"ನಮ್ಮ ಮೆಟ್ರೋ" (Namma Metro) ಪ್ರಸ್ತುತ ಲಕ್ಷಾಂತರ ಪ್ರಯಾಣಿಕರು ಓಡಾಡುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು, ತ್ವರಿತವಾಗಿ ತಲುಪಲು ಮೆಟ್ರೋ ಬಹಳಷ್ಟು ಅನುಕೂಲವಾಗಿದೆ. ಈಗಾಗಲೇ ಬೆಂಗಳೂರಿನಾದ್ಯಂತ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಈ ಬಗ್ಗೆ ಕೆಲಸಗಳನ್ನೂ ಮಾಡುತ್ತಿದೆ. ಈ ವರ್ಷದ ಆಗಸ್ಟ್‌ನಲ್ಲಷ್ಟೇ ಬೆಂಗಳೂರಿಗೆ ಯೆಲ್ಲೋ ಲೈನ್ ಮೆಟ್ರೋ ಸೇವೆಯನ್ನು ಪರಿಚಯಿಸಿತ್ತು. ಈಗಾಗಲೇ ಈ ಲೈನ್‌ನಲ್ಲಿ 5 ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸುತ್ತಿದೆ. ಈ ಮಧ್ಯೆ 6ನೇ ರೈಲಿನ ಆಗಮನವಾಗಿದ್ದು, ಕಾರ್ಯಾಚರಣೆಗೆ ಸಜ್ಜಾಗಿ ನಿಂತಿದೆ.

ಆರಂಭದಲ್ಲಿ 3 ರೈಲುಗಳಿದ್ದ ಯೆಲ್ಲೋ ಲೈನ್ ಪ್ರಸ್ತುತ 5 ರೈಲುಗಳು ಕಾರ್ಯನಿರ್ವಹಿಸುತ್ತಿದೆ. ಇದೀಗ ಮತ್ತೊಂದು ರೈಲಿನ ಆಗಮನವಾಗಿದ್ದು, ಕೆಲವೇ ದಿನಗಳಲ್ಲಿ ಅದೂ ಕೂಡಾ ಕಾರ್ಯಾಚರಣೆ ಆರಂಭಿಸಲಿದೆ. ಈ ಮೂಲಕ ಪ್ರಯಾಣಿಕರು ಕಾಯುವ ಸಮಯ ಮತ್ತಷ್ಟು ಕಡಿಮೆಯಾಗಲಿದೆ.
ಯೆಲ್ಲೋ ಲೈನ್‌ಗೆ 6ನೇ ರೈಲು!
ಹೌದು, ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರ ಸಂಪರ್ಕ ಹೊಂದಿರುವ ಹಲದಿ ಮಾರ್ಗದ ಮೆಟ್ರೋಗೆ ಇದೀಗ ಆರನೇ ರೈಲಿನ 6 ಬೋಗಿಗಳು ಬೆಂಗಳೂರಿಗೆ ಆಗಮಿಸಿದೆ ಎಂದು ವರದಿಯಾಗಿದೆ. ಕೊಲ್ಕತ್ತಾದಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದೆ. ವಾರಾಂತ್ಯದಲ್ಲಿ ಮೊದಲ ಮೂರು ಬೋಗಿಗಳು ಹೆಬ್ಬಗೋಡಿ ಡಿಪೋಗೆ ತಲುಪಿದ್ದು, ಉಳಿದ ಮೂರು ಬೋಗಿಗಳು ನಂತರ ಬಂದಿಳಿದಿದೆ.
ಯಾವಾಗ ಕಾರ್ಯಾಚರಣೆ ಆರಂಭ?
ಇನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಈ ರೈಲಿನ ಸ್ಥಿರತೆ ಮತ್ತೆ ಕಾರ್ಯಾಚರಣೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ಟೆಸ್ಟ್‌ಗಲು ನಡೆಸಿದ ನಂತರವೇ ಇದರ ಕಾರ್ಯಾಚರಣೆ ಆರಂಭವಾಗಲಿದೆ. ಅಂದರೆ ಡಿಸೆಂಬರ್ ಮೂರನೇ ವಾರದಲ್ಲಿ ಯೆಲ್ಲೋ ಲೈನ್‌ನ ಆರನೇ ರೈಲು ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ
ಸದ್ಯ ಹಳದಿ ಮಾರ್ಗದಲ್ಲಿ ಐದು ಯೆಲ್ಲೋ ಮೆಟ್ರೋಗಳು ಕಾರ್ಯಾಚರಣೆ ನಡೆಸುತ್ತಿದೆ. ಇದರಿಂದ ಪ್ರಸ್ತುತ 15 ನಿಮಿಷಗಳಿಗೊಮ್ಮೆ ರೈಲುಗಳು ಕಾರ್ಯನಿರ್ವಹಿಸುತ್ತಿದೆ. ಆದ್ರೆ ಆರನೇ ರೈಲಿನ ಆಗಮನದಿಂದ ಈ ಸಮಯ ಮತ್ತಷ್ಟು ಇಳಿಕೆಯಾಗಲಿದೆ. ಅಂದರೆ ಪ್ರಯಾಣಿಕರು ಕಾಯುವಿಕೆಯ ಸಮಯ 15 ನಿಮಿಷದಿಂದ 12 ನಿಮಿಷಕ್ಕೆ ಇಳಿಕೆಯಾಗಲಿದೆ. ಅಲ್ಲದೇ ಪರ್ಪಲ್, ಗ್ರೀನ್ ಲೈನ್‌ನಂತೆ ಯೆಲ್ಲೋ ಲೈನ್‌ನಲ್ಲೂ ಬೆಳಿಗ್ಗೆ 5 ಗಂಟೆಗೆ ಕಾರ್ಯಾಚಣೆ ಆರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಇನ್ನು ಡಿಸೆಂಬರ್, ಜನವರಿ ಅಂತ್ಯದೊಳಗೆ ಯೆಲ್ಲೋ ಮಾರ್ಗಕ್ಕೆ ಮತ್ತೆರಡು ರೈಲುಗಳು ಟಿಟಾಗರ್‌ನಿಂದ ಬೆಂಗಳೂರಿಗೆ ಆಗಮಿಸಲಿದೆ ಎನ್ನಲಾಗಿದೆ. ಅದು ಒಂದು ವೇಳೆ ಬಂದರೆ, ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗಗಳಂತೆ ಯೆಲ್ಲೋ ಲೈನ್‌ನಲ್ಲೂ ಪ್ರತೀ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತದೆ.
ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಹೊಂದಿರುವ ಹಳದಿ ಮಾರ್ಗ ಪ್ರಸ್ತುತ ಐದು ರೈಲುಗಳನ್ನು ಮಾತ್ರ ಹೊಂದಿದೆ. 19.15 ಕಿ.ಮೀ ವಿಸ್ತೀರ್ಣವಿರುವ ಹಳದಿ ಮಾರ್ಗಕ್ಕೆ ಆಗಸ್ಟ್ 15 ರಂದು ಹಸಿರು ನಿಶಾನೆ ತೋರಿಸಲಾಯಿತು. ಇದೀಗ ಆರನೇ ಮೆಟ್ರೋ ರೈಲು ಬೆಂಗಳೂರಿಗೆ ತಲುಪಿದ್ದು, ವಿಶೇಷವೆಂದರೆ ಈ ಹೊಸ ರೈಲು ಚಾಲಕ ರಹಿತವಾಗಿದೆ ಎಂದು ವರದಿಯಾಗಿದೆ.


Click it and Unblock the Notifications