ಮಾಸಿಕ ಆದಾಯ ಯೋಜನೆ: ಕಡಿಮೆ ಹೂಡಿಕೆ, ಉತ್ತಮ ಆದಾಯ..ಪೋಸ್ಟ್ ಆಫೀಸ್‌ನಲ್ಲಿದೆ ಬೆಸ್ಟ್‌ ಸ್ಕೀಮ್..!

ಭಾರತೀಯ ಅಂಚೆ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಅವುಗಳೆಲ್ಲ ಜನ ಸಾಮಾನ್ಯರಿಗೆ ಅತಿಹೆಚ್ಚು ಉಪಯೋಗಕರವಾದ ಯೋಜನೆಗಳಾಗಿವೆ. ಇಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಒಂದೇ ಬಾರಿ ದೊಡ್ಡ ಮೊತ್ತದ ನಿಧಿಯನ್ನು ಹಿಂತಿರುಗಿ ಪಡೆಯಬಹುದು. ಅದರಲ್ಲೂ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹೆಚ್ಚು ಉಪಯೋಗಗಳಾಗಿವೆ ಈ ಪೋಸ್ಟ್ ಆಫಿಸ್‌ನ ಯೋಜನೆಗಳು. ಇದರ ಜೊತೆಗೆ ಮತ್ತೊಂದು ಉಪಯುಕ್ತವಾದ ಯೋಜನೆ ಬಗ್ಗೆ ತಿಳಿಯಲೇಬೇಕು. ಅದು ಬೇರ್‍ಯಾವುದೂ ಅಲ್ಲ..ಮಾಸಿಕ ಆದಾಯ ಯೋಜನೆ.. ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡಿದರೆ ಮಾಸಿಕವಾಗಿ ಉತ್ತಮ ಆದಾಯ ಪಡೆಯಬಹುದು. ಈ ಯೋಜನೆ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಇಲ್ಲಿ ತಿಳಿಯೋಣ.

ಪೋಸ್ಟ್‌ ಆಫೀಸ್‌ನ ಮಾಸಿಕ ಆದಾಯ ಯೋಜನೆ ಬಗ್ಗೆ ತಿಳಿಯಿರಿ..!

ಮಾಸಿಕ ಆದಾಯ ಯೋಜನೆ ಎಂದರೇನು..?

ಮಾಸಿಕ ಆದಾಯ ಯೋಜನೆಯು ಒಂದು ನಿಗದಿತ ಆದಾಯ ನೀಡುವ ಹೂಡಿಕೆಯ ಯೋಜನೆಯಾಗಿದೆ. ಇದು ಆರ್ಥಿಕ ಭದ್ರತೆ ನೀಡುವ ಹೂಡಿಕೆಯಾಗಿದೆ ಎಂದರೂ ತಪ್ಪಾಗಲ್ಲ.ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ, ಪ್ರತಿ ತಿಂಗಳು ನಿಗದಿತ ಬಡ್ಡಿ ಪಡೆಯಬಹುದು. ಇದು ನಿಮ್ಮ ನಿತ್ಯ ಜೀವನದಲ್ಲಿ ಸ್ಥಿರ ಆದಾಯವನ್ನು ಹೊಂದಲು ಸಹಾಯ ಮಾಡುತ್ತದೆ. ಈ ಯೋಜನೆಯು ನಿವೃತ್ತಿ ಹೊಂದಿದವರಿಗೆ ಹಾಗೂ ಮಾಸಿಕವಾಗಿ ಆದಾಯ ಬೇಕು ಎಂದು ಬಯಸುವ ಯಾರಿಗೇ ಆದರೂ ಉಪಯುಕ್ತವಾಗಿದೆ.

ಮಾಸಿಕ ಆದಾಯ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು:

1. ಭದ್ರಿತ ಹೂಡಿಕೆ ಯೋಜನೆ:

ಈ ಮಾಸಿಕ ಆದಾಯ ಯೋಜನೆಯು ಭಾರತ ಸರ್ಕಾರದಿಂದ ಅನುಮೋದನೆ ಪಡೆದಿದೆ. ಹಾಗೂ ಪೋಸ್ಟ್‌ ಆಫಿಸ್‌ ಹಾಗೂ ಬ್ಯಾಂಕ್‌ಗಳಿಂದ ಇದು ಕಾರ್ಯನಿರ್ವಹಿತ ಯೋಜನೆಯಾಗಿದೆ. ಇದಕ್ಕೆ ಯಾವುದೇ ಬ್ಯಾಂಕ್ ಅಥವಾ ಭಾರತೀಯ ಅಂಚೆ ಕಚೇರಿ ಮೂಲಕ, ಮೂಲಕ ಹೂಡಿಕೆ ಮಾಡಬಹುದು. ಅಲ್ಲದೇ ಇದು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.

