ನಮ್ಮ ಮೆಟ್ರೋ (Namma Metro) ಸೇವೆ ಬೆಂಗಳೂರಿನಲ್ಲಿ ಆರಂಭವಾಗಿ ದಶಕಗಳೇ ಕಳೆದಿದೆ. ದಿನಕ್ಕೆ ಲಕ್ಷಗಟ್ಟಲೆ ಪ್ರಯಾಣಿಕರನ್ನು ಸಾಗಿಸುವ ಮೆಟ್ರೋ ರೈಲು, ಇಂದು ಸಾರ್ವಜನಿಕರ ಜೀವನಾಡಿಯಾಗಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ಸ್ಥಾಪನೆಯಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಾದ್ಯಂತ ಮೆಟ್ರೋ ಸಂಚರಿಸುವುದರಂತೂ ನಿಜ. ವೇಗದ ಪ್ರಯಾಣ, ಸಮಯ ಪಾಲನೆ, ಟ್ರಾಫಿಕ್‌ನಿಂ ಮುಕ್ತಿ, ಹೀಗೆ ಹತ್ತು ಹಲವು ಅನುಕೂಲಗಳೊಂದಿಗೆ ಸಾರ್ವಜನಿಕರ ಆದ್ಯತೆಯ ಸಾರಿಗೆ ಸೇವೆ ಇದಾಗಿದೆ. ಇದೀಗ ಹೊಸ ವರ್ಷ 2026ರ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರು ನಮ್ಮ ಮೆಟ್ರೋ ಭಾರೀ ಆದಾಯ ಗಳಿಸಿದೆ. ಡಿಸೆಂಬರ್ 31 ರಂದು ಒಂದೇ ದಿನ ಬೆಂಗಳೂರು ಮೆಟ್ರೋದಲ್ಲಿ (Bengaluru Metro Income) 8,93,903 ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಪ್ರಸ್ತುತ ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಮೂರು ಮಾರ್ಗಗಳಲ್ಲಿ ಸಂಚರಿಸಿದ ಪ್ರಯಾಣಿಕರಿಂದ ಒಂದೇ ದಿನದಲ್ಲಿ ಕೋಟಿ ಕೋಟಿ ಆದಾಯ ನಮ್ಮ ಮೆಟ್ರೋದ ಬೊಕ್ಕಸಕ್ಕೆ ತುಂಬಿದೆ. ಹಾಗಿದ್ರೆ ಒಂದು ದಿನದಲ್ಲಿ ಗಳಿಸಿದ ಆದಾಯ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಹೊಸ ಮೈಲಿಗಲ್ಲು ಸೃಷ್ಟಿಸಿದ "ನಮ್ಮ ಮೆಟ್ರೋ"!
2026 ಆಗಮನವಾಗುತ್ತಿದ್ದಂತೆ, ನಮ್ಮ ಮೆಟ್ರೋ ಐತಿಹಾಸಿಕ ಸಾಧನೆ ಮಾಡಿದೆ. ಡಿಸೆಂಬರ್ 31ರಂದು (ಹೊಸ ವರ್ಷ 2026ರ ಸಂದರ್ಭದಲ್ಲಿ) ಒಂದೇ ದಿನದಲ್ಲಿ ಒಟ್ಟು 8,93,903 ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಇದು ನಮ್ಮ ಮೆಟ್ರೋ ಇತಿಹಾಸದಲ್ಲೇ ಅತೀ ಹೆಚ್ಚಿನ ಸಂಖ್ಯೆಯಾಗಿದೆ. ಜನವರಿ 1ರ ಮಧ್ಯರಾತ್ರಿ 3:10ರವರೆಗೆ ವಿಸ್ತರಿಸಿದ್ದ ಸೇವೆಗಳಿಂದ ಮೆಟ್ರೋ, ಒಟ್ಟು ₹3.08 ಕೋಟಿ ಆದಾಯ ಗಳಿಸಿದೆ ಎಂದು ವರದಿಯಾಗಿದೆ.
ಕೋಟಿ ಕೋಟಿ ಆದಾಯ
ಹಳದಿ, ನೇರಳೆ ಮತ್ತು ಹಸಿರು ಮಾರ್ಗ ಸೇರಿದಂತೆ ಎಲ್ಲಾ ಮೆಟ್ರೋ ಕಾರಿಡಾರ್‌ಗಳಲ್ಲಿ ಸಮಯ ಕಳೆಯುತ್ತಿದ್ದಂತೆ ಜನಸಂದಣಿ ಕೂಡಾ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಲಕ್ಷಗಟ್ಟಲೆ ಪ್ರಯಾನಿಕರಿಂದ ನಮ್ಮ ಮೆಟ್ರೋ ಆದಾಯ ಒಂದೇ ದಿನದಲ್ಲಿ 3.08 ಕೋಟಿ ಆದಾಯ ಗಳಿಸಿದ್ದು ಅಚ್ಚರಿಯ ವಿಷಯವೇ ಸರಿ. ಅಲ್ಲದೇ ಈ ಬಾರಿ ಬಿಎಂಆರ್‌ಸಿಎಲ್ ಕೂಡಾ ಹೊಸ ವರ್ಷದ ಸಂಭ್ರಮಾಚರಣೆಗೆ ಹೋಗುವವರಿಗಾಗಿ ಮತ್ತು ತಡರಾತ್ರಿ ಮನೆಗೆ ಮರಳುವವರಿಗೆ ಅನುಕೂಲವಾಗುವಂತೆ ಡಿಸೆಂಬರ್ 31ರ ಬೆಳಗ್ಗೆ 5 ಗಂಟೆಯಿಂದ ಜನವರಿ 1ರ ಮುಂಜಾನೆ 3:10ರವರೆಗೆ ಮೆಟ್ರೋ ಸೇವೆ ಸಲ್ಲಿಸುವುದಾಗಿ ಮೊದಲೇ ತಿಳಿಸಿತ್ತು. ಇದರಿಂದ ಪ್ರಯಾಣಿಕರಿಗೂ ಪ್ರಯೋಜನವಾಗಿದೆ.
ಪ್ರಯಾಣಿಕರು ಹೇಳಿದ್ದೇನು?
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಅನುಕೂಲವಾಗುವಂತೆ ಮೆಟ್ರೋ ಸೇವೆಯನ್ನು ವಿಸ್ತರಿಸಿದ್ದು ಬಹಳ ಪ್ರಯೋಜನವಾಗಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ತಡರಾತ್ರಿ ಸೆಲೆಬ್ರೇಷನ್ ಮುಗಿಸಿ ಮನೆಗೆ ಮರಳಲು ಮೆಟ್ರೋ ಬಹಳಷ್ಟು ಸಹಕಾರಿಯಾಗಿದೆ. ಕೆಲವೊಮ್ಮೆ ಟ್ಯಾಕ್ಸಿ, ಕ್ಯಾಬ್‌ಗಳು ಬುಕ್ ಆಗುತ್ತಿರಲಿಲ್ಲ, ಇನ್ನೂ ಕೆಲವು ಬಾರಿ ಆಟೋ, ಕ್ಯಾಬ್‌ಗಳಿಗೆ ಹೆಚ್ಚುವರಿ ದುಡ್ಡು ಕೊಟ್ಟು ಬರಬೇಕಿತ್ತು. ಆದ್ರೆ ನಮ್ಮ ಮೆಟ್ರೋದಿಂದಾಗಿ ಸುರಕ್ಷಿತವಾಗಿ ಮನೆಗೆ ತಲುಪಿದ್ದೇವೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.


Click it and Unblock the Notifications