ಇತ್ತೀಚೆಗೆ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು (Cyber Crime Case) ಹೆಚ್ಚಾಗುತ್ತಲೇ ಇದೆ. ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ ಎಷ್ಟೇ ಕ್ರಮ ಕೈಗೊಂಡರೂ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಅಮಾಯಕರನ್ನು ವಂಚನೆ ಮಾಡುತ್ತಿದ್ದಾರೆ. 2025ರ ಒಂದೇ ವರ್ಷದಲ್ಲಿ ಇದೀಗ ಲಕ್ಷಾಂತರ ಜನರು ಭಾರತದಲ್ಲಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಸೂಚನೆಯ ಹೊರತಾಗಿಯೂ ಖದೀಮರ ಕಳ್ಳಾಟ ನಿಲ್ಲುತ್ತಿಲ್ಲ. ಇದಕ್ಕೆ ಪಾಸ್‌ವರ್ಡ್ (Passwords), ಅನಾಮಿಕ ಲಿಂಕ್‌ಗಳು, ಫೋನ್‌ಗಳು ಹೀಗೆ ಹಲವು ಕಾರಣಗಳಿರಬಹುದು.

ಹೆಚ್ಚಿನ ವರದಿಗಳು ಸೈಬರ್ ವಂಚನೆಗೆ ಬೀಳಲು ಮುಖ್ಯ ಕಾರಣ ಪಾಸ್‌ವರ್ಡ್‌ಗಳು ಎಂದು ಹೇಳಲಾಗಿದೆ. ಇನ್ನು ಸೈಬರ್ ಸುರಕ್ಷತೆ ಬಗ್ಗೆ ನಿರಂತರ ಎಚ್ಚರಿಕೆಗಳ ಹೊರತಾಗಿಯೂ, ಕಂಪಾರಿಟೆಕ್‌ನ ಹೊಸ ವರದಿಯ ಪ್ರಕಾರ, ವಿಶ್ವದಲ್ಲಿ ಅತೀ ಹೆಚ್ಚು "123456" ಎಂದು ಪಾಸ್‌ವರ್ಡ್‌ಗಳನ್ನು ಬಳಸಲಾಗಿದೆ ಎಂದು ಸಾಬೀತಾಗಿದೆ.
ಈ ವರ್ಷ 2 ಶತಕೋಟಿಗೂ ಹೆಚ್ಚು ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆಯಿಂದ ಸೋರಿಕೆಯಾಗಿವೆ ಎಂದು ವರದಿಯಾಗಿದ್ದು. ಅವುಗಳನ್ನು ವಿಶ್ಲೇಷಿಸಿದಾಗ ಈ ಆಘಾತಕಾರಿ ಮತ್ತು ಆಸಕ್ತಿದಾಯಕ ಸಂಗತಿಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ "123456," "12345678" ಮತ್ತು "123456789" ಅತಿ ಹೆಚ್ಚು ಬಳಸಲಾದ ಟಾಪ್ ಮೂರು ಪಾಸ್‌ವರ್ಡ್‌ಗಳಾಗಿವೆ.
ಲಕ್ಷಾಂತರ ಅಕೌಂಟ್‌ಗಳಲ್ಲಿ ಇದೇ ಪಾಸ್‌ವರ್ಡ್‌ಗಳನ್ನು ಹೆಚ್ಚು ಬಳಸಲಾಗಿದೆ ಎಂದು ಸಾಬೀತಾಗಿದೆ. ಟಾಪ್ ಹತ್ತರಲ್ಲಿ "admin," "password," ಮತ್ತು "12345" ನಂತಹ ಸಾಮಾನ್ಯ ಪಾಸ್‌ವರ್ಡ್‌ಗಳು ಇದೆ ಎನ್ನಲಾಗಿದೆ.
ಅತೀ ಹೆಚ್ಚು ಬಳಸಲಾದ ಟಾಪ್ 10 ಪಾಸ್‌ವರ್ಡ್‌ಗಳಿವು!
- 123456
- 12345678
- 123456789
- admin
- 1234
- Aa123456
- 12345
- password
- 123
- 1234567890.
ವರದಿ ಪ್ರಕಾರ, ಅತೀ ಹೆಚ್ಚು ಬಳಸಿರುವ 1,000 ಪಾಸ್‌ವರ್ಡ್‌ಗಳಲ್ಲಿ, ಸುಮಾರು ಕಾಲು ಭಾಗದಷ್ಟು ನಂಬರ್‌ಗಳನ್ನೇ ಬಳಸಲಾಗಿದೆ ಎನ್ನಲಾಗಿದೆ. ಅದೇ ರೀತಿ ಶೇ 38.6 ಪಾಸ್‌ವರ್ಡ್‌ಗಳು "123" ಸರಣಿ ಸಂಖ್ಯೆಯನ್ನು ಹೊಂದಿವೆ. ಕೆಲವು ಬಳಕೆದಾರರು "password" ನ ವಿವಿಧ ಹೆಸರುಗಳನ್ನು ಬಳಸಿದ್ದು, ಇದು ಶೇ 4ರಷ್ಟು ಇದೆ.
"admin" ಶೇ 2.7 ಪಾಸ್‌ವರ್ಡ್‌ಗಳಲ್ಲಿ ಕಾಣಿಸಿಕೊಂಡಿದೆ. ಕಂಪಾರಿಟೆಕ್ ಪ್ರಕಾರ, "qwerty" ಮತ್ತು "welcome" ಸಹ ಪಾಸ್‌ವರ್ಡ್‌ಗಳಾಗಿ ಹಲವರು ಬಳಸಿದ್ದಾರೆ ಎನ್ನಲಾಗಿದೆ. ಅದೇ ರೀತಿ "minecraft" 100ನೇ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಆಗಿ 90 ಸಾವಿರ ಬಾರಿ ಕಾಣಿಸಿಕೊಂಡಿದೆ.
ಅತೀ ಹೆಚ್ಚು ಪಾಸ್‌ವರ್ಡ್ ಬಳಕೆಯಲ್ಲಿ "India@123" ಪಾಸ್‌ವರ್ಡ್ 53ನೇ ಸ್ಥಾನದಲ್ಲಿ ಕಾಣಿಸಿಕೊಂದೆ. ಈ ಪಾಸ್‌ವರ್ಡ್ ಪ್ರಾದೇಶಿಕವಾಗಿ ವಿಶಿಷ್ಟ ಎನಿಸಿಕೊಂಡಿದದೆ. ಆದರೆ ಹೆಚ್ಚಿನ ತಜ್ಞರು ಕನಿಷ್ಠ 12 ಅಕ್ಷರಗಳ ಪಾಸ್‌ವರ್ಡ್ ಬಳಸಬೇಕೆಂದು ಹೇಳುತ್ತಾರೆ. ಈ ರೀತಿಯ ಪಾಸ್‌ವರ್ಡ್ ಬಳಸುವುದರಿಂದ ನಿಮ್ಮ ಯಾವುದೇ ಖಾತೆಗಳು ಸೇಫ್ ಆಗಿರುತ್ತವೆ ಎನ್ನಲಾಗಿದೆ.
ಆದರೆ ವರದಿ ಪ್ರಕಾರ, ಶೇ 65.8ರಷ್ಟು ಪಾಸ್‌ವರ್ಡ್‌ಗಳು 12 ಅಕ್ಷರಗಳಿಗಿಂತ ಕಡಿಮೆ ಇದೆ ಎನ್ನಲಾಗಿದೆ. ಇದೇ ಕಾರಣದಿಂದ ಸೈಬರ್ ವಂಚಕರಿಗೆ, ಹ್ಯಾಕರ್ಸ್‌ಗಳಿಗೆ ಜನರನ್ನು ವಂಚಿಸಲು, ಖಾತೆ ಹ್ಯಾಕ್ ಮಾಡಲು ಸುಲಭವಾಗುತ್ತದೆ ಎನ್ನಲಾಗಿದೆ.
ಸಾಮಾನ್ಯವಾಗಿ ಎಟಿಎಂನಿಂದ ಹಿಡಿದು ಸೋಷಿಯಲ್ ಮೀಡಿಯಾ ಅಕೌಂಟ್‌ಗಳವರೆಗೂ ಪ್ರತಿಯೊಂದಕ್ಕೂ ಪಾಸ್‌ವರ್ಡ್ ಸೆಟ್ ಮಾಡಲಾಗುತ್ತದೆ. ಇದು ನಿಮ್ಮ ಖಾತೆಯನ್ನು ರಕ್ಷಿಸುತ್ತದೆ. ಅಲ್ಲದೇ ಇತ್ತೀಚೆಗೆ ಸೈಬರ್ ವಂಚಕರ ಕಾಟ ಹೆಚ್ಚಾಗಿದ್ದು, ಈ ಹಿನ್ನೆಲೆ ಪೊಲೀಸರು ಕೂಡಾ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತಾರೆ.


Click it and Unblock the Notifications