ಭಾರತದ ಹೆಸರಾಂತ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಹೊಸ ಹೂಡಿಕೆಗೆ ಮುಂದಾಗಿದ್ದಾರೆ. ಅಸ್ಸಾಂನ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ತಲಾ 50 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ಘೋಷಿಸಿದ್ದಾರೆ. ಗುಹಾವಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ, Advantage Assam 2.0 ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಹೂಡಿಕೆಯು ಪ್ರಮುಖವಾಗಿ ಅಸ್ಸಾಂ ರಾಜ್ಯದ ಅಭಿವೃದ್ಧಿಗಾಗಿ ವೇದಿಕೆಯಾಗಲಿದೆ ಎನ್ನಲಾಗುತ್ತಿದೆ.

ಸದ್ಯದ ಮಟ್ಟಿಗೆ ಅಸ್ಸಾಂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮತ್ತಷ್ಟು ಬಲಾಡ್ಯಗೊಳ್ಳಬೇಕಿರುವ ರಾಜ್ಯವಾಗಿದೆ. ಕೃಷಿ..ಅದರಲ್ಲೂ ಪ್ರಮುಖವಾಗಿ ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂನಲ್ಲಿ ತಾಂತ್ರಿಕ ಬೆಳವಣಿಗೆಗಳು ಕಡಿಮೆ ಎನ್ನಬಹುದಾಗಿದೆ. ಇಂಥಾ ಹೊತ್ತಿನಲ್ಲಿ ಈ ಇಬ್ಬರು ದಿಗ್ಗಜ ಉದ್ಯಮಿಗಳು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಕೆಲವೇ ವರ್ಷಗಳಲ್ಲಿ ಅಸ್ಸಾಂ ಅಭಿವೃದ್ಧಿಯನ್ನು ನೋಡುವುದರಲ್ಲಿ ಅನುಮಾನವಿಲ್ಲ.
ಮುಕೇಶ್ ಅಂಬಾನಿ ಹೂಡಿಕೆಯ ಗುರಿ:
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು, Advantage Assam 2.0 ಶೃಂಗಸಭೆಯಲ್ಲಿ ಅಸ್ಸಾಂನ ಆರ್ಥಿಕ ಪ್ರಗತಿಯನ್ನು ವೃದ್ಧಿಸಲು ₹50,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಸರ್ಕಾರದ 'Act East, Act Fast, Act First' ಯೋಜನೆಗೆ ಪ್ರಶಂಸೆ ಸಲ್ಲಿಸಿದರು, ಇದು ಅಸ್ಸಾಂನ ತ್ವರಿತ ಬೆಳವಣಿಗೆಗೆ ಮಾರ್ಗದರ್ಶಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಅಲ್ಲದೇ ಅಸ್ಸಾಂನ ಯುವಕರ ಭವಿಷ್ಯದ ಮಹತ್ವ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದರು. ಮುಖ್ಯವಾಗಿ AI (Artificial intelligence) ಕ್ಷೇತ್ರದಲ್ಲಿ ಇಲ್ಲಿನ ಯುವಕರು ಬೆಳವಣಿಗೆ ಕಾಣಬೇಕು ಎಂದು ಹೇಳಿದ್ದಾರೆ. ಅಲ್ಲದೇ ಚಹಾಗೆ ಪ್ರಸಿದ್ಧಿಯಾದ ಅಸ್ಸಾಂ ಸದ್ಯ 'Tea Paradise' ಎಂದು ಗುರುತಿಸಲ್ಪಡುತ್ತಿದೆ. ಮುಂದಿನ ದಿನಗಳಲ್ಲಿಇದು 'Technological Paradise' ಎಂದು ಗುರುತಿಸಲ್ಪಡುತ್ತದೆ. AI ಎಂದರೆ ಕೇವಲ Artificial Intelligence ಅಲ್ಲ, ಅದು Assam Intelligence ಕೂಡ ಆಗಲಿದೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ. ಈ ಮಾತುಗಳು ಅಸ್ಸಾಂ ಯುವಜನತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪಳಗಿಸಿಕೊಳ್ಳಲು ಉತ್ಸಾಹ ತುಂಬುವ ನಿರೀಕ್ಷೆಯಿದೆ.
