ವಾರಕ್ಕೆ 70 ಗಂಟೆ ದುಡಿಮೆ: ಮತ್ತೊಮ್ಮೆ ನಿಲುವು ಸಮರ್ಥಿಸಿ ಕಾರಣ ಕೊಟ್ಟ ನಾರಾಯಣ ಮೂರ್ತಿ

ಎಲ್ಲರಿಗೂ ತಿಳಿದಿರುವಂತೆ ಭಾರತವು ಅಭಿವೃದ್ದಿಶೀಲ ದೇಶವಾಗಿದ್ದು, ಮೂಲಭೂತ ಸೌಕರ್ಯ ವಿಚಾರ ಸೇರಿದಂತೆ ಭಾರತದಲ್ಲಿ ಇನ್ನೂ ಹಲವು ವಿಧದಲ್ಲಿ ಅಭಿವೃದ್ದಿ ಕಾರ್ಯಗಳು ಇನ್ನೂ ಆಗಬೇಕಿದ್ದು, ಅದಕ್ಕೆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಕೂಡ ನಡೆಯುತ್ತಿದೆ. ಆದರೆ ದೇಶದಲ್ಲಿ ಪ್ರತಿಯೊಬ್ಬನ ಕೆಲಸ ಕಾರ್ಯದ ಅವಧಿಗಳು ಹೆಚ್ಚಬೇಕೆಂದು ಕೆಲವರು ಹೇಳುತ್ತಿದ್ದರೂ ಅಷ್ಟಾಗಿ ಮಹತ್ವ ಪಡೆದುಕೊಂಡಿರಲಿಲ್ಲ. ಯಾಕೆಂದರೆ ಸದ್ಯದ ದೇಶದ ಅಭಿವೃದ್ದಿ ದರ ಉತ್ತಮವಾಗಿದ್ದರೂ ಆರ್ಥಿಕ ತಜ್ಞರ ಪ್ರಕಾರ ಈ ದರವು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದೂ ಅಲ್ಲದೆ ಇತ್ತೀಚಿಗೆ ಕೆಲಸದ ಅವಧಿಯಲ್ಲೂ ಹೆಚ್ಚಳವಾಗಬೇಕೆಂದು ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಾತು ಈ ವಾದಕ್ಕೆ ಸಂಬಂಧಿಸಿದ ಚರ್ಚೆಗೆ ಮತ್ತಷ್ಟು ವೇದಿಕೆ ನೀಡಿದಂತಾಗಿತ್ತು. ಕೆಲ ದಿನಗಳ ಹಿಂದೆ ಕೂಡ ನಾರಾಯಣ ಮೂರ್ತಿ ಅವರು ಭಾರತದಲ್ಲಿ ಕೆಲಸದ ಅವಧಿ ಹೆಚ್ಚಬೇಕೆಂದು ತಿಳಿಸಿದ್ದರು. ಈ ಹೇಳಿಕೆಗೆ ಹಲವರಿಂದ ಭಾರೀ ಟೀಕೆಗಳು ಕೂಡ ಕೇಳಿಬಂದಿದ್ದವು. ಸದ್ಯ ನಾರಾಯಣ ಮೂರ್ತಿ ಅವರು ತಮ್ಮ 'ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ' ಎಂಬ ಹಿಂದೆ ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಭಾರತವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು ಎಂದು ಹೇಳಿದ್ದಾರೆ. ಇವರ ಕೆಲಸದ ಅವಧಿಯ ಹೇಳಿಕೆಯು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಏನಿದು ಹೊಸ ವಿವಾದ?

ಭಾರತದಲ್ಲಿ ಕೆಲಸದ ಅವಧಿ ಹೆಚ್ಚಿಸಿಬೇಕೆಂಬ ನಾರಾಯಣ ಮೂರ್ತಿಯವರು ಇದೀಗ ತನ್ನ ನಿಲುವನ್ನು ಮತ್ತೆ ಪುನರುಚ್ಛರಿಸಿದ್ದಾರೆ. ವಾರದಲ್ಲಿ ಕೆಲಸದ ಅವಧಿ 70 ಗಂಟೆಗೆ ವಿಸ್ತರಣೆಯಾಗಬೇಕೆಂದು ಅವರು ಮತ್ತೆ ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಅವರು ಕಾರಣ ಕೂಡ ನೀಡಿದ್ದಾರೆ. ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಜನರು ಹೆಚ್ಚಿನ ಶ್ರಮವನ್ನು ಹಾಕುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಭಾರತೀಯರು ತಮ್ಮ ಉನ್ನತ ಆಕಾಂಕ್ಷೆಗಳನ್ನು ಹೊಂದಿರಬೇಕಿದೆ. ಒಂದು ವೇಳೆ ಭಾರತೀಯರು ತಮ್ಮ ದೇಶಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ ಮತ್ತಾರು ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇನ್ಫೋಸಿಸ್ ಯಾವಾಗಲೂ ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎಂದು ನಾರಾಯಣ ಮೂರ್ತಿ ತಿಳಿಸಿದ್ದಾರೆ. ಅದೂ ಅಲ್ಲದೆ ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಅವರು ಎಡಪಂಥೀಯ ಚಿಂತನೆಯ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ನೆಹರೂ ಅವರ ಸಮಯದಲ್ಲಿ ಬಂಡವಾಳಶಾಹಿ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದರೆ ಆ ವೇಳೆ ಭಾರತದಲ್ಲಿ ಅತ್ಯುತ್ತಮ ರಸ್ತೆಗಳು ಮತ್ತು ರೈಲು ಮಾರ್ಗಗಳ ಸುಧಾರಿತ ಮೂಲಸೌಕರ್ಯಗಳು ನಿರ್ಮಾಣವಾಗುತ್ತಿದ್ದವು. ಅಲ್ಲದೆ ನೆಹರೂ ಅವರು ಅಂದಿನ ಸಮಯದಲ್ಲಿ ಸಹಾನುಭೂತಿಯ ಬಂಡವಾಳಶಾಹಿ ನೀತಿ ಹೊಂದಿದ್ದರು ಎಂದು ತಿಳಿಸಿದರು.

ವಾರಕ್ಕೆ 70 ಗಂಟೆ ದುಡಿಮೆ: ಕಾರಣ ಕೊಟ್ಟ ನಾರಾಯಣ ಮೂರ್ತಿ

ಭಾರತದ ಜಾಗತಿಕ ಗೌರವಕ್ಕೆ ಕೆಲಸ ಮಾಡಿ: ನಾರಾಯಣ ಮೂರ್ತಿ

ಇದೇ ಹೆಚ್ಚಿನ ಪ್ರತಿಕ್ರಿಯೆ ನೀಡಿದ ನಾರಾಯಣ ಮೂರ್ತಿ, ಇಂದಿನ ಯುವಜನತೆಯು ಭಾರತದ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಇದೇ ವೇಳೆ ನಾರಾಯಣ ಮೂರ್ತಿ ಅವರು ಚೀನಾದ ಉದಾಹರಣೆಯನ್ನು ಕೂಡ ನೀಡಿದ್ದಾರೆ. ಪ್ರತಿಯೊಬ್ಬ ಚೀನಾದ ಕೆಲಸಗಾರನು ಭಾರತೀಯನಿಗಿಂತ 3.5 ಪಟ್ಟು ಹೆಚ್ಚು ಉತ್ಪಾದಕನಾಗಿದ್ದಾನೆ. ನಮ್ಮ ದೇಶದ ಮಹಾನ್‌ ನಾಯಕರ ದೃಷ್ಟಿಕೋನವನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಲು ನಾವು ಶ್ರಮಿಸಬೇಕು ಎಂದು ಅವರು ಪುನರುಚ್ಛರಿಸಿದರು.

ಚರ್ಚೆಗೆ ಕಾರಣವಾದ ಮೂರ್ತಿ ಹೇಳಿಕೆ

ಇನ್ನು ಈಗಾಗಲೇ ನಾರಾಯಣ ಮೂರ್ತಿ ಅವರ ಕೆಲಸಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಆದರೆ ಸದ್ಯ ಮೂರ್ತಿಯವರು ಚೀನಾದ ಉದಾಹರಣೆಯೊಂದಿಗೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಚೀನಾದಲ್ಲಿ ಕೆಲಸದ ಅವಧಿ ಭಾರತಕ್ಕಿಂತ ಹೆಚ್ಚು ಇದ್ದು, ಇದೇ ಕಾರಣದಿಂದ ಚೀನಾ ಅಲ್ಪ ಅವಧಿಯಲ್ಲೇ ಭಾರೀ ಪ್ರಮಾಣದ ಬೆಳವಣಿಗೆ ಸಾಧಿಸಿದೆ. ಇದೇ ರೀತಿಯಲ್ಲಿ ಅಭಿವೃದ್ದಿಯಾಗಲು ಭಾರತ ಕೂಡ ತನ್ನ ದಿನದ ಕೆಲಸದ ಅವಧಿಯನ್ನು ಹೆಚ್ಚಿಸಬೇಕೆಂದು ತಿಳಿಸಿದ್ದಾರೆ. ಇನ್ನೂ ಕೆಲವರು ಮೂರ್ತಿಯವರ ವಾದವನ್ನು ಅಲ್ಲಗಳೆದಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ನಾರಾಯಣ ಮೂರ್ತಿಯವರ ವಾದವನ್ನು ಅಲ್ಲಗಳೆದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+