ಮ್ಯೂಚುಯಲ್ ಫಂಡ್ ಎನ್ನುವುದು ಭವಿಷ್ಯದಲ್ಲಿ ಸಹಾಯಕವಾಗುವ ಒಂದು ಆರ್ಥಿಕ ನಿಧಿ. ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸಬಹುದು. ಭವಿಷ್ಯದಲ್ಲಿ ಹಣಕಾಸಿನ ತೊಂದರೆಯಾಗದಂತೆ ಈ ಮ್ಯೂಚುಯಲ್ ನಿಧಿ ನೋಡಿಕೊಳ್ಳುತ್ತದೆ. ಹೀಗಾಗಿಯೇ ಸಾಕಷ್ಟು ಜನರು ಮ್ಯೂಚುಯಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಈ ಮ್ಯೂಚುಯಲ್ ಫಂಡ್‌ಗಳ ಪೈಕಿ ಎಸ್‌ಬಿಐ ಲಾರ್ಜ್ ಮತ್ತು ಮಿಡ್‌ಕ್ಯಾಪ್ ಫಂಡ್ ₹10,000 ಮಾಸಿಕ ಎಸ್‌ಐಪಿಯಿಂದ ಶುರುವಾಗಿ, ಈಗ ₹6.75 ಕೋಟಿಯಾಗಿ ಪರಿವರ್ತನೆಯಾಗಿದೆ.

ಅಂದರೆ ಎಸ್‌ಬಿಐ ಲಾರ್ಜ್ ಕ್ಯಾಪ್ (ದೊಡ್ಡ ಗಾತ್ರದ ಷೇರು) ಮತ್ತು ಮಿಡ್-ಕ್ಯಾಪ್ (ಮಧ್ಯಮ ಗಾತ್ರ೦ ಷೇರುಗಳಲ್ಲಿ ಹೂಡಿಕೆ ಮಾಡಿ 32 ವರ್ಷಗಳನ್ನು ಪೂರೈಸಿದೆ. ಅಂದರೆ 1993ರ ಫೆಬ್ರವರಿ 28ರಂದು ಈ ಫಂಡ್ ಪ್ರಾರಂಭವಾಗಿದ್ದು, ಈವರೆಗೆ ವಾರ್ಷಿಕ 13.33% ವೃದ್ಧಿಯಾಗಿದೆ. ಹಾಗೆಯೇ ಇದು ಹೂಡಿಕೆದಾರರಿಗೆ ದೀರ್ಘಕಾಲಿಕ ಸಂಪತ್ತು ನಿರ್ಮಿಸಲು ಸಹಾಯಕವಾಗಿದೆ. ಅಂದರೆ ಇದರಲ್ಲಿ ಆರಂಭದಿಂದಲೂ ಇದರ ಲಾಭದ ಪ್ರಮಾಣ, 13.33% CAGR ಆಗಿದೆ. ಹೂಡಿಕೆ ಮಾಡಿ ತಾಳ್ಮೆಯಿಂದ ಕಾದಿದ್ದ ಹೂಡಿಕೆದಾರರಿಗೆ ದೊಡ್ಡ ಮಟ್ಟದ ಲಾಭಾಂಶ ನೀಡಿದೆ.
ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಆಯ್ಕೆ ಮಾಡಿಕೊಂಡವರು, ಆರಂಭದಿಂದಲೂ ಹತ್ತು ಸಾವಿರ ಹೂಡಿಕೆ ಮಾಡಿದ್ದರು. ಅಂದ್ರೆ 32 ವರ್ಷಗಳಲ್ಲಿ ಒಟ್ಟು ಹೂಡಿಕೆ ಮಾಡಿದ್ದು ₹36.2 ಲಕ್ಷ. ಆದರೆ ಈ ಮೊತ್ತ ಪರಿವರ್ತನೆಯಾಗಿದ್ದು ₹6.75 ಕೋಟಿಗೆ. 15.71% CAGR ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಶುರುವಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದವರ ಫಂಡ್, 2025ರ ಫೆಬ್ರವರಿ ಹೊತ್ತಿಗೆ ₹54.84 ಲಕ್ಷಕ್ಕೆ ಏರಿತ್ತು. ಅಂದರೆ ಕಳೆದ ಐದು ವರ್ಷದಲ್ಲಿ ಈ ನಿಧಿಯ ಮೊತ್ತ 19.15% CAGR ನೀಡಿದೆ. ಅದೇ ರೀತಿ ಮಾನದಂಡ ಎನ್ನಲಾದ ನಿಫ್ಟಿ ಲಾರ್ಜ್ ಮಿಡ್‌ಕ್ಯಾಪ್ 250 TRI ಅದೇ ಅವಧಿಯಲ್ಲಿ 20.75% ಆದಾಯ ನೀಡಿದೆ. ಅಂದಹಾಗೆ ಮೂರು ವರ್ಷಗಳಲ್ಲಿ ಈ ನಿಧಿಯ ಲಾಭ 15.55% CAGR ಆಗಿದ್ದರೆ, ಮಾನದಂಡವು 16.77% ಲಾಭ ದಾಖಲಿಸಿದೆ ಎಂದರ್ಥ.
ಇನ್ನು ಇದೇ ಯೋಜನೆಯಿಂದ ಕಳೆದ ವರ್ಷದಲ್ಲಿ 11.75% ಆದಾಯವನ್ನು ಗಳಿಸುವಂತಾಯಿತು. ಹಾಗೆಯೇ ಇದು ಸೆನ್ಸೆಕ್ಸ್ TRI ಯ 9.32% ಗಿಂತ ಉತ್ತಮ ಪ್ರದರ್ಶನ ನೀಡಿ ಸಾಧಿಸಿತು. ಆದರೆ ಅದರ ಮಾನದಂಡ ಮಾತ್ರ 11.03% ಗಿಂತ ಸ್ವಲ್ಪ ಹಿಂದೆ ಉಳಿದಿದೆ. ಇನ್ನು ಈ ವರ್ಷ.. ಅಂದರೆ, 2025ರ ಜನವರಿ 31ರ ಹೊತ್ತಿಗೆ ಈ ನಿಧಿಯ ನಿರ್ವಹಣೆಯಲ್ಲಿ, ₹28,681 ಕೋಟಿಗಳಷ್ಟು ದಾಖಲಾಯಿತು. ಈ ಯೋಜನೆಯನ್ನು 2016ರ ಸೆಪ್ಟೆಂಬರ್‍ನಿಂದ ಸೌರಭ್ ಪಂತ್ ನಿರ್ವಹಿಸುತ್ತಿದ್ದಾರೆ.
ಇನ್ನು ಈ ವ್ಯವಸ್ಥಿತ ಹೂಡಿಕೆ ನಿಧಿಯು (ಎಸ್‌ಐಪಿ) ತನ್ನ ಕಾರ್ಯಕ್ಷಮತೆಯನ್ನು ವಿಭಿನ್ನ ಕಾಲಮಿತಿಗಳಲ್ಲಿ ಬದಲಿಸಿದೆ. ಅಂದರೆ 15 ವರ್ಷಗಳಲ್ಲಿ ಇದು 15.61% CAGR ಸಾಧಿಸಿತ್ತು. 10 ವರ್ಷಗಳಲ್ಲಿ 15.57% ಸಾಧಿಸಿತು. ಹಾಗೆಯೇ ಐದು ವರ್ಷಗಳಲ್ಲಿ 18.44% ಮತ್ತು ಮೂರು ವರ್ಷಗಳಲ್ಲಿ 13.65% ರಷ್ಟು CAGR ಸಾಧಿಸಿದೆ. SBI ಮ್ಯೂಚುಯಲ್ ಫಂಡ್ ಪ್ರಕಾರ, ನಿಫ್ಟಿ ಲಾರ್ಜ್ ಮಿಡ್‌ಕ್ಯಾಪ್ 250 TRI 15.65% ಸಾಧಿಸಲು 15 ವರ್ಷಗಳ ಕಾಲ ಬೇಕಾಯಿತು. ಹಾಗೆಯೇ 16.04% ಆದಾಯ ಸಾಧಿಸಲು ಹತ್ತು ವರ್ಷಗಳ ಕಾಲ ಬೇಕಾಯಿತು. 18.32% ಆದಾಯ ಗಳಿಸಲು ಐದು ವರ್ಷಗಳು ಸಾಕಾಯಿತು. ಅದರಂತೆ 13.59% ಆದಾಯಕ್ಕೆ ಮೂರು ವರ್ಷಗಳ ಕಾಲ ಬೇಕಾಯಿತು.
ಇದು ಇಷ್ಟೊಂದು ಲಾಭದಾಯಕ ನಿಧಿಯಾಗಿದೆ. ಆದರೂ ಕೆಲವೊಮ್ಮೆ ಹೂಡಿಕೆದಾರರು ಹುಷಾರಾಗಿ ಇರಬೇಕಾಗುತ್ತದೆ. ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಎಷ್ಟೋ ಬಾರಿ ಯೋಚಿಸಬೇಕಾಗುತ್ತದೆ ಹಾಗೂ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ. ಏಕೆಂದರೆ ಕೆಲವೊಮ್ಮೆ ಮಾರುಕಟ್ಟೆ ಪರಿಸ್ಥಿತಿಗಳು ಬದಲಾಗಬಹುದು. ಹಾಗೆಯೇ ಕೆಲವೊಮ್ಮೆ ಆದಾಯದ ಮೇಲೂ ಪರಿಣಾಮ ಬೀರಬಹುದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications