ಟಾಲಿವುಡ್ ಖ್ಯಾತ ನಟ, ಹಲವಾರು ಸಿನಿಮಾಗಳ ನಾಯಕ, ತೆಲುಗು ಚಿತ್ರರಂಗದಲ್ಲಿ ಬಹುದೊಡ್ಡ ಅಭಿಮಾನ ಬಳಗವನ್ನೇ ಹೊಂದಿರುವ ನಟ ಎಂದರೆ ಅದು ನಾಗಚೈತನ್ಯ (Naga Chaitanya). ನವೆಂಬರ್ 23, 1986 ರಂದೆ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಲಕ್ಷ್ಮಿ ರಮಣ ದಂಪತಿಗೆ ಹುಟ್ಟಿರುವ ನಾಗ ಚೈತನ್ಯ, ವಿಶೇಷ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ.

ಜೋಶ್ ಸಿನಿಮಾದ ಮೂಲಕ 2009 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಾದ ಬಳಿಕ "ಯೇ ಮಾಯ ಚೇಸಾವೆ" (2010) ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಇನ್ನು ಈ ಸಿನಿಮಾದಲ್ಲಿ ನಾಗಚೈತನ್ಯ ಹಾಗೂ ಸಮಂತ ಒಟ್ಟಾಗಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅಕ್ಕಿನೇನಿ ನಾಗಾರ್ಜುನ ಮಗ ಎನ್ನುವ ಕಾರಣಕ್ಕೆ ನಾಗಚೈತನ್ಯ ಸುಲಭದಲ್ಲಿ ಸಿನಿ ಕ್ಷೇತ್ರಕ್ಕೆ ಎಂಟ್ರಿ ಸಿಕ್ಕಿತು ಎಂದು ಹಲವರು ಹೇಳುತ್ತಾರೆ. ಆದ್ರೆ ನಾಗಚೈತನ್ಯ ಈ ಆರೋಪಗಳನ್ನು ಸುಳ್ಳು ಮಾಡುವಂತೆ, ತನ್ನ ಅಭಿನಯದ ಮೂಲಕ ತನ್ನನ್ನು ತಾನು ಸಾಬೀತು ಮಾಡಿಕೊಂಡಿದ್ದಾರೆ.
ನಾಗ ಚೈತನ್ಯ ಅವರ ಇಂದು ಜನ್ಮದಿನವಾಗಿದ್ದು, ತಮ್ಮ 38ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಈ ವಿಶೇಷ ದಿನವನ್ನು ಆಚರಿಸಲು ಸಜ್ಜಾಗಿದ್ದಾರೆ.
ತೆಲುಗು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ನಾಗ ಚೈತನ್ಯ ಅವರ ಜೀವನದ ವಿಶೇಷ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಅವರ ಬಾಲ್ಯದಿಂದ ಹಿಡಿದು ವೃತ್ತಿಜೀವನದ ಮಹತ್ವದ ಮೈಲಿಗಲ್ಲುಗಳು, ವೈಯಕ್ತಿಕ ಜೀವನದವರೆಗಿನ ಅನೇಕ ಆಸಕ್ತಿಕರ ವಿಷಯಗಳು ಇಲ್ಲಿದೆ ಓದಿ.
ಕುಟುಂಬದ ಹಿನ್ನೆಲೆ
ನಾಗ ಚೈತನ್ಯ ಅಕ್ಕಿನೇನಿ-ದಗ್ಗುಬಾಟಿ ಕುಟುಂಬಕ್ಕೆ ಸೇರಿದವರು. ಇವರು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಹಾಗೂ ದಿಗ್ಗಜ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ. ಬಾಲ್ಯದಲ್ಲಿ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬೆಳೆದ ಅವರು, ಸೇಂಟ್ ಮೇರಿಸ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು.
ಸಿನಿ ಜರ್ನಿಯಲ್ಲಿ ನಾಗಚೈತನ್ಯ
ನಾಗ ಚೈತನ್ಯ ಅವರ ಚೊಚ್ಚಲ ಚಿತ್ರ 'ಜೋಶ್' 2009 ರಲ್ಲಿ ಬಿಡುಗಡೆಯಾಯಿತು. ಆದರೆ, 2010 ರಲ್ಲಿ ಲವ್ ಜಾನರ್‌ನಲ್ಲಿ 'ಯೇ ಮಾಯಾ ಚೇಸಾವೆ' ಚಿತ್ರವು ಬಿಡುಗಡೆಯಾಯ್ತು. ಈ ಸಿನಿಮಾ ಅವರ ಸಿನಿ ಜರ್ನಿಗೆ ನೀಡಿದ ದೊಡ್ಡ ಟರ್ನ್ ಅಂತಾನೇ ಹೇಳಬಹುದು. ಈ ಚಿತ್ರದ ಮೂಲಕ ನಾಗಚೈತನ್ಯ ಎಲ್ಲರ ಚಿರಪರಿಚಿತರಾದರು.
ತಮ್ಮ ವೃತ್ತಿಜೀವನದಲ್ಲಿ ಬಹು ಪಾತ್ರಗಳಲ್ಲಿ ಕಾಣಿಸಿಕೊಂಡ ನಾಗ ಚೈತನ್ಯ ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. '100% ಲವ್' ನಂತಹ ರೊಮ್ಯಾಂಟಿಕ್ ಸಿನಿಮಾಗಳಿಂದ ಹಿಡಿದು 'ಮಜಿಲಿ' ಮತ್ತು 'ಲವ್ ಸ್ಟೋರಿ'ಯಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. .
ನಾಗಚೈತನ್ಯ ಅವರಿಗೆ ಲಭಿಸಿದ ಅವಾರ್ಡ್ಸ್
ನಾಗ ಚೈತನ್ಯ ಅವರು ತಮ್ಮ ನಟನಾ ಕಲೆಯಿಂದ ಫಿಲ್ಮ್‌ಫೇರ್ ಸೌತ್, ಸೈಮಾ ಮತ್ತು ನಂದಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ನಟನೆಗೂ ಸೈ, ಉದ್ಯಮದಲ್ಲೂ ಸೈ
ನಟನೆ ಮಾತ್ರವಲ್ಲದೇ, ನಾಗ ಚೈತನ್ಯ ಉದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ 'ಶೋಯು' ಎಂಬ ಕ್ಲೌಡ್ ಕಿಚನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅಲ್ಲದೆ, ದೊಡ್ಡ ಕಂಪನಿಗಳಿಗೆ ಜಾಹೀರಾತು ಪ್ರಚಾರಕರಾಗಿಯೂ ಕಾಣಿಸಿಕೊಂಡಿದ್ದಾರೆ.
ನಾಗ ಚೈತನ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಈ ಹಿಂದಿನಿಂದಲೂ ಭಾರೀ ಸುದ್ದಿಗಳು ಹರಿದಾಡುತ್ತಿರುತ್ತದೆ. ಅವರು ನಟಿ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದರು. ಸ್ನೇಹಿತರಾಗಿದ್ದ ಇಬ್ಬರು ನಂತರ ವಿವಾಹವಾದರು. ಆದರೆ 2021 ರಲ್ಲಿ ನಾಗಚೈತನ್ಯ ಹಾಗೂ ಸಮಂತಾ ಬೇರೆ ಆಗುವ ನಿರ್ಧಾರಕ್ಕೆ ಬಂದು, ಡಿವೋರ್ಸ್ ಪಡೆದಿದ್ದಾರೆ.
ತೆಲುಗು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ನಾಗ ಚೈತನ್ಯ ಅವರ ಜೀವನದ ವಿಶೇಷ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಅವರ ಬಾಲ್ಯದಿಂದ ಹಿಡಿದು ವೃತ್ತಿಜೀವನದ ಮಹತ್ವದ ಮೈಲಿಗಲ್ಲುಗಳು, ವೈಯಕ್ತಿಕ ಜೀವನದವರೆಗಿನ ಅನೇಕ ಆಸಕ್ತಿಕರ ವಿಷಯಗಳು ಇಲ್ಲಿದೆ ಓದಿ.
ನಾಗಚೈತನ್ಯ ಆಸ್ತಿ ಎಷ್ಟು ಗೊತ್ತಾ?
ನಾಗಚೈತನ್ಯ ಅವರ ನಿವ್ವಳ ಮೌಲ್ಯ 154 ಕೋಟಿ ರೂ. ಎಂದು ವರದಿಯಾಗಿದೆ. ಅಲ್ಲದೇ ಈ ನಟ ಪ್ರತೀ ಚಿತ್ರಕ್ಕೆ 5 ರಿಂದ 10 ಕೋಟಿವರೆಗೆ ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಇನ್ನು ನಾಗ ಚೈತನ್ಯ ಐಷಾರಾಮಿ ವಾಹನಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಈಗಾಗಲೇ ಅವರ ಬಳಿ ಮರ್ಸಿಡಿಸ್ ಬೆನ್ಜ್ ಜಿ ಕ್ಲಾಸ್ ಜಿ63, ಫೆರಾರಿ ಎಫ್430 ಮತ್ತು ರೆಡ್ ನಿಸ್ಸಾನ್ ಜಿಟಿ-ಆರ್‌ನಂತಹ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications