ಹೆಚ್‌ಎಎಲ್‌ ವಿಮಾನ ನಿಲ್ದಾಣ ಪುನಾರಾರಂಭಿಸಲು ಸಂಸದ ತೇಜಸ್ವಿ ಸೂರ್ಯ ಒತ್ತಾಯ!

ಹೆಚ್‌ಎಎಲ್‌ ವಿಮಾನ ನಿಲ್ದಾಣವನ್ನ ತೆರೆದು ತುರ್ತು ಕಾರ್ಯಗಳನ್ನ ಕೈಗೊಳ್ಳುವಂತೆ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಈ ಕುರಿತು ನವದೆಹಲಿಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ಈಗಾಗಲೇ ಎರಡನೇ ವಿಮಾನ ನಿಲ್ದಾಣದ ಸ್ಥಳಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಈ ಮಧ್ಯೆ ಸಂಸದ ತೇಜಸ್ವಿ ಸೂರ್ಯ ಇದರ ಜೊತೆಜೊತೆಗ ನಾವು ಹೆಚ್‌ಎಎಲ್‌ ವಿಮಾನ ನಿಲ್ದಾಣದ ಪುರಾರಂಭವನ್ನ ಕೂಡ ಮಾಡಬಹುದು ಎಂದು ಹೇಳಿದ್ದಾರೆ. ಹೀಗಾಗಿ ಈ ಕುರಿತು ನವದೆಹಲಿಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. ಇನ್ನು ಈ ಸಮಿತಿಯು PAC ಆಯ್ದ ಸಂಸತ್ ಸದಸ್ಯರನ್ನ ಜೊತೆಗೆ ಕೇಂದ್ರದ ಆದಾಯ ಮತ್ತು ವೆಚ್ಚಗಳನ್ನ ಪರಿಶೋದಿಸುವ ಕೆಲಸವನ್ನ ಈ ಸಮಿತಿ ಮಾಡುತ್ತದೆ.

HAL ವಿಮಾನ ನಿಲ್ದಾಣದ ಪುನಾರಂಭಕ್ಕೆ ತೇಜಸ್ವಿ ಸೂರ್ಯ ಒತ್ತಾಯ!

ಅಲ್ಲದೆ ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಜನ ದಟ್ಟಣೆಯನ್ನ ಅನುಭವಿಸುತ್ತಿದೆ. ಹೀಗಾಗಿಯೇ ಎರಡನೇ ವಿಮಾನ ನಿಲ್ದಾಣವನ್ನ ನಿರ್ಮಿಸಲು ಸರ್ಕಾರ ನಿರ್ಧಾರ ಮಾಡಿದೆ. ಆದ್ರೆ ಇದರ ಜೊತೆಗೆ ಮೂರನೇ ವಿಮಾನ ನಿಲ್ದಾಣ ಕೂಡ ಇದ್ದರೆ ಜನರು ಮತ್ತಷ್ಟು ನಿರಾಳರಾಗಿ ಪ್ರಯಾಣ ಮಾಡಬಹುದು ಎಂಬುದು ಸಂಸದೆ ಅಭಿಪ್ರಾಯವಾಗಿದೆ. ಇನ್ನು ಈ ಕುರಿತು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮೂರು ವಿಮಾನ ನಿಲ್ದಾಣವನ್ನ ಪುನರಾರಂಭ ಮಾಡುವುದರಿಂದ ಬೆಂಗಳೂರಿನ ಜನರಿಗೆ ಹೆಚ್ಚು ಉಪಯೋಗವಾಗಲಿದೆ. ನ್ಯೂಯಾರ್ಕ್‌, ಲಂಡನ್‌, ಪ್ಯಾರಿಸ್‌ನಂತಹ ಜಾಗತಿಕ ನಗರಗಳು ಈಗಾಗಲೇ ಮೂರು ವಿಮಾನ ನಿಲ್ದಾಣಗಳನ್ನ ಹೊಂದಿವೆ. ಹೀಗಾಗಿ ಇಲ್ಲಿ ಕೂಡ ಆರಂಭ ಮಾಡಿದ್ರೆ ಉತ್ತಮ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಇತ್ತೀಚೆಗೆ ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ(BIAL) ಎಂಡಿ ಮತ್ತು ಸಿಇಒ ಹರಿ ಮರಾರ್‌ ಅವರನ್ನ ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿದ್ದು, ಈ ಕುರಿತು ಚರ್ಚೆಗಳನ್ನ ಸಹ ಮಾಡಿದ್ದಾಗಿ ತಿಳಿಸಿದರು.

ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್‌ನ ವ್ಯಾಪ್ತಿಯೊಳಗೆ ಮೇ 24, 2032 ರವರೆಗೆ ಯಾವುದೇ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿ ಅಥವಾ ಈಗಾಗಲೇ ಇರುವ ವಿಮಾನ ನಿಲ್ದಾಣದ ನವೀಕರಣಗಳನ್ನ ಮಾಡುವಂತಿಲ್ಲ ಎಂದು BIAL ನಾಗರಿಕ ವಿಮಾನಯಾನ ಸಚಿವಾಲಯದ ಜೊತೆ ಒಪ್ಪಂದವನ್ನ ಮಾಡಿಕೊಂಡಿದೆ. BIALನ ಈ ಒಪ್ಪಂದದ ಪ್ರಕಾರ 2033ರಿಂದ ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣವನ್ನ ಸ್ಥಾಪಿಸಬಹುದು. ಅಲ್ಲಿಗೆ BIALನ ಒಪ್ಪಂದ ಆರಂಭವಾಗಿ 25 ವರ್ಷ ಪೂರೈಸುತ್ತದೆ.

ಹೀಗಾಗಿ ಹೆಚ್‌ಎಎಲ್‌ನ ವಾಣಿಜ್ಯ ಕಾರ್ಯಾಚರಣೆಯನ್ನ BIAL ವಹಿಸಿಕೊಳ್ಳುವಂತೆ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಇನ್ನು ಈ ವಿಚಾರವಾಗಿ ಸಹಕರಿಸಲು BIALನವರಿ ಹಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಇದಲ್ಲದೇ ಸಂಸದ ತೇಜಸ್ವಿ ಸೂರ್ಯ ಈ ಕುರಿತು ಆರು ತಿಂಗಳ ಹಿಂದೆಯೇ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರವನ್ನ ಬರೆದಿದ್ದು, ದಕ್ಷಿಣ ಬೆಂಗಳೂರನ್ನೇ ಎರಡನೇ ವಿಮಾನ ನಿಲ್ದಾಣಕ್ಕೆ ಸಾಂಭವ್ಯ ಸ್ಥಳವೆಂದು ಪರಿಗಣಿಸುವಂತೆ ಶಿಫಾರಸು ಮಾಡಿದ್ದಾರೆ.

ದಕ್ಷಿಣ ಬೆಂಗಳೂರಿಗರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆನೇಕಲ್ ಅಥವಾ ಬಿಡದಿಯನ್ನ ವಿಮಾನ ನಿಲ್ದಾಣಕ್ಕಾಗಿ ಸೂಕ್ತ ಸ್ಥಳಗಳೆಂದು ಸಂಸದರು ಪ್ರಸ್ತಾಪಿಸಿದ್ದಾರೆ.

HAL ವಿಮಾನ ನಿಲ್ದಾಣದ ಕುರಿತು ಇಲ್ಲಿ ತಿಳಿಯಿರಿ

HAL ವಿಮಾನ ನಿಲ್ದಾಣ ಅಥವಾ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣವು ಭಾರತದ ವಾಯುಯಾನ ಮತ್ತು ಏರೋಸ್ಪೇಸ್ ಅಭಿವೃದ್ಧಿಯಲ್ಲಿ ಮಹತ್ವದ ಇತಿಹಾಸವನ್ನು ಹೊಂದಿದೆ. ಇದು ಮೂಲತಃ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಅಗತ್ಯಗಳನ್ನ ಪೂರೈಸಲು ಇದನ್ನ ಸ್ಥಾಪಿಸಲಾಗಿದೆ. HAL ಅನ್ನು 1940 ರಲ್ಲಿ ಸ್ಥಾಪಿಸಲಾಯಿತು ಮತ್ತು ಕಂಪನಿಯ ವಿಮಾನ ತಯಾರಿಕೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ವಿಮಾನ ನಿಲ್ದಾಣವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆರಂಭದಲ್ಲಿ, ಇದು ಪ್ರಾಥಮಿಕವಾಗಿ ವಿಮಾನ ಪರೀಕ್ಷೆ, ತರಬೇತಿ ಮತ್ತು ಮಿಲಿಟರಿ ವಾಯುಯಾನಕ್ಕಾಗಿ ಆರಂಭಮಾಡಲಾಗಿತ್ತು, ನಂತರದ ದಿನಗಳಲ್ಲಿ ಜನರಿಗೂ ಕೂಡ ಸೇವೆಯನ್ನ ನೀಡಲು ಆರಂಭಿಸಿತು.

ವಿಮಾನ ನಿಲ್ದಾಣವು ಹೆಚ್ಚು ಪ್ರವೇಶಿಸಬಹುದಾದ ವಾಣಿಜ್ಯ ಕೇಂದ್ರವಾಗಿ ವಿಕಸನಗೊಂಡಿತು. ಬೆಂಗಳೂರು ಪ್ರಮುಖ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದ್ದಂತೆ, ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಪರ್ಕದ ಅಗತ್ಯವೂ ಹೆಚ್ಚಾಯಿತು. HAL ವಿಮಾನ ನಿಲ್ದಾಣವು ವಾಣಿಜ್ಯ ವಿಮಾನಗಳನ್ನು ನಿರ್ವಹಿಸಲು ಪ್ರಾರಂಭಿಸಿತು, ನಗರದ ಜನಸಂಖ್ಯೆಗೆ ಸೇವೆ ಸಲ್ಲಿಸುವ ಪ್ರಮುಖ ಪ್ರಾದೇಶಿಕ ವಿಮಾನ ನಿಲ್ದಾಣವಾಯಿತು ಮತ್ತು ಅವುಗಳನ್ನು ಪ್ರಮುಖ ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕಿಸುತ್ತದೆ. ಆದಾಗ್ಯೂ, ಹೆಚ್ಚುತ್ತಿರುವ ವಾಯು ಸಂಚಾರದೊಂದಿಗೆ, ವಿಮಾನ ನಿಲ್ದಾಣದ ಸೀಮಿತ ಸಾಮರ್ಥ್ಯವು ಹೊಸ, ದೊಡ್ಡ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕಾರಣವಾಯಿತು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 2008 ರಲ್ಲಿ ಪ್ರಾರಂಭವಾಯಿತು.

ಕಾರ್ಯಾಚರಣೆಯಲ್ಲಿನ ಈ ಬದಲಾವಣೆಯ ಹೊರತಾಗಿಯೂ, HAL ವಿಮಾನ ನಿಲ್ದಾಣವು ಮಿಲಿಟರಿ ಮತ್ತು ನಾಗರಿಕ ವಿಮಾನಯಾನ ಸೌಲಭ್ಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು, ಅದರ ಪಾತ್ರವು ಪ್ರಾಥಮಿಕವಾಗಿ ತರಬೇತಿ, ವಿಮಾನ ನಿರ್ವಹಣೆ ಮತ್ತು ರಕ್ಷಣಾ ವಿಮಾನಗಳ ತಯಾರಿಕೆಯ ಮೇಲೆ ಕೇಂದ್ರೀಕರಿಸಿದೆ. ಇಂದಿಗೂ, ಇದು ವಾಯುಯಾನ-ಸಂಬಂಧಿತ ಚಟುವಟಿಕೆಗಳಿಗೆ ಕೇಂದ್ರವಾಗಿ ಮತ್ತು ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮಗಳಲ್ಲಿ ಪ್ರಮುಖ ಆಟಗಾರನಾಗಿ ಕಾರ್ಯನಿರ್ವಹಿಸುತ್ತದೆ. HAL ವಿಮಾನ ನಿಲ್ದಾಣದ ಇತಿಹಾಸವು ಭಾರತದಲ್ಲಿ ವಾಯುಯಾನದ ಬೆಳವಣಿಗೆಯೊಂದಿಗೆ ಹೆಣೆದುಕೊಂಡಿದೆ, ಇದು ದೇಶದ ವಾಯುಯಾನ ಮತ್ತು ಏರೋಸ್ಪೇಸ್ ಪರಂಪರೆಯಲ್ಲಿ ಮಹತ್ವದ ತಾಣವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+