ಕಳೆದ ಎರಡು ದಿನಗಳಿಂದು ಇಂಡಿಗೋ ವಿಮಾನಯಾನ (IndiGo Airlines) ಸಂಸ್ಥೆ ವಿರುದ್ಧ ದೂರುಗಳ ಸುರಿಮಳೆಯೇ ಕೇಳಿಬರುತ್ತಿದೆ. ಅತ್ತ ವಿಮಾನ ಪ್ರಯಾಣದಲ್ಲಿ ವಿಳಂಬ, ವಿಮಾನ ರದ್ದು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಡಿಸೆಂಬರ್ ತಿಂಗಳ ಮೊದಲ ದಿನದಿಂದಲೇ ಹಲವು ವಿಮಾನಗಳಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಅದರಲ್ಲೂ ಇಂಡಿಗೋ ವಿಮಾನದಲ್ಲಿ ಹೆಚ್ಚು ದೂರುಗಳು ಕೇಳಿಬರುತ್ತಿದೆ. ಇದೀಗ ಗುರುವಾರ (ಡಿ. 04) ಒಂದೇ ದಿನ 180 ಕ್ಕೂ ಇಂಡಿಗೋ ವಿಮಾನಗಳು ರದ್ದಾಗಿದೆ.

ಗುರುವಾರ ಇಂಡಿಗೋ 180 ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಳಿಸಿದೆ. ಹೊಸದಾಗಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಂದಾಗಿ ಹಾಗೂ ವಿಶ್ರಾಂತಿ ನಿಯಮಗಳಿಂದ ಸದ್ಯ ಇಂಡಿಗೋ ವಿಮಾನ ಸಂಸ್ಥೆ ಸಮಸ್ಯೆ ಎದುರಿಸುತ್ತಿದೆ. ಸದ್ಯ ಮುಂಬೈ, ದೆಹಲಿ, ಬೆಂಗಳೂರು ನಿಲ್ದಾಣಗಳಲ್ಲಿ ಈ ರದ್ಧತಿ ಸಮಸ್ಯೆಗಳು ಎದುರಾಗಿದೆ.
ಎಲ್ಲೆಲ್ಲಿ, ಎಷ್ಟು ವಿಮಾನಗಳು ರದ್ದು?
ವರದಿ ಪ್ರಕಾರ, ಮುಂಬೈ ವಿಮಾನ ನಿಲ್ದಾಣದಲ್ಲಿ 86 ಇಂಡಿಗೋ ವಿಮಾನಗಳು (41 ಆಗಮನ, 45 ನಿರ್ಗಮನ) ರದ್ದಾಗಿವೆ. ಬೆಂಗಳೂರಿನಲ್ಲಿ 73 ವಿಮಾನಗಳು ರದ್ದುಗೊಂಡಿದ್ದು, ಅವುಗಳಲ್ಲಿ 41 ಆಗಮನ ವಿಮಾನಗಳೆಂದು ವರದಿಯಾಗಿದೆ.
"ಮುಂಬೈ, ದೆಹಲಿ ಮತ್ತು ಬೆಂಗಳೂರು ಸೇರಿ ಮೂರು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ಕಂಪನಿಯ 180 ಕ್ಕೂ ವಿಮಾನಗಳ ಸಂಚಾರವನ್ನು ಗುರುವಾರ ರದ್ದುಗೊಳಿಸಿದೆ" ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ದೆಹಲಿ ವಿಮಾನ ನಿಲ್ದಾಣದಲ್ಲಿ 33 ವಿಮಾನಗಳು ರದ್ದಾಗಿದ್ದು, "ದಿನದ ಅಂತ್ಯದ ವೇಳೆಗೆ ರದ್ದತಿಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ವರದಿಯಾಗಿದೆ.
"ಫೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ (FDTL) ನಿಯಮದ ಎರಡನೇ ಹಂತದ ಅಪ್ಡೇಟ್‌ನಿಂದಾಗಿ ಇಂಡಿಗೋ ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದು ವಿಮಾನ ನಿಲ್ದಾಣಗಳಾದ್ಯಂತ ರದ್ದತಿ ಮತ್ತು ಬೃಹತ್ ಮಟ್ಟದಲ್ಲಿ ವಿಳಂಬಗಳಿಗೆ ಕಾರಣವಾಗಿದೆ" ಎಂದು ವರದಿಗಳು ತಿಳಿಸಿದೆ.
ಇದೀಗ ಎರಡನೇ ದಿನವಾದ ಗುರುವಾರ ಕೂಡಾ ವಿಮಾನ ನಿಲ್ದಾಣಗಳಲ್ಲಿ ಗೊಂದಲ ಉಂಟಾಗಿದ್ದು, ಇಂಡಿಗೋದ 180ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವಕ್ತಾರರು ಗುರುವಾರ 73 ಇಂಡಿಗೋ ವಿಮಾನ ರದ್ದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications