ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಮೇಲೆ ನೋಟಿಸ್ ಅನ್ನು ನೀಡಿದೆ ಎಂದು ವರದಿಯಾಗಿದೆ. ಇನ್ನು ಟಾಟಾ ಕಮ್ಯೂನಿಕೇಷನ್‌ಗೂ ಕೂಡಾ ಆದಾಯ ತೆರಿಗೆ ಇಲಾಖೆಯು ನೋಟಿಸ್ ಅನ್ನು ಸಲ್ಲಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇಂಟರ್‌ಕನೆಕ್ಷನ್ ಬಳಕೆ ಶುಲ್ಕದ ವಿಚಾರದಲ್ಲಿ ಆದಾಯ ತೆರಿಗೆ ಇಲಾಖೆಯು ಮುಕೇಶ್ ಅಂಬಾನಿಯ ಸಂಸ್ಥೆಗೆ ನೋಟಿಸ್ ಅನ್ನು ಕಳುಹಿಸಿದೆ. ಇನ್ನು ಎರಡು ಕಂಪನಿಗಳು ಕೂಡಾ ಈ ನೋಟಿಸ್ ವಿರುದ್ಧವಾಗಿ ಆದಾಯ ತೆರಿಗೆ ಆಯುಕ್ತರಿಗೆ (ಮನವಿಗಳು) ಮೇಲ್ಮನವಿ ಸಲ್ಲಿಸಿವೆ. ನೋಟಿಸ್ ವಿರುದ್ಧ ಟಾಟಾ ಕೂಡ ಮೇಲ್ಮನವಿ ಸಲ್ಲಿಸಿದೆ.

ಆದಾಯ ತೆರಿಗೆ ಇಲಾಖೆ ಹಾಗೂ ಸಂಸ್ಥೆಗಳ ನಡುವೆ ಏನು ವಾದ?
ಭಾರತೀಯ ಟೆಲಿಕಾಂ ಆಪರೇಟರ್‌ಗಳು ವಿದೇಶಿ ಸಂಸ್ಥೆಗಳಿಗೆ ಪಾವತಿ ಮಾಡುವ ಇಂಟರ್‌ಕನೆಕ್ಷನ್ ಬಳಕೆಯ ಶುಲ್ಕದಿಂದ ಟಿಡಿಎಸ್ ಕಡಿತಗೊಳಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯು ಹೇಳಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 195 ಅನ್ನು ಕೂಡಾ ಆದಾಯ ತೆರಿಗೆ ಇಲಾಖೆಯು ಉಲ್ಲೇಖ ಮಾಡಿದೆ.
ಈ ನಿಯಮದ ಪ್ರಕಾರ ವಿದೇಶಿ ಸಂಸ್ಥೆಗಳಿಗೆ ಪಾವತಿ ಮಾಡುವ ಇಂಟರ್‌ಕನೆಕ್ಷನ್ ಬಳಕೆಯ ಶುಲ್ಕದಿಂದ ಟಿಡಿಎಸ್ ಅನ್ನು ಭಾರತೀಯ ಟೆಲಿಕಾಂ ಸಂಸ್ಥೆಗಳು ಕಡಿತಗೊಳಿಸಬೇಕು. ಒಂದು ವೇಳೆ ಕಡಿತಗೊಳಿಸದಿದ್ದರೆ ದೇಶದಲ್ಲಿ ಆದಾಯ ತೆರಿಗೆಯನ್ನು ನಿಯಂತ್ರಿಸುವ ಕಾಯಿದೆಯ ಸೆಕ್ಷನ್ 201 ರ ಅಡಿಯಲ್ಲಿ ಬಡ್ಡಿಯೊಂದಿಗೆ ಟಿಡಿಎಸ್ ಮೊತ್ತವನ್ನು ಪಾವತಿಸುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಮೊಬೈಲ್ ಆಪರೇಟರ್‌ಗಳು ಇತರ ಮೊಬೈಲ್ ಆಪರೇಟರ್‌ಗಳಿಗೆ ಫೋನ್ ಕರೆಗಳನ್ನು ರವಾನಿಸಲು ಅಥವಾ ಟರ್ಮಿನೇಟ್ ಮಾಡಲು ಪಾವತಿಸುವ ಹಣವೇ ಇಂಟರ್ ಕನೆಕ್ಷನ್ ಬಳಕೆಯ ಶುಲ್ಕವಾಗಿದೆ. ಮಾನವ ಹಸ್ತಕ್ಷೇಪ ಇರುವುದರಿಂದ ಆದಾಯ ತೆರಿಗೆ ಅನ್ವಯವಾಗುತ್ತದೆ ಎಂದು ಇಲಾಖೆ ಹೇಳುತ್ತದೆ.
ಯಾವುದೇ ಮಾನವ ಹಸ್ತಕ್ಷೇಪ ಮತ್ತು ಕರೆಗಳು ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳದ ಕಾರಣ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ ಎಂದು ಸಂಸ್ಥೆಗಳು ಹೇಳಿದೆ. ಈ ವಿಷಯವು ದೀರ್ಘಕಾಲದವರೆಗೆ ವಿವಾದಕ್ಕೆ ಒಳಗಾಗಿದೆ. ಹಣಕಾಸು ವರ್ಷ 2020ಕ್ಕೆ ಸಂಬಂಧಿಸಿದ ಶುಲ್ಕಕ್ಕೆ ಆದಾಯ ತೆರಿಗೆ ನೋಟಿಸ್ ಅನ್ನು ಕಳುಹಿಸಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ತಂದೆ ಮುಕೇಶ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿದ್ದಾರೆ. ಇದು ಎಲ್ಲಾ ಜಿಯೋ ಸೇವೆಗಳನ್ನು ಹೊಂದಿರುವ ಕಂಪನಿಯಾಗಿದೆ.
ಟಾಪ್ 10 ಕಾರ್ಪೋರೇಟ್ ತೆರಿಗೆ ಪಾವತಿಸಿದ ಸಂಸ್ಥೆಗಳು
1. ಟಿಸಿಎಸ್: 1404 ಮಿಲಿಯನ್ ಡಾಲರ್
2. ರಿಲಯನ್ಸ್ ಇಂಡಸ್ಟ್ರೀಸ್: 937.7 ಮಿಲಿಯನ್ ಡಾಲರ್
3. ಇನ್ಫೋಸಿಸ್: 883.3 ಮಿಲಿಯನ್ ಡಾಲರ್
4. ಐಸಿಐಸಿಐ ಬ್ಯಾಂಕ್: 844.9 ಮಿಲಿಯನ್ ಡಾಲರ್
5. ಐಟಿಸಿ: 580.9 ಮಿಲಿಯನ್ ಡಾಲರ್
6. ಎಚ್‌ಸಿಎಲ್: 417.3 ಮಿಲಿಯನ್ ಡಾಲರ್
7. ಎಚ್‌ಯುಎಲ್: 355.6 ಮಿಲಿಯನ್ ಡಾಲರ್
8. ಬಜಾಜ್ ಫೈನಾನ್ಸ್: 272.2 ಮಿಲಿಯನ್ ಡಾಲರ್
9. ಲಾರ್ಸೆನ್ & ಟೌಬ್ರೊ: 261.9 ಮಿಲಿಯನ್ ಡಾಲರ್
10. ಅಲ್ಟ್ರಾಟೆಕ್ ಸಿಮೆಂಟ್: 149.3 ಮಿಲಿಯನ್ ಡಾಲರ್


Click it and Unblock the Notifications