Namma Metro: ಪ್ರಯಾಣ ದರ ಏರಿಕೆ ಇಲ್ವಾ.! ಪತ್ರಿಕಾಗೋಷ್ಟಿ ಧಿಡೀರ್ ರದ್ದುಗೊಂಡಿದ್ದೇಕೆ?

ನಮ್ಮ ಮೆಟ್ರೋ (Namma Metro) ಸಂಚಾರ ದರವನ್ನು ಹೆಚ್ಚಳ ಮಾಡುವ ಸಂಬಂಧ ಇಂದು (ಶನಿವಾರ) ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಧಿಡೀರ್ ರದ್ದು ಮಾಡಲಾಗಿದೆ.

ಬಿಎಂಆರ್ಸಿಎಲ್ ಮಂಡಳಿಯು ಶುಕ್ರವಾರ ಆಂತರಿಕ ಸಭೆಯಲ್ಲಿ ಚರ್ಚೆ ನಡೆದು ದರ ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಮೆಟ್ರೋ ಸಂಚಾರದಲ್ಲಿ ಸುಮಾರು ಶೇ. ೩೦ರಷ್ಟು ಹೆಚ್ಚಳವಾಗಬಹುದು ಎಂದು ವರದಿಗಳಾಗಿತ್ತು. ಮೂವರು ಸದಸ್ಯರಿದ್ದ ದರ ನಿಗದಿ ಸಮಿತಿ (ಎಫ್ ಎಫ್ಸಿ) ಶೇ 40-45 ರಷ್ಟು ಹೆಚಳ ಮಾಡಲು ಶಿಫಾರಸ್ಸು ಮಾಡಿತ್ತು ಎಂದು ಹೇಳಲಾಗಿತ್ತು. ಹೈಕೋಟ್‌ ನಿವೃತ್ತ ನ್ಯಾಯಮೂರ್ತಿ ಆರ್‌. ಥರಣಿ, ಕೇಂದ್ರ ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತಿಂದರ್‌ ಪಾಲ್‌ಸಿಂಗ್‌ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಇ.ವಿ. ರಮಣರೆಡ್ಡಿ ಅವರನ್ನು ಒಳಗೊಂಡ ದರ ನಿಗದಿ ಸಮಿತಿಯು ದರ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು.

ನಮ್ಮ ಮೆಟ್ರೋ ದರ ಏರಿಕೆ ಇಲ್ವಾ?: ಪತ್ರಿಕಾಗೋಷ್ಟಿ ಧಿಡೀರ್ ರದ್ದು

ಇದಲ್ಲದೇ ಇತ್ತೀಚಿನ ವರ್ಷದಲ್ಲಿ ನಮ್ಮ ಮೆಟ್ರೋ ಬಹಳಷ್ಟು ಬೆಂಗಳೂರಿನ ಬಹಳಷ್ಟು ಭಾಗಗಳಿಗೆ ವಿಸ್ತರಣೆಯಾಗಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಯೆಲ್ಲೋ ಮಾರ್ಗದಲ್ಲಿ ಚಾಲನೆ ಸಿಗಲಿದೆ. ಇದಲ್ಲದೇ ದಿನದಿಂದ ದಿನಕ್ಕೆ ಮೆಟ್ರೋ ತನ್ನ ಮಾರ್ಗದಲ್ಲಿ ವಿಸ್ತರಣೆ ಮಾಡುತ್ತಿದ್ದು, ದಿನನಿತ್ಯ ಲಕ್ಷಗಟ್ಟಲೇ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮೆಟ್ರೋದಲ್ಲಾಗುವ ವೆಚ್ಚದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.ಪ್ರಸ್ತುತ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ದರ 60 ರೂ. ಇತ್ತು. ಈಗ ಅದನ್ನು ಕ್ರಮವಾಗಿ 15 ರೂ. ಹಾಗೂ 80 ರೂ.ಗೆ ಹೆಚ್ಚಿಸಲು ನಮ್ಮ ಮೆಟ್ರೋ ಚಿಂತನೆ ನಡೆಸಿತ್ತು.

ಒಟ್ಟಾರೇ ಇದೇ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ಬಿಎಂಆರ್‌ಸಿಎಲ್‌ ಪತ್ರಿಕಾಗೋಷ್ಟಿ ನಡೆಸಿ ದರ ಏರಿಕೆಯ ಬಗ್ಗೆ ವಿವರಣೆ ನೀಡಬೇಕಿತ್ತು. ಆದರೆ ಬಿಎಂಆರ್‌ಸಿಎಲ್‌ ಕರೆದಿದ್ದ ಪ್ರೆಸ್ ಮೀಟ್ ಏಕಾಏಕಿ ಕ್ಯಾನ್ಸಲ್ ಮಾಡಿದೆ. ಬಿಎಂಆರ್‌ಸಿಎಲ್‌ ತಾನು ಕರೆದಿದ್ದ ಪ್ರೆಸ್ ಮೀಟ್ ರದ್ದುಗೊಳಿಸಿದ್ದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ದರ ಏರಿಕೆ ಖಚಿತವಾಗಿದ್ದರೂ ಕನಿಷ್ಠ, ಗರಿಷ್ಠದ ಜೊತೆ ಮಧ್ಯದಲ್ಲಿ ಬರುವ ನಿಲ್ದಾಣಗಳಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವುದರ ಬಗ್ಗೆ ಗೊಂದಲ ಇರುವ ಕಾರಣ ಪತ್ರಿಕಾಗೋಷ್ಟಿಯನ್ನು ಕ್ಯಾನ್ಸಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ತನ್ನೊಳಗೆ ಇರುವ ಗೊಂದಲಗಳನ್ನು ಇತ್ಯರ್ಥ ಮಾಡಿ ಮುಂದಿನ ವಾರ ಮೆಟ್ರೋ ದರ ಏರಿಕೆ ಸಂಬಂಧ ಪತ್ರಿಕಾಗೋಷ್ಟಿ ನಡೆಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಕಳೆದ 8 ವರ್ಷದಿಂದ ಅಂದರೆ 2017 ರಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿತ್ತು ಎನ್ನಲಾಗಿದೆ.

ಮೆಟ್ರೋ ನಿಯಮದ ಪ್ರಕಾರ ಪ್ರತಿ 2 ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಮಾಡಬೆಕು. ಆದರೆ, ಕಳೆದ ಏಳು ವರ್ಷಗಳಿಂದ ನಾನಾ ಕಾರಣಗಳಿಂದ ದರ ಪರಿಷ್ಕರಣೆ ಆಗಿರಲಿಲ್ಲ. ಈ ಮಧ್ಯೆ ಒಂದೆಡೆ ಜಾಲ ವಿಸ್ತರಣೆ ಮತ್ತೂಂದೆಡೆ 3 ಬೋಗಿಗಳಿಂದ 6 ಬೋಗಿಗಳಾಗಿ ಮಾರ್ಪಾಡು ಮತ್ತಿತರ ಕಾರಣಗಳಿಂದ ಕಾರ್ಯಾಚರಣೆ ವೆಚ್ಚ ಏರಿಕೆಯಾಗಿದೆ ಎಂಬ ವಾದವನ್ನೂ ಅಧಿಕಾರಿಗಳು ಹೇಳಿದ್ದು ಹೀಗೆ ನಾನಾ ಕಾರಣಗಳಿಗೆ ದರ ಹೆಚ್ಚಳಕ್ಕೆ ನಮ್ಮ ಮೆಟ್ರೋ ಸಿದ್ದತೆ ನಡೆಸಿತ್ತು.

ಬೆಂಗಳೂರು ಮೆಟ್ರೋ: ವಿಸ್ತರಣೆ ಮತ್ತು ದರ

ಬೆಂಗಳೂರು ಮೆಟ್ರೋ ಜಾಲವು 2017ರಿಂದ ಗಣನೀಯವಾಗಿ ವಿಸ್ತರಿಸಿದೆ. ಆರಂಭದ 42 ಕಿ.ಮೀ.ಯಿಂದ ಇಂದು 76 ಕಿ.ಮೀ.ಗೆ ವಿಸ್ತರಿಸಿದೆ. ನೇರಳೆ ಮಾರ್ಗದ ಚಲ್ಲಘಟ್ಟ-ವೈಟ್‌ಫೀಲ್ಡ್‌ ಮತ್ತು ಹಸಿರು ಮಾರ್ಗದ ರಾಷ್ಟ್ರೀಯ ರೇಷ್ಮೆ ಸಂಸ್ಥೆ-ಮಾದಾವರ ಮಾರ್ಗಗಳು ಈ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಮೊದಲ ಹಂತ ಪೂರ್ಣಗೊಂಡಾಗ, ಅಂದರೆ 2017ರಲ್ಲಿ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಲಾಗಿತ್ತು. ಆದರೆ, 2020ರಲ್ಲಿ ಸ್ಮಾರ್ಟ್‌ ಕಾರ್ಡ್‌ಗೆ ನೀಡುತ್ತಿದ್ದ ಶೇ. 15ರಷ್ಟು ರಿಯಾಯ್ತಿಯನ್ನು ಶೇ.5ಕ್ಕೆ ಇಳಿಸಲಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+