ನಮ್ಮ ಮೆಟ್ರೋ (Namma Metro) ದೈನಂದಿನ ಸಾರ್ವಜನಿಕ ಸೇವೆಗಳಲ್ಲೊಂದು. ಆದ್ರೆ ಇತ್ತೀಚೆಗೆ ದರ ಏರಿಕೆಯಿಂದಾಗಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ದಿನ ಹೋದಂತೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಲಾಭದಲ್ಲೇ ಇದೆ. ಇದೀಗ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲು ಬಿಎಮ್‌ಆರ್‌ಸಿಎಲ್ (BMRCL) ಸಿದ್ಧವಾಗಿದೆ.

ಪಿಂಕ್ ಲೈನ್ ಮೆಟ್ರೋ (Pink Line Metro) ಮಾರ್ಗವನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದೀಗ ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ. ಹಾಗಿದ್ರೆ ಯಾವ ಮಾರ್ಗಕ್ಕೆ ಮೆಟ್ರೋ ಮತ್ತಷ್ಟು ವಿಸ್ತರಿಸಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಂಕ್ ಲೈನ್ ಮೆಟ್ರೋ ಮತ್ತಷ್ಟು ವಿಸ್ತರಣೆ:
ಕಾಳೇನ ಅಗ್ರಹಾರಿಂದ ನಾಗವಾರ ತನಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಮ್ಮ ಮಟ್ರೋ ಇದೀಗ ಪಿಂಕ್ ಲೈನ್ ಮೆಟ್ರೋವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಇದೀಗ ಈ ಯೋಜನೆ 2026ರ ಮೇ ತಿಂಗಳಲ್ಲಿ ಕಾರ್ಯಾರಂಭ ಶುರುವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಮೇ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಡಿಕೆ ಶಿವಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಅತ್ಯಂತ ಉದ್ದದ ಮಾರ್ಗ!
ಒಂದು ವೇಳೆ ಈ ಮಾರ್ಗ ಕಾರ್ಯಾರಂಭಕ್ಕೆ ಬಂದರೆ ಬೆಂಗಳೂರಿನ ಅತೀ ಉದ್ದದ ಮೆಟ್ರೋ ಮಾರ್ಗವಾಗಲಿದೆ. ಇನ್ನು ಈ ಲೈನ್‌ನ ಹೊಸ ಮಾರ್ಗ 2026ರ ಮೇ ವೇಳೆಗೆ ಕಾರ್ಯಾರಂಭಕ್ಕೆ ಬರಲಿದೆ ಎನ್ನಲಾಗಿದೆ. ಈ ಮೂಲಕ ಬರೀ 7 ತಿಂಗಳಲ್ಲಿ ಮೆಟ್ರೋ ವಿಸ್ತರಣಾ ಮಾರ್ಗ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.
ಪಿಂಕ್‌ಲೈನ್ ಮೆಟ್ರೋ ಸಂಚರಿಸುವ ಮಾರ್ಗಗಳು:
ಇನ್ನು ಪಿಂಕ್ ಲೈನ್ ಮಾರ್ಗದ ಮೆಟ್ರೋ, ಕಾಳೇನ ಅಗ್ರಹಾರ, ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ಟ್ರೀ ಪಾರ್ಕ್ ಹೀಗೆ ಬೆಂಗಳೂರು ಸಂಚಾರ ಮಾಡಲಿದೆ. ಈ 13.76 ಕಿಮೀ ಉದ್ದದ ಮಾರ್ಗವು ಬೆಂಗಳೂರಿನಾದ್ಯಂತ ಸಂಚಾರವನ್ನು ಸುಗಮಗೊಳಿಸಿ, ಜನರನ್ನು ಟ್ರಾಫಿಕ್‌ನಿಂದ ಮುಕ್ತಗೊಳಿಸಲಿದೆ. ಅಲ್ಲದೇ ಉತ್ತರ-ದಕ್ಷಿಣ ಸಂಪರ್ಕವನ್ನು ಬಲಪಡಿಸಲಿದೆ.
ಯೆಲ್ಲೋ ಲೈನ್‌ನಲ್ಲಿ ಐದನೇ ಮೆಟ್ರೋ!
ಇನ್ನು ಯೆಲ್ಲೋ ಲೈನ್ ಮೆಟ್ರೋ ಬೆಂಗಳೂರಿನಲ್ಲಿ ಆರಂಭವಾಗಿ ಮೂರು ತಿಂಗಳಷ್ಟೇ ಕಳೆದಿದೆ. ಅದರಲ್ಲೂ ನವೆಂಬರ್ 1 ರಿಂದ ಈ ಮಾರ್ಗದಲ್ಲಿ ಹೊಸ ರೈಲು ಕಾರ್ಯಾರಂಭ ಶುರು ಮಾಡಿದೆ. ಈ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಸುಗಮವಾಗಲಿದೆ. ಇದುವರೆಗೆ ಯೆಲ್ಲೋ ಮೆಟ್ರೋ ಪ್ರಯಾಣಿಕರು ಕನಿಷ್ಠ ಅಂದರೂ ಒಂದು ರೈಲು ಹೋದ ಬಳಿಕ, 19 ನಿಮಿಷಗಳ ಕಾಲ ಕಾಯಬೇಕಿತ್ತು. ಆದ್ರೆ ಈ ಹೊಸ ರೈಲಿನಿಂದಾಗಿ ಸಮಯ ಸ್ವಲ್ಪ ಕಡಿಮೆಯಾಗಲಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲು ಸಂಖ್ಯೆ, ಮಾರ್ಗ ವಿಸ್ತರಣೆ ಹೀಗೆ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಇದೀಗ ಪಿಂಕ್ ಮೆಟ್ರೋ ಲೈನ್ ಮತ್ತಷ್ಟು ವಿಸ್ತರಣೆಯಾಗುತ್ತಿದ್ದು ಆ ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿರುವ ಜನರಿಗೆ ಇದೀಗ ಬಿಎಂಆರ್‌ಸಿಎಲ್ ಮೇ 2026ರಲ್ಲಿ ಗುಡ್ ನ್ಯೂಸ್ ನೀಡುವ ನಿರೀಕ್ಷೆಯಿದೆ.


Click it and Unblock the Notifications