ಮೈಸೂರು ಜನರಿಗೆ ಹೊಸ ಗುಡ್‌ನ್ಯೂಸ್ ಸಿಕ್ಕಿದೆ. ಅದೇನೆಂದರೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ರೀತಿಯೇ, ಮೈಸೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂನ ತೆರೆಯಲು ಸರ್ಕಾರ ತಯಾರಿ ನಡೆಸುತ್ತಿದೆ. ಕರ್ನಾಟಕದಲ್ಲಿ ಎರಡನೇ ಸ್ಟೇಡಿಯಂ ಭಾಗ್ಯ ಮೈಸೂರಿಗೆ ಸಿಕ್ಕಂತಾಗಿದೆ. ಅನೇಕ ವರ್ಷಗಳಿಂದ ಈ ಯೋಜನೆ ಕೇವಲ ಕಲ್ಪನೆಯಾಗಿತ್ತು. ಆದರೆ ಈ ಯೋಜನೆ ಈಗ ಪ್ರತ್ಯಕ್ಷ ರೂಪ ಪಡೆದಿದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸಿಕ್ಕಂತಾಗಿದೆ.

ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ:
ಈ ಎರಡನೇ ಅಂತಾರಾಷ್ಟ್ರೀಯ ಕ್ರೀಡಾಂಗಣದ ಬಗ್ಗೆ ನಿನ್ನೆ (ಏಪ್ರಿಲ್ 24) ಸಿಎಂ ಸಿದ್ದರಾಮಯ್ಯ ಅವರೇ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಯೋಜನೆಗಾಗಿ ಸರ್ಕಾರ ಈಗ ಭೂಮಿ ಗುರುತಿಸುವ ಕೆಲಸ ಆರಂಭಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ಯೋಜನೆ ಕುರಿತ ಎಲ್ಲಾ ಪ್ರಕ್ರಿಯೆಗಳು, ಮುಗಿದ ಬಳಿಕವೇ ಭೂಮಿಯನ್ನು ರಾಜ್ಯ ಕ್ರಿಕೆಟ್ ಸಂಘಕ್ಕೆ (KSCA) ಹಸ್ತಾಂತರಿಸಲಾಗುವುದು. ಈ ಕ್ರೀಡಾಂಗಣವು ಕ್ರಿಕೆಟ್ ಅಭಿಮಾನರಿಗೆ ಮಾತ್ರವಲ್ಲದೆ, ಮೈಸೂರಿನ ಅಭಿವೃದ್ಧಿಗೂ ಉತ್ತೇಜನ ನೀಡಲಿದೆ ಎನ್ನಲಾಗಿದೆ.
ಹುಯಿಲಾಲು ಗ್ರಾಮದಲ್ಲಿ ಸ್ಟೇಡಿಯಂ..?
ಇನ್ನು ಮೈಸೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹುಯಿಲಾಲು ಎಂಬ ಗ್ರಾಮವನ್ನು ಕ್ರೀಡಾಂಗಣ ನಿರ್ಮಿಸಲು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಇದಕ್ಕಾಗಿ ಸುಮಾರು 26 ಎಕರೆ ಭೂಮಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ ಎಂದು ವರದಿಗಳಿಂದ ತಿಳಿದುಬರುತ್ತಿದೆ. ಈ ಹಿಂದೆ ಈ ಯೋಜನೆಯನ್ನು ಸಾತಗಳ್ಳಿಯಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಅಲ್ಲಿ ಸರೋವರವಿರುವ ಕಾರಣದಿಂದ ಪರಿಸರ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದೆಂದು ನಿಗಾ ಇಡಲಾಗಿತ್ತು. ಆದ್ದರಿಂದ, ಅಧಿಕೃತತೆಗಳ ಬಗ್ಗೆ ತೊಂದರೆ ಇಲ್ಲದ ಹುಯಿಲಾಲು ಸ್ಥಳವನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ಸಚಿವ ಸಂಪುಟಕ್ಕೂ ಮೊದಲು ಒತ್ತಾಯ:
