ನವದೆಹಲಿ, ಜೂನ್ 5: ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಪಡೆಯಲಿದ್ದಾರೆ. ಜೂನ್ 8 ಶನಿವಾರ ದೆಹಲಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಏಪ್ರಿಲ್ 19ರಿಂದ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಇಂದು (ಜೂನ್ 4) ಫಲಿತಾಂಶ ಹೊರಬಿದಿದ್ದು. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 294 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 231 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಇಂಡಿಯಾ ಒಕ್ಕೂಟ ನಡುವಿನ ಸೆಣಸಾಟಕ್ಕೆ ಅಂತಿಮ ತೆರೆ ಸಿಕ್ಕಿದ್ದು, ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮೋದಿ ಮತ್ತೊಮ್ಮ ಪ್ರಧಾನಿ ಗದ್ದುಗೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 52 ಸ್ಥಾನಗಳನ್ನು ಪಡೆದಿತ್ತು. ಡಿಎಂಕೆ 24 ಇತರರು 164 ಸ್ಥಾನಗಳನ್ನು ಪಡೆದಿತ್ತು.
ಈ ಬಾರಿಯ ಚುನಾವಣೆಯಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳ ಭವಿಷ್ಯ ಸುಳ್ಳಾಗಿದೆ. ಈ ಬಾರಿ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 350 ರಿಂದ 390 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದವು. ಆದರೆ ಅವೆಲ್ಲವೂ ಸುಳ್ಳಾಗಿದೆ. ಬಿಜೆಪಿ ಒಂದೇ ಬಹುಮತ ಬರುತ್ತದೆ ಎಂದು ಹೇಳಿತ್ತು. ಆದರೆ ಈ ಬಾರಿ ಬಿಜೆಪಿ 240 ಸ್ಥಾನಗಳನ್ನು ಬಹಳ ತ್ರಾಸದಾಯಕವಾಗಿ ಪಡೆದಿದೆ.
ರಾಮಮಂದಿರ, ಮುಸ್ಲಿಮರ ವಿರುದ್ಧ ಭಾಷಣ ಯಾವುದೂ ಇಲ್ಲಿ ಫಲನೀಡಿಲ್ಲ. ಬದಲಾಗಿ ಕಾಂಗ್ರೆಸ್ ಕೇಳಿದ್ದ ನಿರುದ್ಯೋಗ ಹಾಗೂ ಬಡತನ ಪ್ರಶ್ನೆಗಳು ಜನರನ್ನು ಚಿಂತಿಸುವಂತೆ ಮಾಡಿದೆ. ಯೋಗಿ ಆದಿತ್ಯನಾಥ್ ಅವರ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಮಾಜವಾದಿ ಪಕ್ಷಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ.
ಪ್ರಧಾನಿ ಈ ಬಾರಿ ವಾರಾಣಾಸಿಯಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದಷ್ಟೇ ಗೆದ್ದಿದ್ದಾರೆ. ಅವರಲ್ಲದೆ ಅನೇಕ ಘಟನೂಘಟಿಗಳು ಮಕಾಡೆ ಮಲಗಿದ್ದಾರೆ. ಈ ನಿಟ್ಟಿನಲ್ಲಿ ಇತರ ಪಕ್ಷಗಳ ನೆರವು ಬಿಜೆಪಿ ಕಡ್ಡಾಯವಾಗಿ ಬೇಕಾಗಿದೆ.


Click it and Unblock the Notifications