ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಹಲವು ಸಮಸ್ಯೆಗಳಿಗೆ ದೊಡ್ಡ ಪರಿಹಾರವಾಗಿ ಬದಲಾಗಿದೆ. ಅದರಲ್ಲೂ ವೇಗದ ಸೇವೆಯಿಂದಾಗಿ ಭಾರೀ ಬೇಡಿಕೆಯನ್ನು ಹೊಂದಿದೆ. ಈಗಾಗಲೇ ಬೆಂಗಳೂರಿನಾದ್ಯಂತ ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. BEML ಲಿಮಿಟೆಡ್ ತನ್ನ ಅತ್ಯಾಧುನಿಕ ಚಾಲಕರಹಿತ ಮೆಟ್ರೋ ಟ್ರೈನ್‌ಸೆಟ್ (5RS-DM) ನ ಮೂಲಮಾದರಿಯನ್ನು ಬಿಡುಗಡೆ ಮಾಡಿದೆ. ಇದನ್ನು ವಿಶೇಷವಾಗಿ ಮುಂಬರುವ ನಮ್ಮ ಮೆಟ್ರೋ ಫೇಸ್-2, 2A, ಮತ್ತು 2B ಕಾರಿಡಾರ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ನೂತನ ರೈಲುಗಳು ನಗರದ ಪ್ರಮುಖ ಏರ್‌ಪೋರ್ಟ್ (Blue Line) ಮತ್ತು ಪಿಂಕ್ ಲೈನ್‌ಗಳಲ್ಲಿ (Pink Line) ಸಂಚರಿಸಲಿವೆ, ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಸ ಸಂಚಲನ ಸೃಷ್ಟಿಸಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಅವರು ಸರಿಯಾದ ನಿಯಮಗಳೊಂದಿಗೆ ಇದೀಗ ಪಿಂಕ್ ಲೈನ್ ಮೆಟ್ರೋದಲ್ಲಿ ಮೊದಲ ಚಾಲಕ ರಹಿತ ಮೆಟ್ರೋವನ್ನು ಅನಾವರಣಗೊಳಿಸಿದರು. ಈ ವಿಶೇಷ ಸಂದರ್ಭದಲ್ಲಿ, ಮೆಟ್ರೋ ಅಧಿಕಾರಿಗಳು ಸುಸಜ್ಜಿತ ಟ್ರೈನ್‌ಸೆಟ್‌ನ ಓಡಾಟ ಪರೀಕ್ಷೆಯನ್ನು ಮಾಡಿದರು. ಈ ಮೂಲಕ ಮೆಟ್ರೋ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.
ಸದ್ಯ ಅನಾವರಣಗೊಳಿಸಿರುವ ರೈಲು ಸಂಪೂರ್ಣ ಚಾಲಕರಹಿತ ಕಾರ್ಯಾಚರಣೆಗೆ ಸಿದ್ಧವಾಗಿದೆ. ಕಮ್ಯುನಿಕೇಶನ್-ಬೇಸ್ಡ್ ರೈಲು ನಿಯಂತ್ರಣ (CBTC) ತಂತ್ರಜ್ಞಾನದೊಂದಿಗೆ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. .
ಇನ್ನು ಮೆಟ್ರೋ ರೈಲುಗಳ ಅಭಿವೃದ್ಧಿಯಲ್ಲಿ ಸುರಕ್ಷತೆ ಮತ್ತು ವಿನ್ಯಾಸಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಈ ಟ್ರೈನ್‌ಸೆಟ್‌ಗಳು ಬೆಂಕಿಯಿಂದ ರಕ್ಷಣೆ, ಕಟ್ಟುನಿಟ್ಟಾದ ಅಂತರರಾಷ್ಟ್ರೀಯ ಸುರಕ್ಷತಾ ನಿಯಮಗಳನ್ನು ಸಹ ಪೂರೈಸುತ್ತವೆ. ಇದರಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸುವ ಸುಧಾರಿತ ವ್ಯವಸ್ಥೆಗಳನ್ನು ಸಹ ಅಳವಡಿಸಲಾಗಿದೆ.
ಸ್ವಯಂಚಾಲಿತ ವ್ಯವಸ್ಥೆಯ ಜತೆಗೆ, ಪ್ರಯಾಣಿಕರ ಅನುಭವ ಸುಧಾರಿಸಲು ಒಳಾಂಗಣ ವಿನ್ಯಾಸದಲ್ಲೂ ಸುಧಾರಿಸಲಾಗಿದೆ. ಹೊಸ ಚಾಲಕರಹಿತ ಟ್ರೈನ್‌ಸೆಟ್‌ಗಳು ಆರಾಮವಾಗಿ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ.
ಟ್ರೈನ್‌ಸೆಟ್‌ಗಳ ವಿನ್ಯಾಸ ಮತ್ತು ಎಂಜಿನಿಯರಿಂಗ್ ಕೆಲಸವನ್ನು BEML ನ ಬೆಂಗಳೂರು ಘಟಕದಲ್ಲಿರುವ ಆಂತರಿಕ ತಂಡಗಳೇ ನಿರ್ವಹಿಸಿದ್ದು ಮತ್ತಷ್ಟು ವಿಶೇ. ₹3,177 ಕೋಟಿ ಗುತ್ತಿಗೆಯ ಪ್ರಮುಖ ಭಾಗವಾಗಿ, ಭಾರತದ ಚಾಲಕರಹಿತ ನಗರ ಸಾರಿಗೆ ವ್ಯವಸ್ಥೆಗಳಿಗೆ BEML ನ ಕೊಡುಗೆ ನಿರಂತರವಾಗಿ ನೀಡುತ್ತಲೇ ಇದೆ. BMRCL ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಮಾತನಾಡಿ, "ಸಾರಿಗೆ ಅನುಭವವನ್ನು ಹೆಚ್ಚಿಸುವ ಅತ್ಯಾಧುನಿಕ ಟ್ರೈನ್‌ಸೆಟ್‌ಗಳನ್ನು ಪೂರೈಸುವ BEMLನ ಬದ್ಧತೆಯನ್ನು ಮತ್ತೆ ತೋರಿಸಿದೆ" ಎಂದು ಸ್ಪಷ್ಟಪಡಿಸಿದರು.
ಬಹುನಿರೀಕ್ಷಿತ ಏರ್‌ಪೋರ್ಟ್ ಲೈನ್ ಬೆಂಗಳೂರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಪಿಂಕ್ ಲೈನ್ ದಕ್ಷಿಣದ ಕಾಳೇನ ಅಗ್ರಹಾರದಿಂದ ಉತ್ತರದಲ್ಲಿ ನಾಗವಾರದವರೆಗೆ ವಿಸ್ತರಿಸಲಿದೆ. BEML ಅಧ್ಯಕ್ಷ ಮತ್ತು ಎಂ.ಡಿ. ಶಂತನು ರಾಯ್, ಈ ಮಾದರಿ ಅನಾವರಣದ ವೇಳೆ ಮಾತನಾಡಿದ್ದು, "ಭಾರತದ ಬೆಳೆಯುತ್ತಿರುವ ನಗರಗಳಲ್ಲಿ ಸುಧಾರಿಸುವ ನಿಟ್ಟಿನಲ್ಲಿ ಈ ಮಾದರಿ ಒಂದು ಮೈಲಿಗಲ್ಲು" ಎಂದು ಅಭಿಪ್ರಾಯಪಟ್ಟರು.
More From GoodReturns

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್‌ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Flight Ticket: ಫ್ಲೈಟ್ ಟಿಕೆಟ್ನಲ್ಲಿ ತಪ್ಪಾಗಿದ್ಯಾ? ಹಾಗಾದ್ರೆ 24 ಗಂಟೆಗಳಲ್ಲಿ ಕರೆಕ್ಟ್ ಮಾಡೋದು ಹೇಗೆಂದು ತಿಳಿಯಿರಿ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್‌ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ



Click it and Unblock the Notifications