ಇನ್ನು ಈ ಘೋಷಣೆಗಾಗಿ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಶ್ರಮ ಇದೆ ಎಂದರೆ ತಪ್ಪಾಗಲ್ಲ. ಏಕೆಂದರೆ ಈ ಘೋಷಣೆಗೂ ಒಂದು ದಿನದ ಮೊದಲು ಪ್ರತಾಪ್ ಸಿಂಹ ಅವರು ಈ ಬಗ್ಗೆ ಸರ್ಕಾರಕ್ಕೆ ವಿನಂತಿ ಸಲ್ಲಿಸಿದ್ದರು. ಈ ಯೋಜನೆ ಮೈಸೂರಿಗೆ ಬಹು ನಿರೀಕ್ಷಿತ ಅವಶ್ಯಕತೆ ಎಂದು ಅವರು ವಿವರಿಸಿದರು. ಸಂಸ್ಥೆಗಳ, ಆಟಗಾರರ ಹಾಗೂ ಅಭಿಮಾನಿಗಳ ದೃಷ್ಟಿಯಿಂದ ಮೈಸೂರಿನಲ್ಲಿ ಅಂತಹ ತಂತ್ರಜ್ಞಾನಯುತ ಕ್ರೀಡಾಂಗಣ ಅತ್ಯಂತ ಅವಶ್ಯಕವಾಗಿದೆ ಎಂಬ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದ ಕ್ರಿಕೆಟ್ ಭವಿಷ್ಯಕ್ಕೆ ದೊಡ್ಡ ಹೆಜ್ಜೆ:
ಅಂದಾಹೆ ಇತರೆ ರಾಜ್ಯಗಳೊಂದಿಗೆ ಹೋಲಿಸಿದರೆ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಈ ಎಲ್ಲ ರಾಜ್ಯಗಳು ಈಗಾಗಲೇ ಒಂದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಕ್ರೀಡಾಂಗಣಗಳನ್ನು ಹೊಂದಿವೆ. ಈ ರಾಜ್ಯಗಳು ವಿಭಿನ್ನ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುತ್ತಾ, ಆರ್ಥಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯ ಮಾಡಿವೆ.
ಇನ್ನೊಂದು ಪ್ರಮುಖ ವಿಷಯ ಹೇಳಬಹುದಾದರೆ ಕರ್ನಾಟಕದಲ್ಲಿ ಬಲಿಷ್ಠ ಕ್ರಿಕೆಟ್ ನಾಯಕರಿದ್ದಾರೆ. ಇಂತಹ ರಾಜ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಿಟ್ಟರೆ ಬೇರೆ ಯಾವುದೇ ಅಂತಾರಾಷ್ಟ್ರೀಯ ವೇದಿಗೆ ಆಟಗಾರರಿಗಿಲ್ಲ. ಈಗ ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಕ್ರೀಡಾಂಗಣವು ಆ ಕೊರತೆಯನ್ನು ದೂರ ಮಾಡಲಿದೆ. ಈ ಮೂಲಕ ಕರ್ನಾಟಕದ ಕ್ರಿಕೆಟ್ ನಕ್ಷೆಯಲ್ಲಿ ಮತ್ತೊಂದು ಉಜ್ವಲ ತಾರೆಯಾಗಿ ಮೈಸೂರು ಹೊರಹೊಮ್ಮಲಿದೆ.
ಈ ಕ್ರೀಡಾಂಗಣದ ನಿರ್ಮಾಣದಿಂದ, ಮೈಸೂರು ಮತ್ತು ಸುತ್ತಲಿನ ಪ್ರದೇಶದ ಅಭಿಮಾನಿಗಳು ಈಗ ಬೆಂಗಳೂರಿಗೆ ಹೋಗದೆ ಬಿಗ್ ಮ್ಯಾಚ್‌ಗಳನ್ನು ಸ್ಥಳೀಯವಾಗಿಯೇ ನೋಡಿ ಆನಂದಿಸಬಹುದು. ಇದೇ ಸಮಯದಲ್ಲಿ, ಈ ವೇದಿಕೆ ಯುವ ಕ್ರಿಕೆಟಿಗರಿಗೆ ಉತ್ತಮ ತರಬೇತಿ ಹಾಗೂ ಆಟದ ಅನುಭವ ನೀಡುವ ವೇದಿಕೆಯಾಗಲಿದೆ.
ಕರ್ನಾಟಕ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಇದುವರೆಗೆ ಬಹುಪಾಲು ಕಾಲ ಅಲಕ್ಷಿತವಾಗಿದ್ದ ಮೈಸೂರಿನ ಕ್ರೀಡಾ ವಾತಾವರಣಕ್ಕೆ ಬಲ ನೀಡಲಿದೆ. ಇಂತಹ ಸುಸಜ್ಜಿತ ಅಂತರರಾಷ್ಟ್ರೀಯ ವೇದಿಕೆ ಮೈಸೂರು ನಗರಕ್ಕೆ ಕ್ರೀಡಾ ಪ್ರವಾಸೋದ್ಯಮ, ಆರ್ಥಿಕ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠೆ ಅಂದರೆ ಎಲ್ಲವನ್ನೂ ಒಟ್ಟಿಗೆ ತರುತ್ತದೆ.


Click it and Unblock the Notifications