ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪನಿ ಒಂದು ಹೆಸರಾಂತ ಸಂಸ್ಥೆ.. ಜನರು ಅತಿಹೆಚ್ಚು ಭರವಸೆಯನ್ನು ಹೊಂದಿರುವ ಒಂದು ಹಣಕಾಸು ಸಂಸ್ಥೆ ಅಂತಲೂ ಗುರುತಿಸಬಹುದು. ಆದರೆ ಇದರ ಅಂಗಸಂಸ್ಥೆಯಾದ ಮುತ್ತೂಟ್ ಇನ್ಶುರೆನ್ಸ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಆಂತರಿಕ ವಂಚನೆಯ ವಿಚಾರವನ್ನು ಬಹಿರಂಗಪಡಿಸಿರುವುದು ಬೇಸರದ ಸಂಗತಿಯಾಗಿದೆ.

ಅಂದರೆ, ಮುತ್ತೂಟ್ ಇನ್ಶುರೆನ್ಸ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ಹಿಂದಿನ ಸಿಇಒ ಮತ್ತು ಮತ್ತೊಬ್ಬ ಹಿರಿಯ ಅಧಿಕಾರಿಯ ಪಾಲ್ಗೊಳ್ಳುವಿಕೆಯಿಂದ ನಡೆದಿದ್ದು, ₹11.92 ಕೋಟಿ ಮೊತ್ತದ ಅಕ್ರಮ ಲಾಭ ಪಡೆಯಲು ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೇಗೆ ಎಂದರೆ ಗಿಫ್ಟ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳ ಮೂಲಕ ಅನಧಿಕೃತ ಹಣ ವರ್ಗಾವಣೆ ಮಾಡಿರುವುದು ಆಂತರಿಕ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಇನ್ನು ಈ ವಂಚನೆಯು ಏಪ್ರಿಲ್ 2023 ಮತ್ತು ನವೆಂಬರ್ 2024 ನಡುವಿನ ಅವಧಿಯಲ್ಲಿ ನಡೆದಿದೆ ಎಂದು ಕಂಪನಿಯ ವರದಿ ತಿಳಿಸಿದೆ. ಈ ಪ್ರಕರಣದ ಕೇರಳದಲ್ಲಿ ವರದಿಯಾಗಿದ್ದು, ಇದೀಗ ಪೊಲೀಸ್ ತನಿಖೆಗೊಳಪಟ್ಟಿದೆ. ಅನ್ಯಾಯ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಕ್ರಿಯೆ ಮುಂದುವರಿದಿದೆ. ಈ ಹಗರಣ ಕಂಪನಿಯ ಆರ್ಥಿಕ ಸ್ಥಿತಿಗೆ ತೀವ್ರ ಪರಿಣಾಮ ಬೀರದಿದ್ದರೂ, ಇದು ವಿಶ್ವಾಸಾರ್ಹತೆ ಮತ್ತು ನೈತಿಕತೆಯ ದೃಷ್ಠಿಯಿಂದ ಗಂಭೀರ ಸಮಸ್ಯೆ ಎಬ್ಬಿಸಿದೆ. ಈ ಪೈಕಿ ಪ್ರಮುಖ ಆರೋಪಿಗಳು ನ್ಯಾಯಾಲಯದಿಂದ ಮುನ್ನೆಚ್ಚರಿಕಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ, ಮತ್ತು ತನಿಖೆ ಮುಂದುವರಿಯುತ್ತಿದೆ.
ಗಿಫ್ಟ್ ಕಾರ್ಡ್‌ಗಳ ದುರುಪಯೋಗ ಮತ್ತು ವಂಚನೆ:
ಆಗಲೇ ಹೇಳಿದಂತೆ 2023ರ ಏಪ್ರಿಲ್‌ನಿಂದ 2024ರ ನವೆಂಬರ್ ವರೆಗೆ ಈ ವಂಚನೆ ನಡೆದಿದೆ ಎನ್ನಲಾಗುತ್ತಿದೆ. ಅಂದರೆ ಈ ಸಮಯದಲ್ಲಿ ಮುತ್ತೂಟ್ ಇನ್ಶೂರೆನ್ಸ್ ಬ್ರೋಕರ್ಸ್ ನೌಕರರಿಗೆ, ಪ್ರೋತ್ಸಾಹಕವಾಗಿ ನೀಡಿದ್ದ ಉಡುಗೊರೆ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೇ ಅದನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂದು ತಿಳಿದುಬಂದಿದೆ.
ಅಂದರೆ ಕಂಪನಿಯು ನೌಕರರ ಉತ್ತಮ ಸಾಧನೆಗಾಗಿ ₹10 ಲಕ್ಷ ಮೌಲ್ಯದ ಗಿಫ್ಟ್ ಕೂಪನ್‌ಗಳನ್ನು ನೀಡುತ್ತಿತ್ತು. ಆದರೆ ಇಬ್ಬರು ಪ್ರಮುಖ ಅಧಿಕಾರಿಗಳು ದಾಖಲೆಗಳನ್ನು ನಕಲಿ ಮಾಡಿ, ಈ ಕಾರ್ಡ್‌ಗಳನ್ನು ಬೇರೆಡೆ ತಿರುಗಿಸಿ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗೂ ಕಾಲ್ಪನಿಕವಾಗಿ ಈ ವಂಚನೆಯು ₹31.28 ಕೋಟಿ ಮೊತ್ತದ ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ಕಂಪನಿ ತನ್ನ ಅಧಿಕೃತ ದಾಖಲೆಗಳಲ್ಲಿ ಬಹಿರಂಗಪಡಿಸಿದೆ.
ಕೇರಳದಲ್ಲಿ ನಡೆದಿದೆ ಎನ್ನಲಾದ ಈ ಪ್ರಕರಣ, ನಕಲಿ ದಾಖಲೆಗಳ ಮೂಲಕ ಗಿಫ್ಟ್ ಕಾರ್ಡ್‌ಗಳಿಂದ ಹಣ ವಾಪಸು ಪಡೆದಿರುವುದು ಮುಖ್ಯ ವಂಚನಾ ತಂತ್ರವಾಗಿದೆ.ವಂಚನೆಗೆ ಒಳಪಟ್ಟಿರುವ ಇಬ್ಬರು ಪ್ರಮುಖ ವ್ಯಕ್ತಿಗಳು ಮತ್ತಷ್ಟು ಹಣಕ್ಕಾಗಿ ಕಂಪನಿಯ ಆಂತರಿಕ ವ್ಯವಸ್ಥೆಯ ದುರಪಯೋಗ ಮಾಡಿರುವ ಸಾಧ್ಯತೆ ಇದೆ. ಈ ವಂಚನೆಯು ಮುತ್ತೂಟ್ ಕಂಪನಿಯ ನೇರ ಆರ್ಥಿಕ ಸ್ಥಿತಿಗೆ ಹೆಚ್ಚು ಹಾನಿ ಮಾಡದಿದ್ದರೂ, ಭದ್ರತೆ ಮತ್ತು ನೈತಿಕತೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ.
ನವೆಂಬರ್ 2023 ಮತ್ತು 2024ರ ನಡುವೆ ಈ ಗಿಫ್ಟ್ ಕೂಪನ್‌ಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ನಂತರ, ಆಂತರಿಕ ಆಡಿಟ್ ಮತ್ತು ತನಿಖೆ ನಡೆಸಲಾಯಿತು. ಈ ತನಿಖೆಯಿಂದಲೇ ಹೆಚ್ಚು ಹಣ ಗೋಪ್ಯವಾಗಿ ವಂಚನೆಯ ಮಾರ್ಗದಲ್ಲಿ ಸಾಗಿದಂತೆ ದೃಢಪಟ್ಟಿತು. ಈ ವಂಚನೆಯ ವರದಿಯನ್ನು ತಕ್ಷಣವೇ ಕೇರಳದ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ಸಲ್ಲಿಸಲಾಯಿತು. ಇದರಿಂದಾಗಿ, ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಂತರಿಕ ತನಿಖೆಯ ನಂತರ ಕಂಪನಿಯು ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ. ಆರೋಪಿಗಳು ಈಗ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ತನಿಖೆಯ ಪ್ರಕಾರ, ಈ ಹಣಕೌಶಲಿಕ ವಂಚನೆ ಬಗ್ಗೆ ಇನ್ನಷ್ಟು ಸತ್ಯಗಳು ಬೆಳಕಿಗೆ ಬರಬಹುದು ಎನ್ನಲಾಗಿದೆ.
ಇನ್ನು ಈ ವಂಚನೆಯು ಮತ್ತಷ್ಟು ಕಂಪನಿಗಳಿಗೆ ಎಚ್ಚರಿಕೆ ಸಂದೇಶ ನೀಡುವಂತಹ ಪ್ರಕರಣವಾಗಿದೆ ಎಂದರೂ ತಪ್ಪಾಗಲ್ಲ. ಹಣಕಾಸು ಕಂಪನಿಗಳು ತಮ್ಮ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಏಕೆಂದರೆ, ಮನೆಯಲ್ಲಿದ್ದವರೇ ವಂಚಕರು ಆದಾಗ, ಅಂಥ ಸಂಸ್ಥೆಗಳು ಬಹಳ ನಷ್ಟ ಅನುಭವಿಸಬಹುದು. ಈಗ ಪೊಲೀಸರು ಮತ್ತು ನ್ಯಾಯಾಂಗ ಸಂಸ್ಥೆಗಳು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಮುಂದಿನ ಕಾನೂನು ಕ್ರಮಗಳು ಬರುವ ದಿನಗಳಲ್ಲಿ ನಿರ್ಧಾರಗೊಳ್ಳಲಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications