ಸ್ವೀಟ್ ಸ್ಪಾಟ್'ನಲ್ಲಿ ಭಾರತೀಯ ಆರ್ಥಿಕತೆ: ಮೂಡೀಸ್‌ ವರದಿ ಹೀಗೆ ಹೇಳಿದ್ದೇಕೆ?

20ನೇ ಶತಮಾನದಲ್ಲಿ ಚೀನಾ ಯಾವ ರೀತಿಯ ಆರ್ಥಿಕ ಪ್ರಗತಿ ಸಾಧಿಸಿತ್ತು ಎಂಬುದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. 2002-02 ರ ಬಳಿಕ ಆರಂಭವಾದ ಚೀನಾದ ಅಭಿವೃದ್ದಿಯ ನಾಗಾಲೋಟ ಸದ್ಯ ಕೊಂಚ ಹಿನ್ನಡೆ ಕಂಡಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಸದ್ಯ ಚೀನಾದಿಂದ ಅನೇಕ ಉದ್ಯಮಗಳು ಭಾರತ ಹಾಗೂ ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಆರಂಭಗೊಳ್ಳುತ್ತಿದ್ದು, ಚೀನಾದ ಅಭಿವೃದ್ದಿ ದರ ಕುಸಿಯುತ್ತಿದೆ. ಅತ್ತ ಭಾರತದ ಪ್ರಗತಿ ದರ ಕಳೆದ ಕೆಲವು ತಿಂಗಳುಗಳಿಂದ ಭಾರೀ ಏರಿಕೆ ದಾಖಲಾಗುತ್ತಿದೆ. ಅದೂ ಅಲ್ಲದೆ ಅನೇಕ ಆರ್ಥಿಕ ಸಂಸ್ಥೆಗಳು ಕೂಡ ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕ ಪ್ರಗತಿ ದರಗಳ ಬಗ್ಗೆ ಮುನ್ಸೂಚನೆ ವರದಿ ಪ್ರಕಟಿಸುತ್ತಲೇ ಇರುತ್ತದೆ. ವಿಶ್ವದ ಖ್ಯಾತ ಆರ್ಥಿಕ ಸಂಸ್ಥೆಗಳಲ್ಲಿ ಒಂದಾಗಿರುವ ಮೂಡೀಸ್‌ ಸದ್ಯ ಪ್ರಕಟಸಿರುವ ವರದಿಯಲ್ಲಿ 2024 ರಲ್ಲಿ ಭಾರತದ ಜಿಡಿಪಿ ಪ್ರಗತಿ ದರವು 7.2 ರಷ್ಟು ಇರಲಿದೆ ಎಂದು ಭವಿಷ್ಯ ನುಡಿದಿದೆ.

ಈ ಮೂಲಕ ಭಾರತದ ಆರ್ಥಿಕ ಸ್ಥಿತಿಯು ಅನುಕೂಲಕರ ಆರ್ಥಿಕ ಸ್ಥಿತಿಯಲ್ಲಿದೆ ಎಂದು ತಿಳಿಸಿದೆ. ಆದರೆ ದೇಶದಲ್ಲಿ ಕೊಂಚ ಹಣದುಬ್ಬರದ ಪರಿಸ್ಥಿತಿ ಇದ್ದು, ಪರಿಣಾಮ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ಹಂತದಲ್ಲಿ ಬಿಗಿಯಾದ ಹಣಕಾಸು ನೀತಿಯನ್ನು ನಿರ್ವಹಿಸುವ ಸಾಧ್ಯತೆ ಇದೆ ಎಂದು ಕೂಡ ಮೂಡೀಸ್‌ ಎಚ್ಚರಿಕೆ ನೀಡಿದೆ. ಇನ್ನು ಇದಕ್ಕೂ ಮುನ್ನ ಏಜೆನ್ಸಿಯು 2024 ರಲ್ಲಿ 7.2 ಶೇಕಡಾ ಬೆಳವಣಿಗೆಯನ್ನು ಮುನ್ಸೂಚಿಸಿದ್ದರೆ ನಂತರ 2025 ರಲ್ಲಿ 6.6 ಶೇಕಡಾ ಮತ್ತು 2026 ರಲ್ಲಿ 6.5 ಶೇಕಡಾ ಇರುವ ಸಾಧ್ಯತೆ ಇದೆ ಎಂದು ಅಂದಾಜು ವ್ಯಕ್ತಪಡಿಸಿದೆ. ಇದಕ್ಕೆ ಸೂಕ್ತವಾದ ಕಾರಣವನ್ನು ಕೂಡ ಅದು ನೀಡಿದೆ.

ಸ್ವೀಟ್ ಸ್ಪಾಟ್'ನಲ್ಲಿ ಭಾರತೀಯ ಆರ್ಥಿಕತೆ

ಹಲವು ಧನಾತ್ಮಕ ಆರ್ಥಿಕ ಅಂಶಗಳು

ಬಲವಾದ ಆರ್ಥಿಕ ಮೂಲಭೂತ ಅಂಶಗಳಾದ ಆರೋಗ್ಯಕರ ಕಾರ್ಪೊರೇಟ್ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ಗಳು, ಬಲವಾದ ಬಾಹ್ಯ ಸ್ಥಾನ ಮತ್ತು ಸಾಕಷ್ಟು ವಿದೇಶಿ ವಿನಿಮಯ ಮೀಸಲು ಮುಂತಾದ ಅಂಶಗಳು ಭಾರತದ ಬೆಳವಣಿಗೆಯ ದೃಷ್ಟಿಕೋನವನ್ನು ಹೆಚ್ಚಿಗೆ ಮುನ್ನಡೆ ತಂದುಕೊಟ್ಟಿದೆ. ಇತ್ತೀಚಿಗಿನ ದಿನಗಳಲ್ಲಿ ಭಾರತದಲ್ಲಿ ಹಣದುಬ್ಬರ ಪ್ರಮಾಣ ಕೊಂಚ ಏರಿಕೆ ಕಂಡಿದ್ದರೂ ಆರ್‌ಬಿಐ ಗುರಿಯತ್ತ ಇದು ಮಧ್ಯಮವಾಗಲಿದೆ ಎಂದು ಮೂಡೀಸ್‌ ಅಂದಾಜಿಸಿದೆ. ಅಲ್ಲದೆ ಇದಕ್ಕೆ ಸೂಕ್ತ ಕಾರಣವನ್ನು ಕೂಡ ನೀಡಿರುವ ಸಂಸ್ಥೆ, ಭಾರತದಲ್ಲಿ ಸದ್ಯ ಅಗಾಧ ಪ್ರಮಾಣದಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದ್ದು, ಇದರಿಂದ ಹಣದುಬ್ಬರ ಪ್ರಮಾಣ ನಿಯಂತ್ರಣದಲ್ಲಿ ಇರಲಿದೆ ಎಂದು ತಿಳಿಸಿದೆ. ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿಗಿಗೆ ಚಿಲ್ಲರೆ ಹಣದುಬ್ಬರವು 14 ತಿಂಗಳ ಗರಿಷ್ಠ 6.21 ಪ್ರತಿಶತಕ್ಕೆ ಏರಿತು. ಅಲ್ಲದೆ ತರಕಾರಿ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದಾಗಿ ಇದು RBI ಯ ಮೇಲಿನ ಗರಿಷ್ಟ ಮಿತಿಯನ್ನು ಮೀರಿದೆ. ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಈಗಲೂ ಭಾರೀ ಮಳೆ ಮುಂದುವರೆದಿದ್ದು, ಪರಿಣಾಮ ತರಕಾರಿ ಬೆಳೆಗಳು ನಾಶಗೊಂಡ ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

ಬಾಹ್ಯ ವಿಚಾರಗಳಿಂದ ಹಣದುಬ್ಬರದ ಮೇಲೆ ಪರಿಣಾಮ

ಆಹಾರ ಬೆಲೆಗಳ ಏರಿಳಿತದಿಂದಾಗಿ ಹಣದುಬ್ಬರದ ಪ್ರಮಾಣವು ಹೆಚ್ಚು ಪರಿಣಾಮ ಬೀರಲಿದ್ದು, ಅಲ್ಲದೆ ಸದ್ಯ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ವಿಷಮ ಪರಿಸ್ಥಿತಿ ಕೂಡ ಪ್ರಭಾವ ಬೀರಬಹುದು ಎಂದು ತಿಳಿಸಿದೆ. ಆದರೆ ಹವಾಮಾನ ವೈಪರೀತ್ಯಗಳು ಹೆಚ್ಚುವರಿ ಹಣದುಬ್ಬರ ಅಪಾಯಗಳನ್ನು ಉಂಟುಮಾಡಬಹುದು ಎಂದು ಕೂಡ ಸಂಸ್ಥೆ ಎಚ್ಚರಿಕೆ ನೀಡಿದೆ. ಸದ್ಯದ ಹಣದುಬ್ಬರ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಆರ್‌ಬಿಐ ತನ್ನ ಆರ್ಥಿಕ ನಿಲುವಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ಅಕ್ಟೋಬರ್‌ನಲ್ಲಿ ತನ್ನ ರೆಪೊ ದರವನ್ನು 6.5 ಪ್ರತಿಶತದಲ್ಲಿ ಸ್ಥಿರವಾಗಿ ಇರಿಸಿದ್ದು, 2024 ರ ವೇಳೆಗೆ RBI ತುಲನಾತ್ಮಕವಾಗಿ ಬಿಗಿಯಾದ ಹಣಕಾಸು ನೀತಿಯನ್ನು ನಿರ್ವಹಿಸುತ್ತದೆ ಎಂದು ಮೂಡೀಸ್ ನಿರೀಕ್ಷಿಸಿದೆ.

ಮುಂದಿನ ತಿಂಗಳು ಹಣಕಾಸು ನೀತಿ ಸಮಿತಿ ಸಭೆ

ಸದ್ಯ ಭಾರತದಲ್ಲಿ ಹಣದುಬ್ಬರ ಪ್ರಮಾಣ ಕೊಂಚ ಏರಿಕೆ ಉಂಟಾಗಿರುವುದು ಕೂಡ ಆತಂಕಕಾರಿ ಅಂಶವೆನ್ನಲಾಗಿದೆ. ಹಾಗಾಗಿ ಮುಂದಿನ ತಿಂಗಳು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯು ಮುಂದಿನ ತಿಂಗಳು ನಿಗದಿಯಾಗಲಿದ್ದು, ಹಣದುಬ್ಬರ ಏರಿಕೆಯಾಗಿರುವುದರಿಂದ ದರ ಕಡಿತವು ಅಸಾಧ್ಯ ಎನ್ನಲಾಗಿದೆ. 2025-26ರ ತನ್ನ ಗ್ಲೋಬಲ್ ಮ್ಯಾಕ್ರೋ ಔಟ್‌ಲುಕ್‌ನಲ್ಲಿ, ನಡೆಯುತ್ತಿರುವ ಹಬ್ಬದ ಋತುವಿನಲ್ಲಿ ಹೆಚ್ಚುತ್ತಿರುವ ಖರ್ಚು ಮತ್ತು ಹೆಚ್ಚುತ್ತಿರುವ ಗ್ರಾಮೀಣ ಬೇಡಿಕೆಯಿಂದ ಮನೆಯ ಬಳಕೆ ಹೆಚ್ಚುತ್ತಲೇ ಇರುತ್ತದೆ ಎಂದು ಮೂಡೀಸ್ ಯೋಜಿಸಿದೆ. ಭಾರತದ ನೈಜ GDP 2024 Q2 ರಲ್ಲಿ 6.7 ಶೇಕಡಾ ವರ್ಷದಿಂದ ವರ್ಷಕ್ಕೆ (YoY) ಬೆಳೆದಿದೆ, ಇದು ಬಲವಾದ ಮನೆಯ ಬಳಕೆ, ದೃಢವಾದ ಹೂಡಿಕೆ ಮತ್ತು ಘನ ಉತ್ಪಾದನಾ ಚಟುವಟಿಕೆಯಿಂದ ಬೆಂಬಲಿತವಾಗಿದೆ. ಈ ಬೆಳವಣಿಗೆಯ ಆ ವೇಗವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಿಗೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕಾದ ಚುನಾವಣಾ ಫಲಿತಾಂಶ ಪರಿಣಾಮ

ಸದ್ಯ ನಡೆದಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಜನವರಿ ತಿಂಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗಾಗಿ ಸಹಜವಾಗಿಯೇ ಅಮೆರಿಕಾದ ಚುನಾವಣಾ ಫಲಿತಾಂಶ ಜಾಗತಿಕ ಮಟ್ಟದ ಮೇಲೆ ಬೀರಲಿದೆ. ಪರಿಣಾಮ ಈ ಚುನಾವಣಾ ಫಲಿತಾಂಶ ಕೂಡ ಜಾಗತಿಕ ಆರ್ಥಿಕ ವಿಘಟನೆಯನ್ನು ಹೆಚ್ಚಿಸಬಹುದು ಎಂದು ಮೂಡೀಸ್‌ ತಿಳಿಸಿದೆ. ಅದರಲ್ಲೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವಿಶೇಷವಾಗಿ ಯುಎಸ್ ಮತ್ತು ಚೀನಾ ನಡುವಿನ ಜಾಗತಿಕ ಆರ್ಥಿಕ ದೃಷ್ಟಿಕೋನಕ್ಕೆ ಗಮನಾರ್ಹ ಅಪಾಯಗಳಾಗಿ ಉಳಿದಿವೆ. ದೀರ್ಘಾವಧಿಯ ಭೌಗೋಳಿಕ ವಿಘಟನೆಯು ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+