ಬೆಂಗಳೂರು, ಆಗಸ್ಟ್ 30: 2024 ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ, ಚೀನಾದ ರಾಜಧಾನಿ ಬೀಜಿಂಗ್‌ನ್ನು ಹಿಮ್ಮೆಟ್ಟಿಸಿ ಭಾರತದ ಆರ್ಥಿಕ ರಾಜಧಾನಿ ಮುಂಬೈ "ಏಷ್ಯಾದ ಬಿಲಿಯನೇರ್ ರಾಜಧಾನಿ" ಆಗಿ ಹೊರಹೊಮ್ಮಿದೆ. ಇನ್ನು ದೇಶದಲ್ಲಿ ಗರಿಷ್ಟ ಬಿಲಿಯನೇರ್ ಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನಕ್ಕೆ ಬಂದು ನಿಂತಿದೆ. ಹುರುನ್ ಇಂಡಿಯಾ ಶ್ರೀಮಂತರ ನಿಯತಕಾಲಿಕೆಯಲ್ಲಿ ಭಾರತವು ಏಷ್ಯಾದ ಸಂಪತ್ತು ಸೃಷ್ಟಿಸುವ ಪ್ರಮುಖ ಎಂಜಿನ್ ಎಂದು ಉಲ್ಲೇಖ ಮಾಡಿದ್ದು, ಮುಂಬೈ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಿಲಿಯನೇರ್ ರಾಜಧಾನಿಯಾಗಿದೆ ಎಂದು ಹೇಳಿದೆ
ವಾಣಿಜ್ಯ ನಗರಿ ಮುಂಬೈ ನಲ್ಲಿ ಈ ಬಾರಿ 58 ಶತಕೋಟ್ಯಾಧೀಶರು ಹೆಚ್ಚಳವಾಗಿದ್ದು, ಒಟ್ಟಾರೆ 91 ಶತ ಶತಕೋಟ್ಯಾಧೀಶರನ್ನು ಹೊಂದಿದೆ. ಇನ್ನು ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಬೀಜಿಂಗ್ 91 ಬಿಲಿಯನೇರ್ ವ್ಯಕ್ತಿಗಳನ್ನು ಹೊಂದುವ ಮೂಲಕ ಒಂದು ಸ್ಥಾನ ಕೆಳಕ್ಕೆ ಕುಸಿದು ಹುರುನ್ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

ಭಾರತವು ಕಳೆದ ವರ್ಷ ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಹೊಸ ಬಿಲಿಯನೇರ್ ಅನ್ನು ಕಂಡಿದೆ. ಚೀನಾ ತನ್ನ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಶೇಕಡಾ 25 ರಷ್ಟು ಕುಸಿತವನ್ನು ಕಂಡಿದ್ದರೆ, ಭಾರತವು 29 ಶೇಕಡಾ ಹೆಚ್ಚಳವನ್ನು ಅನುಭವಿಸಿದೆ, ಇದು ದಾಖಲೆಯ 334 ಬಿಲಿಯನೇರ್‌ಗಳನ್ನು ತಲುಪಿದೆ.ಇದೇ ಮೊದಲ ಬಾರಿಗೆ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 1539 ಪ್ರವೇಶಗಳನ್ನು ಪಡೆದಿದ್ದು, ಇದು ವೈವಿಧ್ಯಮಯ ಸಂಪತ್ತು ಸೃಷ್ಟಿಕರ್ತರನ್ನು ಪ್ರದರ್ಶಿಸಿದೆ. ಇವರಲ್ಲಿ ಮುಂದಿನ ಪೀಳಿಗೆಯ ನಾಯಕರು, ಚಲನಚಿತ್ರ ತಾರೆಯರು ಮತ್ತು ಹೆಚ್ಚಿನವರು ಸ್ಟಾರ್ಟ್‌ಅಪ್ ಸಂಸ್ಥಾಪಕರು'' ಎಂದು ಹುರುನ್ ರಿಚ್ ಲಿಸ್ಟ್ ಹೇಳಿದೆ.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಶತಕೋಟ್ಯಧಿಪತಿಗಳ ಸಂಖ್ಯೆಯು 300ರ ಗಡಿದಾಟಿದ್ದು, ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ಪ್ರಕಾರ, ಮುಂಬೈ 92 ಬಿಲಿಯನೇರ್‌ಗಳನ್ನು ಒಳಗೊಂಡಿದ್ದು,119 ಬಿಲಿಯನೇರ್‌ಗಳೊಂದಿಗೆ ನ್ಯೂಯಾರ್ಕ್ ಮತ್ತು 97 ಬಿಲಿಯನೇರ್‌ಗಳನ್ನು ಹೊಂದಿರುವ ಲಂಡನ್‌ಗೆ ಮೂರನೇ ಸ್ಥಾನದಲ್ಲಿದೆ. ಮುಂಬೈ, ಕಳೆದ ಒಂದು ವರ್ಷದಲ್ಲಿ, 26 ಹೊಸ ಬಿಲಿಯನೇರ್‌ಗಳನ್ನು ಸೇರ್ಪಡೆಗೊಳಿಸಿದ್ದು, ಒಟ್ಟು ಬಿಲಿಯನೇರ್ ಮೌಲ್ಯವು $445 ಬಿಲಿಯನ್ ಆಗಿದೆ.
ದೇಶದಲ್ಲಿ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪೈಕಿ ಅಗ್ರ 3ನೇ ಸ್ಥಾನದಲ್ಲಿದ್ದ ಬೆಂಗಳೂರನ್ನು ಹೈದರಾಬಾದ್ ಈ ಬಾರಿ ಹಿಮ್ಮೆಟ್ಟಿಸಿದೆ. 18 ಮಂದಿ ಶತಕೋಟ್ಯಧಿಪತಿಗಳ ಹೊಸ ಸೇರ್ಪಡೆಯೊಂದಿಗೆ ಹೈದರಾಬಾದ್‌ನಲ್ಲಿರುವ ಶ್ರೀಮಂತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 27 ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾದರೂ ಒಟ್ಟು ಶ್ರೀಮಂತರ ಸಂಖ್ಯೆ 100ನ್ನಷ್ಟೇ ತಲುಪಿದೆ. ಶ್ರೀಮಂತರು ವಾಸವಿರುವ ಭಾರತದ ಅಗ್ರ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 6ನೇ ಸ್ಥಾನ ದೊರೆತಿದೆ. ಮಹಾರಾಷ್ಟ್ರದಲ್ಲಿ 470 ಮಂದಿ, ದೆಹಲಿ 213, ಗುಜರಾತ್ 129, ತಮಿಳುನಾಡು 119, ತೆಲಂಗಾಣ 109, ಕರ್ನಾಟಕ 108 ಮಂದಿ ಶ್ರೀಮಂತರಿಗೆ ಆಶ್ರಯ ನೀಡಿವೆ. ಇನ್ನು ಟಾಪ್ 10 ರಲ್ಲಿರುವ ಇತರ ನಗರಗಳಲ್ಲಿ ಚೆನ್ನೈ (82), ಕೋಲ್ಕತ್ತಾ (69), ಅಹಮದಾಬಾದ್ (67), ಪುಣೆ (53), ಸೂರತ್ (28) ಮತ್ತು ಗುರುಗ್ರಾಮ್ (23) ಸೇರಿವೆ.
ಹುರುನ್ ಇಂಡಿಯಾ ರಿಸರ್ಚ್ ಪ್ರಕಾರ ಭಾರತದಲ್ಲಿ ವೈಯಕ್ತಿಕವಾಗಿ 1539 ಜನರ ಬಳಿಯಲ್ಲಿ 1000 ರಿಂದ 5000 ಕೋಟಿ ರೂಪಾಯಿ ಸಂಪತ್ತು ಇದ್ದು, ಒಟ್ಟು ದೊಡ್ಡ ಶ್ರೀಮಂತರ ಸಂಖ್ಯೆಯು 534 ದಾಟಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications