ಹೆಚ್ಚಿನ ಉದ್ಯೋಗಗಳು, ತಂತ್ರಜ್ಞಾನ, ಜೀವನಶೈಲಿ: ಮುಂಬೈ ಮತ್ತು ದೆಹಲಿಗೆ ಬೆಂಗಳೂರು ಸವಾಲು

ಬೆಂಗಳೂರು: ಭಾರತದಲ್ಲಿ ವೇಗವಾಗಿ ಬೆಳೆಎಯುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬೆಂಗಳೂರು ಹೆಸರನ್ನ ಪಡೆದುಕೊಂಡಿದೆ. ಅಷ್ಟಲ್ಲದೆ, ಈಗ ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳತ್ತ ಸಿಲಿಕಾಣ್‌ ಸಿಟಿ ಬೆಂಗಳೂರು ಮುಖಮಾಡಿದೆ.

ಇದರ ಜೊತೆಗೆ ಅತೀ ಹೆಚ್ಚಿನ ಶಾಪಿಂಗ್ ಮಾಲ್‌ಗಳು, ಅತಿ ಹೆಚ್ಚು ಯುವ ಜನಸಂಖ್ಯೆ, ಜೊತೆಗೆ ಬೆಂಗಳೂರಿಗೆ ಉದ್ಯೋಗ ಹುಡುಕಿ ಬರುವ ಫ್ರೆಷರ್‌ಗಳಿಗೆ ಉತ್ತಮ ಉದ್ಯೋಗ ಮಾರುಕಟ್ಟೆ ಹಾಗೆ ಎರಡನೇ ಅತಿದೊಡ್ಡ ಕಾರು ಮಾರುಕಟ್ಟೆ. ಹೀಗೆ ಇದೆಲ್ಲದರ ಜೊತೆಗೆ ಬೆಂಗಳೂರು ನಗರವೀಗ ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ನೊಂದಿಗೆ ಉದ್ಯೋಗ ಮತ್ತು ಸಂಪತ್ತು ಸೃಷ್ಟಿ ಕೇಂದ್ರವಾಗಿ ಹಾಗೆ ಆರ್ಥಿಕವಾಗಿ ಅಂತರವನ್ನು ಕಾಯ್ದುಕೊಳ್ತಿದೆ.

ಮುಂಬೈ ಮತ್ತು ದೆಹಲಿಗೆ ಸವಾಲು ಹಾಕಿ ಮುನ್ನುಗ್ಗುತ್ತಿದೆ ಬೆಂಗಳೂರು

ಬೆಂಗಳೂರು ಟೆಕ್ ಶೃಂಗಸಭೆಯ ವೇಳೆ ಬಿಡುಗಡೆಯಾದ 'ಬೆಂಗಳೂರು ರೈಸಿಂಗ್' ವರದಿಯ ಪ್ರಕಾರ, ತೆರಿಗೆಯಿಂದ ಬ್ಯಾಂಕ್ ಠೇವಣಿಗಳಿಂದ ಹಿಡಿದು ವಿಮಾನ ಸಂಚಾರದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ದೆಹಲಿ-ಎನ್‌ಸಿಆರ್ ಮತ್ತು ಮುಂಬೈ ಸೇರಿದಂತೆ ಬೆಂಗಳೂರು ಕೂಡ ಭಾರತದ ಪ್ರಮುಖ ಮೂರು ನಗರಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ.

ಲಾಭೋದ್ದೇಶವಿಲ್ಲದ ಅನ್‌ಬಾಕ್ಸಿಂಗ್‌ ಬಿಎಲ್‌ಆರ್ ಫೌಂಡೇಶನ್‌ನ ವರದಿಯು ಬೆಂಗಳೂರು ಹೇಗೆ ಬದಲಾಗಿದೆ, ಇತರ ಭಾರತೀಯ ಮತ್ತು ಜಾಗತಿಕ ಟೆಕ್ ಹಬ್‌ಗಳೊಂದಿಗೆ ಹೇಗೆ ಹೋಲಿಕೆ ಮಾಡಿಕೊಳ್ಳುತ್ತದೆ ಮತ್ತು ಅದರ ಮುಂದೆ ಏನಿದೆ ಎಂಬುದನ್ನು ಈ ವರದಿ ಪರಿಶೀಲನೆ ಮಾಡುತ್ತದೆ.

ಉದ್ಯೋಗಾವಕಾಶಗಳು, ಉತ್ತಮ ವಾತಾವರಣ, ಕೈಗೆಟಕುವ ದರದಲ್ಲಿ ಸಿಗುವ ವಸತಿ, ಜನಸಂಖ್ಯಾಶಾಸ್ತ್ರ ಮತ್ತು ನೂತನ ಅಭಿವೃದ್ಧಿಗಳಲ್ಲಿ ಬೆಂಗಳೂರು ಉತ್ತಮ ಸಾಧನೆ ಮಾಡಿದ್ದರೂ ಕೂಡ, ಅವ್ಯವಸ್ಥಿತ ಬೆಳವಣಿಗೆ, ಸಂಚಾರ ದಟ್ಟಣೆ, ಅಪರಾಧಗಳ ಹೆಚ್ಚಳ ಮತ್ತು ಸಾಕಷ್ಟು ಸಾರ್ವಜನಿಕ ಸಾರಿಗೆಯಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಾರ್ವಜನಿಕ ಮೂಲಸೌಕರ್ಯಗಳ ಮೇಲಿನ ಕಡಿಮೆ ಹೂಡಿಕೆಯನ್ನು ಹೇಳುವ ಮೂಲಕ, ಪುರಸಭೆಯ ಬಜೆಟ್ ಗಾತ್ರದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದರೂ, ಭಾರತದ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದ್ರೆ, ಬೆಂಗಳೂರು ಅತ್ಯಂತ ಕಡಿಮೆ ತಲಾ ಪುರಸಭೆಯ ಬಜೆಟ್ ಅನ್ನು ಹೊಂದಿದೆ ಎಂದು ವರದಿಯು ಸ್ಪಷ್ಟಪಡಿಸುತ್ತದೆ.

ಬೆಂಗಳೂರು ಎರಡನೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಡೇಟಾವನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ. ಇನ್ನು ಇದರಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಹಾಗೆ ಕಳೆದ 10 ವರ್ಷಗಳಲ್ಲಿ ರಸ್ತೆ ಅಪಘಾತ ಸಾವುಗಳನ್ನು ಕಡಿಮೆ ಮಾಡದ ಏಕೈಕ ನಗರ ಎಂದು ಕೂಡ ಬೆಂಗಳೂರು ಗುರುತಿಸಿಕೊಂಡಿದೆ.

ರಸ್ತೆ ಅಪಘಾತಗಳು ವೇಗವಾಗಿ ಇಳಿಕೆಯಾಗುತ್ತಿರುವ ನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಇದಲ್ಲದೆ, ನಗರದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವುಗಳು ಹೆಚ್ಚಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಗೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 1.1 ಕೋಟಿ ನೋಂದಾಯಿತ ವಾಹನಗಳಿವೆ. ಇವುಗಳಲ್ಲಿ 10 ರಲ್ಲಿ 9 ಖಾಸಗಿ ವಾಹನಗಳು. ಹಾಗೆ 2017 ಮತ್ತು 2024ರ ನಡುವೆ, ನಗರದಲ್ಲಿ ವಾಹನ ನೋಂದಣಿಯು ವರ್ಷಕ್ಕೆ ಸುಮಾರು 6% ರಷ್ಟು ಅಧಿಕವಾಗಿವೆ. ಹಾಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳೆರಡೂ ಅತೀ ವೇಗದಲ್ಲಿ ಚಾಲನೆ ಮಾಡುತ್ತಿವೆ. ವರದಿಯ ಪ್ರಕಾರ ನಿರ್ಮಾಣ ಚಲಿಸುವ ಉಪಕರಣಗಳಲ್ಲಿಯೂ ದೊಡ್ಡ ಜಿಗಿತ ಕಂಡುಬಂದಿದೆ.

ಬೆಂಗಳೂರು ಐಟಿ ಸೇವೆಗಳ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಇನ್ನು ಸರಕುಗಳ ರಫ್ತಿಗೆ ಬಂದಾಗ, 2022-23ರಲ್ಲಿ ಗ್ರೇಟರ್ ಮುಂಬೈ 11%, ದೆಹಲಿ-ಎನ್‌ಸಿಆರ್‌ 19% ಮತ್ತು ಚೆನ್ನೈ 22% ಇದೆ. ಹತ್ತಿ, ವಿಮಾನದ ಭಾಗಗಳು, ಔಷಧಗಳು, ಎಲೆಕ್ಟ್ರಿಕ್ ಇನ್ವರ್ಟರ್‌ಗಳು ಮತ್ತು ಎಕ್ಸ್-ರೇ ಟ್ಯೂಬ್‌ಗಳು ಬೆಂಗಳೂರಿನಿಂದ ಸರಕುಗಳ ರಫ್ತಿಗೆ ಹೆಚ್ಚಿನ ಪೈ ಅನ್ನು ಕೊಡುಗೆ ನೀಡುತ್ತವೆ.

ಬೆಂಗಳೂರಿನ ಉತ್ಕರ್ಷದ ಉದ್ಯೋಗ ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್‌ಗಳು

ಬೆಂಗಳೂರು ಭಾರತದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 2012 ಮತ್ತು 2023 ರ ನಡುವೆ, ನಗರವು 27,000 ಹೊಸ ಕಂಪನಿಗಳನ್ನು ಆರಂಭಿಸಿತು. ಮುಂಬೈ ಮತ್ತು ದೆಹಲಿಯ ನಂತರ ಕಂಪನಿ ರಚನೆಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. 8,00,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ-ಇದು ಭಾರತೀಯ ಮಹಾನಗರಗಳಿಗಿಂತ ಇಲ್ಲಿ ಉದ್ಯೋಗ ಸೃಷ್ಟಿ ಅತ್ಯಧಿಕವಾಗಿದೆ.

ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ, ಕಳೆದ ದಶಕದಲ್ಲಿ ವಾರ್ಷಿಕ ಸರಾಸರಿ 1,400 ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾದ್ದರಿಂದ ಬೆಂಗಳೂರು ಎಲ್ಲಾ ನಗರಗಳಿಗಿಂತ ಒಂದು ಹೆಜ್ಜೆ ಮುಂಚೂಣಿಯಲ್ಲಿದೆ. ಇದು ಆರಂಭಿಕ ನಿಧಿ ಮತ್ತು ಯುನಿಕಾರ್ನ್ ರಚನೆಯಲ್ಲಿ ಭಾರತವನ್ನು ಮುನ್ನಡೆಸುತ್ತದೆ. ರಾಷ್ಟ್ರದ ವಾಣಿಜ್ಯೋದ್ಯಮ ಬಂಡವಾಳವಾಗಿ ಬೆಂಗಳೂರು ಸ್ಥಾನ ಗಿಟ್ಟಿಸಿಕೊಂಡಿದೆ.

ಶತಮಾನಗಳಿಂದ ವಿಕಸನಗೊಂಡ ದೆಹಲಿ ಮತ್ತು ಮುಂಬೈನಂತಹ ಮಹಾನಗರಗಳಿಗಿಂತ ಭಿನ್ನವಾಗಿ, ಬೆಂಗಳೂರು ಮಹಾನಗರ ಹೊರಹೊಮ್ಮಿದೆ. ನಾವೀನ್ಯತೆ ಮತ್ತು ಆಧುನಿಕ ವಿದ್ಯಮಾನವಾಗಿ ಸಿಲಿಕಾಣ್‌ ಸಿಟಿ ತನ್ನನ್ನು ಬಿಂಭಿಸಿಕೊಂಡಿದೆ. ಆದಾಗ್ಯೂ, ಈ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಅದರ ನಗರ ಸವಾಲುಗಳನ್ನು ಎದುರಿಸುವ ಅಗತ್ಯವಿದೆ.

ಬೆಂಗಳೂರು ಭಾರತದ ಪ್ರಮುಖ ನಗರಗಳಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿದೆ. ಆಡಳಿತ ಮತ್ತು ಮೂಲಸೌಕರ್ಯದ ಅಂತರವನ್ನು ಪರಿಹರಿಸುವ ಮೂಲಕ, ನಗರವು ಕೇವಲ ಭಾರತದ ಟೆಕ್ ಹಬ್ ಆಗಿ ಗುರುತಿಸಿಕೊಂಡಿದೆ. ಆದ್ರೆ ಜಾಗತಿಕವಾಗಿ ಬೆಂಗಳೂರು ನಗರ ಐಕಾನ್ ಆಗುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+