ಗೌತಮ್ ಅದಾನಿ ಹೂಡಿಕೆಯ ಗುರಿ:
ಗೌತಮ್ ಅದಾನಿಯ ಹೂಡಿಕೆಯ ಗುರಿ ಬಹು ಕ್ಷೇತ್ರಗಳಲ್ಲಿ ಅಭಿವೃದ್ಧಿ ವಿಸ್ತರಣೆ ಮಾಡುವುದಾಗಿದೆ. ಅಂದರೆ ವಿಮಾನ ನಿಲ್ದಾಣಗಳು, ಅನಿಲ ವಿತರಣೆ, ವಿದ್ಯುತ್ ಪ್ರಸಾರ, ಸಿಮೆಂಟ್ ಮತ್ತು ರಸ್ತೆ ಅಭಿವೃದ್ಧಿಯಂತಹ ಯೋಜನೆಗಳು ಈ ಹೂಡಿಕೆಯಲ್ಲಿ ಒಳಗೊಂಡಿರುತ್ತವೆ. ಈ ಹೂಡಿಕೆಯು ಅಸ್ಸಾಂನ ಮೂಲಸೌಕರ್ಯದ ಅಭಿವೃದ್ಧಿಯಾಗಲಿದೆ. ಅಲ್ಲದೇ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೂ ಹೆಚ್ಚು ಸಹಾಯ ಮಾಡಲಿದೆ. ಅಸ್ಸಾಂನಲ್ಲಿ ₹50,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸುವುದು ನನ್ನಿಗೆ ಮಹಾ ಹೆಮ್ಮೆಯ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮದ್ಯಪ್ರದೇಶದಲ್ಲೂ ಅದಾನಿ ₹1.1 ಟ್ರಿಲಿಯನ್ ಹೂಡಿಕೆ:
ಅಸ್ಸಾಂ ಹೂಡಿಕೆಯ ಬಳಿಕ ಗೌತಮ್ ಅದಾನಿ ಮಧ್ಯಪ್ರದೇಶದಲ್ಲಿ ₹1.1 ಟ್ರಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ರು. ಅಂದರೆ ಮಧ್ಯ ಪ್ರದೇಶದಲ್ಲಿ 1 ಲಕ್ಷ 10 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿದೆ.
ಭೂಪಾಲ್‌ನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಶೃಂಗಸಭೆಯಲ್ಲಿ ಈ ಘೋಷಣೆ ನಡೆದಿದೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ನಿರೀಕ್ಷೆ ಈ ಹೂಡಿಕೆಯದ್ದಾಗಿದೆ. ಗ್ರೀನ್‌ಫೀಲ್ಡ್ ಸ್ಮಾರ್ಟ್ ಸಿಟಿ, ವಿಮಾನ ನಿಲ್ದಾಣ ಪ್ರಾಜೆಕ್ಟ್, ಮತ್ತು ಕೋಲ್ ಗ್ಯಾಸಿಫಿಕೇಶನ್ ಯೋಜನೆಗಳಂತಹ ಪ್ರಮುಖ ವಲಯಗಳ ಮೇಲೆ ಈ ಯೋಜನೆ ಕೇಂದ್ರೀಕೃತವಾಗಿರುತ್ತದೆ.
ಹೀಗೆ ಆರ್ಥಿಕವಾಗಿ ಕೊಂಚ ಹಿಂದುಳಿದಿರುವ ರಾಜ್ಯ ಅಸ್ಸಾಂನಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ, ಅಂಬಾನಿ ಮತ್ತು ಅದಾನಿ ಯೋಜನೆ ರೂಪಿಸಿರುವುದು, ನಿಜಕ್ಕೂ ಸಿಹಿ ಸುದ್ದಿ ನೀಡಿದಂತಾಗಿದೆ. ಇದರಿಂದ ಅಸ್ಸಾಂ ರಾಜ್ಯವೂ ಪ್ರಗತಿ ಸಾಧಿಸುತ್ತದೆ. ಹಾಗೂ ಉದ್ಯೋಗಗಳ ಸೃಷ್ಟಿಯೂ ನಿರೀಕ್ಷೆ ಮಟ್ಟದಲ್ಲಿ ಆಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications