ಬಹುನಿರೀಕ್ಷಿತ ಹಳದಿ ಮಾರ್ಗ ಮೆಟ್ರೋ ಕಾರ್ಯಾಚರಣೆ ಮುಂಬರುವ ವರ್ಷದ ಆರಂಭದಲ್ಲೇ ಶುರುವಾಗಲಿದೆ. ಅಂದರೆ 2025ರ ಜನವರಿ ವೇಳೆಗೆ ಹಳದಿ ಮಾರ್ಗ ಮೆಟ್ರೋ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಬಹಳ ದಿನಗಳ ವಿಳಂಬದ ನಂತರ 2025ರ ಅಂತ್ಯದೊಳಗೆ ಹಳದಿ ಮಾರ್ಗ ಮೆಟ್ರೋ ವಾಣಿಜ್ಯ ಕಾರ್ಯಾಚರಣೆಯನ್ನ ಆರಂಭಿಸಲು ಸಿದ್ಧವಾಗಿದೆ.
ಹಳದಿ ಮಾರ್ಗದಲ್ಲಿ 3 ಮೆಟ್ರೋ ರೈಲುಗಳು ಜನರಿಗೆ ಸೇವೆಯನ್ನ ನೀಡಲಿವೆ. ಅಲ್ಲದೆ 2025ರ ಮುಕ್ತಾಯದೊಳಗೆ ಈ ಸೇವೆ ಆರಂಭವಾಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇದರ ತಯಾರಿ ಶುರುವಾಗಿದ್ದು, ಡಿಸೆಂಬರ್‌ನಲ್ಲಿ ಒಂದು ರೈಲಿನ ಸೆಟ್ ಅನ್ನು ಹಳದಿ ಮಾರ್ಗ ಮೆಟ್ರೋಗೆ ತಲಿಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ಖಚಿತಪಡಿಸಿದ್ದಾರೆ, ಹಾಗೆ ಇದೇ ರೀತಿ ಇನ್ನೊಂದು ಸೆಟ್ ಜನವರಿಯಲ್ಲಿ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹಳದಿ ಮಾರ್ಗ ಮೆಟ್ರೋ ಸಮಚಾರಕ್ಕಾಗಿ ಬೆಕಾಗುವ ಎಲ್ಲಾ ತಯಾರಿಗಳನ್ನ ಬಿರಂ ಆರ್‌ಸಿಎಲ್ ಮಾಡಿದೆ. ಅಲ್ಲದೆ ಇದಕ್ಕಾಗಿ ಸಿವಿಲ್, ಎಲೆಕ್ಟ್ರಾನಿಕ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಆದ್ರೀ ಕೂಡ ಮೆಟ್ರೋ ಸೇವೆಗಳು ಪ್ರಾರಂಭವಾಗುವಲ್ಲಿ ವಿಳಂಬವಾಗ್ತಿರೋದಕ್ಕೆ ಮುಖ್ಯ ಕಾರಣ ರೈಲು ಸೆಟ್‌ಗಳು ಇಲ್ಲದಿರುವುದು ಎಂದು ತಿಳಿದುಬಂದಿದೆ.
ಮೆಟ್ರೋ ರೈಲುಗಳನ್ನ ಒದಗಿಸುವಂತಹ ಕಂಪನಿಗಳಾದ ಟಿಟಗಢ್ ವ್ಯಾಗನ್ಸ್ ರೈಲುಗಳನ್ನ ಒದಗಿಸುವಲ್ಲಿ ವಿಳಂಬವನ್ನ ಎದುರಿಸುತ್ತಿದೆ. ಹೀಗಾಗಿ ಆಗಸ್ಟ್ 2025ರ ವೇಳೆಗೆ ಡಿಸೆಂಬರ್‌ನಲ್ಲಿ ಆರು ಬೋಗಿಗಳ 15 ರೈಲುಗಳನ್ನ ಪೂರೈಸುವುದರೊಂದಿಗೆ ಜನವರಿಯಲ್ಲಿ ಮತ್ತೊಂದು ರೈಲನ್ನು ಒದಗಿಸುವಲ್ಲಿ ಕಂಪನಿ ಬದ್ಧವಾಗಿದೆ. ಇನ್ನು ಆರಂಭದಲ್ಲಿ ಹಳದಿ ಮಾರ್ಗ ಮೆಟ್ರೋ ಮೂರು ರೈಲುಗಳು 30 ನಿಮಿಷಗಳ ಮಧ್ಯಂತರದಲ್ಲಿ ಸೇವೆಗಳನ್ನ ನೀಡಲಿವೆ.
ಹಾಗೆ ಡಿಸೆಂಬರ್ ಅಂತ್ಯದೊಳಗೆ ರೈಲ್ವೇ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ತಪಾಸಣೆಗಳನ್ನ ಆರಂಭ ಮಾಡಲಾಗುವುದು. ಹಾಗೇನಾದ್ರು ಸಾಧ್ಯವಾಗದಿದ್ದರೆ ಜನವರಿಯ ಆರಂಭದಲ್ಲಿ ಇದರ ತಪಾಸಣಾ ಕಾರ್ಯವನ್ನ ಆರಂಭವಾಗುವ ನಿರೀಕ್ಷೆಯಿದೆ. ಈ ಭಾಗಕ್ಕೆ ಹೆಚ್ಚು ರೈಲುಗಳನ್ನ ತಲುಪಿದುತ್ತಿರುವುದರಿಂದ ಈ ಸೇವೆಯ ಫ್ರೀಕ್ವೆನ್ಸಿ ಕೂಡ ಹೆಚ್ಚಾಗುತ್ತದೆ. ಹಳದಿ ಮಾರ್ಗವು ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಒಳಗೊಂಡಂತೆ 18.82 ಕಿಲೋಮೀಟರ್ ಉದ್ದದ ರೈಲು ಮಾರ್ಗವನ್ನ ಹೊಂದಿದೆ. ಇದರಲ್ಲಿ 16 ರೈಲು ನಿಲ್ದಾಣಗಳು ಚಾಲಕರಹಿತ ರೈಲುಗಳನ್ನ ಈ ಭಾಗವು ಒಳಗೊಂಡಿದೆ. ಇನ್ನು ಈ ರೈಲುಗಳು ರೈಲು ಸುರಕ್ಷತಾ ಮಂಡಳಿಯಿಂದ ಸಿಗ್ನಲಿಂಗ್ ಸೇರಿದಂತೆ ಇತರೆ ವ್ಯವಸ್ಥೆಗಳಿಗೆ ತಾಂತ್ರಿಕ ಅನುಮತಿಗಳನ್ನು ಪಡೆದುಕೊಂಡಿದೆ.
ಅಲ್ಲದೆ ನಮ್ಮ ಮೆಟ್ರೋಗೆ ಒಟ್ಟು 36 ರೈಲುಗಳನ್ನ ನೀಡುವಂತೆ ಟಿಟಾಗರ್ ವ್ಯಾಗನ್ಸ್ ಒಪ್ಪಂದವನ್ನ ಮಾಡಿಕೊಂಡಿದೆ. ಆದ್ರೆ ಸದ್ಯೆಕ್ಕೆ ಈಗ ಇನ್ನೂ 35 ರೈಲುಗಳು ಇನ್ನೂ ಪೂರೈಕೆಯಾಗಿಲ್ಲ. ಅಲ್ಲದೆ ಇವುಗಳಲ್ಲಿ ಒಂದು ರೈಲನ್ನ ಚೀನಾದಿಂದ ಆಮದು ಮಾಡಿಕೊಳ್ಳಲಾಗುವುದು. ಹಾಗೆ ಉಳಿದ ರೈಲುಗಳನ್ನು ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾಗುವುದು ಎಂಬ ಮಾಹಿತಿ ಇದೆ.
ಈಗಾಗಲೇ ಪೂರೈಕೆಯಾಗಿರುವ 216 ಕೋಚ್‌ಗಳಲ್ಲಿ 126 ನೇರಳೆ ಮತ್ತು ಹಸಿರು ಲೈನ್‌ಗಳಿಗೆ ಹಂಚಲಾಗಿದೆ. ಹಾಗೆ ಉಳಿದ 90 ಕೋಚ್‌ಗಳನ್ನು ಹಳದಿ ಲೈನ್‌ಗಾಗಿ ಮೀಸಲಿಡಲಾಗಿದೆ. ಆದ್ರೂ ಕೂಡ ಹಳದಿ ರೇಖೆಯ ಕೊನೆಯ ನಿಲ್ದಾಣವಾಗ ಬೊಮ್ಮಸಂದ್ರ ನಿಲ್ದಾಣದಲ್ಲಿ ಒಂದಿಷ್ಟು ಮೂಲಸೌಕರ್ಯಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ಜಿಗಣಿ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರಿಗೆ ಹಾಗೂ ಚಂದಾಪುರ ಮತ್ತು ಅತ್ತಿಬೆಲೆಗೆ ತೆರಳುವ ಪ್ರಯಾಣಿಕರಿಗೆ ಈ ಭಾಗದ ನಿಲ್ದಾಣದಲ್ಲಿ ಪಾದಚಾರಿ ಮಾರ್ಗದ ಕೊರತೆ ಇದೆ ಎಂಬುದು ತಿಳಿದುಬಂದಿದೆ. ಅಲ್ಲದೆ ಉತ್ತಮ ಪ್ರವೇಶಕ್ಕಾಗಿ ಸಾರ್ವಜನಿಕ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು BMRCL ಸಧ್ಯಕ್ಕೆ ಒತ್ತಡವನ್ನ ದುರಿಸುತ್ತಿದೆ. ಹಳದಿ ಲೈನ್, ಒಮ್ಮೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದರೆ, ಬೆಂಗಳೂರಿನ ದಕ್ಷಿಣ ಕೈಗಾರಿಕಾ ಮತ್ತು ವಸತಿ ಪ್ರದೇಶಗಳಿಗೆ ಸಂಚರಿಸುವ ಈ ಮಾರ್ಗವನ್ನ ಸುಧಾರಿಸುವ ನಿರೀಕ್ಷೆಯಿದೆ.
ಇನ್ನು ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದಾಗ ಒಂದಂದು ಜನರಿಗೆ ಖಚಿತವಾಗಿದೆ. ಬಹುದಿನಗಳಿಂತ ಜನರು ಖಾತುರರಾಗಿ ಕಾಯುತ್ತಿದ್ದ ಹಳದಿ ಮೆಟ್ರೋ ರೈಲು ಸೇವೆಯ ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಇಷ್ಟು ದಿನ ಟ್ರಾಫಿಕ್ ಸಮಸ್ಯೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರು ಈ ವಿಚಾರದಿಂದ ಸ್ವಲ್ಪ ಸಮಾಧಾನ ಪಡುವಂತಾಗಿದೆ. ಆದ್ರೆ ಇನ್ನುಳಿದಂತೆ ಇನ್ನು ಆರಂಭದ ಕಾರ್ಯದಲ್ಲಿರುವ ಮೆಟ್ರೋ ಮಾರ್ಗಗಳ ಸೇವೆ 2025ರ ಅಂತ್ಯದಲ್ಲಿ ಅಥವಾ 2026 ಮಧ್ಯದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಜೊತೆಗೆ ಬಿಎಂಆರ್‌ಸಿಎಲ್ ಕೂಡ ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದು, ಸಧ್ಯದಲ್ಲೇ ಸಂಪೂರ್ಣ ಸಿಲಿಕಾನ್‌ಸಿಟಿ ಮೆಟ್ರೋ ಸೇವೆಯನ್ನ ಪಡೆಯುವುದಂತು ಖಚಿತ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಗಳನ್ನ ನಿವಾರಿಸುವಲ್ಲಿ ನಮ್ಮ ಮೆಟ್ರೋ ಬಹುಮುಖ್ಯ ಪಾತ್ರವನ್ನ ವಹಿಸಬಹುದು.
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?



Click it and Unblock the Notifications