ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ಜನಪ್ರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದಲ್ಲದೆ, ಜಿಯೋಮಾರ್ಟ್ ತನ್ನ ಮುಂಬರುವ ಪೆಸ್ಟಿವ್ ಸೀಸನ್ ಪ್ರಚಾರವನ್ನು "ಜಿಯೋ ಉತ್ಸವ್: ಸೆಲೆಬ್ರೇಷನ್ ಆಫ್ ಇಂಡಿಯಾ" (ಜಿಯೋ ಉತ್ಸವ- ಭಾರತದ ಸಂಭ್ರಮ) ಎಂದು ಮರುಬ್ರಾಂಡ್ ಮಾಡಿದೆ.
ಇದನ್ನು ಅಕ್ಟೋಬರ್ 8, 2023 ರಂದು ಪ್ರಾರಂಭಿಸಲಾಗುವುದು. ಜಿಯೋಉತ್ಸವ್ ಅಭಿಯಾನವು ರಾಷ್ಟ್ರದಲ್ಲೇ ಆಚರಣೆ ಮಾಡುವ ಹಬ್ಬ ಎಂಬ ಕಲ್ಪನೆಯನ್ನು ಹೊಂದಿದೆ. ಹೊಸ ಉತ್ಸಾಹದಲ್ಲಿ ತನ್ನ ಪ್ರೀತಿಪಾತ್ರರೊಂದಿಗೆ ಸಂತೋಷದೊಂದಿಗೆ ಹಬ್ಬವನ್ನು ಆಚರಿಸುವ ಬಗ್ಗೆ ಈ ಜಾಹೀರಾತಿನಲ್ಲಿ ಮಹೇಂದ್ರ ಸಿಂಗ್ ಧೋನಿ ವಿವರಿಸಿದ್ದಾರೆ.

ಇದು 45 ಸೆಕೆಂಡುಗಳ ಜಾಹೀರಾತಾಗಿದ್ದು, ಜಾಹೀರಾತಿನ ಉದ್ದಕ್ಕೂ ಎಂಎಸ್ ಧೋನಿ ಕಾಣಿಸಿಕೊಳ್ಳುತ್ತಾರೆ. ಜಿಯೋಮಾರ್ಟ್‌ನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಬ್ಬದ ಗಿಫ್ಟ್ ಅನ್ನು ಖರೀದಿ ಮಾಡಲು ಹೇಳುತ್ತಾರೆ. ಹಿರಿಯರ ಆಶೀವಾರ್ದ ಪಡೆಯಿರಿ ಎಂದು ಜಾಹೀರಾತಿನಲ್ಲಿ ತಿಳಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, "ಮಹೇಂದ್ರ ಸಿಂಗ್ ಧೋನಿ ಅವರು ಜಿಯೋಮಾರ್ಟ್‌ನಂತೆಯೇ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಭರವಸೆಯನ್ನು ಒಳಗೊಂಡಿರುವ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿರುವ ಆದರ್ಶ ಆಯ್ಕೆಯಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ.
ಈ ಹಬ್ಬಗಳಲ್ಲಿ ಶಾಪಿಂಗ್ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರೀತಿಪಾತ್ರರ ಜೊತೆಗೆ ಜೀವನದ ವಿಶೇಷ ಕ್ಷಣಗಳನ್ನು ಆಚರಿಸುವುದರ ಭಾಗವಾಗಿದೆ ಎಂದು ಈ ಜಾಹೀರಾತಿನಲ್ಲಿ ಸಾರಲಾಗಿದೆ. ಪ್ರಾದೇಶಿಕ ಕುಶಲಕರ್ಮಿಗಳನ್ನು ಉತ್ತೇಜಿಸಲು ಜಿಯೋಮಾರ್ಟ್ ಯಾವಾಗಲೂ ಬದ್ಧವಾಗಿದೆ. ಪ್ರಸ್ತುತ 1000 ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಅವಕಾಶ ನೀಡಲಾಗಿದೆ. 1.5 ಲಕ್ಷ ಅನನ್ಯ ಉತ್ಪನ್ನಗಳನ್ನು ನೀಡುತ್ತಿದೆ ಎಂದು ವರದಿ ಹೇಳಿದೆ.
ಪ್ರಚಾರದ ಚಿತ್ರೀಕರಣದ ಸಮಯದಲ್ಲಿ, ವರಗಂಟಿ ಅವರು ಬಿಹಾರದ ಪ್ರಶಸ್ತಿ ವಿಜೇತ ಕುಶಲಕರ್ಮಿ ಅಂಬಿಕಾ ದೇವಿ ಅವರು ರಚಿಸಿದ ಮಧುಬನಿ ವರ್ಣಚಿತ್ರವನ್ನು ಧೋನಿಗೆ ಉಡುಗೊರೆಯಾಗಿ ನೀಡಿದರು. ಇದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಜಿಯೋಮಾರ್ಟ್ ಬದ್ಧವಾಗಿದೆ ಎಂಬುವುದರ ಪ್ರತೀಕವಾಗಿದೆ ಎಂದು ಸಿಇಒ ಹೇಳಿದ್ದಾರೆ. ಕುಶಲಕರ್ಮಿಗಳು ಮತ್ತು ಸಣ್ಣ-ಮಧ್ಯಮ-ಗಾತ್ರದ ವ್ಯವಹಾರ ನಡೆಸುವವರು ಈ ಜಿಯೋಮಾರ್ಟ್‌ನ ಅನುಕೂಲವನ್ನು ಪಡೆದುಕೊಳ್ಳಬಹುದು.


Click it and Unblock the Notifications