ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಆರ್ಥಿಕವಾಗಿ ಸದೃಢಗೊಳಿಸಲು, ಸಿಡ್‌ಬಿ (SIDBI - Small Industries Development Bank of India) ಹಾಗೂ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಮುಂದಾಗಿದೆ. ಅಂದರೆ ಹಣಕಾಸು ಸಹಾಯ ಮಾಡಲು ಪಾಲುದಾರಿಕೆ ಒಪ್ಪಂದಕ್ಕೆ, ಫೆಬ್ರವರಿ 25, 2025 ಸಹಿ ಮಾಡಿದ್ದಾರೆ. ಈ ಮೂಲಕ ಎಂಎಸ್‌ಎಂಇ ಕ್ಷೇತ್ರಕ್ಕೆ ಮತ್ತಷ್ಟು ಬೆಳವಣಿಗೆ ಸಾಗಲು ಸಹಾಯಕವಾಗುತ್ತದೆ.
ಈ ಒಪ್ಪಂದಿಂದ MSMEಗಳಿಗೆ ಹೊಸ ಬೆಳಕು ಬಂದಂತಾಗಿದೆ. ಏಕೆಂದರೆ ಇದು ಉದ್ಯಮಗಳ ಬೆಳವಣಿಗೆ, ಉದ್ಯೋಗಾವಕಾಶ ಮತ್ತು ಆರ್ಥಿಕ ಬಲವನ್ನು ಹೆಚ್ಚಿಸುವ ಒಂದು ಮಹತ್ವದ ಹೆಜ್ಜೆ. SIDBI ಮತ್ತು ಟಾಟಾ ಕೆಪಿಟಲ್ ಈ ಸಹಯೋಗದ ಮೂಲಕ MSMEಗಳಿಗೆ ಬೆಂಬಲ ನೀಡಲು ಮತ್ತು ಭಾರತದ ಆರ್ಥಿಕತೆಗೆ ಬಲ ನೀಡಲು ಉತ್ಸಾಹಗೊಂಡಿವೆ.
ಈ ಒಪ್ಪಂದದಿಂದಾಗುವ ಸಹಾಯ:
1. ಉಪಕರಣ & ಯಂತ್ರಗಳ ಖರೀದಿಗೆ ಆರ್ಥಿಕ ನೆರವು- ಉದ್ಯಮಗಳಿಗೆ ಅವಶ್ಯಕವಾಗಿ ಬೇಕಿರುವುದು ಯಂತ್ರ ಹಾಗೂ ಉಪಕರಣಗಳು. ಇವುಗಳ ಮೇಲೆ ಸಾಲ ಪಡೆಯಲು ಸಹಾಯ ಮಾಡುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ.

2. ಕಾರ್ಯನಿರತ ಬಂಡವಾಳ ಸೌಲಭ್ಯ: ಸಣ್ಣ ಉದ್ಯಮಗಳ ದೈನಂದಿನ ವ್ಯವಹಾರಗಳನ್ನು ಸುಗಮಗೊಳಿಸಲು, ಹಣಕಾಸಿನ ನೆರವು ಬೇಕೇ ಬೇಕು. ಹೀಗಾಗಿ ಬಂಡವಾಳ ಸೌಲಭ್ಯವನ್ನೂ ಒದಗಿಸುವುದು ಈ ಒಪ್ಪಂದದಿಂದ ಸಹಾಯವಾಗುತ್ತದೆ.
3. ಓಡಿ/ಸಿಸಿ : ಅಂದರೆ ಓವರ್ ಡ್ರಾಫ್ಟ್ ಮತ್ತು ಕ್ಯಾಶ್ ಕ್ರೆಡಿಟ್..ಇದರರ್ಥ ಬ್ಯಾಂಕ್‌ಗಳ ಮೂಲಕ ಓವರ್ ಡ್ರಾಫ್ಟ್ ಮಾಡುವುದು. ಅಥವಾ ಬ್ಯಾಂಕ್ ಖಾತೆಗಳಿಗೆ ನಗದು ಸೇರಿಸುವುದು. ಯಾವ ಉದ್ಯಮ ಯಾವ ಆಯ್ಕೆ ಮಾಡುತ್ತದೆಯೇ ಅದರ ಅನುಗುಣಕ್ಕಾಗಿ ಹಣವನ್ನು ಲಭ್ಯವಾಗಿಸುವ ಅನುಕೂಲ.
4: ಬ್ಯುಸಿನೆಸ್ ಸಾಲ ಮತ್ತು ಆಸ್ತಿಯ ಮೇಲೆ ಸಾಲ: ಸಾಮಾನ್ಯವಾಗಿ ಈಗ ಚಾಲ್ತಿಯಲ್ಲಿರುವ ಬ್ಯುಸಿನೆಸ್‌ಗಳು ಹಾಗೂ ಬ್ಯುಸಿನೆಸ್‌ಗಳಿಗಾಗಿ ರೂಪುಗೊಂಡ ಪ್ಲಾನ್‌ಗಳ ಆಧಾರದ ಮೇಲೆ ಹಣಕಾಸಿನ ನೆರವು ಬ್ಯಾಂಕ್‌ಗಳು ಹಾಗೂ ಡಿಜಿಟಲ್ ಫೈನಾನ್ಸ್‌ಗಳು ನೀಡುತ್ತವೆ. ಅದರಂತೆಯೇ ಈ ಒಪ್ಪಂದದ ಪ್ರಕಾರವೂ ನೀಡಲಾಗುತ್ತದೆ. ಉದ್ಯಮ ಮಾಡುವವರು ಬ್ಯುಸಿನೆಸ್ ಸಾಲ ಕೇಳಿದರೂ ಸಿಗುತ್ತದೆ. ಆಸ್ತಿಯ ಮೇಲೆ ಸಾಲ ಕೇಳಿದರೂ ಸಿಗುತ್ತದೆ.
ಈ ಒಪ್ಪಂದ MSMEಗಳಿಗೆ ಹೇಗೆ ಪ್ರಭಾವ ಬೀರುತ್ತದೆ?
MSMEಗಳಿಗೆ ನೇರವಾಗಿ ಸಾಲ ಮತ್ತು ಬಂಡವಾಳ ಒದಗಿಸಲು SIDBI & ಟಾಟಾ ಕೆಪಿಟಲ್ ಬದ್ಧವಾಗಿದ್ದು, ಈ ಒಪ್ಪಂದದಿಂದ ಸಾಲ ಪಡೆಯುವ ಲಭ್ಯತೆ ಸುಗಮಗೊಳ್ಳುತ್ತದೆ. ಹಣಕಾಸಿನ ಲಭ್ಯತೆ ಸುಲಭವಾದರೆ MSMEಗಳು ಹೊಸ ಬಂಡವಾಳ ಹೂಡಿಕೆ ಮಾಡಿ ತಾವು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಿಕೊಳ್ಳಬಹುದು. MSMEಗಳು ಬೆಳೆಯುತ್ತಾ ಹೋದಂತೆ ಉದ್ಯೋಗಾವಕಾಶಗಳು ಹೆಚ್ಚಾಗುವ ಕಾರಣದಿಂದ, ಹೊಸ ಉದ್ಯೋಗವೂ ಸೃಷ್ಟಿಯಾಗುತ್ತದೆ. ಅಲ್ಲದೇ ಈ ಒಪ್ಪಂದದಿಂದ MSMEಗಳ ಪೇಮೆಂಟ್ ಲಭ್ಯತೆ ಸುಲಭವಾಗಲಿದೆ. ಅಂದರೆ ತ್ವರಿತ ಸಾಲಕ್ಕೆ ಅನುಮೋದನೆ ಸಿಗಲಿದ್ದು, ಸುಲಭ ಪಾವತಿ ಆಯ್ಕೆಗಳೂ ಲಭ್ಯವಾಗಲಿವೆ.
ಈ ಒಪ್ಪಂದದಡಿ ಸಿಗುವ ಭವಿಷ್ಯದ ಯೋಜನೆಗಳೇನು:
ಈ ಒಪ್ಪಂದದ ಮೂಲಕ ರಿಸ್ಕ್ ಶೇರಿಂಗ್, ಸಹ-ಸಾಲ ಹಾಗೂ ಜಂಟಿ ಹಣಕಾಸು ವ್ಯವಸ್ಥೆ ಸೇರಿ ಇನ್ನೂ ಹಲವು ಆಯ್ಕೆಗಳ ಅನ್ವೇಷಣೆ ನಡೆಯಲಿದೆ. ಇದರಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಸಾಲ ಪಡೆಯುವ ಸುಲಭ ಅವಕಾಶವೂ ಸಿಗಲಿದೆ. ಈ ಒಪ್ಪಂದಕ್ಕೆ ಸಿಡ್‌ಬಿ (SIDBI - Small Industries Development Bank of India) ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀ ವಿವೇಕ್ ಕುಮಾರ್ ಮಲ್ಹೋತ್ರಾ ಹಾಗೂ ಟಾಟಾ ಕೆಪಿಟಲ್ ಲಿಮಿಟೆಡ್‌ನ ರಿಟೇಲ್ ಫೈನಾನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವಿವೇಕ್ ಚೋಪ್ರಾ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಹಿ ಹಾಕಿದ್ದಾರೆ. ಈ ಮೂಲಕ MSME ಉದ್ಯಮಗಳ ಅಭಿವೃದ್ಧಿಗೆ ಬಲ ನೀಡುವುದು ಹಾಗೂ ಹಣಕಾಸು ಸೌಲಭ್ಯ ಸುಲಭವಾಗಿ ಸಿಗುವಂತೆ ಮಾರ್ಗ ಕಲ್ಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications