ಏಷ್ಯಾ ಕಪ್ 2023 ಮತ್ತು ಒಡಿಐ ವಿಶ್ವಕಪ್ 2023 ರ ಸೀಸನ್ ಪ್ರಸ್ತುತ ನಮ್ಮ ಮುಂದಿದೆ. ಈ ನಡುವೆ ಜಿಯೋ ಸಿನಿಮಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕ್ರಿಕೆಟ್ ಪಂದ್ಯಾವಳಿಯ ಸ್ಟ್ರೀಮಿಂಗ್ ಡಿಜಿಟಲ್ ಹಕ್ಕುಗಳನ್ನು ಡಿಸ್ನಿ + ಹಾಟ್‌ಸ್ಟಾರ್ ದೊಡ್ಡ ಗೆಲುವನ್ನು ಸಾಧಿಸಿದೆ. ಈ ನಡುವೆಯೂ ಮುಕೇಶ್ ಅಂಬಾನಿಯ ಕಂಪನಿಯು ಈಗ ಬಿಸಿಸಿಐ ಜೊತೆ ಹೊಸ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿ ಹೇಳಿದೆ.
ಮೂರು ಸಂಸ್ಥೆಗಳ ನಡುವೆ ನಡೆದ ಬಿಡ್ಡಿಂಗ್ ಸಮರದಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಸೋನಿ ಎರಡನ್ನೂ ಮೀರಿಸಿ, ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಜಿಯೋ ಸಿನಿಮಾ ಮತ್ತು ವಯಾಕಾಮ್ 18 ಐದು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ಭಾರತದಲ್ಲಿ ನಡೆಯುವ ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಇದಕ್ಕಾಗಿ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಸ್ತುತ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಸ್ಟಾರ್ ಎಲ್ಲಾ ಕ್ರಿಕೆಟ್ ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಹೊಂದಿದ್ದಾರೆ. ಕಳೆದ ಹರಾಜಿನಲ್ಲಿ ಸಂಸ್ಥೆಯು 6,138 ಕೋಟಿ ರೂಪಾಯಿ (ಪ್ರತಿ ಪಂದ್ಯಕ್ಕೆ 60 ಕೋಟಿ) ಬಿಡ್ ಮೂಲಕ ಬಿಸಿಸಿಐ ಹಕ್ಕುಗಳನ್ನು ಗೆದ್ದುಕೊಂಡಿತ್ತು. ಆದಾಗ್ಯೂ, ವಿಯಾಕಾಮ್18 ಈ ಮೊತ್ತವನ್ನು ಮೀರಿಸಿದೆ.
ಬಿಸಿಸಿಐ ಮತ್ತು ವಿಯಾಕಾಮ್18 ನಡುವಿನ ಹೊಸ ಒಪ್ಪಂದದ ಪ್ರಕಾರ ಟೀಮ್ ಇಂಡಿಯಾದ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳನ್ನು ಮುಂದಿನ ಐದು ವರ್ಷಗಳವರೆಗೆ (2023 ರಿಂದ 2028) ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಪ್ರತಿ ಪಂದ್ಯಕ್ಕೆ 67.8 ಕೋಟಿ ರೂಪಾಯಿ ಆಗಿದೆ.
ಮುಕೇಶ್ ಅಂಬಾನಿಯವರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ಜಿಯೋ ಸಿನಿಮಾಕ್ಕೆ ಇದು ಒಂದು ಪ್ರಮುಖ ಸಾಧನೆಯಾಗಿದೆ. ಇದು ಡಿಸ್ನಿ + ಹಾಟ್‌ಸ್ಟಾರ್ ಅನ್ನು ತನ್ನ ಹೊಸ ಕ್ರಿಕೆಟ್ ಹಕ್ಕುಗಳಿಂದ ಹಿಂದೆ ತಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ.
"ಮುಂದಿನ 5 ವರ್ಷಗಳ ಕಾಲ ಲೀನಿಯರ್ ಮತ್ತು ಡಿಜಿಟಲ್ ಎರಡಕ್ಕೂ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಗೆದ್ದಿದ್ದಕ್ಕಾಗಿ ವಯಾಕಾಮ್ 18 ಗೆ ಅಭಿನಂದನೆಗಳು. ಐಪಿಎಲ್ ಮತ್ತು ಡಬ್ಲ್ಯುಪಿಎಲ್‌ಟಿ 20 ನಂತರ ಭಾರತ ಕ್ರಿಕೆಟ್ ಎರಡೂ ಸ್ಥಳಗಳಲ್ಲಿ ಬೆಳವಣಿಗೆಯನ್ನು ಮುಂದುವರಿಸುತ್ತದೆ. ನಾವು ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನು ವಿಸ್ತರಿಸುತ್ತೇವೆ. ನಾವು ಒಟ್ಟಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಲ್ಪನೆಯನ್ನು ಸೆರೆಹಿಡಿಯಲು ಮುಂದುವರಿಯುತ್ತೇವೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದರು.
ಈ ಹಿಂದೆ, ವಿಯಾಕಾಮ್ 18 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಡಿಜಿಟಲ್ ಹಕ್ಕುಗಳನ್ನು 2023 ರಿಂದ 2027 ರವರೆಗೆ ನಾಲ್ಕು ವರ್ಷಗಳವರೆಗೆ 48,940 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿತ್ತು. ಈಗ, ಈ ಹೊಸ ಐದು ವರ್ಷಗಳ ಒಪ್ಪಂದವು ಟೀಮ್ ಇಂಡಿಯಾವನ್ನು ಒಳಗೊಂಡಿರುವ 88 ಪಂದ್ಯಗಳಿಗೆ ಪಡೆದುಕೊಂಡಿದೆ. ಮಹಿಳಾ ಕ್ರಿಕೆಟ್ ತಂಡವೂ ಪ್ಯಾಕೇಜ್‌ನಲ್ಲಿ ಒಳಗೊಳ್ಳುತ್ತದೆ.


Click it and Unblock the Notifications