾಂಡರಿಂಗ್)ದಲ್ಲಿ ನಟ ಘಟ್ಟಮನೇನಿ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಮಾತ್ರವಲ್ಲದೇ ಇದೇ ಬಾನುವಾರ ಮಹೇಶ್ ಬಾಬು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ.
ಮಾಹಿತಿಗಳ ಪ್ರಕಾರ, ಸುರಾನಾ ಗ್ರೂಪ್‌ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟ 5.5 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ. ಇದರ ಜೊತೆಗೆ, ಸಾಯಿ ಸೂರ್ಯ ಡೆವಲಪರ್ಸ್ ಪ್ರಚಾರ ಕಾರ್ಯಗಳಿಗಾಗಿ ಮಹೇಶ್ ಬಾಬು ಅವರಿಗೆ 2.5 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಮತ್ತು 3.4 ಕೋಟಿ ರೂ.ಗಳನ್ನು ಚೆಕ್ ಮೂಲಕ ಪಾವತಿಸಿದೆ. ಒಟ್ಟಾರೆಯಾಗಿ 5.9 ಕೋಟಿ ರೂ.ಗಳನ್ನು ನೀಡಲಾಗಿದೆ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಮಹೇಶ್ ಬಾಬು ಅವರಿಗೆ ನೀಡಲಾದ ಈ ಸಂಭಾವನೆಯ ಕುರಿತು ತನಿಖೆ ನಡೆಸಲಿದೆ. ಆಂಗ್ಲಮಾಧ್ಯಮಗಳು ವರದಿ ಮಾಡಿರುವಂತೆ, 'ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಪ್ರಾರಂಭಿಸಿದ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪ್ರಚಾರ ಮಾಡಲು ಮಹೇಶ್ ಅನುಮೋದನೆ ನೀಡಿದ್ದರು ಎನ್ನಲಾಗಿದೆ
ಇತ್ತೀಚೆಗೆ ಸುರಾನಾ ಗ್ರೂಪ್‌ನ ಅಂಗಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಭಾಗ್ಯನಗರ ಪ್ರಾಪರ್ಟೀಸ್‌ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ, ಸುಮಾರು 100 ಕೋಟಿ ರೂ. ಮೌಲ್ಯದ ಅಕ್ರಮ ಹಣ ವಹಿವಾಟುಗಳನ್ನು ಪತ್ತೆಹಚ್ಚಲಾಗಿದ್ದು, 74.5 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ, ಹೈದರಾಬಾದ್‌ನ ಜುಬಿಲಿ ಹಿಲ್ಸ್ ಮತ್ತು ಬೋವೆನ್‌ಪಲ್ಲಿ ಹಾಗೂ ಮಾಧಾಪುರದಲ್ಲಿರುವ ಸುರಾನಾ ಗ್ರೂಪ್‌ನ ಮುಖ್ಯಸ್ಥ ನರೇಂದ್ರ ಸುರಾನ ಮತ್ತು ಅವರ ಮ್ಯಾನೇಜಿಂಗ್ ಡೈರೆಕ್ಟರ್ ದೇವೇಂದ್ರ ಸುರಾನ ಅವರ ಮನೆಗಳಲ್ಲಿ ಮುಖ್ಯವಾದ ಸಾಕ್ಷಿಗಳು ಸಿಕ್ಕಿವೆ. ಸಾಯಿ ಸೂರ್ಯ ಡೆವಲಪರ್ಸ್‌ನ ಕಚೇರಿಗಳಿಂದಲೂ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ.
ಸುರಾನಾ ಗ್ರೂಪ್ ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ದೊಡ್ಡ ಮಟ್ಟದ ಮೋಸದಲ್ಲಿ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಅಪಾದಿಸಿದೆ. ತನಿಖೆಯ ಅಂಗವಾಗಿ, ಕಳೆದ ಬುಧವಾರ ಹೈದರಾಬಾದ್ ಮತ್ತು ಸಿಕಂದರಾಬಾದ್‌ನಲ್ಲಿ ನಾಲ್ಕು ಕಡೆಗಳಲ್ಲಿ ಶೋಧ ನಡೆಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.ಏಪ್ರಿಲ್ 16ರಂದು ಇಡಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಶೋಧ ನಡೆಸಿದ್ದರು.
ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್‌ನ ನಿರ್ದೇಶಕ ನರೇಂದ್ರ ಸುರಾನ, ಸಾಯಿ ಸೂರ್ಯ ಡೆವಲಪರ್ಸ್‌ನ ಮಾಲೀಕ ಕೆ ಸತೀಶ್ ಚಂದ್ರ ಗುಪ್ತಾ ಮತ್ತು ಇತರರ ವಿರುದ್ಧ ತೆಲಂಗಾಣ ಪೊಲೀಸರು ದಾಖಲಿಸಿರುವ ಹಲವಾರು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಪ್ಲಾಟ್‌ಗಳ ಮಾರಾಟಕ್ಕಾಗಿ ಮುಂಗಡದ ಹೆಸರಿನಲ್ಲಿ ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಿಸಿ ವಂಚಿಸಿದ್ದಾರೆ ಎಂದು ಇಡಿ ತನ್ನ ಹೇಳಿಕೆ ತಿಳಿಸಿದೆ.
ಈ ಇಬ್ಬರು ಆರೋಪಿಗಳು ಅನುಮತಿ ಇಲ್ಲದ ಲೇಔಟ್‌ಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡಿ, ಒಂದೇ ನಿವೇಶನವನ್ನು ಹಲವು ಬಾರಿ ಬೇರೆಯವರಿಗೆ ಮಾರಿ ಮತ್ತು ನೋಂದಣಿ ಮಾಡಿಕೊಡುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಗ್ರಾಹಕರನ್ನು ಮೋಸ ಮಾಡಿದ್ದಾರೆ. ಸರಿಯಾದ ಒಪ್ಪಂದಗಳಿಲ್ಲದೆ ಪಾವತಿಗಳನ್ನು ಸ್ವೀಕರಿಸಿದ್ದಾರೆ ಮತ್ತು ಪ್ಲಾಟ್ ನೋಂದಣಿಗಳ ಸುಳ್ಳು ಭರವಸೆಗಳನ್ನು ಒಳಗೊಂಡ ವಂಚನೆ ಯೋಜನೆಗಳನ್ನು ರೂಪಿಸಿದ್ದಾರೆ ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಹೇಳಿದೆ.
ಜಾಹೀರಾತಿನಿಂದ ಮಹೇಶ್ ಬಾಬುಗೆ ಸಂಕಷ್ಟ
ಮಹೇಶ್ ಬಾಬು ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್‌ನ ಜಾಹೀರಾತಿನಲ್ಲಿ ಈ ಹಿಂದೆ ಅಭಿನಯಿಸಿದ್ದರು. ಈ ಮೂಲಕ್ ಅಕಂಪನಿಯ ಹೂಡಿಕೆಗಳ ಮೇಲೆ ಮಹೇಶ್ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಲವಾರು ಮಂದಿ ದೂರು ನೀಡುವಾಗ ಸಿನಿಮಾ ತಾರೆ ಮಹೇಶ್ ಬಾಬು ಅವರ ಜಾಹೀರಾತು ನಂಬಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮಹೇಶ್ ಬಾಬು ಅವರಿಗೆ ತೊಂದರೆ ಉಂಟಾಗಿದೆ.


Click it and Unblock the Notifications