2. ಮಾಸಿಕ ನಿಗದಿತ ಆದಾಯ:

ಈ ಯೋಜನೆಯಿಂದ ಮಾಸಿಕವಾಗಿ ನಿಗದಿತ ಆದಾಯ ಅಂದರೆ, ನೀವು ಹೂಡಿಕೆ ಮಾಡಿದ ಮೊತ್ತದ ಮೇಲೆ ನಿಗದಿತ ಬಡ್ಡಿದರ ಲಭ್ಯವಿರುತ್ತದೆ. ಇದರಿಂದ ಪ್ರತಿ ತಿಂಗಳು ಹೂಡಿಕೆದಾರರು ನಿಗದಿತ ಮೊತ್ತದ ಆದಾಯವನ್ನು ಪಡೆಯಬಹುದು. ಅಲ್ಲದೇ ನಿವೃತ್ತಿ ಹೊಂದಿದವರಿಗೆ ಅಥವಾ ನಿರಂತರ ಆದಾಯ ಬೇಕಾದವರಿಗೆ ಇದು ಬಹಳ ಉಪಯುಕ್ತವಾಗಿದೆ.

3. ಹೂಡಿಕೆ ಅವಧಿ ಮತ್ತು ಬಡ್ಡಿದರ:

ಸಾಮಾನ್ಯವಾಗಿ ಈ ಯೋಜನೆಯ ಹೂಡಿಕೆ ಅವಧಿ 5 ವರ್ಷ ಅಥವಾ 10 ವರ್ಷಗಳ ಅವಧಿಗೆ ಇರುತ್ತದೆ. ಅವಧಿ ಮುಗಿದ ನಂತರ ತಮ್ಮ ಮೂಲ ಮೊತ್ತವನ್ನು ಹಿಂತಿರುಗಿಸಬಹುದು. ಮತ್ತು ಈ ಯೋಜನೆಯಲ್ಲಿ ಬಡ್ಡಿದರವು ಸರ್ಕಾರದ ನಿಯಮಾನುಸಾರ ನಡೆಯುತ್ತದೆ. ಸಾಮಾನ್ಯವಾಗಿ 6% - 8% ಶೇಕಡ ದರದ ನಡುವೆ ಬಡ್ಡಿದರ ಇರುತ್ತದೆ. ಅನುಮಾನಿತ ಬಡ್ಡಿದರವನ್ನು ಪ್ರತಿ ತ್ರೈಮಾಸಿಕ ಸರ್ಕಾರ ನಿಗದಿ ಮಾಡುತ್ತದೆ. ಸದ್ಯ ಈ ಯೋಜನೆಯಲ್ಲಿ ಪೋಸ್ಟ್‌ ಆಫೀಸ್‌ 7.4% ಶೇಕಡಾ ಬಡ್ಡಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ಬಡ್ಡಿದರದ ಶೇಕಡ ಪ್ರಮಾಣ ಬದಲಾಗಲೂಬಹುದು ಬದಲಾಗದೆಯಾಗದೆಯೂ ಇರಬಹುದು.

5. ಹೂಡಿಕೆಯ ಮಿತಿ:

ಸ್ವತಂತ್ರ ಖಾತೆ ಹೊಂದಿರುವವರು ಕನಿಷ್ಠ ₹1,000 ಮತ್ತು ಗರಿಷ್ಠ ₹9 ಲಕ್ಷವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆ ಹೊಂದಿರುವವರು ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಜಂಟಿ ಖಾತೆಯಲ್ಲಿ ಹೂಡಿಕೆಯ ಆದಾಯವನ್ನು ಎಲ್ಲಾ ಖಾತೆದಾರರ ಮಧ್ಯೆ ಹಂಚಿಕೊಳ್ಳಲಾಗುತ್ತದೆ. 5 ಅಥವಾ 10 ವರ್ಷಗಳ ಅವಧಿ ಪೂರ್ಣಗೊಂಡ ನಂತರ, ನೀವು ಹೂಡಿಸಿದ ಮೂಲ ಮೊತ್ತವನ್ನು ಹಿಂತಿರುಗಿಸಿಕೊಳ್ಳಬಹುದು. ಹಾಗೆಯೇ ಬಡ್ಡಿಯನ್ನು ಪ್ರತಿ ತಿಂಗಳು ಪಡೆಯಬಹುದು ಅಥವಾ ಅವಧಿ ಮುಗಿದ ನಂತರ ಒಟ್ಟಾಗಿ ತೆಗೆದುಕೊಳ್ಳಬಹುದು.

