ನವದೆಹಲಿ, ಜುಲೈ 18: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾದಲ್ಲಿ ಸಾಕಷ್ಟು ಸ್ಟಾರ್ಟಪ್‌ಗಳು ಹುಟ್ಟುಕೊಂಡಿದ್ದು, ಅದರಡಿ ರಕ್ಷಣಾ ವಲಯದಲ್ಲಿಯೂ ಸಾವಿರಾರು ನವೋದ್ಯಮಗಳು ರಕ್ಷಣಾ ವಲಯಕ್ಕೆ ಬೆನ್ನಲುಬಾಗಿ ನಿಂತಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜು.23ರಂದು ಬಹು ನಿರೀಕ್ಷೆಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ದೇಶದ ಭವಿಷ್ಯದ ಪ್ರಗತಿ, ತೆರಿಗೆ ಕಡಿತ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳ ಉತ್ತೇಜನಕ್ಕೆ ಸಂಬಂಧಿಸಿದಂತೆ ಈ ಬಾರಿಯ ಬಜೆಟ್ ಬಗ್ಗೆ ಐಟಿ ವಲಯದಿಂದ ಹಿಡಿದು ಡಿಜಿಟಲ್ ರಕ್ಷಣಾ ವಲಯದವರೆಗೆ ಎಲ್ಲ ಕ್ಷೇತ್ರಗಳ ಉದ್ದಿಮೆದಾರರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

ಅದರಂತೆ ಈ ಬಾರಿಗೆ ಬಜೆಟ್‌ನಲ್ಲಿ ಅರ್ಥ ಸಚಿವರು ರಕ್ಷಣಾ ವಲಯದ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ ಹೊಸ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ರಕ್ಷಣಾ ವಲಯದ ಸ್ಟಾರ್ಟಪ್‌ಗಳು ಈಗಾಗಲೇ ದೇಶದಲ್ಲಿ ರಕ್ಷಣಾ ಸಾಮಗ್ರಿಗಳ ಪೂರೈಕೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿವೆ. ಹೀಗಿರುವಾಗ, ರಕ್ಷಣಾ ವಲಯದಲ್ಲಿನ ಸ್ಟಾರ್ಟಪ್‌ಗಳ ಬೆಂಬಲಕ್ಕೆ ಡಿಫೆನ್ಸ್ ಎಕ್ಸೆಲೆನ್ಸಿ(ಐಡಿಇಎಕ್ಸ್), ತಂತ್ರಜ್ಞಾನ ಅಭಿವೃದ್ಧಿ ಫಂಡ್(ಟಿಡಿಎಫ್) ಹಾಗೂ ಹೊಸ ಉತ್ಪನ್ನಗಳ ತಯಾರಿಕೆ ಸಂಬಂಧಿಸಿದ ಮೇಕ್ ಪರಿಕಲ್ಪನೆಯಡಿ ಹೊಸ ಘೋಷಣೆಗಳನ್ನು ಹಣಕಾಸು ಸಚಿವರು ಮಾಡುವ ನಿರೀಕ್ಷೆಯಿದೆ.
ಅಂದರೆ, ರಕ್ಷಣಾ ವಲಯದಲ್ಲಿ ಹೊಸ ಅಭಿವೃದ್ಧಿ, ತಂತ್ರಜ್ಞಾನಗಳ ಅಳವಡಿಕೆಗೆ ಸಂಬಂಧಿಸಿದಂತೆ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡುವ ನಿರೀಕ್ಷೆಯಿದೆ. ಆ ಮೂಲಕ ರಕ್ಷಣಾ ವಲಯದ ಆರ್ ಅಂಡ್ ಡಿಗೆ ಹೆಚ್ಚಿನ ಅನುದಾನವನ್ನು ನೀಡುವ ಸಾಧ್ಯತೆಯಿದೆ ಎಂದು ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೆಟ್ ಲಿಮಿಟೆಡ್‌ನ ಸಂಸ್ಥಾಪಕ ಕ್ಯಾಪ್ಟನ್ ನಿಕುಂಜಿ ಪರಸ್ಕಾರ್ ಹೇಳಿದ್ದಾರೆ.
ಸರ್ಕಾರವು ನೀಡುವ ಆರ್ ಅಂಡ್ ಡಿಗೆ ಸಂಬಂಧಿಸಿದ ಶೇ.25ರಷ್ಟು ಅನುದಾನದಿಂದ ಖಾಸಗಿ ವಲಯದ ರಕ್ಷಣಾ ಸಂಸ್ಥೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೀತಿಯ ಅನುದಾನದಿಂದ ಸಣ್ಣ ಮಟ್ಟದ ಸ್ಟಾರ್ಟಪ್‌ಗಳು ಕೂಡ ರಕ್ಷಣಾ ವಲಯದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಚಟುವಟಿಕೆಗಳಿಗೆ ಕೈಜೋಡಿಸುವುದಕ್ಕೆ ಆರ್ಥಿಕ ಉತ್ತೇಜನವಾಗಲಿದೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಸ್ಟಾರ್ಟಪ್‌ಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುಕೂಲ, ಅನುದಾನವನ್ನು ನಿರೀಕ್ಷಿಸಲಾಗಿದೆ. ಸರ್ಕಾರದ ಅನುದಾನದಿಂದ ರಕ್ಷಣಾ ವಲಯದಲ್ಲಿ ತಂತ್ರಜ್ಞಾನದ ಮೌಲ್ಯವರ್ಧನೆಯ ಜತೆಗೆ ಹೊಸ ಮಾದರಿಯ ಆವಿಷ್ಕಾರಗಳಿಗೆ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರದ ಈ ಬಾರಿಯ ಬಜೆಟ್ ಕೈಗಾರಿಕಾ ವಲಯದ ಪಾಲುದಾರರು ಹಾಗೂ ಸರಕಾರದ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕ್ರಮಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪರಸ್ಕರ್ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications