ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು 70 ಗಂಟೆಗಳ ಕೆಲಸದ ವಾರದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಭಾರತದ ಯುವಜನರನ್ನು ರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು, ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿ ಸುದ್ದಿಯಾಗಿದ್ದಾರೆ.
ಇದು ನಾರಾಯಣ ಮೂರ್ತಿ ಸಣ್ಣ ವಯಸ್ಸಿನವರಾಗಿದ್ದಾಗ ಪಾಲಿಸುತ್ತಿದ್ದ ಪ್ರಕ್ರಿಯೆಯಾಗಿದೆ. ಇದು ನಾರಾಯಣ ಮೂರ್ತಿಯ ಸ್ವಂತ ಕೆಲಸದ ತತ್ವವಾಗಿತ್ತು ಮತ್ತು ಅವರ ಮಕ್ಕಳು ಸಹ ಇದನ್ನು ಗಮನಿಸಿದ್ದಾರೆ. ಈ ಬಗ್ಗೆ ಕೆಲವು ಸಂದರ್ಭದಲ್ಲಿ ಮಾತನಾಡಿದ್ದಾರೆ.

ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಇತ್ತೀಚೆಗೆ 'An Uncommon Love: The Early Life of Sudha and Narayana Murthy' ಎಂಬ ಜೀವನ ಚರಿತ್ರೆಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅವರು ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆಯಾದ ಇನ್ಫೋಸಿಸ್ ಅನ್ನು ನಡೆಸುತ್ತಿರುವಾಗ, ಕುಟುಂಬವನ್ನು ಬೆಳೆಸುವಾಗ ಎದುರಿಸಿದ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಅನ್ನು ಇಂದಿನ ಅತೀ ದೊಡ್ಡ ಕಂಪನಿಯಾಗಿ ಬೆಳೆಸಲು ತಮ್ಮ ಸಮಯವನ್ನು ಹೇಗೆ ಮೀಸಲಿಟ್ಟರು ಎಂಬುದನ್ನು ಪುಸ್ತಕವು ವಿವರಿಸುತ್ತದೆ. ಮತ್ತೊಂದೆಡೆ, ಸುಧಾ ಮೂರ್ತಿ ರೋಹನ್ ಮತ್ತು ಅಕ್ಷತಾ ಮೂರ್ತಿ ಇಬ್ಬರನ್ನೂ ಬೆಳೆಸಿದರು. ಆದರೆ ಮನೆಯಲ್ಲಿ ತಂದೆಯ ಉಪಸ್ಥಿತಿಯನ್ನು, ತಂದೆಯೊಂದಿಗಿನ ಒಡನಾಟವನ್ನು ಮಾತ್ರ ಈ ಇಬ್ಬರೂ ಮಕ್ಕಳು ಕಳೆದುಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಪುಸ್ತಕದ ಆಯ್ದ ಭಾಗಗಳಲ್ಲಿ, ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಒಮ್ಮೆ ಮನೆಯಲ್ಲಿ ತನ್ನ ತಂದೆಯ ಉಪಸ್ಥಿತಿ ಇಲ್ಲದ ಕಾರಣ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಕೆಲಸ-ಜೀವನದ ಸಮತೋಲನದ ಬಗ್ಗೆ ಅಕ್ಷತಾ ಹೇಳಿದ್ದಾರೆ.
ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ವರ್ಷಗಳ ಹಿಂದೆ ಈ ಬಗ್ಗೆ ಮಾತನಾಡಿದ್ದಾರೆ. "ನನ್ನ 'ನಿಜವಾದ ತಂದೆ' ತನ್ನ ಅಜ್ಜ ಇದ್ದಂತೆ ಆಗಿತ್ತು," ಎಂದು ಹೇಳಿದ್ದರು. ಆಗಾಗ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತಿದ್ದ ನಾರಾಯಣ ಮೂರ್ತಿ ತನ್ನ "ಬೋನಸ್ ಡ್ಯಾಡ್" ಎಂದು ಕೂಡಾ ಹೇಳಿಕೊಂಡಿದ್ದಾರೆ.
ನಾರಾಯಣ ಮೂರ್ತಿಯವರ ಮಗ ರೋಹನ್ ಮೂರ್ತಿ ಕೂಡ ಒಮ್ಮೆ ಈ ಬಗ್ಗೆ ಮಾತನಾಡಿದ್ದರು. "ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರಿ ನಾನು ಮತ್ತು ಅಕ್ಷತಾ ಅಥವಾ ಇನ್ಫೋಸಿಸ್?" ಎಂದು ತನ್ನ ತಂದೆಯನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ನಾರಾಯಣ ಮೂರ್ತಿ, "ಖಂಡಿತವಾಗಿಯೂ ನಾನು ನಿಮ್ಮಿಬ್ಬರನ್ನು ಹೆಚ್ಚು ಪ್ರೀತಿಸುತ್ತೇನೆ," ಎಂದು ಅಚ್ಚರಿಯಿಂದ ಉತ್ತರಿಸಿದ್ದರು.
ಇತ್ತೀಚೆಗೆ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಅದಾದ ಬಳಿಕ ಹಲವಾರು ಯುವ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
77 ವರ್ಷದ ಐಐಟಿ ಪದವೀಧರರು ಸಂದರ್ಶನವೊಂದರಲ್ಲಿ ಯುವಕರಿಗೆ 70 ಗಂಟೆಗಳ ಕೆಲಸದ ವಾರವು ದೇಶದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.


Click it and Unblock the Notifications