7. ತೆರಿಗೆ ನಿಯಮಗಳು:

ಮಾಸಿಕ ಆದಾಯ ಯೋಜನೆಯ ಹೂಡಿಕೆಗೆ ಆದಾಯ ತೆರಿಗೆಯ ವಿನಾಯಿತಿ ಇರುವುದಿಲ್ಲ. TDS ಕಡಿತವೂ ಇಲ್ಲ. ನೀವು ಸ್ವತಃ ತೆರಿಗೆ ಪಾವತಿ ಮಾಡಬೇಕು. ಹಾಗೆಯೇ 3 ವರ್ಷ ಮುಗಿಯುವ ಮುನ್ನ ಹಣವನ್ನು ಹಿಂತಿರುಗಿಸಲು ಅವಕಾಶವಿಲ್ಲ. 3-5 ವರ್ಷಗಳ ನಡುವೆ ಹಣ ಹಿಂಪಡೆಯಲು ಬಯಸಿದರೆ, 1% ದಂಡ ವಿಧಿಸಲಾಗುತ್ತದೆ.

8. ಈ ಯೋಜನೆಗೆ ಅರ್ಹರು ಯಾರು..?

ನಿವೃತ್ತಿ ಹೊಂದಿದ ಉದ್ಯೋಗಿಗಳು ತಿಂಗಳಿಗೆ ಇಂತಿಷ್ಟು ಆದಾಯ ಪಡೆಯಲು ಬಯಸಿದರೆ ಅವರು ಹೂಡಿಕೆ ಮಾಡಬಹುದು. 3 ಗೃಹಿಣಿಯರು ಅಥವಾ ಉದ್ಯೋಗ ಮುಕ್ತ ವ್ಯಕ್ತಿಗಳು ಅಲ್ಪ ಬಡ್ಡಿದರದಲ್ಲಿ ಸುರಕ್ಷಿತ ಹೂಡಿಕೆ ಮಾಡಬಹುದು. ಪಾರಂಪರಿಕ ಬ್ಯಾಂಕ್ ಠೇವಣಿಗಳಿಗೆ ಪರ್ಯಾಯ ಆಯ್ಕೆ ಹುಡುಕುವವರಿಗೂ ಈ ಯೋಜನೆ ಉತ್ತಮವಾಗಿದೆ.

ನಿವೃತ್ತಿ ನಂತರ ಆರ್ಥಿಕ ಭದ್ರತೆ ಎನ್ನುವುದು ಬೇಕೇ ಬೇಕು. ಇದಕ್ಕಾಗಿ ಮಧ್ಯಮ ವರ್ಗದ ಜನರು ಹಾಗೂ ಎಲ್ಲಾ ವರ್ಗದ ಜನರಿಗೆ ಸರಿಯಾದ ಹಣಕಾಸು ಯೋಜನೆ ಅತಿಮುಖ್ಯ. ಹೀಗಾಗಿ ಭವಿಷ್ಯದ ನಿಧಿಯನ್ನು ಮಾಸಿಕ ಆದಾಯ ಯೋಜನೆಯಂತಹ, ಪೋಸ್ಟ್‌ ಆಫೀಸ್‌ ಯೋಜನೆಗಳೊಂದಿಗೆ ಸುರಕ್ಷಿತಗೊಳಿಸಿಕೊಳ್ಳಬೇಕು. ಹೀಗಾಗಿ ಖಚಿತ ಆದಾಯವನ್ನು ಸುಲಭವಾಗಿ ಪಡೆಯಲು ಈ ಯೋಜನೆಯನ್ನು ಬಳಸಿಕೊಳ್ಳುವುದು ಅತಿಮುಖ್ಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+