ಒಂದೇ ಒಟಿಪಿಯಲ್ಲಿ ದಿನಪೂರ್ತಿ ಆಟೋದಲ್ಲಿ ಸಂಚಾರ ನಡೆಸಿ

ಬೆಂಗಳೂರು, ನವೆಂಬರ್ 10: ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗ ಹಲವು ಅಪ್ಲಿಕೇಶನ್‌ಗಳು ಆಟೋಗಳಲ್ಲಿ ಸಂಚಾರ ನಡೆಸಲು ಅನುಕೂಲ ಮಾಡಿಕೊಡುತ್ತಿವೆ. 'ನಗರ' ಅಪ್ಲಿಕೇಶನ್ ಈಗ 'ನಮ್ಮ ಕೋಡ್' ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಒಂದು ದಿನ ಹಲವಾರು ಸಲ ಬಾಡಿಗೆಗೆ ಆಟೋ ಬಳಕೆ ಮಾಡುವವರಿದ್ದರೆ ಈ ಒಟಿಪಿ ವ್ಯವಸ್ಥೆ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ಪ್ರಯಾಣಿಕರು ಮತ್ತು ಚಾಲಕರ ನಡುವಿನ ಸಮನ್ವಯತೆಯನ್ನು ಸಹ ಇದು ಉತ್ತಮಗೊಳಿಸಲಿದೆ.

'ನಗರ' ಎಂಬುದು ಮೀಟರ್ ಹೊಂದಿದ ಆಟೋ ರಿಕ್ಷಾಗಳ ಹೊಸ ಅಪ್ಲಿಕೇಶನ್ ಆಗಿದೆ. ಈಗ ಇದು 'ನಗರ ಆಟೋ ಮಲ್ಟಿ ಮಾಡೆಲ್ ಆಕ್ಸೆಸ್ ಕೋಡ್' ಅಥವ 'ನಮ್ಮ ಕೋಡ್' ಎಂಬ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಪರಿಚಯಿಸಿದೆ. ಒಂದೇ ದಿನ ಹಲವಾರು ಬಾಡಿಗೆ ಪಡೆಯುವ ಸಂದರ್ಭದಲ್ಲಿ ಒಂದೇ ಒಟಿಪಿಯನ್ನು ಈ ಮೂಲಕ ಜನರು ಬಳಕೆ ಮಾಡಬಹುದು.

ಒಂದೇ ಒಟಿಪಿಯಲ್ಲಿ ದಿನಪೂರ್ತಿ ಆಟೋದಲ್ಲಿ ಸಂಚಾರ ನಡೆಸಿ

ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು 'ನಮ್ಮ ಕೋಡ್' ಎಂಬ ಹೊಸ ಒಟಿಪಿ ಸೌಲಭ್ಯವನ್ನು 'ನಗರ' ಅಪ್ಲಿಕೇಶನ್ ಘೋಷಣೆ ಮಾಡಿದೆ. ಈ ಒಟಿಪಿಯ ವಿಶೇಷ ಎಂದರೆ ವಾಟ್ಸಪ್‌ನಲ್ಲಿ 9620020042 ಸಂಖ್ಯೆಗೆ ಹಾಯ್ ಎಂದು ಸಂದೇಶ ಕಳಿಸುವ ಮೂಲಕ ಜನರೇ ಒಟಿಪಿಯನ್ನು ರಚಿಸಿಕೊಳ್ಳಬಹುದು.

ಈಗಿರುವ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಪ್ರತಿ ಟ್ರಿಪ್‌ಗೆ ಬೇರೆ ಬೇರೆ ಒಟಿಪಿಯನ್ನು ನೀಡಬೇಕಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನಗತ್ಯ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ 'ನಗರ' ಅಪ್ಲಿಕೇಶನ್ ಬಳಕೆ ಮಾಡುವವರು ಒಂದು ದಿನ ಒಂದೇ ಒಟಿಪಿ ಬಳಸಿ ಹಲವಾರು ರೈಡ್ ಮಾಡಲು ಅವಕಾಶವನ್ನು ನೀಡಲಾಗಿದೆ.

ವಾಟ್ಸಪ್ ಮೂಲಕ ಹಾಯ್ ಎಂದು ಕಳಿಸಿ ಒಟಿಪಿ ರಚಿಸಿಕೊಂಡರೆ ಅಂದು ಮಧ್ಯರಾತ್ರಿ ತನಕ ಜನರು ಎಷ್ಟು ಸಲ ಆಟೋದಲ್ಲಿ ಪ್ರಯಾಣ ಮಾಡಿದರೂ ಸಹ ಇದೇ ಒಟಿಪಿಯನ್ನು ಬಳಕೆ ಮಾಡಬಹುದು. 'ನಮ್ಮ ಕೋಡ್' ಸಿದ್ಧವಾದ ಬಳಿಕ ಜನರು ತಮ್ಮ ಪಿಕ್ ಅಪ್ ಲೊಕೇಷನ್‌ ಅನ್ನು ಚಾಟ್‌ ಬಾಕ್ಸ್ ಮೂಲಕ ಕಳಿಸಬೇಕು. ಆಗ ಚಾಲಕರು ಅದನ್ನು ಆಧರಿಸಿ ಅವರನ್ನು ಕರೆದುಕೊಂಡು ಹೋಗಲು ಆಗಮಿಸುತ್ತಾರೆ.

ಒಮ್ಮೆ ಒಟಿಪಿ ಕ್ರಿಯೇಟ್ ಆದ ಬಳಿಕ ಮಧ್ಯರಾತ್ರಿ ತನಕ ನಗರದ ಯಾವುದೇ ಭಾಗದಿಂದಲೂ ಇದೇ ಒಟಿಪಿ ಬಳಕೆ ಮಾಡಿಕೊಂಡು ಸಂಚಾರ ನಡೆಸಬಹುದಾಗಿದೆ. ಈ ವ್ಯವಸ್ಥೆ ಪ್ರಯಾಣಿಕರು ಆನ್‌ಲೈನ್‌ನಲ್ಲಿದ್ದಾರೋ ಅಫ್‌ಲೈನ್ ನಲ್ಲಿದ್ದಾರೋ ಎಂದು ತಿಳಿಯಲು ಸಹ ಸಹಾಯ ಮಾಡಲಿದೆ. ಸರ್ಕಾರ ನಿಗದಿಪಡಿಸಿದ ಮೀಟರ್‌ ದರದ ಆಧಾರದ ಮೇಲೆ ಮಾತ್ರ ಈ ಅಪ್ಲಿಕೇಶನ್‌ನಲ್ಲಿ ಹಣ ಪಾವತಿ ಮಾಡಬಹುದು.

ಬ್ರಾಂಡ್ ಪ್ರೈಡ್ ಮೊಬಿಲಿಟಿಯ ಸಿಒಇ ಎನ್. ನಿರಂಜನಾರಾಧ್ಯ ಹೇಳುವಂತೆ, "ಒಮ್ಮೆ ಜನರು ಒಟಿಪಿ ರಚಿಸಿಕೊಂಡ ಬಳಿಕ ತಮ್ಮ ಪಿಕ್ ಅಪ್ ಲೋಕೇಷನ್‌ ಅನ್ನು ಚಾಲಕರಿಗೆ ಕಳಿಸಬಹುದು. ಇದರಿಂದಾಗಿ ಚಾಲಕರಿಗೂ ತಮ್ಮ ಪ್ರಯಾಣಿಕರನ್ನು ಬೇಗನೇ ಹುಡುಕಲು ಅನುಕೂಲವಾಗುತ್ತದೆ. ಇದರಿಂದಾಗಿ ರೈಡ್ ಅನ್ನು ಬೇಗನೇ ಪೂರ್ಣಗೊಳಿಸಬಹುದು ಮತ್ತು ಪ್ರತಿದಿನ ಹೆಚ್ಚು ರೈಡ್ ನಡೆಸಲು ಸಹ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.

'ನಗರ' ಅಪ್ಲಿಕೇಶನ್‌ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಮಾತುಕತೆ ಅಂತಿಮವಾದರೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

'ನಗರ' ಅಪ್ಲಿಕೇಶನ್‌ ಅಡಿಯಲ್ಲಿ ಸದ್ಯ 6,200ಕ್ಕೂ ಅಧಿಕ ಆಟೋ ಚಾಲಕರು ಇದ್ದಾರೆ. ಅಂಕಿ ಅಂಶಗಳ ಪ್ರಕಾರ ಅವರು 7,238 ಟ್ರಿಪ್‌ ಪೂರ್ಣಗೊಳಿಸಿದ್ದಾರೆ ಮತ್ತು ಪ್ರತಿ ಟ್ರಿಪ್‌ಗೆ ಕನಿಷ್ಠ 118 ರೂ. ಗಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+